ಹೊಸ ಟ್ಯೂಸಾನ್ ಎನ್ ಲೈನ್ ಎಸ್‍ಯುವಿಯ ಟೀಸರ್ ಬಿಡುಗಡೆಗೊಳಿಸಿದ ಹ್ಯುಂಡೈ
ಹ್ಯುಂಡೈ ಕಂಪನಿಯು ಇತ್ತೀಚೆಗೆ 2021ರ ಟ್ಯೂಸಾನ್ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತ್ತು. ಇದೀಗ ಹ್ಯುಂಡೈ ಕಂಪನಿಯು ತನ್ನ ಟ್ಯೂಸಾನ್ ಎನ್ ಲೈನ್ ವೆರಿಯೆಂಟ್ ಟೀಸರ್ ಚಿತ್ರಗಳನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿವೆ.

ಹೊಸ ಹ್ಯುಂಡೈ ಟ್ಯೂಸಾನ್ ಎನ್ ಲೈನ್ ಪರ್ಫಾಮೆನ್ಸ್ ಎಸ್‍ಯುವಿಯಾಗಿದೆ. ಇನ್ನು ಈ ಪರ್ಫಾಮೆನ್ಸ್ ಎಸ್‍ಯುವಿಯು ಅಗ್ರೇಸಿವ್ ವಿನ್ಯಾಸವನ್ನು ಹೊಂದಿದೆ. ಹೊಸ ಹ್ಯುಂಡೈ ಎನ್ ಲೈನ್ ಎಸ್‍ಯುವಿಯಲ್ಲಿ ಪ್ರಮುಖ ಲೈನ್ ಗಳು ಮತ್ತು ಹೆಚ್ಚು ಆಕ್ರಮಣಕಾರಿ ಮಲ್ಟಿ-ಲೇಯರ್ ಲೈಟಿಂಗ್ ಗ್ರಿಲ್ ಅನ್ನು ಒಳಗೊಂಡಿದೆ. ಟ್ಯೂಸನ್ ಖಂಡಿತವಾಗಿಯೂ ಹ್ಯುಂಡೈನ ಪೋರ್ಟ್ಫೋಲಿಯೊದಲ್ಲಿ ವಿನ್ಯಾಸದ ವಿಷಯದಲ್ಲಿ ಎದ್ದುಕಾಣುವ ಮಾದರಿಗಳಲ್ಲಿ ಒಂದಾಗಿದೆ.

ಹ್ಯುಂಡೈ ಟ್ಯೂಸಾನ್ ಎನ್ ಲೈನ್ ನಿಯಮಿತ ರೂಪಾಂತರದಿಂದ ತನ್ನನ್ನು ಪ್ರತ್ಯೇಕಿಸಿಕೊಳ್ಳಲು ಅನೇಕ ಬಾಹ್ಯ ನವೀಕರಣಗಳನ್ನು ಹೊಂದಿದೆ. ಹ್ಯುಂಡೈ ಟ್ಯೂಸಾನ್ ಎನ್ ಲೈನ್ ಕೋನೀಯ ಮುಂಭಾಗದ ವಿಭಾಗವನ್ನು ದೊಡ್ಡ ಕೆಳಭಾಗದ ಗ್ರಿಲ್ ಭಾಗವನ್ನು ಹೊಂದಿದೆ ಮತ್ತು ಕಾರ್ನರ್ ಲೈಟ್ ಗಳ ಸುತ್ತಲೂ ನವೀಕರಣಗಳನ್ನು ಕಾಣಬಹುದು.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಆದರೆ ಪ್ರೊಫೈಲ್ ಮತ್ತು ಒಟ್ಟಾರೆ ಒಟ್ಟಾರೆ ಸ್ಪೋರ್ಟಿ ವಿನ್ಯಾಸವು ಗ್ರಾಹಕರ ಮೆಚ್ಚುಗೆಯನ್ನು ಪಡೆಯುತ್ತದೆ. ಹಿಂಭಾಗದಲ್ಲಿ ಬಂಪರ್ ಮತ್ತು ಇತರ ಪ್ರಮುಖ ಡಿಫ್ಯೂಸರ್ ಮತ್ತು ಅಂಡಾಕಾರದ ಎಕ್ಸಾಸ್ಟ್ ಸಿಸ್ಟಂ ಅನ್ನು ಸಹ ಹೊಂದಿದೆ. ಪಾರ್ಫಮೆನ್ಸ್ ಸಂಬಂಧಿಸಿದಂತೆ,

ಹ್ಯುಂಡೈ ಟ್ಯೂಸಾನ್ ಎನ್ ಲೈನ್ 230 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವಿರುವ ಹೈಬ್ರಿಡ್ ಮೋಟರ್ ಅನ್ನು ಹೊಂದಿರಬಹುದು. ಇನ್ನು ಹ್ಯುಂಡೈ ಕಂಪನಿಯು ಇತ್ತೀಚೆಗೆ ಎಲಾಂಟ್ರ ಎನ್ ಲೈನ್ ಕಾರನ್ನು ಟೀಸರ್ ಬಿಡುಗಡೆಗೊಳಿಸಲಾಗಿತ್ತು.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಇದರೊಂದಿಗೆ ಹ್ಯುಂಡೈ ಕಂಪನಿಯು 2021ರ ಸೊನಾಟಾ ಎನ್ ಲೈನ್ ಕಾರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಅನಾವರಣಗೊಳಿಸಿದೆ. ದಕ್ಷಿಣ ಕೊರಿಯಾದ ಕಾರು ತಯಾರಕ ಮೊದಲ ಬಾರಿಗೆ ಮಧ್ಯಮ ಗಾತ್ರದ ಸೆಡಾನ್‌ನಲ್ಲಿ ಎನ್ ಲೈನ್ ಟ್ರಿಮ್ ಅನ್ನು ಪರಿಚಯಿಸಿದೆ.

ಇನ್ನು ಇತ್ತೀಚೆಗೆ ಅನಾವರಣಗೊಂಡ 2021ರ ಟ್ಯೂಸಾನ್ ಎಸ್‍ಯುವಿಯಲ್ಲಿ 2.5-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 187 ಬಿಹೆಚ್‍ಪಿ ಪವರ್ ಮತ್ತು 247 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಎಂಜಿನ್ ನೊಂದಿಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಇದರೊಂದಿಗೆ ಈ ಹೊಸ ಎಸ್‍ಯುವಿಯಲ್ಲಿ 1.6-ಲೀಟರ್ ಟರ್ಬೊ ಹೈಬ್ರಿಡ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 227 ಬಿಹೆಚ್‍ಪಿ ಪವರ್ ಮತ್ತು 350 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇನ್ನು ಟ್ಯೂಸಾನ್ ಪೇಸ್ ಲಿಫ್ಟ್ ಅನ್ನು ಕೆಲವೇ ತಿಂಗಳುಗಳ ಹಿಂದೆ ಬಿಡುಗಡೆಗೊಳಿಸಿರುವುದರಿಂದ ಈ ಹೊಸ ತಲೆಮಾರಿನ ಟ್ಯೂಸಾನ್ ಎಸ್‍ಯುವಿಯನ್ನು 2022ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications