ಆಟೋ ಎಕ್ಸ್‌ಪೋ 2020: ಹ್ಯುಂಡೈ ಟಕ್ಸನ್ ಫೇಸ್‍ಲಿಫ್ಟ್ ಎಸ್‍ಯುವಿ ಅನಾವರಣ
ಹ್ಯುಂಡೈ ಇಂಡಿಯಾ ತನ್ನ ಟಕ್ಸನ್ ಫೇಸ್‍ಲಿಫ್ಟ್ ಎಸ್‌ಯುವಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. ಈ ಟಕ್ಸನ್ ಫೇಸ್‍ಲಿಫ್ಟ್ ಎಸ್‍ಯುವಿಯನ್ನು ಮುಂದಿನ ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

ಹ್ಯುಂಡೈ ಟಕ್ಸನ್ ಫೇಸ್‍ಲಿಫ್ಟ್ ಎಸ್‍ಯುವಿಯು ಬಿಎಸ್-6 ಆವೃತ್ತಿಯಾಗಿದೆ. ಈ ಎಸ್‍ಯುವಿಯ ಮುಂಭಾಗ ಹಾಗೂ ಹಿಂಭಾಗದಲ್ಲಿ ರಿ ಡಿಸೈನ್ ಮಾಡಲಾದ ಬಂಪರ್‍ಗಳಿರಲಿವೆ. ಇದರ ಜೊತೆಗೆ ಈ ಎಸ್‍ಯುವಿ ಹೊಸದಾದ ಹಾಗೂ ಅಗಲವಾದ ಗ್ರಿಲ್ ಹೊಂದಿರಲಿದೆ. ಈ ಗ್ರಿಲ್ ಈ ಎಸ್‍ಯುವಿಗೆ ಹೆಚ್ಚು ಬೋಲ್ಡ್ ನೆಸ್ ನೀಡುತ್ತದೆ.

ಹೊಸ ಟಕ್ಸನ್ ಎಸ್‍ಯುವಿಯ ಸೈಡ್‍ನಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಿಲ್ಲ. ಈ ಎಸ್‍ಯುವಿಯಲ್ಲಿ ಈಗ ಹೊಸ ಮಷಿನ್ ಕಟ್ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್‍ಗಳಿರಲಿದ್ದು, ಎಸ್‍ಯುವಿಯನ್ನು ಮತ್ತಷ್ಟು ಆಕರ್ಷಕವಾಗಿಸುತ್ತವೆ.

ಈ ಎಸ್‍ಯುವಿಯಲ್ಲಿರುವ ಫ್ಯೂಯಲ್ ಫಿಲ್ಲರ್ ಕ್ಯಾಪ್ ಹಾಗೂ ಟೇಲ್‍ಗೇಟ್‍ಗಳಲ್ಲೂ ಸಹ ಡಿಸೈನ್ ಅನ್ನು ಅಪ್‍ಡೇಟ್ ಮಾಡಲಾಗಿದೆ. ಟೇಲ್‍ಲೈಟ್ ಮೊದಲಿಗಿಂತ ಸ್ಲೀಕ್ ಆಗಿದ್ದು, ಫುಲ್ ಎಲ್‍ಇಡಿ ಹೆಡ್‍ಲೈಟ್ ಅನ್ನು ಹೊಂದಿದೆ. ಈ ಎಸ್‍ಯುವಿಯ ಸುತ್ತಲಿರುವ ಕ್ರೋಮ್ ಈ ಕಾರಿಗೆ ಪ್ರೀಮಿಯಂ ಲುಕ್ ನೀಡುತ್ತದೆ.

ಹೊಸ ಟಕ್ಸನ್ ಎಸ್‍ಯುವಿಯ ಇಂಟಿರಿಯರ್‍ನಲ್ಲಿ ಬ್ಲೂ ಲಿಂಕ್ ಕನೆಕ್ಟಿವಿಟಿ, ಆಂಡ್ರಾಯಿಡ್ ಆಟೋ, ಆಪಲ್ ಕಾರ್ ಪ್ಲೇ ಹೊಂದಿರುವ 8.0 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೆನ್‍ಮೆಂಟ್ ಸಿಸ್ಟಂ, 3 ಡಿ ಮ್ಯಾಪ್ ಹೊಂದಿರುವ ನ್ಯಾವಿಗೇಶನ್‍ಗಳಿರಲಿವೆ.

ಕ್ಯಾಬಿನ್ ಎಸಿ ವೆಂಟ್ ಸುತ್ತಲೂ ಕಾಂಟ್ರಾಸ್ಟಿಂಗ್ ಎಲಿಮೆಂಟ್ ಹೊಂದಿರುವ ಡ್ಯುಯಲ್ ಟೋನ್ ಡ್ಯಾಶ್‍ಬೋರ್ಡ್ ಹೊಂದಿರಲಿದೆ. ಈ ಎಸ್‍ಯುವಿಯಲ್ಲಿ 360 ಡಿಗ್ರಿ ಕ್ಯಾಮರಾ ಹಾಗೂ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‍ಗಳನ್ನು ಅಳವಡಿಸಲಾಗಿದೆ.

ಈ ಎಸ್‍ಯುವಿಯಲ್ಲಿ ಪೆಟ್ರೋಲ್ ಎಂಜಿನ್ 154 ಬಿಹೆಚ್‍ಪಿ ಪವರ್ ಹಾಗೂ 192 ಎನ್‍ಎಂ ಟಾರ್ಕ್ ಉತ್ಪಾದಿಸಿದರೆ, ಡೀಸೆಲ್ ಎಂಜಿನ್ 182 ಬಿಹೆಚ್‍ಪಿ ಪವರ್ ಹಾಗೂ 400 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಹೊಸ ಟಕ್ಸನ್ ಕಾರಿನಲ್ಲಿ 2.0 ಲೀಟರಿನ ಪೆಟ್ರೋಲ್ ಹಾಗೂ ಡೀಸೆಲ್ ಬಿಎಸ್ 6 ಎಂಜಿನ್‍ಗಳಿರಲಿವೆ. ಪೆಟ್ರೋಲ್ ಎಂಜಿನ್‍ನೊಂದಿಗೆ 6 ಸ್ಪೀಡಿನ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅಳವಡಿಸಲಾಗುವುದು. ಡೀಸೆಲ್ ಎಂಜಿನ್‍ನೊಂದಿಗೆ 8 ಸ್ಪೀಡ್ ಆಟೋಮ್ಯಾಟಿ ಮತ್ತು ಆಲ್ ಡ್ರೈವ್ ಸಿಸ್ಟಂ ಹೊಂದಿರಲಿದೆ.

ಬಿಎಸ್ 6 ಎಂಜಿನ್‍ನಲ್ಲಿ ಬಿಡುಗಡೆಯಾಗಲಿರುವ ಹೊಸ ಟಕ್ಸನ್ ಮೂಲ ಮಾದರಿಯ ಬೆಲೆಯು ರೂ.20 ಲಕ್ಷಗಳಾದರೆ, ಟಾಪ್ ಎಂಡ್ ಮಾದರಿಯ ಬೆಲೆ ರೂ.30 ಲಕ್ಷಗಳಾಗಲಿದೆ. ಇವು ಎಕ್ಸ್ ಶೋರೂಂ ದರಗಳಾಗಿವೆ. ಹ್ಯುಂಡೈ ಟಕ್ಸನ್ ಫೇಸ್‍ಲಿಫ್ಟ್ ಬಿಡುಗಡೆಯಾದ ನಂತರ ಸ್ಕೋಡಾ ಕೊಡಿಯಾಕ್ ಹಾಗೂ ಫೋಕ್ಸ್ ವ್ಯಾಗನ್ ಟಿಗ್ವಾನ್ ಕಾರುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








