370 ಕಿ.ಮೀ ಮೈಲೇಜ್ ನೀಡಲಿದೆ ಮಹೀಂದ್ರಾದ ಹೊಸ ಎಲೆಕ್ಟ್ರಿಕ್ ಎಸ್‍ಯುವಿ
ಮಹೀಂದ್ರಾ ಕಂಪನಿಯು ತನ್ನ ಹೊಸ ಇಎಕ್ಸ್‌ಯುವಿ 300 ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಇಎಕ್ಸ್‌ಯುವಿ 300 ಆವೃತ್ತಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಮಹೀಂದ್ರಾ ಕಂಪನಿಯು ಪ್ರದರ್ಶಿಸಲಾಗಿತ್ತು.

ಸಾಮಾನ್ಯ ಮಹೀಂದ್ರಾ ಎಕ್ಸ್‌ಯುವಿ 300ಗೆ ಹೋಲಿಸದರೆ ವಿನ್ಯಾಸದಲ್ಲಿ ಗಮನಾರ್ಹ ಬದಲಾವಣೆಗಳನ್ನು ಹೊಂದಿದೆ. ಮಹೀಂದ್ರಾ ಇಎಕ್ಸ್‌ಯುವಿ 300 ಬಿಡುಗಡೆಯಾದ ಬಳಿಕೆ ಟಾಟಾ ನೆಕ್ಸಾನ್‍ಗೆ ನೇರ ಪೈಪೋಟಿಯನ್ನು ನೀಡುತ್ತದೆ. ಟಾಟಾ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿಯು 30.2 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‍ನೊಂದಿಗೆ ಬ್ರ್ಯಾಂಡ್‍ನ ಜಿಪ್ಟ್ರಾನ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್‍ಯುವಿಯು 127 ಬಿಹೆಚ್‍ಪಿ ಪವರ್ ಮತ್ತು 245 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾಂಪ್ಯಾಕ್ಟ್ ಎಸ್‍ಯುವಿಯು 10 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

ಮಹೀಂದ್ರಾ ಇಎಕ್ಸ್‌ಯುವಿ 300 ತನ್ನ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚು ವ್ಯಾಪ್ತಿಯನ್ನು ಚಲಿಸುತ್ತದೆ. ಮಹೀಂದ್ರಾ ಇಎಕ್ಸ್‌ಯುವಿ 300 ಎಸ್‍ಯುವಿಯಲ್ಲಿ ಎರಡು ರೀತಿಯ ಬ್ಯಾಟರಿಯನ್ನು ಸಂರಚನೆ ಮಾಡಲಾಗಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಮಹೀಂದ್ರಾ ಇಎಕ್ಸ್‌ಯುವಿ 300 ಕಾಂಪ್ಯಾಕ್ಟ್ ಎಸ್‍ಯುವಿಯು ಒಂದು ಬಾರಿ ಪೂರ್ಣ ಪ್ರಮಾಣದ ಜಾರ್ಜ್ ಮಾಡಿದರೆ 370 ಕಿ.ಮೀ ಚಲಿಸುತ್ತದೆ. ಇನ್ನೊಂದು ಇನ್ನೊಂದು ಬ್ಯಾಟರಿ ಪ್ಯಾಕ್ ನಲ್ಲಿ ಒಂದೇ ಚಾರ್ಜ್‌ನಲ್ಲಿ ಸುಮಾರು 312 ಕಿ.ಮೀ.ನಷ್ಟು ಮೈಲೇಜ್ ಅನ್ನು ಹೊಂದಿದೆ.

ಮಹೀಂದ್ರಾ ಎಕ್ಸ್‌ಯುವಿ 300 ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಕಾಂಪ್ಯಾಕ್ಟ್ ಎಸ್‍ಯುವಿಗಳಲ್ಲಿ ಒಂದಾಗಿದೆ. ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುತ್ತಿದೆ.
MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಅದರಂತೆ ಮಹೀಂದ್ರಾ ಕಂಪನಿಯು ತನ್ನ ಜನಪ್ರಿಯ ಎಕ್ಸ್‌ಯುವಿ 300 ಮಾದರಿಯನ್ನು ಎಲೆಕ್ಟ್ರಿಕ್ ರೂಪಾಂತರದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಕಳೆದ ವರ್ಷ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ 300 ಅನ್ನು ಎಲೆಕ್ಟ್ರಿಕ್ ರೂಪಾಂತರದಲ್ಲಿ ಬಿಡುಗಡೆಗೊಳಿಸಲಿದೆ ಎಂದು ವರದಿಯಾಗಿತ್ತು.

ಇಎಕ್ಸ್‌ಯುವಿ 300 ಕಾಂಪ್ಯಾಕ್ಟ್ ಎಸ್‍ಯುವಿಯು ಟಿವೊಲಿ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದೆ. ಹೊಸ ಇಎಕ್ಸ್‌ಯುವಿ 300 ಬಳಿ ಬಣ್ಣದದಿಂದ ಕೊಡಿದೆ. ಈ ಇಎಕ್ಸ್‌ಯುವಿ 300 ವಿಶಿಷ್ಟವಾದ ಹೆಡ್‍ಲ್ಯಾಂಪ್ ಮತ್ತು ಮುಂಭಾಗದಲ್ಲಿ ಗ್ರಿಲ್ ಅನ್ನು ಅಳವಡಿಸಲಾಗಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಮುಂಭಾಗದ ಹೆಡ್‍ಲ್ಯಾಂಪ್‍ಗಳ ಮೇಲೆ ನೀಲಿ ಎಕ್ಸೆಟ್ ಗಳು ಸುತ್ತುವರೆದಿದೆ. ಮುಂಭಾಗದಲ್ಲಿ ಲಿಪ್ ಸ್ಪಾಯ್ಲರ್‍ಗಳನ್ನು ಅಳವಡಿಸಲಾಗಿದೆ. ಹಿಂಭಾಗವು ಸಮಾನ್ಯ ಎಸ್‍ಯುವಿ ಮಾದರಿಯಂತಿದೆ. ಆದರೆ ಎಲ್ಇಡಿ ಟೇಲ್ ಲ್ಯಾಂಪ್ ವಿಭಿನ್ನವಾಗಿದೆ.

ಇಕೆಯುವಿ 100ನಂತೆ ಈ ಎಸ್‍ಯುವಿಯು ನೀಲಿ ಎಕ್ಸೆಟ್ ಗಳನ್ನು ಹೊಂದಿದೆ. ಇನ್ನೂ ಹೈ-ಮೌಂಟೆಡ್ ಸ್ಟಾಪ್ ಲ್ಯಾಂಪ್, ಲಿಪ್ ಸ್ಪಾಯ್ಲರ್ ಮತ್ತು ಟೇಲ್ ಲ್ಯಾಂಪ್‍ಗೆ ಬ್ಲ್ಯಾಕ್ ಬಣ್ಣದ ಅಂಶಗಳು ಆಕರ್ಷಕವಾಗಿದೆ. ಇನ್ನೂ ಡ್ಯಾಶ್ ಬೋರ್ಡ್‍ನಲ್ಲಿ ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂ ಮತ್ತು ಎಸಿ ವೆಂಟ್ಸ್ ಗಳಿವೆ.


Click it and Unblock the Notifications