ಆಕರ್ಷಕ ಬೆಲೆಯೊಂದಿಗೆ ಮಹೀಂದ್ರಾ ನ್ಯೂ ಜನರೇಷನ್ ಥಾರ್ ಎಸ್‌ಯುವಿ ಬಿಡುಗಡೆ

ಜನಪ್ರಿಯ ಆಫ್ ರೋಡ್ ಎಸ್‌ಯುವಿ ಮಾದರಿಯಾದ ಥಾರ್ ಮಾದರಿಯ ನ್ಯೂ ಜನರೇಷನ್ ಆವೃತ್ತಿಯನ್ನು ಮಹೀಂದ್ರಾ ಕಂಪನಿಯು ಬಿಡುಗಡೆ ಮಾಡಿದ್ದು, ಹೊಸ ಕಾರು ಹಲವಾರು ಹೊಸ ಬದಲಾವಣೆಗಳೊಂದಿಗೆ ಆಕರ್ಷಕ ಬೆಲೆಯಲ್ಲಿ ಬಿಡುಗಡೆಯಾಗಿದೆ.

ಆಕರ್ಷಕ ಬೆಲೆಯೊಂದಿಗೆ ಮಹೀಂದ್ರಾ ನ್ಯೂ ಜನರೇಷನ್ ಥಾರ್ ಬಿಡುಗಡೆ

ಮಹೀಂದ್ರಾ ಕಂಪನಿಯು ಸುಮಾರು 3 ವರ್ಷಗಳ ಕಾಲ ನ್ಯೂ ಜನರೇಷನ್ ಥಾರ್ ಮಾದರಿಯ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳ ನಂತರ ಇದೀಗ ಬಿಡುಗಡೆ ಮಾಡಿದ್ದು, ಹೊಸ ಥಾರ್ ಕಾರು ಮಾದರಿಯು ಈ ಬಾರಿ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಡೀಸೆಲ್ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಕಂಪನಿಯು ಮೊದಲ ಬಾರಿಗೆ ಥಾರ್ ಮಾದರಿಯಲ್ಲಿ ಪೆಟ್ರೋಲ್ ಮಾದರಿಯನ್ನು ಸಹ ಪರಿಚಯಿಸಿದ್ದು, ಹೊಸ ಕಾರು ಬಿಎಸ್-6 ನಿಯಮಾನುಸಾರ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದೆ.

ಆಕರ್ಷಕ ಬೆಲೆಯೊಂದಿಗೆ ಮಹೀಂದ್ರಾ ನ್ಯೂ ಜನರೇಷನ್ ಥಾರ್ ಬಿಡುಗಡೆ

ನ್ಯೂ ಜನರೇಷನ್ ಥಾರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎಎಕ್ಸ್ ಮತ್ತು ಎಲ್ಎಕ್ಸ್ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಆರಂಭಿಕ ಆವೃತ್ತಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 9.80 ಲಕ್ಷದಿಂದ ಟಾಪ್ ಮಾದರಿಯು ರೂ. 12.95 ಲಕ್ಷ ಬೆಲೆ ಪಡೆದುಕೊಂಡಿದೆ.

ಆಕರ್ಷಕ ಬೆಲೆಯೊಂದಿಗೆ ಮಹೀಂದ್ರಾ ನ್ಯೂ ಜನರೇಷನ್ ಥಾರ್ ಬಿಡುಗಡೆ

ಥಾರ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಲಿದೆ ಎನ್ನಬಹುದು.

ಥಾರ್ ವೆರಿಯೆಂಟ್‌ ಮತ್ತು ಬೆಲೆ(ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ)

ವೆರಿಯೆಂಟ್ ಎಎಕ್ಸ್ ಎಎಕ್ಸ್ ಆಪ್ಷನ್ ಎಲ್ಎಕ್ಸ್
ಪೆಟ್ರೋಲ್ ಡೀಸೆಲ್ ಪೆಟ್ರೋಲ್ ಡೀಸೆಲ್ ಪೆಟ್ರೋಲ್ ಡೀಸೆಲ್
ಸ್ಟ್ಯಾಂಡರ್ಡ್ 6 ಸೀಟರ್ (ಸಾಫ್ಟ್ ಟಾಪ್) ರೂ. 9.80 ಲಕ್ಷ
6 ಸೀಟರ್ ಸಾಫ್ಟ್ ಟಾಪ್ ರೂ. 10.65 ಲಕ್ಷ ರೂ. 10.85 ಲಕ್ಷ
ಕನ್ವರ್ಟಿಬಲ್ ಟಾಪ್ (4 ಸೀಟರ್) ರೂ. 11.90 ಲಕ್ಷ ರೂ. 12.10 ಲಕ್ಷ ರೂ. 12.49 ಲಕ್ಷ ರೂ. 12.85 ಲಕ್ಷ
ಹಾರ್ಡ್ ಟಾಪ್ 4 ಸೀಟರ್ ರೂ. 12.20 ಲಕ್ಷ ರೂ. 12.95 ಲಕ್ಷ
ಆಕರ್ಷಕ ಬೆಲೆಯೊಂದಿಗೆ ಮಹೀಂದ್ರಾ ನ್ಯೂ ಜನರೇಷನ್ ಥಾರ್ ಬಿಡುಗಡೆ

ಇದರ ಹೊರತಾಗಿ ಹೊಸ ಕಾರಿನ ಹೊರಭಾಗದ ವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ಮರುವಿನ್ಯಾಸಗೊಳಿಸಲಾದ ಸೆವೆನ್ ಸ್ಲಾಟ್ ಗ್ರಿಲ್, ವೃತ್ತಾಕಾರವಾದ ಹೆಡ್‌ಲ್ಯಾಂಪ್, 18-ಇಂಚಿನ ಆಕರ್ಷಕ ಅಲಾಯ್ ವೀಲ್ಹ್, ಡ್ಯುಯಲ್ ಟೋನ್ ಬಂಪರ್, ಸ್ಕಫ್ ಪ್ಲೇಟ್, ಬಾಕ್ಸಿ ಮಾದರಿಯಲ್ಲಿರುವ ಟೈಲ್ ಲೈಟ್‌ನೊಂದಿಗೆ ಮಾರ್ಡನ್ ಶೈಲಿ ಪಡೆದುಕೊಂಡಿದೆ.

ದೂರದಿಂದ ನೋಡಿದಾಗ ಹೊಸ ಥಾರ್ ಕಾರಿನ ವಿನ್ಯಾಸಗಳು ಜೀಪ್ ರ‍್ಲ್ಯಾಂಗ್ಲರ್ ಮಾದರಿಯ ಹೋಲಿಕೆ ಪಡೆದುಕೊಳ್ಳುತ್ತಾದರೂ ಹಲವು ತಾಂತ್ರಿಕ ಸೌಲಭ್ಯಗಳು ಮಹೀಂದ್ರಾ ವೈಶಿಷ್ಟ್ಯತೆಗಳು ಗ್ರಾಹಕರನ್ನು ಸೆಳೆಯಲಿದ್ದು, ಲ್ಯಾಡರ್-ಫ್ರೇಮ್ ಚಾರ್ಸಿ ಜೊತೆಗೆ ಹೊಸ ಸಸ್ಪೆಂಷನ್‌ ಸೌಲಭ್ಯವು ಹೊಸ ಥಾರ್ ಕಾರಿನ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿವೆ.

ಆಕರ್ಷಕ ಬೆಲೆಯೊಂದಿಗೆ ಮಹೀಂದ್ರಾ ನ್ಯೂ ಜನರೇಷನ್ ಥಾರ್ ಬಿಡುಗಡೆ

ಇನ್ನು ಕಾರಿನ ಒಳಭಾಗದ ಸೌಲಭ್ಯಗಳು ಪ್ರಸ್ತುತ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಮತ್ತು ಮಾರ್ಡನ್ ವಿನ್ಯಾಸಗಳನ್ನು ಹೊಂದಿದ್ದು, ಆಕರ್ಷಕ ಡ್ಯಾಶ್‌ಬೋರ್ಡ್‌ನೊಂದಿಗೆ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋಗೆ ಸರ್ಪೋಟ್ ಮಾಡಬಲ್ಲ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಎಲ್ಲಾ ಮಾದರಿಯ ಹವಾಗುಣವನ್ನು ತಡೆಯಬಲ್ಲ ರೂಫ್ ಮೌಂಟೆಡ್ ಆಡಿಯೋ ಸ್ಪಿಕರ್ಸ್, ಮಲ್ಟಿ ಕಲರ್ ಇನ್ಫಾಮೆಷನ್ ಡಿಸ್‌ಪ್ಲೇ ಮತ್ತು ಸ್ಟೀರಿಂಗ್ ಮೌಟೆಂಟ್ ಕಂಟ್ರೋಲ್ ಸೌಲಭ್ಯ ನೀಡಲಾಗಿದೆ.

ಆಕರ್ಷಕ ಬೆಲೆಯೊಂದಿಗೆ ಮಹೀಂದ್ರಾ ನ್ಯೂ ಜನರೇಷನ್ ಥಾರ್ ಬಿಡುಗಡೆ

ಜೊತೆಗೆ 50:50 ಅನುಪಾತದ ರಿಯರ್ ಸೀಟುಗಳಲ್ಲೂ ಮಡಿಕೆ ಮಾಡಬಹುದಾದ ಸೌಲಭ್ಯ ನೀಡಲಾಗಿದ್ದು, ಎಎಕ್ಸ್ ವೆರಿಯೆಂಟ್‌ನಲ್ಲಿ ಡೀಸೆಲ್ ಮ್ಯಾನುವಲ್ ಮತ್ತು ಪೆಟ್ರೋಲ್ ಮ್ಯಾನುವಲ್ ಮಾದರಿಯನ್ನು ಮತ್ತು ಎಲ್ಎಕ್ಸ್ ಮಾದರಿಯಲ್ಲಿ ಆಟೋಮ್ಯಾಟಿಕ್ ಮಾದರಿಗಳೊಂದಿಗೆ ಕನ್ವರ್ಟಿಬಲ್ ಮತ್ತು ಹಾರ್ಡ್ ಟಾಪ್ ಆಯ್ಕೆ ನೀಡಲಾಗಿದೆ.

ಆಕರ್ಷಕ ಬೆಲೆಯೊಂದಿಗೆ ಮಹೀಂದ್ರಾ ನ್ಯೂ ಜನರೇಷನ್ ಥಾರ್ ಬಿಡುಗಡೆ

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ಥಾರ್ ಕಾರು ಮಾದರಿಯಲ್ಲಿ ಬಿಎಸ್-6 ಎಂಜಿನ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಎರಡು ಎಂಜಿನ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

ಆಕರ್ಷಕ ಬೆಲೆಯೊಂದಿಗೆ ಮಹೀಂದ್ರಾ ನ್ಯೂ ಜನರೇಷನ್ ಥಾರ್ ಬಿಡುಗಡೆ

ಥಾರ್ ಡೀಸೆಲ್ ಮಾದರಿಯು 132-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಪೆಟ್ರೋಲ್ ಮಾದರಿಯು 152-ಬಿಎಚ್‌ಪಿ, 320-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಈ ಮೂಲಕ ಪ್ರಯಾಣಿಕರ ಸುರಕ್ಷತೆಯಲ್ಲೂ ಗಮನಸೆಳೆಯಲಿದೆ.

ಆಕರ್ಷಕ ಬೆಲೆಯೊಂದಿಗೆ ಮಹೀಂದ್ರಾ ನ್ಯೂ ಜನರೇಷನ್ ಥಾರ್ ಬಿಡುಗಡೆ

ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಸೆಫ್ಟಿ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಎರಡು ಎಂಜಿನ್ ಆಯ್ಕೆಗಳಲ್ಲೂ 4x4 ಡ್ರೈವ್ ಸಿಸ್ಟಂ, ಕ್ರೂಸ್ ಕಂಟ್ರೋಲ್, 255/65 18-ಇಂಚಿನ ಆಲ್ ಟೆರೆನ್ ಟೈರ್ಸ್, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ರೋಲ್ ಓವರ್ ಮಿಟಿಗೆಷನ್, ತ್ರೀ ಪಾಯಿಂಟ್ ಸಿಲ್ಟ್ ಬೆಲ್ಟ್, ರಿಯರ್ ವ್ಯೂ ಕ್ಯಾಮೆರಾ ಜೋಡಿಸಲಾಗಿದೆ.

ಆಕರ್ಷಕ ಬೆಲೆಯೊಂದಿಗೆ ಮಹೀಂದ್ರಾ ನ್ಯೂ ಜನರೇಷನ್ ಥಾರ್ ಬಿಡುಗಡೆ

ಹಾಗೆಯೇ ಎಲ್ಇಡಿ ಡಿಆರ್‌ಎಲ್ ಫಾಗ್ ಲ್ಯಾಂಪ್ಸ್, ಎಂಟು ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಆಟೋ ಎಸಿ, ಇಎಸ್‌ಪಿ ಮತ್ತು 226-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್‌ನೊಂದಿಗೆ ಆಫ್ ರೋಡ್‌ನಲ್ಲಿ ಮತ್ತಷ್ಟು ಗಮನಸೆಳೆಯಲಿದೆ.

ಆಕರ್ಷಕ ಬೆಲೆಯೊಂದಿಗೆ ಮಹೀಂದ್ರಾ ನ್ಯೂ ಜನರೇಷನ್ ಥಾರ್ ಬಿಡುಗಡೆ

ಖರೀದಿಗೆ ಲಭ್ಯವಿರುವ ಬಣ್ಣಗಳು

ಹೊಸ ಥಾರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಒಟ್ಟು ಆರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ರೆಡ್ ರೆಜ್, ಮೈಸ್ಟಿಕ್ ಕಾಪರ್, ಅಕ್ವಾಮೆರಿನ್, ನಪೊಲಿ ಬ್ಲ್ಯಾಕ್, ರಾಕಿ ಬಿಝ್ ಮತ್ತು ಗ್ಲ್ಯಾಲಾಕ್ಸಿ ಗ್ರೇ ಬಣ್ಣಗಳನ್ನು ಹೊಂದಿದೆ.

More from DriveSpark

Article Published On: Friday, October 2, 2020, 13:23 [IST]
English summary
2020 Mahindra Thar Launched in India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+