ಆಟೋ ಎಕ್ಸ್‌ಪೋ 2020: ಹೊಸ ಥಾರ್ ಅನ್ನು ಪ್ರದರ್ಶಿಸುತ್ತಿಲ್ಲ ಮಹೀಂದ್ರಾ

ಮಹೀಂದ್ರಾ ಕಂಪನಿಯು ತನ್ನ ಐಕಾನಿಕ್ ಆಫ್-ರೋಡರ್ ಥಾರ್ ಅನ್ನು ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ 2020ರ ಆಟೋ ಎಕ್ಸ್​ಪೋದಲ್ಲಿ ಪ್ರದರ್ಶಿಸುತ್ತಿಲ್ಲ. ಮಹೀಂದ್ರಾ ಕಂಪನಿಯು ಈಗಾಗಲೇ ಹೊಸ ಜನರೇಷನ್ ಥಾರ್ ಅನ್ನು ಅಭಿವೃದ್ಧಿಪಡಿಸಿದೆ.

ಆಟೋ ಎಕ್ಸ್‌ಪೋ 2020: ಹೊಸ ಥಾರ್ ಅನ್ನು ಪ್ರದರ್ಶಿಸುತ್ತಿಲ್ಲ ಮಹೀಂದ್ರಾ

ಬಹುನಿರೀಕ್ಷಿತ ಹೊಸ ಥಾರ್ ಅನ್ನು ಭಾರತದಲ್ಲಿ ಕಳೆದ ಹಲವು ತಿಂಗಳುಗಳಿಂದ ಟೆಸ್ಟ್ ಮಾಡಲಾಗುತ್ತಿದೆ. ಹೊಸ ಥಾರ್ ನಲ್ಲಿ ಹಲವಾರು ಹೊಸ ಫೀಚರ್ಸ್‍‍ಗಳನ್ನು ಅಳವಡಿಸಲಾಗುತ್ತಿದೆ. ಈ ಕಾರಣಗಳಿಂದ ಹೊಸ ಥಾರ್ ಅನ್ನು ಬಿಡುಗಡೆ ಮಾಡಲು ಕೆಲ ಸಮಯ ಬೇಕಾಗಬಹುದು. ಎಕ್ಸ್‌ಪೋ ಮುಕ್ತಾಯವಾದ ಕೆಲವು ದಿನಗಳ ಬಳಿಕ ಕಂಪನಿಯು ಪ್ರತ್ಯೇಕವಾಗಿ ಈ ಹೊಸ ಎಸ್‍‍ಯುವಿಯನ್ನು ಅನಾವರಣಗೊಳಿಸಬಹುದು. ಈ ಕಾರ್ ಅನ್ನು ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ.

ಆಟೋ ಎಕ್ಸ್‌ಪೋ 2020: ಹೊಸ ಥಾರ್ ಅನ್ನು ಪ್ರದರ್ಶಿಸುತ್ತಿಲ್ಲ ಮಹೀಂದ್ರಾ

ಹೊಸ ಥಾರ್ ವಾಹನದ ಬಗ್ಗೆ ಮಾಹಿತಿಗಳು ಬಹಿರಂಗವಾಗಿದೆ. ಹೊಸ ಥಾರ್‍‍ನಲ್ಲಿ ಫ್ಲೋಟಿಂಗ್ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಇದು ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ವನ್ನು ಒಳಗೊಂಡಿದೆ ಎಂದು ನಿರೀಕ್ಷಿಸಲಾಗಿದೆ.

ಆಟೋ ಎಕ್ಸ್‌ಪೋ 2020: ಹೊಸ ಥಾರ್ ಅನ್ನು ಪ್ರದರ್ಶಿಸುತ್ತಿಲ್ಲ ಮಹೀಂದ್ರಾ

2020ರ ಥಾರ್‍‍‍ನಲ್ಲಿರುವ ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ತನ್ನ ಬ್ರ್ಯಾಂಡ್‍ನ ಸರಣಿಯಲ್ಲಿರುವ ಟಿ‍ಯುವಿ 300 ಎಸ್‍‍ಯುವಿಯಲ್ಲಿರುವ ಕ್ಲಸ್ಟರ್‍ ಅನ್ನು ಹೋಲುವಂತಿದೆ. ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಡಿಜಿಟಲ್ ಡಿಸ್‍‍ಪ್ಲೇ ಯುನಿ‍‍ಟ್‍ನೊಂದಿಗೆ ಎರಡು ಅನಲಾಗ್ ಡಯಲ್‍ಗಳನ್ನು ಒಳಗೊಂಡಿದೆ.

ಆಟೋ ಎಕ್ಸ್‌ಪೋ 2020: ಹೊಸ ಥಾರ್ ಅನ್ನು ಪ್ರದರ್ಶಿಸುತ್ತಿಲ್ಲ ಮಹೀಂದ್ರಾ

ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಮಹೀಂದ್ರಾ ಥಾರ್ ಆಟೋಮ್ಯಾಟಿಕ್ ತಾಪಮಾನ ನಿಯಂತ್ರಣ ಯುನಿಟ್‍(ಎಫ್‍ಎ‍ಟಿ‍ಸಿ) ಅನ್ನು ಸಹ ಹೊಂದಿದೆ. ಇದು ಪ್ರಸ್ತುತ ಮಾದರಿಗೆ ಹೋಲಿಸಿದರೆ ಹೆಚ್ಚು ಪ್ರೀಮಿಯಂ ಲುಕ್ ಅನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಹೊಸ ಥಾರ್ ಅನ್ನು ಪ್ರದರ್ಶಿಸುತ್ತಿಲ್ಲ ಮಹೀಂದ್ರಾ

ಹೊಸ ಮಹೀಂದ್ರಾ ಥಾರ್‍‍ನ 4×4 ಲಿವರ್ ವಿಭಿನ್ನವಾಗಿದೆ. ಇದರಲ್ಲಿ 2ಡಬ್ಲ್ಯುಡಿ(ಆರ್‍‍ಡಬ್ಲ್ಯುಡಿ) ಹೈ, 4ಡಬ್ಲ್ಯುಡಿ ಹೈ ಮತ್ತು 4 ಡಬ್ಲ್ಯು ಡಿ ಲೋ ಎಂಬ ಮೂರು ಮೋಡ್‍‍ಗಳಿವೆ. 2020ರ ಮಹೀಂದ್ರಾ ಥಾರ್ ಎಸ್‍‍ಯುವಿಯನ್ನು ಸಾಫ್ಟ್ ಟಾಪ್ ಹಾಗೂ ಹಾರ್ಡ್ ಟಾಪ್ - ಎಂಬ ಎರಡು ಡೋರ್ ಬಾಡಿ ಸ್ಟೈಲ್‌ಗಳಲ್ಲಿ ನೀಡಲಾಗುವುದು.

ಆಟೋ ಎಕ್ಸ್‌ಪೋ 2020: ಹೊಸ ಥಾರ್ ಅನ್ನು ಪ್ರದರ್ಶಿಸುತ್ತಿಲ್ಲ ಮಹೀಂದ್ರಾ

ಎಸ್‍‍ಯುವಿಯ ಹೊರಭಾಗವು ಜೀಪ್ ಶೈಲಿಯ ವಿನ್ಯಾಸವನ್ನು ಹೊಂದಿದ್ದರೆ, ಇಂಟಿರಿಯರ್ ಅನ್ನು ಹೆಚ್ಚು ಅಪ್‍‍ಡೇಟ್ ಮಾಡಲಾಗಿದೆ. ಮಾರುಕಟ್ಟೆಯಲ್ಲಿರುವ ಥಾರ್ 2.5 ಲೀಟರ್ ಡೀಸೆಲ್ ಬಿಎಸ್ 4 ಎಂಜಿನ್‌ ಹೊಂದಿದೆ.

ಆಟೋ ಎಕ್ಸ್‌ಪೋ 2020: ಹೊಸ ಥಾರ್ ಅನ್ನು ಪ್ರದರ್ಶಿಸುತ್ತಿಲ್ಲ ಮಹೀಂದ್ರಾ

ಈ ಎಂಜಿನ್ 105 ಬಿ‍‍ಹೆಚ್‌ಪಿ ಪವರ್ ಹಾಗೂ 247 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. ಈ ಎಸ್‍‍ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.9.64 ಲಕ್ಷದಿಂದ 10.1 ಲಕ್ಷಗಳಾಗಿದೆ.

ಆಟೋ ಎಕ್ಸ್‌ಪೋ 2020: ಹೊಸ ಥಾರ್ ಅನ್ನು ಪ್ರದರ್ಶಿಸುತ್ತಿಲ್ಲ ಮಹೀಂದ್ರಾ

ಹೊಸ ಥಾರ್ ಹೆಚ್ಚು ಬಲಶಾಲಿಯಾದ 120 ಬಿ‍‍ಹೆಚ್‌ಪಿ ಪವರ್ ಉತ್ಪಾದಿಸುವ 2.0 ಲೀಟರ್ ಡೀಸೆಲ್ ಬಿಎಸ್ 6 ಎಂಜಿನ್ ಹೊಂದಿರಲಿದೆ. ಹೊಸ ಫೀಚರ್, ದೊಡ್ಡ ಗಾತ್ರದ ಬಾಡಿ, ಬಲಶಾಲಿಯಾದ ಬಿಎಸ್ 6 ಡೀಸೆಲ್ ಎಂಜಿನ್ ಹೊಂದಲಿರುವ ಹೊಸ ಥಾರ್‌ನ ಬೆಲೆಯು ಮಾರುಕಟ್ಟೆಯಲ್ಲಿರುವ ಥಾರ್‌ಗಿಂತ ಹೆಚ್ಚಾಗುವ ಸಾಧ್ಯತೆಗಳಿವೆ.

ಆಟೋ ಎಕ್ಸ್‌ಪೋ 2020: ಹೊಸ ಥಾರ್ ಅನ್ನು ಪ್ರದರ್ಶಿಸುತ್ತಿಲ್ಲ ಮಹೀಂದ್ರಾ

ಹೊಸ 2020ರ ಥಾರ್ 2 ಡೋರಿನ ರೂಪಾಂತರವಾಗಿದೆ. ಹೊಸ ಥಾರ್‍‍ನಲ್ಲಿ 5 ಸ್ಪೋಕ್ ವಿನ್ಯಾಸದ ದೊಡ್ಡ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ. ಅಲಾಯ್ ವ್ಹೀಲ್‍‍ಗಳಲ್ಲಿ 235 ಅಥವಾ 245 ಸೆಕ್ಷನ್ ಟಯರ್‍‍ಗಳನ್ನು ನೀಡಲಾಗುವುದು.

More from DriveSpark

Article Published On: Thursday, January 23, 2020, 15:23 [IST]
English summary
Next-gen Mahindra Thar to skip Auto Expo 2020. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+