ಮತ್ತೊಮ್ಮೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಮಾರುತಿ ಎಕ್ಸ್‌ಎಲ್5 ಕಾರು

ಮಾರುತಿ ಸುಜುಕಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ವ್ಯಾಗನ್ಆರ್ ಹ್ಯಾಚ್‌ಬ್ಯಾಕ್‌ನ ಪ್ರೀಮಿಯಂ ಆವೃತ್ತಿಯಾದ ಮಾರುತಿ ಎಕ್ಸ್‌ಎಲ್5 ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಈ ಹೊಸ ಎಕ್ಸ್‌ಎಲ್5 ಪ್ರೀಮಿಯಂ ಕಾರನ್ನು ಭಾರತದಲ್ಲಿ ಸ್ಪಾಟ್ ನಡೆಸಿದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಮಾರುತಿ ಎಕ್ಸ್‌ಎಲ್5 ಕಾರು

ಈ ಹೊಸ ಮಾರುತಿ ಎಕ್ಸ್‌ಎಲ್5 ಕಾರು ದೆಹಲಿಯಲ್ಲಿ ಸ್ಫಾಟ್ ಟೆಸ್ಟ್ ನಡಿಸಿದೆ. ಈ ಪ್ರೀಮಿಯಂ ಕಾರು ಸ್ಪಾಟ್ ಟೆಸ್ಟ್ ನಡೆಸುತ್ತಿರುವ ವೀಡಿಯೋವನ್ನು ಅಭಿನವ್ ಭಟ್ ಅವರು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಎಕ್ಸ್‌ಎಲ್5 ಕಾರು ಸಂಪೂರ್ಣವಾಗಿ ಮರೆಮಾಚಿ ಸ್ಪಾಟ್ ಟೆಸ್ಟ್ ಅನ್ನು ನಡೆಸಲಾಗಿದೆ. ಈ ಹೊಸ ಮಾರುತಿ ಸುಜುಕಿ ಎಕ್ಸ್‌ಎಲ್5 ಕಾರಿಗೆ ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್, ಮುಂಭಾಗದ ಬಂಪರ್‌ನಲ್ಲಿ ಏರ್ ಡ್ಯಾಮ್ ಮತ್ತು ಎರಡೂ ತುದಿಯಲ್ಲಿ ಫಾಗ್ ಲ್ಯಾಂಪ್ ಅನ್ನು ಹೊಂದಿದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಮಾರುತಿ ಎಕ್ಸ್‌ಎಲ್5 ಕಾರು

ಈ ಎಕ್ಸ್‌ಎಲ್5 ಕಾರಿನಲ್ಲಿ ಸ್ಲಿಕ್ ಗ್ರಿಲ್ ಮತ್ತು ಹಿಂಭಾಗದಲ್ಲಿ ಕೆಲವು ಸಣ್ಣ ಬದಲಾವಣೆಗಳೊಂದಿಗೆ ವ್ಯಾಗನ್ಆರ್ ಗಿಂತ ಭಿನ್ನವಾಗಿ ಕಾಣುತ್ತದೆ. ಎಕ್ಸ್‌ಎಲ್5 ಕಾರು 15-ಇಂಚಿನ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ.

MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಮತ್ತೊಮ್ಮೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಮಾರುತಿ ಎಕ್ಸ್‌ಎಲ್5 ಕಾರು

ಈ ಎಕ್ಸ್‌ಎಲ್5 ಒಟ್ಟಾರೆ ಸಿಲೂಯೆಟ್ ವ್ಯಾಗನ್ಆರ್ ಕಾರಿಗೆ ಹೋಲುತ್ತದೆ. ಸ್ಪೈ ಚಿತ್ರಗಳಲ್ಲಿ ಕಂಡು ಬಂದ ಹಾಗೆ ಎಕ್ಸ್‌ಎಲ್5 ಕಾರು ಸ್ಟ್ಯಾಂಡರ್ಡ್ ವ್ಯಾಗನ್ಆರ್ ಕಂಡುಬರುವಂತಹ ಕ್ಯಾಬಿನ್ ವಿನ್ಯಾಸವನ್ನು ಹೊಂದಿರಲಿದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಮಾರುತಿ ಎಕ್ಸ್‌ಎಲ್5 ಕಾರು

ಎಕ್ಸ್‌ಎಲ್5 ಕಾರಿನಲ್ಲಿ ಕ್ಲೈಮೆಂಟ್ ಕಂಟ್ರೋಲ್ ಏರ್-ಕಾನ್ ಯುನಿಟ್ ಮತ್ತು 7.0 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿರುತ್ತದೆ. ಇನ್ನು ಇತರ ಪ್ರೀಮಿಯಂ ಫೀಚರ್ ಗಳನ್ನು ಕೂಡ ಹೊಂದಿರಲಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಮತ್ತೊಮ್ಮೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಮಾರುತಿ ಎಕ್ಸ್‌ಎಲ್5 ಕಾರು

ಹೊಸ ಮಾರುತಿ ಬಿಎಸ್-6 ಎಕ್ಸ್‌ಎಲ್5 ಕಾರಿನಲ್ಲಿ 1.2-ಲೀಟರ್ ಕೆ12ಬಿ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ವ್ಯಾಗನ್ಆರ್ ಹ್ಯಾಚ್‌ಬ್ಯಾಕ್‌ನಲ್ಲಿಯು ಇದೇ ಮಾದರಿಯ ಎಂಜಿನ್ ಅನ್ನು ಹೊಂದಿರಲಿದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಮಾರುತಿ ಎಕ್ಸ್‌ಎಲ್5 ಕಾರು

ಈ ಎಂಜಿನ್ 82 ಬಿಹೆಚ್‍ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಎಜಿಎಸ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಅದೇ 5-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ ಅನ್ನು ಒಳಗೊಂಡಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಮಾರುತಿ ಎಕ್ಸ್‌ಎಲ್5 ಕಾರನ್ನು ಬ್ರ್ಯಾಂಡ್‌ನ ಪ್ರೀಮಿಯಂ ನೆಕ್ಸಾ ಡೀಲರ್ ಗಳ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. ನೆಕ್ಸಾ ಪ್ರೀಮಿಯಂ ವಿಭಾಗದಲ್ಲಿ ಈ ಕಾರನ್ನು ಎಂಟ್ರಿ-ಲೆವೆಲ್ ಮಾದರಿಯಾಗಿ ಮಾರಾಟ ಮಾಡಲಾಗುವುದು, ನೆಕ್ಸಾ ಡೀಲರ್ ಗಳು ಇಗ್ನೀಸ್, ಬಲೆನೊ, ಎಸ್-ಕ್ರಾಸ್ ಮತ್ತು ಎಕ್ಸ್‌ಎಲ್6 ಕಾರುಗಳನ್ನು ಕೂಡ ಮಾರಾಟ ಮಾಡಲಾಗುತ್ತದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಮಾರುತಿ ಎಕ್ಸ್‌ಎಲ್5 ಕಾರು

ಮಾರುತಿ ಸುಜುಕಿ ವ್ಯಾಗನ್ಆರ್ ಹ್ಯಾಚ್‌ಬ್ಯಾಕ್‌ನ ಪ್ರೀಮಿಯಂ ಆವೃತ್ತಿಯಾಗಿ ಎಕ್ಸ್‌ಎಲ್5 ಅನ್ನು ಬಿಡುಗಡೆಗೊಳಿಸುತ್ತಿದೆ. ಈ ಹೊಸ ಮಾರುತಿ ಸುಜುಕಿ ಎಕ್ಸ್‌ಎಲ್5 ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಬಿಡುಗಡೆಯಾಗಲಿದೆ.

Most Read Articles

Kannada
English summary
Maruti Suzuki XL5 Spotted Testing Once Again. Read In Kannada.
Story first published: Saturday, July 18, 2020, 17:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X