ರೆನಾಲ್ಟ್ ಕ್ವಿಡ್ ನಿಯೋಟೆಕ್ ವೆರಿಯೆಂಟ್ ಮಾಹಿತಿ ಬಹಿರಂಗ
ರೆನಾಲ್ಟ್ ತನ್ನ ಜನಪ್ರಿಯ ಕ್ವಿಡ್ ಹ್ಯಾಚ್‌ಬ್ಯಾಕ್‌ನ ಹೊಸ ಸ್ಪೆಷಲ್ ಎಡಿಷನ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ನಿಯೋಟೆಕ್ ಎಂದು ಕರೆಯಲ್ಪಡುವ ಸ್ಪೆಷಲ್ ಎಡಿಷನ್ ಮೇಲೆ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿಲ್ಲ.

ಬಿಡುಡೆಯಾಗುವ ಮೊದಲೇ ಕ್ವಿಡ್ ಹ್ಯಾಚ್‌ಬ್ಯಾಕ್‌ನ ಹೊಸ ಸ್ಪೆಷಲ್ ಎಡಿಷನ್ ಮಾದರಿಯ ಮಾಹಿತಿಯು ಬಹಿರಂಗವಾಗಿದೆ. ಕ್ವಿಡ್ ಹ್ಯಾಚ್‌ಬ್ಯಾಕ್‌ನ ಹೊಸ ಸ್ಪೆಷಲ್ ಎಡಿಷನ್ ಮಾದರಿಯ ಕೆಲವು ಬದಲಾವಣೆಗಳನ್ನು ಕಾರ್ ವಾಲೆ ಬಹಿರಂಗಪಡಿಸಿದೆ. ಡ್ಯುಯಲ್ ಟೋನ್ ಬಣ್ಣವನ್ನು ಹೊಂದಿರುವ ಸ್ಪೆಷಲ್ ಎಡಿಷನ್ ಮಾದರಿಯ ಚಿತ್ರಗಳು ಬಹಿರಂಗವಾಗಿವೆ.

ಕಂಪನಿಯು ನಿಯೋಟೆಕ್ ಸ್ಪೆಷಲ್ ಎಡಿಷನ್ ಅನ್ನು ಎರಡು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳಲ್ಲಿ ಬಿಡುಗಡೆಗೊಳಿಸಬಹುದು. ಹೊರಭಾಗದಲ್ಲಿನ ಇತರ ಕೆಲವು ಬದಲಾವಣೆಗಳು ಕ್ಲಾಡಿಂಗ್‌ನಲ್ಲಿ ನಿಯೋಟೆಕ್ ಬ್ಯಾಡ್ಜಿಂಗ್ ಮತ್ತು ಸಿ-ಪಿಲ್ಲರ್‌ನಲ್ಲಿ ಬ್ಲೂ ಅಕ್ಸೆಂಟ್ ಗಳು, ಬ್ಲ್ಯಾಕ್ ಔಟ್ ಪಿಲ್ಲರ್ ಮತ್ತು ಕ್ರೋಮ್ ಒಳಸೇರಿಸುವಿಕೆಯೊಂದಿಗೆ ಗ್ರ್ಯಾಫೈಟ್ ಗ್ರಿಲ್ ಅನ್ನು ಹೊಂದಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ರೆನಾಲ್ಟ್ ಕ್ವಿಡ್ ಹ್ಯಾಚ್‌ಬ್ಯಾಕ್‌ನ ಸ್ಪೆಷಲ್ ಎಡಿಷನ್ ಇಂಟಿರಿಯರ್ ನಲ್ಲಿ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಸಹ ಒಳಗೊಂಡಿದೆ. ಇದರಲ್ಲಿ ಸ್ಟೀಯರಿಂಗ್ ವ್ಹೀಲ್, ಟ್ರಿಮ್ ಸರೌಂಡ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಸೀಟ್ ಅಪ್ಹೋಲ್ಸ್ಟರಿ ಸೇರಿವೆ.

ಕ್ವೀಡ್ ಆಟೋಮ್ಯಾಟಿಕ್ ರೂಪಾಂತರಗಳ ಗೇರ್ ಸೆಲೆಕ್ಟರ್ ಸುತ್ತಲೂ ಬ್ಲೂ ಅಸೆಂಟ್ ಗಳಿವೆ. ಬಹಿರಂಗವಾದ ವರದಿಯ ಪ್ರಕಾರ, ಕ್ವಿಡ್ ನಿಯೋಟೆಕ್ ಅನ್ನು ಮೂರು ವೆರಿಯೆಂಟ್ ಗಳಲ್ಲಿ ಬಿಡುಗಡೆಗೊಳಿಸಲಾಗುತ್ತದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಈ ವರ್ಷದ ಹಬ್ಬದ ಸೀಸನ್ ನಲ್ಲಿ ಕ್ವಿಡ್ ನಿಯೋಟೆಕ್ ಸ್ಪೆಷಲ್ ಎಡಿಷನ್ ಬಿಡುಗಡೆಯಾಗಬಹುದೆಂದು ನಿರೀಕ್ಷಿಸುತ್ತೇವೆ. ಕಾಸ್ಮೆಟಿಕ್ ಬದಲಾವಣೆಗಳ ಹೊರತಾಗಿ ತಾಂತ್ರಿಕ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲ.

ಕ್ವಿಡ್ ಹ್ಯಾಚ್‌ಬ್ಯಾಕ್ ಅನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ಬಿಡಲಾಗುತ್ತದೆ. ಈ ಕಾರಿನಲ್ಲಿ 0.8 ಲೀಟರ್ ಯುನಿಟ್ ಮತ್ತು ದೊಡ್ಡ 1.0-ಲೀಟರ್ ಯುನಿಟ್ ಎಂಜಿನ್ ಅನ್ನು ಹೊಂದಿರಲಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇದರಲ್ಲಿ 0.8-ಲೀಟರ್ ಎಂಜಿನ್ 53.5 ಬಿಹೆಚ್‍ಪಿ ಪವರ್ ಮತ್ತು 72 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಐದು-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಇನ್ನು 1.0-ಲೀಟರ್ ಯುನಿಟ್ 67 ಬಿಹೆಚ್‍ಪಿ ಪವರ್ ಮತ್ತು 91 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗುತ್ತದೆ.

ರೆನಾಲ್ಟ್ ಕಂಪನಿಯು ತನ್ನ ಗ್ರಾಹಕರಿಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ಕ್ವಿಡ್ ಹ್ಯಾಚ್‌ಬ್ಯಾಕ್‌ನ ಸ್ಪೆಷಲ್ ಎಡಿಷನ್ ಮಾದರಿಯನ್ನು ಬಿಡುಗಡೆಗೊಳಿಸಲು ಭರ್ಜರಿ ಸಿದ್ದತೆಯನ್ನು ನಡೆಸುತ್ತಿದೆ. ಡ್ಯುಯಲ್ ಟೋನ್ ಬಣ್ಣದಲ್ಲಿ ಕ್ವಿಡ್ ನಿಯೋಟೆಕ್ ಸ್ಪೆಷಲ್ ಎಡಿಷನ್ ಆಕರ್ಷಕವಾಗಿ ಕಾಣುತ್ತದೆ.


Click it and Unblock the Notifications








