ಅನಾವರಣವಾಗಲಿದೆ ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ ಹೈಬ್ರಿಡ್ ಆವೃತ್ತಿ
ಸ್ಕೋಡಾ ಆಟೋ ಕಂಪನಿಯು 2020ರ ಜಿನೀವಾ ಮೋಟಾರ್ ಶೋನಲ್ಲಿ ನಾಲ್ಕನೇ ತಲಮಾರಿನ ಆಕ್ಟೀವಿಯಾ ಆರ್‍ಎಸ್ ಐವಿ ಮಾದರಿಯನ್ನು ಅನಾವರಣಗೊಳಿಸಲಿದೆ. ಈ ಹೊಸ ಆಕ್ಟೀವಿಯಾದ ವಿಶೇಷತೆ, ಇದು ಪ್ಲಗ್-ಇನ್ ಹೈಬ್ರಿಡ್ ಎಂಜಿನ್ ಅನ್ನು ಹೊಂದಿರುತ್ತದೆ.

ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ ಐವಿ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.35 ಲಕ್ಷಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಆಕ್ಟೀವಿಯಾ ಆರ್‍ಎಸ್ ಐವಿಯ ಹೈಬ್ರಿಡ್ ಎಂಜಿನ್ 245 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದು ಸ್ಕೋಡಾ ಆಕ್ಟೀವಿಯಾ 245 ಕಾರಿನ ಪವರ್‍ಗೆ ಹೋಲುತ್ತದೆ. ಹೊಸ ಆಕ್ಟೀವಿಯಾ ಆರ್‍ಐವಿ ಕಾರಿನ ಕೆಲವು ಮಾಹಿತಿಗಳು ಸೋರಿಕೆಯಾಗಿದೆ.

ಹೊಸ ಕಾರಿನ ಸೋರಿಕೆಯಾದ ಮಾಹಿತಿ ಪ್ರಕಾರ 1.4 ಲೀಟರ್ ಎಲೆಕ್ಟ್ರಿಕ್ ಎಂಜಿನ್ 150 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡ್ ಡಿಎಸ್‍ಜಿ ಅನ್ನು ಮಾತ್ರ ನೀಡಲಾಗುತ್ತದೆ.

ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಸೆಡಾನ್ 2.0 ಲೀಟರ್ ಟಿಎಸ್‍ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 242 ಬಿಹೆಚ್‍ಪಿ ಪವರ್ ಮತ್ತು 370 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 7 ಸ್ಪೀಡ್ ಡಿಎಸ್‍ಜಿ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್245 ಸೆಡಾನ್ ಕೇವಲ 6.6 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

ಇನ್ನು ಹೊಸ ಆಕ್ಟೀವಿಯಾ ಆರ್‍ಎಸ್ ಐವಿ ಮಾದರಿಯ ಟೀಸರ್ ಚಿತ್ರದಲ್ಲಿ ಕಾರಿನಲ್ಲಿ ಇಂಟಿಗ್ರೇಟೆಡ್ ಡೇಟೈಮ್ ರನ್ನಿಂಗ್ ಲೈಟ್, ಟ್ರೆಪೆಜ್ ಆಕರಾದ ಎಕ್ಸಾಸ್ಟ್ ಟಿಪ್ಸ್ ಮತ್ತು ಮುಂಭಾಗದಲ್ಲಿ ಬ್ಲ್ಯಾಕ್ ಗ್ರಿಲ್‍ನಲ್ಲಿ ವಿಆರ್‍ಎಸ್ ಬ್ಯಾಡ್ಜ್ ಹೊಂದಿರುವ ಡ್ಯುಯಲ್ ಸ್ಪ್ಲಿಟ್ ಹೆಡ್‍ಲ್ಯಾಂಪ್‍ಗಳನ್ನು ಒಳಗೊಂಡಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಸ್ಕೋಡಾ ಆಕ್ಟೀವಿಯಾ ವಿಆರ್‍ಎಸ್ ಐವಿ ಮಾದರಿಯಲ್ಲಿ ಬ್ಲ್ಯಾಕ್ ಗ್ರಿಲ್, ಮ್ಯಾಚಿಂಗ್ ಒಆರ್‍ವಿಎಂಗಳು ದೊಡ್ಡದಾದ ಅಲಾಯ್ ವ್ಹೀಲ್‍ಗಳು, ವೈಡರ್ ಏರ್ ಡ್ಯಾಮ್‍ಗಳು ಮತ್ತು ಫ್ರಂಟ್ ಬಂಪರ್‍ಗಳನ್ನು ಹೊಂದಿದೆ.

ಈ ಕಾರಿನ ಇಂಟಿರಿಯರ್ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಇಂಟಿರಿಯರ್‍ನಲ್ಲಿ ಎಲೆಕ್ಟ್ರಾನಿಕಾನಿಕಲ್ ಅಡ್ಜಂಟಬಲ್ ಫ್ರಂಟ್ ಸೀಟ್ ಮುಂಭಾಗದ ಸೀಟ್ ಅಲ್ಕಾಂಟರ್ ಲೆದರ್, ಸ್ಟ್ಯಾಂಡರ್ಡ್ ಲ್ಯಾಪ್ ಟೈಮರ್ ಮತ್ತು ಇಂಟರ್‍ನೆಟ್ ಕನೆಕ್ಟಿವಿಟಿ ಫೀಚರ್ಸ್‍ಗಳೊಂದಿಗೆ ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂ ಅನ್ನು ಹೊಂದಿರಬಹುದು.

ಆಕ್ಟೀವಿಯಾ ಆರ್‍ಎಸ್ ಎರಡು ಬಾಡಿ ಸ್ಟೈಲ್‍ಗಳಲ್ಲಿ ಲಭ್ಯವಿರುತ್ತದೆ. ಇದು ನೋಚ್‍ಬ್ಯಾಕ್ ಮತ್ತು ಎಸ್ಟೇಟ್ ಎಂಬ ಬಾಡಿ ಸ್ಟೈಲ್‍ಗಳಾಗಿದೆ. 2020ರ ಆಕ್ಟೀವಿಯಾ ಜೊತೆಗೆ ಈ ಹೈಬ್ರಿಡ್ ಆವೃತ್ತಿಯನ್ನು ಬಿಡುಗಡೆಗೊಳಿಸಬಹುದು. ಇದನ್ನು ಸಿಬಿಯು ಮಾರ್ಗದ ಮೂಲಕ ಮಾತ್ರ ದೇಶಕ್ಕೆ ತರಲಾಗುತ್ತದೆ.


Click it and Unblock the Notifications