ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಆರ್‍‍ಎಸ್ ಹೈಬ್ರಿಡ್ ಆವೃತ್ತಿ

ಸ್ಕೋಡಾ ಆಟೋ ಕಂಪನಿಯು ನಾಲ್ಕನೇ ತಲೆಮಾರಿನ ಆಕ್ಟೀವಿಯಾ ಆರ್‍‍ಎಸ್ ಐವಿ ಮಾದರಿಯನ್ನು ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಹೊಸ ಆಕ್ಟೀವಿಯಾದ ವಿಶೇಷತೆ, ಇದು ಪ್ಲಗ್-ಇನ್ ಹೈಬ್ರಿಡ್ ಎಂಜಿನ್ ಅನ್ನು ಹೊಂದಿರುತ್ತದೆ.

ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಆರ್‍‍ಎಸ್ ಹೈಬ್ರಿಡ್ ಆವೃತ್ತಿ

ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ ಐವಿ ಕಾರಿನಲ್ಲಿ 1.4 ಲೀಟರ್ ಟಿ‍ಎಸ್‍ಐ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 245 ಬಿ‍‍ಹೆಚ್‍‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು ಕೇವಲ 7.3 ಸೆಕೆಂಡುಗಳಲ್ಲಿ 0-100 ವೇಗವನ್ನು ಕ್ರಮಿಸುತ್ತದೆ. ಈ ಕಾರು 245 ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಕಾರನ್ನು ಪೂರ್ಣ ಪ್ರಮಾಣದಲ್ಲಿ ಚಾರ್ಚ್ ಮಾಡಿದರೆ 60 ಕಿ.ಮೀ ಮೈಲೇಜ್ ಅನ್ನು ನೀಡಬಹುದು.

ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಆರ್‍‍ಎಸ್ ಹೈಬ್ರಿಡ್ ಆವೃತ್ತಿ

ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ ಐವಿ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಸಾಮಾನ್ಯ ಆಕ್ಟೀವಿಯಾ ಆರ್‍‍ಎಸ್ ಮಾದರಿಗೆ ಹೋಲಿಸಿದರೆ ಈ ಕಾರಿನಲ್ಲಿ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ.

ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಆರ್‍‍ಎಸ್ ಹೈಬ್ರಿಡ್ ಆವೃತ್ತಿ

ಇನ್ನು ಹೊಸ ಆಕ್ಟೀವಿಯಾ ಆರ್‍ಎಸ್ ಐವಿ ಮಾದರಿಯ ಕಾರಿನಲ್ಲಿ ಇಂಟಿಗ್ರೇಟೆಡ್ ಡೇಟೈಮ್ ರನ್ನಿಂಗ್ ಲೈಟ್, ಟ್ರೆಪೆಜ್ ಆಕರಾದ ಎಕ್ಸಾಸ್ಟ್ ಟಿಪ್ಸ್ ಮತ್ತು ಮುಂಭಾಗದಲ್ಲಿ ಬ್ಲ್ಯಾಕ್ ಗ್ರಿಲ್‍‍ನಲ್ಲಿ ವಿ‍ಆರ್‍ಎಸ್ ಬ್ಯಾಡ್ಜ್ ಹೊಂದಿರುವ ಡ್ಯುಯಲ್ ಸ್ಪ್ಲಿಟ್ ಹೆಡ್‍‍ಲ್ಯಾಂಪ್‍‍ಗಳನ್ನು ಒಳಗೊಂಡಿದೆ.

ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಆರ್‍‍ಎಸ್ ಹೈಬ್ರಿಡ್ ಆವೃತ್ತಿ

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಸ್ಕೋಡಾ ಆಕ್ಟೀವಿಯಾ ವಿಆರ್‍ಎಸ್ ಐವಿ ಮಾದರಿಯಲ್ಲಿ ಬ್ಲ್ಯಾಕ್ ಗ್ರಿಲ್, ಮ್ಯಾಚಿಂಗ್ ಒಆ‍‍ರ್‍‍ವಿಎಂ‍ಗಳು ದೊಡ್ಡದಾದ ಅಲಾಯ್ ವ್ಹೀಲ್‍‍ಗಳು, ವೈಡರ್ ಏ‍‍ರ್ ಡ್ಯಾಮ್‍‍ಗಳು ಮತ್ತು ಫ್ರಂಟ್ ಬಂಪರ್‍‍ಗಳನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಆರ್‍‍ಎಸ್ ಹೈಬ್ರಿಡ್ ಆವೃತ್ತಿ

ಇಂಟಿರಿಯರ್‍‍ನಲ್ಲಿ ಎಲೆಕ್ಟ್ರಾನಿಕಾನಿಕಲ್ ಅಡ್ಜಂಟಬಲ್ ಫ್ರಂಟ್ ಸೀಟ್ ಮುಂಭಾಗದ ಸೀಟ್‍ ಅಲ್ಕಾಂಟರ್ ಲೆದರ್, ಸ್ಟ್ಯಾಂಡರ್ಡ್ ಲ್ಯಾಪ್ ಟೈಮರ್ ಮತ್ತು ಇಂಟರ್‍‍ನೆಟ್ ಕನೆಕ್ಟಿವಿಟಿ ಫೀಚರ್ಸ್‍‍ಗಳೊಂದಿಗೆ ಟಚ್‍‍ಸ್ಕ್ರೀನ್ ಇನ್ಫೋಟೇನ್‍ಮೆಂಟ್‍ ಸಿಸ್ಟಂ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಆರ್‍‍ಎಸ್ ಹೈಬ್ರಿಡ್ ಆವೃತ್ತಿ

ಆಕ್ಟೀವಿಯಾ ಆರ್‍ಎಸ್ ಎರಡು ಬಾಡಿ ಸ್ಟೈಲ್‍‍ಗಳಲ್ಲಿ ಲಭ್ಯವಿರುತ್ತದೆ. ಇದು ನೋಚ್‍‍ಬ್ಯಾಕ್ ಮತ್ತು ಎಸ್ಟೇಟ್ ಎಂಬ ಬಾಡಿ ಸ್ಟೈಲ್‍‍ಗಳಾಗಿದೆ. 2020ರ ಆಕ್ಟೀವಿಯಾ ಜೊತೆಗೆ ಈ ಹೈಬ್ರಿಡ್ ಆವೃತ್ತಿಯನ್ನು ಬಿಡುಗಡೆಗೊಳಿಸಬಹುದು. ಇದನ್ನು ಸಿಬಿ‍ಯು ಮಾರ್ಗದ ಮೂಲಕ ಮಾತ್ರ ದೇಶಕ್ಕೆ ತರಲಾಗುತ್ತದೆ.

ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಆರ್‍‍ಎಸ್ ಹೈಬ್ರಿಡ್ ಆವೃತ್ತಿ

ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ ಐವಿ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.35 ಲಕ್ಷಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಆಕ್ಟೀವಿಯಾ ಆರ್‍ಎಸ್ ಐವಿಯ ಹೈಬ್ರಿಡ್ ಎಂಜಿನ್ 245 ಬಿ‍‍ಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದು ಸ್ಕೋಡಾ ಆಕ್ಟೀವಿಯಾ 245 ಕಾರಿನ ಪವರ್‍‍ಗೆ ಹೋಲುತ್ತದೆ.

ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಆರ್‍‍ಎಸ್ ಹೈಬ್ರಿಡ್ ಆವೃತ್ತಿ

ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ ಐವಿ ಕಾರು ಮೊದಲು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಮಾರಾಟವಾಗಲಿದೆ. ಸ್ಕೋಡಾ ಕಂಪನಿಯು ಈ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಇದೇ ವರ್ಷ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

Article Published On: Tuesday, March 3, 2020, 19:05 [IST]
English summary
2020 Skoda Octavia RS iV Revealed. Read in Kannada.
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+