ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ರ‍್ಯಾಪಿಡ್ ಆಟೋಮ್ಯಾಟಿಕ್ ಆವೃತ್ತಿ

ಸ್ಕೋಡಾ ಆಟೋ ಇಂಡಿಯಾ ಕಂಪನಿಯು ತನ್ನ ಹೊಸ ರ‍್ಯಾಪಿಡ್ ಕಾರನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಈ ಸ್ಕೋಡಾ ರ‍್ಯಾಪಿಡ್ ಕಾರಿನ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.7.49 ಲಕ್ಷಗಳಾಗಿದೆ.

ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ರ‍್ಯಾಪಿಡ್ ಆಟೋಮ್ಯಾಟಿಕ್ ಆವೃತ್ತಿ

2020ರ ಸ್ಕೋಡಾ ರ‍್ಯಾಪಿಡ್ ಕಾರಿನಲ್ಲಿ ಹೊಸದಾಗಿ 1.0 ಲೀಟರ್ ಟಿ‍ಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 110 ಬಿ‍‍ಹೆಚ್‍‍ಪಿ ಪವರ್ ಮತ್ತು 175 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಈಂಜಿನ್‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯ ಆವೃತ್ತಿಯನ್ನು ಸ್ಕೋಡಾ ಕಂಪನಿಯು ಈ ವರ್ಷದ ಕೊನೆಯಲ್ಲಿ ಬಿಡುಗಡೆಗೊಳಿಸಲಿದೆ.

ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ರ‍್ಯಾಪಿಡ್ ಆಟೋಮ್ಯಾಟಿಕ್ ಆವೃತ್ತಿ

6-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯನ್ನು ಟಾಪ್ ಸ್ಪೆಕ್ ಮಾಂಟೆ ಕಾರ್ಲೋ ರೂಪಾಂತರದಲ್ಲಿ ಮಾತ್ರ ಲಭ್ಯವಿರಲಿದೆ. 2020ರ ಸ್ಕೋಡಾ ರ‍್ಯಾಪಿಡ್ ಟಾಪ್ ಸ್ಪೆಕ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.11.79 ಲಕ್ಷಗಳಾಗಿದೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ರ‍್ಯಾಪಿಡ್ ಆಟೋಮ್ಯಾಟಿಕ್ ಆವೃತ್ತಿ

ಹೊಸ 2020ರ ಸ್ಕೋಡಾ ರ‍್ಯಾಪಿಡ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಹೊಸ ಸ್ಕೋಡಾ ರ‍್ಯಾಪಿಡ್ ರೈಡರ್, ಆ್ಯಂಬಿಯೆಷನ್, ಆನೆಕ್ಸ್, ಸ್ಟೈಲ್ ಮತ್ತು ಮಾಂಟೆ ಕಾರ್ಲೋ ಎಂಬ ಐದು ರೂಪಾಂತರಗಳಲ್ಲಿ ಲಭ್ಯವಿದೆ.

ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ರ‍್ಯಾಪಿಡ್ ಆಟೋಮ್ಯಾಟಿಕ್ ಆವೃತ್ತಿ

ಕಾರಿನ ಮುಂಭಾಗವು ಸ್ಲೀಕ್ ಶಾರ್ಪಡ್ ಹೆಡ್‍‍‍ಲೈಟ್‍‍ಗಳನ್ನು ಹೊಂದಿದೆ. ಹಿಂಭಾಗದಲ್ಲಿ ಎಲ್ ಆಕಾರದ ಟೇಲ್‍‍ಲೈಟ್‍‍ಗಳನ್ನು ಹೊಂದಿದೆ. ಸ್ಕೋಡಾ ಬ್ರ್ಯಾಂಡಿಗ್ ಬುಟ್‍ ಲಿ‍‍ಡ್‍‍ಗಳನ್ನು ಹೊಂದಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ರ‍್ಯಾಪಿಡ್ ಆಟೋಮ್ಯಾಟಿಕ್ ಆವೃತ್ತಿ

ಮರುವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್ ಹೊಸದಾಗಿ ವಿನ್ಯಾಸಗೊಳಿಸಲಾದ ಮಲ್ಟಿ-ಸ್ಪೋಕ್ ಅಲಾಯ್ ವ್ಹೀಲ್‍‍ಗಳ ಜೊತೆಗೆ ಫಾಗ್ ಲ್ಯಾಂಪ್‍ಗಳನ್ನು ಹೊಂದಿದೆ.

ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ರ‍್ಯಾಪಿಡ್ ಆಟೋಮ್ಯಾಟಿಕ್ ಆವೃತ್ತಿ

ಕಾರಿನ ಇಂಟಿರಿಯರ್‍‍ನಲ್ಲಿ ಹಿಂದಿನ ಆವೃತ್ತಿಗಿಂತ ಹೆಚ್ಚು ಬದಲಾವಣೆಗಳನ್ನು ಮಾಡಲಾಗಿದ್ದು, ಹೆಚ್ಚಿನ ಪ್ರೀಮಿಯಂ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ. ಇಂಟಿರಿಯರ್‍ ಇನ್ಪೋಟೇನ್‍ಮೆಂಟ್ ಯುನಿ‍‍ಟ್ ಅನ್ನು ಹೊಂದಿದೆ.

MOST READ: ಭಾರತದಲ್ಲಿ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಬಿಎಂಡಬ್ಲ್ಯೂ 5-ಸೀರೀಸ್ ಫೇಸ್‌ಲಿಫ್ಟ್ ಕಾರು

ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ರ‍್ಯಾಪಿಡ್ ಆಟೋಮ್ಯಾಟಿಕ್ ಆವೃತ್ತಿ

ಕ್ಯಾಬಿನ್‍‍ನಲ್ಲಿ ಅಬ್ಯಾಂಟ್ ಲೈಟ್ ಹೆಚ್ಚು ಪ್ರೀಮಿಯಂ ಲುಕ್ ಅನ್ನು ನೀಡಿದೆ. ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಫುಲ್ ಡಿಜಿಟಲ್ ಯುನಿಟ್ ಅನ್ನು ಹೊಂದಿದೆ. ಹೊಸ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ರೇರ್ ಪಾರ್ಕಿಂಗ್ ಸೆನ್ಸಾರ್, ಆ್ಯಂಟಿ-ಗ್ಲೆರ್ ವ್ಯೂ‍‍ಮಿರರ್ ಗಳನ್ನು ಅಳವಡಿಸಲಾಗಿವೆ.

ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ರ‍್ಯಾಪಿಡ್ ಆಟೋಮ್ಯಾಟಿಕ್ ಆವೃತ್ತಿ

ಹೊಸ ರ‍್ಯಾಪಿಡ್ ಆಟೋಮ್ಯಾಟಿಕ್ ಆವೃತ್ತಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೋಂಡಾ ಸಿಟಿ, ಮಾರುತಿ ಸುಜುಕಿ ಸಿಯಾಜ್, ಹ್ಯುಂಡೈ ವರ್ನಾ, ಟೊಯೊಟಾ ಯಾರೀಸ್ ಮತ್ತು ಫೋಕ್ಸ್‌ವ್ಯಾಗನ್ ವೆಂಟೊ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
Read more on ಸ್ಕೋಡಾ skoda
English summary
Skoda Rapid 1.0-Litre TSI Automatic To Be Launched Later This Year. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more