ಕಿಯಾ ಸೆಲ್ಟೋಸ್ ಎಸ್‍‍ಯುವಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಸ್ಕೋಡಾ ವಿಷನ್

ಸ್ಕೋಡಾ ಇಂಡಿಯಾ ತನ್ನ ಹೊಸ ಕಾನ್ಸೆಪ್ಟ್ ವಿಷನ್ ಎಸ್‍‍ಯುವಿಯನ್ನು ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಸ್ಕೋಡಾ ಇಂಡಿಯಾ ವಿಡಬ್ಲ್ಯೂ ಎಂಕ್ಯೂಬಿ ಎಒ ಐನ್ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿ ಈ ಹೊಸ ಎಸ್‍‍‍ಯುವಿಯನ್ನು ಅಭಿವೃದ್ದಿಪಡಿಸುತ್ತಿದೆ.

ಕಿಯಾ ಸೆಲ್ಟೋಸ್ ಎಸ್‍‍ಯುವಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಸ್ಕೋಡಾ ವಿಷನ್

ಈ ಹೊಸ ಎಸ್‍‍ಯುವಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಎಸ್‍‍ಯುವಿಗಳಿಗೆ ನೇರ ಪೈಪೋಟಿಯನ್ನು ನೀಡುತ್ತದೆ. ಈ ಎಸ್‍‍ಯುವಿಯು ಇತ್ತೀಚಿಗೆ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಈ ಎಸ್‍‍ಯುವಿಯು ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ರಶ್‍‍ಲೇನ್ ಬಹಿರಂಗಪಡಿಸಿದೆ. ಈ ಎಸ್‍‍ಯುವಿಯು ತನ್ನ ಕಂಪನಿಯ ಸರಣಿಯಲ್ಲಿರುವ ಕಾಮಿಕ್ ಎಸ್‍‍ಯುವಿಯ ಸ್ಥಳೀಕರಿಸಿದ ಆವೃತ್ತಿಯಾಗಿದೆ.

ಕಿಯಾ ಸೆಲ್ಟೋಸ್ ಎಸ್‍‍ಯುವಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಸ್ಕೋಡಾ ವಿಷನ್

ಇತ್ತೀಚೆಗೆ ಸ್ಕೋಡಾ ಆಟೋ ಇಂಡಿಯಾ ತನ್ನ ಮುಂಬರುವ ಎಸ್‍‍ಯುವಿಯ ಕಾನ್ಸೆಪ್ಟ್ ಆವೃತ್ತಿಯ ಅಧಿಕೃತ ಟೀಸರ್ ಸ್ಕೆಚ್ ಚಿತ್ರಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಸ್ಕೋಡಾ ವಿಷನ್ ಐಎನ್ ಎಂದು ಕರೆಯಲ್ಪಡುವ ಈ ಕಾನ್ಸೆಪ್ಟ್ ಎಸ್‍‍ಯುವಿಯನ್ನು ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ 2020ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಪಡಿಸಲಿದೆ.

ಕಿಯಾ ಸೆಲ್ಟೋಸ್ ಎಸ್‍‍ಯುವಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಸ್ಕೋಡಾ ವಿಷನ್

ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ಎಸ್‍‍ಯುವಿಗೆ ಮತ್ತು ಇತ್ತೀಚೆಗೆ ಬಿಡುಗಡೆಗೊಳಿಸಿದ ಸ್ಕೆಚ್ ಚಿತ್ರದ ಕಾನ್ಸೆಪ್ಟ್ ವಿಷನ್ ಎಸ್‍‍ಯುವಿಯು ಹೆಚ್ಚುವರಿ ಒಂದೇ ಮಾದರಿಯಲ್ಲಿದೆ. ಪ್ರಮುಖವಾಗಿ ಮೂಲ ಮಾದರಿ ಮತ್ತು ವಿನ್ಯಾಸದ ಅಂಶಗಳು ಕೂಡ ಹೊಂದಿಕೆಯಾಗಿದೆ.

ಕಿಯಾ ಸೆಲ್ಟೋಸ್ ಎಸ್‍‍ಯುವಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಸ್ಕೋಡಾ ವಿಷನ್

ಸ್ಕೋಡಾ ಇಂಡಿಯಾ ಬಿಡುಗಡೆಗೊಳಿಸಿದ ಸ್ಕೆಚ್ ಚಿತ್ರದ ಎಸ್‍‍ಯುವಿಯ ಇಂಟಿರಿಯರ್ ಯುರೋಪ್ ಮೂಲದ ಕಾಮಿಕ್ ಎಸ್‍‍ಯುವಿಗೆ ಹೋಲುತ್ತವೆ. ಸ್ಕೋಡಾ ಕಾನ್ಸೆಪ್ಟ್ ಇಂಟಿರಿಯರ್‍ ಸ್ಪೋರ್ಟಿ ಥೀಮ್ ಅನ್ನು ಹೊಂದಿದೆ. ಇಂಟಿರಿಯರ್‍‍ಲ್ಲಿ ಸೆಂಟರ್ ಕನ್ಸೋಲ್, ಫ್ಲಾಟ್ ಬಾಟಮ್ ಸ್ಟೀಯರಿಂಗ್ ವ್ಹೀಲ್ ಮತ್ತು ದೊಡ್ಡ ಫ್ಲೋಟಿಂಗ್ ಟಚ್‍‍ಸ್ಕ್ರೀನ್ ಡಿಸ್‍‍ಪ್ಲೇಯನ್ನು ಅಳವಡಿಸಲಾಗಿದೆ.

ಕಿಯಾ ಸೆಲ್ಟೋಸ್ ಎಸ್‍‍ಯುವಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಸ್ಕೋಡಾ ವಿಷನ್

ಹೊಸ ಸ್ಕೆಚ್‍ ಚಿತ್ರದಲ್ಲಿ ಸ್ಕೊಡಾ ಎಸ್‍‍ಯುವಿಯ ಮುಂಭಾಗ ದೊಡ್ಡ ಗ್ರಿಲ್ ಮತ್ತು ಹೆಚ್ಚು ವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್ ಅನ್ನು ಕಾಣಬಹುದು. ಈ ಎಸ್‍ಯುವಿಯಲ್ಲಿ ಚಾಲಕನ ಸೀಟ್ ಸ್ವಲ್ಪ ಎತ್ತರದಿಂದ ಕೊಡಿದೆ.

ಕಿಯಾ ಸೆಲ್ಟೋಸ್ ಎಸ್‍‍ಯುವಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಸ್ಕೋಡಾ ವಿಷನ್

ಈ ಎಸ್‍ಯುವಿಯ ಮುಂಭಾಗವು ಸಿಗ್ನೇಚರ್ ವಿನ್ಯಾಸವನ್ನು ಹೊಂದಿದೆ. ಇನ್ನೂ ಮುಂಭಾಗ ಡ್ಯುಯಲ್ ಹೆಡ್‍‍ಲ್ಯಾಂಪ್‍, ಏರ್ ಇನ್‍‍ಟೆಕ್ ಮತ್ತು ಮುಂಭಾಗದ ಬಂಪರ್‍‍ನಲ್ಲಿ ಸ್ಕಫ್ ಪ್ಲೇಟ್‍ಗಳೊಂದಿಗೆ ದೊಡ್ಡ ಗ್ರಿಲ್ ಅನ್ನು ಹೊಂದಿದೆ. ಎಸ್‍‍ಯುವಿಯ ಎರಡು ಬದಿಗಳು ಮತ್ತು ಹಿಂಭಾಗದ ಪೊಫೈಲ್ ಸ್ಪೋರ್ಟಿ ಥೀಮ್ ಅನ್ನು ಹೊಂದಿವೆ.

ಕಿಯಾ ಸೆಲ್ಟೋಸ್ ಎಸ್‍‍ಯುವಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಸ್ಕೋಡಾ ವಿಷನ್

ಈ ಎಸ್‍‍ಯುವಿಯ ಸೈಡ್ ಪ್ರೊಫೈಲ್‍‍ನಲ್ಲಿ ಶಾರ್ಪ್ ಲೈನ್‍‍ಗಳನ್ನು ಹೊಂದಿದೆ. ಇದರ ಹಿಂಭಾಗದಲ್ಲಿ ಎಲ್ಇಡಿ ಟೇಲ್‍‍ಲೈಟ್‍ಗಳು ಮತ್ತು ರೂಫ್ ಮೌಂಟಡ್ ಸ್ಪಾಯ್ಲರ್ ಹೊಂದಿರುವುದರಿಂದ ಎಸ್‍‍ಯುವಿಗೆ ಸ್ಪೋರ್ಟಿ ಲುಕ್ ಅನ್ನು ನೀಡಿದೆ.

ಕಿಯಾ ಸೆಲ್ಟೋಸ್ ಎಸ್‍‍ಯುವಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಸ್ಕೋಡಾ ವಿಷನ್

ಹೊಸ ಸ್ಕೋಡಾ ವಿಷನ್ ಇನ್ ಕಾನ್ಸೆಪ್ಟ್ 1.0 ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 115 ಬಿ‍‍ಹೆಚ್‍‍ಪಿ ಪವರ್ ಮತ್ತು 200 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡಿನ ಡಿಎಸ್‍ಜಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಬಹುದು.

ಕಿಯಾ ಸೆಲ್ಟೋಸ್ ಎಸ್‍‍ಯುವಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಸ್ಕೋಡಾ ವಿಷನ್

ಭಾರತೀಯ ಮಾರುಕಟ್ಟೆಗಳಲ್ಲಿ ಹೊಸ ಮಾದರಿಗಳನ್ನು ಬಿಡುಗಡೆಗೊಳಿಸುವುದರಲ್ಲಿ ಸ್ಕೋಡಾ ನಿರತವಾಗಿದೆ. ಸ್ಕೋಡಾ ಇಂಡಿಯಾ ಸಂಸ್ಥೆಯು ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಮುಂಬರುವ ಎರಡು ವರ್ಷಗಳ ಅವಧಿಯಲ್ಲಿ ವಿವಿಧ ಮಾದರಿಯ ಆರು ಹೊಸ ಕಾರು ಮಾದರಿಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ.

Article Published On: Monday, January 13, 2020, 11:37 [IST]
English summary
Skoda Vision SUV spied on test in India. Read in Kannada
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+