ಅನಾವರಣವಾಯ್ತು ಬಹುನಿರೀಕ್ಷಿತ ಸುಜುಕಿ ಎಕ್ರಾಸ್ ಎಸ್‍ಯುವಿ

ಸುಜುಕಿ ಕಂಪನಿಯು ಎಕ್ರಾಸ್ ಎಸ್‌ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಶೀಘ್ರದಲ್ಲೇ ಈ ಎಕ್ರಾಸ್ ಎಸ್‍ಯುವಿಯನ್ನು ಸುಜುಕಿ ಕಂಪನಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಅನಾವರಣವಾಯ್ತು ಬಹುನಿರೀಕ್ಷಿತ ಸುಜುಕಿ ಎಕ್ರಾಸ್ ಎಸ್‍ಯುವಿ

ಜಪಾನ್ ಮೂಲದ ಎರಡು ದಿಗ್ಗಜ ಕಂಪನಿಗಳಾದ ಸುಜುಕಿ ಮತ್ತು ಟೊಯೊಟಾ ಕಂಪನಿಯು ಸಹಭಾಗಿತ್ವದಲ್ಲಿ ಈ ಎಕ್ರಾಸ್ ಎಸ್‍ಯುವಿಯನ್ನು ಅಭಿವೃದ್ದಿಪಡಿಸಲಾಗಿದೆ. ಈ ಎಕ್ರಾಸ್ ಎಸ್‍ಯುವಿಯನ್ನು ಸುಜುಕಿ ಕಂಪನಿಯು ತನ್ನ ಇತರ ಸರಣಿಯ ಕಾರುಗಳ ಜೊತೆಯಲ್ಲಿ ಮಾರಾಟ ಮಾಡಲಾಗುತ್ತದೆ. ಇನ್ನು ಈ ಸುಜುಕಿ ಎಕ್ರಾಸ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ನೋಡುವುದಾದರೆ ಆಕರ್ಷಕ ಹೆಡ್ ಲ್ಯಾಂಪ್ ಮತ್ತು ಬೂಮರಾಂಗ್ ಆಕಾರದ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಹೊಂದಿದೆ.

ಅನಾವರಣವಾಯ್ತು ಬಹುನಿರೀಕ್ಷಿತ ಸುಜುಕಿ ಎಕ್ರಾಸ್ ಎಸ್‍ಯುವಿ

ಸುಜುಕಿ ಎಕ್ರಾಸ್ ಎಸ್‍ಯುವಿಯ ಮುಂಭಾಗದಲ್ಲಿ ಬ್ಲ್ಯಾಕ್ ಗ್ರಿಲ್ ಅನ್ನು ಹೂಂದಿದೆ. ಇನ್ನು ಸಿ-ಆಕಾರದ ಬ್ಲ್ಯಾಕ್ ಹೌಸಿಂಗ್, ಫಾಂಗ್ ಲ್ಯಾಂಪ್ ಮತ್ತು ಸ್ಕಿಡ್ ಪ್ಲೇಟ್ ಅನ್ನು ಹೊಂದಿದೆ. ಹಿಂಭಾಗದಲ್ಲಿ ಬಹುತೇಕೆ ಆರ್ಎವಿ4 ಎಸ್‍ಯುವಿಗೆ ಹೋಲುವಂತಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಅನಾವರಣವಾಯ್ತು ಬಹುನಿರೀಕ್ಷಿತ ಸುಜುಕಿ ಎಕ್ರಾಸ್ ಎಸ್‍ಯುವಿ

ಇನ್ನು ಎಕ್ರಾಸ್ ಎಸ್‍ಯುವಿಯಲ್ಲಿ ಬ್ಲ್ಯಾಕ್ ರೂಫ್ ರೈಲ್, ರ್ಯಾಕ್ಡ್ ವಿಂಡ್‌ಶೀಲ್ಡ್ ಮತ್ತು ಕ್ರೋಮ್ಡ್ ವಿಂಡೋ ಲೈನ್ ಅನ್ನು ಹೊಂದಿದೆ. ಈ ಎಸ್‍ಯುವಿಯ ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲ್ಯಾಂಪ್, ಶಾರ್ಕ್ ಫಿನ್ ಆಂಟೆನಾ ಮತ್ತು ಬ್ಲ್ಯಾಕ್ ಬಂಪರ್ ಅನ್ನು ಹೊಂದಿದೆ.

ಅನಾವರಣವಾಯ್ತು ಬಹುನಿರೀಕ್ಷಿತ ಸುಜುಕಿ ಎಕ್ರಾಸ್ ಎಸ್‍ಯುವಿ

ಸುಜುಕಿ ಎಕ್ರಾಸ್ ಎಸ್‍ಯುವಿಯ ಇಂಟಿರಿಯರ್ ಆಕರ್ಷಕ ವಾಗಿದೆ, ಇಂಟಿರಿಯರ್ ನಲ್ಲಿ ವೈರ್‌ಲೆಸ್ ಚಾರ್ಜಿಂಗ್, 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಆಕರ್ಷಕ ಸೆಂಟರ್ ಕನ್ಸೋಲ್ ಅನ್ನು ಹೊಂದಿದೆ. ಇನ್ನು ಸಾಕಷ್ಟು ಕ್ರೋಮ್ ಟ್ರಿಮ್‌ಗಳು ಮತ್ತು ಮಲ್ಟಿ-ಫಂಕ್ಷನಲ್ ಸ್ಟೀಯರಿಂಗ್ ವೀಲ್ ಅನ್ನು ಒಳಗೊಂಡಿದೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಅನಾವರಣವಾಯ್ತು ಬಹುನಿರೀಕ್ಷಿತ ಸುಜುಕಿ ಎಕ್ರಾಸ್ ಎಸ್‍ಯುವಿ

ಸುಜುಕಿ ಎಕ್ರಾಸ್ ಎಸ್‍ಯುವಿಯಲ್ಲಿ 490 ಲೀಟರ್‌ ಬೂಟ್‌ಸ್ಪೇಸ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಹಿಂಭಾಗದ ಸೀಟುಗಳನ್ನು ಮಡಿಚಿದಾಗ 1640 ಲೀಟರ್‌ ನಷ್ಟು ಬೂಟ್‌ಸ್ಪೇಸ್ ಹೆಚ್ಚಿಸಬಹುದು. ಇನ್ನು ಈ ಎಸ್‍ಯುವಿಯಲ್ಲಿ ಮೀಡಿಯಾ ಸಿಸ್ಟಂ ಆಪಲ್ ಕಾರ್ ಪ್ಕೇ, ಆಂಡ್ರಾಯ್ಡ್ ಆಟೋ ಮತ್ತು ಮಿರರ್ಲಿಂಕ್ ಕನೆಕ್ಟಿವಿಟಿ ಫೀಚರ್ ಗಳನ್ನು ಹೊಂದಿದೆ.

ಅನಾವರಣವಾಯ್ತು ಬಹುನಿರೀಕ್ಷಿತ ಸುಜುಕಿ ಎಕ್ರಾಸ್ ಎಸ್‍ಯುವಿ

ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ ಸುಜುಕಿ ಎಕ್ರಾಸ್ ಎಸ್‍ಯುವಿಯಲ್ಲಿ 2.5-ಲೀಟರ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಪ್ಲಗ್-ಇನ್ ಹೈಬ್ರಿಡ್ ಪವರ್‌ಟ್ರೇನ್ ಹೊಂದಿದೆ. ಇದು 173 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ.

ಅನಾವರಣವಾಯ್ತು ಬಹುನಿರೀಕ್ಷಿತ ಸುಜುಕಿ ಎಕ್ರಾಸ್ ಎಸ್‍ಯುವಿ

ಸುಜುಕಿ ಎಕ್ರಾಸ್ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ ಲೇನ್ ಟ್ರೇಸಿಂಗ್ ಅಸಿಸ್ಟ್ ಮತ್ತು ಡೈನಾಮಿಕ್ ರಾಡಾರ್ ಕ್ರೂಸ್ ಕಂಟ್ರೋಲ್ (ಡಿಆರ್‌ಸಿಸಿ) ನಂತಹ ಡ್ರೈವಿಂಗ್ ಅಸಿಸ್ಟ್ ಫೀಚರ್ ಗಳನ್ನು ಹೊಂದಿದೆ. ಈ ಸುಜುಕಿ ಎಕ್ರಾಸ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.

ಹೊಸ ಹೋಂಡಾ ಸಿಟಿ ಕಾರು ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ನೋಡೋಣ

Article Published On: Thursday, July 2, 2020, 12:44 [IST]
English summary
Toyota RAV4-based Suzuki ACross SUV unveiled. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+