2021ರ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು ಬಿಡುಗಡೆ

ಸುಜುಕಿ ಕಂಪನಿಯು ಇತ್ತೀಚೆಗೆ ತನ್ನ ತಾಯ್ನಾಡು ಜಪಾನ್‌ನಲ್ಲಿ ನಾಲ್ಕನೇ ತಲೆಮಾರಿನ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರನ್ನು ಬಿಡುಗಡೆಗೊಳಿಸಿತ್ತು. ಇದೀಗ ಸುಜುಕಿ ಕಂಪನಿಯು ಇಂಗ್ಲೆಂಡ್‌ನಲ್ಲಿ 2021ರ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರನ್ನು ಬಿಡುಗಡೆಗೊಳಿಸಿದೆ.

2021ರ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು ಬಿಡುಗಡೆ

ಮಾರುತಿ ಬ್ರ್ಯಾಂಡ್ ಅಡಿಯಲ್ಲಿ ಇದು ಭಾರತದಲ್ಲಿ ಹೆಚ್ಚು ಮಾರಾಟವಾಗುವ ಸುಜುಕಿ ಕಾರುಗಳಲ್ಲಿ ಒಂದಾಗಿದೆ. ಮೂರನೇ ತಲೆಮಾರಿನ ಸ್ವಿಫ್ಟ್ ಅನ್ನು 2016ರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಳಿಸಲಾಯಿತು ಮತ್ತು ಇದನ್ನು 2017 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಮಾರುತಿ ಸ್ವಿಫ್ಟ್ ದೀರ್ಘಕಾಲದವರೆಗೆ ಭಾರತದಲ್ಲಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಒಂದಾಗಿದೆ. ಹೊಸ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ.

2021ರ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು ಬಿಡುಗಡೆ

ಜನಪ್ರಿಯ ಹ್ಯಾಚ್‌ಬ್ಯಾಕ್ ಸ್ವಿಫ್ ಕಾರನ್ನು ಮಿಡ್-ಲೈಫ್ ನವೀಕರಣವನ್ನು ಮಾಡಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸ್ವಿಫ್ಟ್ ಕಾರಿಗೆ ಹೋಲಿಸಿದರೆ ಯಾವುದೇ ಪ್ರಮುಖ ಬದಲಾವಣೆಗಳು ಕಂಡು ಬಂದಿಲ್ಲ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

2021ರ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು ಬಿಡುಗಡೆ

ಹೊಸ ಸುಜುಕಿ ಸ್ವಿಫ್ಟ್ ಪ್ರಮುಖ ಕ್ರೋಮ್ ಸ್ಟ್ರಿಪ್ ಜೊತೆಗೆ ರೇಡಿಯೇಟರ್ ಗ್ರಿಲ್‌ಗಾಗಿ ಹೊಸ ಹನಿಕ್ಯೂಬ್ ಅನ್ನು ಹೊಂದಿದೆ. ಈ ಹೊಸ ಕಾರಿನ ಮುಂಭಾಗದ ಬಂಪರ್ ನಲ್ಲಿ ಕೂಡ ಕೆಲವು ಬದಲಾವಣೆಗಳನ್ನು ಮಾಡಿದೆ. ಇನ್ನು ಉಳಿದಂತೆ ಕಾರಿನ ಮುಂಭಾಗ ಯಾವುದೇ ಪ್ರಮುಖ ಬದಲಾವಣೆಗಳು ಕಂಡು ಬಂದಿಲ್ಲ.

2021ರ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು ಬಿಡುಗಡೆ

ಹೊಸ ಸುಜುಕಿ ಸ್ವಿಫ್ಟ್ ಕಾರಿನಲ್ಲಿ ಡ್ಯುಯಲ್-ಟೋನ್ ಅಲಾಯ್-ವ್ಹೀಲ್ ಅನ್ನು ಅಳವಡಿಸಲಿದೆ. ಆದರೆ ಭಾರತದಲ್ಲಿ ಬಿಡುಗಡೆಗೊಳಿಸುವ ಹೊಸ ಸ್ವಿಫ್ಟ್ ಕಾರಿನಲ್ಲಿ ಡ್ಯುಯಲ್-ಟೋನ್ ಅಲಾಯ್-ವ್ಹೀಲ್ ಹೊಂದಿರುತ್ತದೆ ಎಂಬುವುದು ಖಚಿತವಾಗಿಲ್ಲ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

2021ರ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು ಬಿಡುಗಡೆ

ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರಿನ ಇಂಟಿರಿಯರ್ ನಲ್ಲಿಯು ಕೂಡ ಹೆಚ್ಚಿನ ಬದಲಾವಣೆಗಳನ್ನು ಹೊಂದಿಲ್ಲ. ಈ ಹ್ಯಾಚ್‌ಬ್ಯಾಕ್ ನಲ್ಲಿ ಹೊಸ ಫ್ರಾಭ್ಯಿಕ್ ಸೀಟ್ ಮತ್ತು ಎಕ್ಸಟ್ ಗಳನ್ನು ಹೊಂದಿದೆ. ಹೊಸ ಸ್ವಿಫ್ ಫೇಸ್‌ಲಿಫ್ಟ್ ಕಾರಿನಲ್ಲಿ ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಹೊಂದಿರುವ 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

2021ರ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು ಬಿಡುಗಡೆ

ಜಪಾನ್‌ನಲ್ಲಿ 2020ರ ಸ್ವಿಫ್ಟ್ ಫೇಸ್‌ಲಿಫ್ಟ್ ಫ್ಯೂರ್ ವೈಟ್ ಪರ್ಲ್, ಸೂಪರ್ ಬ್ಲ್ಯಾಕ್ ಪರ್ಲ್, ಸ್ಟಾರ್ ಸಿಲ್ವರ್ ಮೆಟಾಲಿಕ್, ಪ್ರೀಮಿಯಂ ಸಿಲ್ವರ್ ಮೆಟಾಲಿಕ್, ಬರ್ನಿಂಗ್ ರೆಡ್ ಪರ್ಲ್ ಮೆಟಾಲಿಕ್ ಮತ್ತು ಸ್ಪೀಡಿ ಬ್ಲೂ ಮೆಟಾಲಿಕ್ ಸೇರಿದಂತೆ ಆರು ಸಿಂಗಲ್ ಟೋನ್ ಬಣ್ಣಗಳಲ್ಲಿ ಲಭ್ಯವಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

2021ರ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು ಬಿಡುಗಡೆ

ಇನ್ನು ಫ್ಲೇಮ್ ಆರೆಂಜ್ ಪರ್ಲ್ ಮೆಟಾಲಿಕ್ & ಬ್ಲ್ಯಾಕ್, ರಶ್ ಯೆಲ್ಲೊ ಮೆಟಾಲಿಕ್ ಸಿಲ್ವರ್ ರೂಫ್ ಎಂಬ ಡ್ಯುಯಲ್-ಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಭಾರತದಲ್ಲಿ ಕೂಡ ಇದೇ ರೀತಿಯ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

2021ರ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು ಬಿಡುಗಡೆ

ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಯುಕೆ ಸ್ಪೆಕ್ ನಲ್ಲಿ 1.2 ಲೀಟರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 82 ಬಿಹೆಚ್‌ಪಿ ಮತ್ತು 108 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು 12.2 ಸೆಕೆಂಡುಗಳಲ್ಲಿ 0-100 ಕಿಮೀ ಕ್ರಮಿಸುತ್ತದೆ. ಇದರೊಂದಿಗೆ 12ವಿ ಮೈಲ್ಡ್ ಹೈಬ್ರಿಡ್ ಸಿಸ್ಟಂ ಅನ್ನು ಕೂಡ ಹೊಂದಿದೆ.

2021ರ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು ಬಿಡುಗಡೆ

ಈ ಹೊಸ ಸ್ವಿಫ್ಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಹೊಸ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು ಭಾರತದಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್, ಟಾಟಾ ಟಿಯಾಗೊ ಮತ್ತು ಫೋರ್ಡ್ ಫಿಗೊ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

More from DriveSpark

Article Published On: Wednesday, September 9, 2020, 13:40 [IST]
English summary
2021 Suzuki Swift Facelift Launched. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+