ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಫೋಕ್ಸ್‌ವ್ಯಾಗನ್ ಪಸಾಟ್ ಫೇಸ್‌ಲಿಫ್ಟ್
ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಬಿಎಸ್-6 ಪಸಾಟ್ ಫೇಸ್‌ಲಿಫ್ಟ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ಈ ಬಿಎಸ್-6 ಪಸಾಟ್ ಫೇಸ್‌ಲಿಫ್ಟ್ ಕಾರನ್ನು ಈ ವರ್ಷದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ.

ಇದೀಗ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಪಸಾಟ್ ಕಾರನ್ನು ಬಿಡುಗಡೆಗೊಳಿಸಲು ಫೋಕ್ಸ್‌ವ್ಯಾಗನ್ ಕಂಪನಿಯು ಸಜ್ಜಾಗುತ್ತಿದೆ. ಇದರ ಭಾಗವಾಗಿ ಭಾರತದಲ್ಲಿ ಪಸಾಟ್ ಫೇಸ್‌ಲಿಫ್ಟ್ ಕಾರು ಹಲವು ಬಾರು ಸ್ಪಾಟ್ ಟೆಸ್ಟ್ ನಡೆಸಿದೆ. ಈ ಹೊಸ ಫೋಕ್ಸ್‌ವ್ಯಾಗನ್ ಪಸಾಟ್ ಫೇಸ್‌ಲಿಫ್ಟ್ ಸೆಡಾನ್‍ನಲ್ಲಿ ಫ್ರಂಟ್ ಬಂಪರ್, ಸ್ಲ್ಯಾಟ್‍ಗಳನ್ನು ಹೊಂದಿರುವ ಗ್ರಿಲ್ ಮತ್ತು ಐಕ್ಯೂ ಲೈಟ್ ಎಲ್‍ಇಡಿ ಮ್ಯಾಟ್ರಿಕ್ಸ್ ಹೆಡ್‍ಲ್ಯಾಂಪ್‍ಗಳನ್ನು ಒಳಗೊಂಡಿದೆ.

ಈ ಹೊಸ ಪಸಾಟ್ ಫೇಸ್‌ಲಿಫ್ಟ್ ಕಾರು ಹೊಸ ಟೇಲ್ ಲ್ಯಾಂಪ್ ಕ್ಲಸ್ಟರ್ ವಿನ್ಯಾಸವನ್ನು ಹೊಂದಿದೆ. ಹೊಸ ಕಾರಿನಲ್ಲಿ ಮರುವಿನ್ಯಾಸಗೊಳಿಸಲಾದ ಪಸಾಟ್ ಲೋಗೊವನ್ನು ಅಳವಡಿಸಲಾಗಿದೆ. ಮುಂಬರುವ ಫೋಕ್ಸ್‌ವ್ಯಾಗನ್ ಸೆಡಾನ್ 17 ಇಂಚಿನ ಅಲಾಯ್ ವ್ಹೀಲ್‍ಗಳನ್ನು ಸಹ ಹೊಂದಿದೆ.
MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಈ ಕಾರಿನ ಇಂಟಿರಿಯರ್‍ನಲ್ಲಿ ಮಾಡಿದ ಬದಲಾವಣೆಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಆದರೆ 2020ರ ಪಸಾಟ್ ಬಿಎಸ್-6 ಮಾದರಿಯು ಅತ್ಯಾಧುನಿಕ ಫೀಚರ್ಸ್‍ಗನ್ನು ಹೊಂದಿರಲಿದೆ ಎಂದು ನಿರೀಕ್ಷಿಸುತ್ತೇವೆ.

ಈ ಹೊಸ ಕಾರಿನ ಇಂಟಿರಿಯರ್‍ನಲ್ಲಿ ಇತ್ತೀಚಿನ ಎಂಐಬಿ3 ಆಧಾರಿತ ಇನ್ಫೋಟೇನ್‍ಮೆಂಟ್ ಸಿಸ್ಟಂ, ಇಂಟಿಗ್ರೇಟೆಡ್ ಇಂಟರ್‍ನೆಟ್ ಕನೆಕ್ಟಿವಿಟಿ ಎಲ್ಲಾ ಹೊಸ ಡಿಜಿಟಲ್ ಕಾಕ್‍ಪಿಟ್ ಮತ್ತು ಕೆಪ್ಯಾಸಿಟಿವ್ ಸ್ಟೀಯರಿಂಗ್ ಅನ್ನು ಹೊಂದಿರಲಿದೆ.
MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

2020ರ ಪಸಾಟ್ ಕಾರನ್ನು ಆಯ್ದ ಸ್ಯಾಮ್‍ಸಂಗ್ ಸ್ಮಾರ್ಟ್ ಫೋನ್ ಗಳನ್ನು ಬಳಿಸಿ ಲಾಕ್ ಮಾಡಲು ಮತ್ತು ಅನ್ ಲಾಕ್ ಮಾಡಲು ಸಾಧ್ಯವಾಗುತ್ತದೆ. ಇದು ಸ್ಯಾಮ್‍ಸಾಂಗ್‍ನ ಕೆಲವು ಆಯ್ದ ಮೊಬೈಲ್ ಮಾದರಿಗಳಲ್ಲಿ ಮಾತ್ರ ಸಾಧ್ಯವಾಗುತ್ತದೆ.

ಹೊಸ ಫೋಕ್ಸ್‌ವ್ಯಾಗನ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಫೀಚರ್ಸ್‍ಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಫಾರ್ವರ್ಡ್ ಡಿಕ್ಕಿ ವಾರ್ನಿಂಗ್ ಸಿಸ್ಟಂ, ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಂ, ಮಾನಿಟರಿಂಗ್ ಸಿಸ್ಟಂ, ರೇರ್ ಟ್ರಾಫಿಕ್ ಅಲರ್ಟ್ ಸಿಸ್ಟಂ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪಿಂಗ್ ಅಸಿಸ್ಟ್ ಅನ್ನು ಒಳಗೊಂಡಿರುತ್ತದೆ.
MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಹಿಂದಿನ ಬಿಎಸ್-4 ಫೋಕ್ಸ್‌ವ್ಯಾಗನ್ ಪಸಾಟ್ ಕಾರಿನಲ್ಲಿ 2.0 ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 174 ಬಿಹೆಚ್‍ಪಿ ಪವರ್ ಮತ್ತು 350 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಜೋಡಿಸಲಾಗಿದೆ.

ಹಿಂದಿನ ಬಿಎಸ್-4 ಫೋಕ್ಸ್ ವ್ಯಾಗನ್ ಪಸಾಟ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.29.99 ಲಕ್ಷಗಳಾಗಿದೆ. ಹೊಸ ಬಿಎಸ್-6 ಮಾದರಿಯ ಬೆಲೆಯು ಹಿಂದಿನ ಬಿಎಸ್-4 ಪಸಾಟ್ ಮಾದರಿಗಿಂತ ಹೆಚ್ಚಾಗಿರುತ್ತದೆ ಎಂದು ನಿರೀಕ್ಷಿಸುತ್ತೇವೆ. ಫೋಕ್ಸ್‌ವ್ಯಾಗನ್ ಕಂಪನಿಯು ಬಿಎಸ್-6 ಪಸಾಟ್ ಫೇಸ್‌ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ.


Click it and Unblock the Notifications








