ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋಕ್ಸ್‌ವ್ಯಾಗನ್ ಪಸಾಟ್ ಫೇಸ್‌ಲಿಫ್ಟ್

ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಬಿಎಸ್-6 ಪಸಾಟ್ ಫೇಸ್‌ಲಿಫ್ಟ್ ಕಾರನ್ನು ಭಾರತದಲ್ಲಿ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ಬಿಎಸ್-6 ಪಸಾಟ್ ಫೇಸ್‌ಲಿಫ್ಟ್ ಕಾರನ್ನು ಈ ವರ್ಷದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ.

ಮತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋಕ್ಸ್‌ವ್ಯಾಗನ್ ಪಸಾಟ್ ಫೇಸ್‌ಲಿಫ್ಟ್

ಇದೀಗ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಪಸಾಟ್ ಕಾರನ್ನು ಬಿಡುಗಡೆಗೊಳಿಸಲು ಫೋಕ್ಸ್‌ವ್ಯಾಗನ್ ಕಂಪನಿಯು ಸಜ್ಜಾಗುತ್ತಿದೆ. ಇದರ ಭಾಗವಾಗಿ ಭಾರತದಲ್ಲಿ ಪಸಾಟ್ ಫೇಸ್‌ಲಿಫ್ಟ್ ಕಾರು ಸ್ಪಾಟ್ ಟೆಸ್ಟ್ ನಡೆಸಿದೆ. ಹೊಸ ಪಸಾಟ್ ಕಾರು ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ಓವರ್‌ಡ್ರೈವ್‌ ಬಹಿರಂಗಪಡಿಸಿದೆ. ಈ ಹೊಸ ಸೆಡಾನ್‍ನಲ್ಲಿ ಫ್ರಂಟ್ ಬಂಪರ್, ಸ್ಲ್ಯಾಟ್‍‍ಗಳನ್ನು ಹೊಂದಿರುವ ಗ್ರಿಲ್ ಮತ್ತು ಐಕ್ಯೂ ಲೈಟ್ ಎಲ್‍ಇ‍ಡಿ ಮ್ಯಾಟ್ರಿಕ್ಸ್ ಹೆಡ್‍‍ಲ್ಯಾಂಪ್‍‍ಗಳನ್ನು ಒಳಗೊಂಡಿದೆ.

ಮತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋಕ್ಸ್‌ವ್ಯಾಗನ್ ಪಸಾಟ್ ಫೇಸ್‌ಲಿಫ್ಟ್

ಈ ಹೊಸ ಪಸಾಟ್ ಫೇಸ್‌ಲಿಫ್ಟ್ ಕಾರು ಹೊಸ ಟೇಲ್ ಲ್ಯಾಂಪ್ ಕ್ಲಸ್ಟರ್ ವಿನ್ಯಾಸವನ್ನು ಕೂಡ ಹೊಂದಿದೆ. ಹೊಸ ಕಾರಿನಲ್ಲಿ ಮರುವಿನ್ಯಾಸಗೊಳಿಸಲಾದ ಪಸಾಟ್ ಲೋಗೊವನ್ನು ಅಳವಡಿಸಲಾಗಿದೆ. ಮುಂಬರುವ ಫೋಕ್ಸ್‌ವ್ಯಾಗನ್ ಸೆಡಾನ್ 17 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಸಹ ಹೊಂದಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಮತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋಕ್ಸ್‌ವ್ಯಾಗನ್ ಪಸಾಟ್ ಫೇಸ್‌ಲಿಫ್ಟ್

ಸ್ಪೈ ಚಿತ್ರದಲ್ಲಿ ಕಾರಿನ ಇಂಟಿರಿಯರ್‍‍ನಲ್ಲಿ ಮಾಡಿದ ಬದಲಾವಣೆಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಆದರೆ 2020ರ ಪಸಾಟ್ ಬಿ‍ಎಸ್-6 ಮಾದರಿಯು ಅತ್ಯಾಧುನಿಕ ಫೀಚರ್ಸ್‍‍ಗನ್ನು ಹೊಂದಿರಲಿದೆ ಎಂದು ನಿರೀಕ್ಷಿಸಬಹುದು.

ಮತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋಕ್ಸ್‌ವ್ಯಾಗನ್ ಪಸಾಟ್ ಫೇಸ್‌ಲಿಫ್ಟ್

ಈ ಹೊಸ ಕಾರಿನ ಇಂಟಿರಿಯರ್‍‍ನಲ್ಲಿ ಇತ್ತೀಚಿನ ಎಂಐಬಿ3 ಆಧಾರಿತ ಇನ್ಫೋಟೇನ್‍‍ಮೆಂಟ್ ಸಿಸ್ಟಂ, ಇಂಟಿಗ್ರೇಟೆಡ್ ಇಂಟರ್‍‍ನೆಟ್ ಕನೆಕ್ಟಿವಿಟಿ ಎಲ್ಲಾ ಹೊಸ ಡಿಜಿಟಲ್ ಕಾಕ್‍‍ಪಿಟ್ ಮತ್ತು ಕೆಪ್ಯಾಸಿಟಿವ್ ಸ್ಟೀಟಿಯರಿಂಗ್ ಅನ್ನು ಹೊಂದಿರಲಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಮತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋಕ್ಸ್‌ವ್ಯಾಗನ್ ಪಸಾಟ್ ಫೇಸ್‌ಲಿಫ್ಟ್

2020ರ ಪಸಾಟ್ ಕಾರ್ ಅನ್ನು ಆಯ್ದ ಸ್ಯಾಮ್‍‍ಸಂಗ್ ಸ್ಮಾರ್ಟ್ ಫೋನ್ ಗಳನ್ನು ಬಳಿಸಿ ಲಾಕ್ ಮಾಡಲು ಮತ್ತು ಅನ್ ಲಾಕ್ ಮಾಡಲು ಸಾಧ್ಯವಾಗುತ್ತದೆ. ಇದು ಸ್ಯಾಮ್‍‍ಸಾಂಗ್‍‍ನ ಕೆಲವು ಆಯ್ದ ಮೊಬೈಲ್ ಮಾದರಿಗಳಲ್ಲಿ ಮಾತ್ರ ಸಾಧ್ಯವಾಗುತ್ತದೆ.

ಮತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋಕ್ಸ್‌ವ್ಯಾಗನ್ ಪಸಾಟ್ ಫೇಸ್‌ಲಿಫ್ಟ್

ಹೊಸ ಫೋಕ್ಸ್‌ವ್ಯಾಗನ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಫಾರ್ವರ್ಡ್ ಡಿಕ್ಕಿ ವಾರ್ನಿಂಗ್ ಸಿಸ್ಟಂ, ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಂ, ಮಾನಿಟರಿಂಗ್ ಸಿಸ್ಟಂ, ರೇರ್ ಟ್ರಾಫಿಕ್ ಅಲರ್ಟ್ ಸಿಸ್ಟಂ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪಿಂಗ್ ಅಸಿಸ್ಟ್ ಅನ್ನು ಒಳಗೊಂಡಿರುತ್ತದೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಮತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋಕ್ಸ್‌ವ್ಯಾಗನ್ ಪಸಾಟ್ ಫೇಸ್‌ಲಿಫ್ಟ್

ಹಿಂದಿನ ಬಿಎಸ್-4 ಫೋಕ್ಸ್‌ವ್ಯಾಗನ್ ಪಸಾಟ್ ಕಾರಿನಲ್ಲಿ 2.0 ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 174 ಬಿ‍‍ಹೆಚ್‍‍ಪಿ ಪವರ್ ಮತ್ತು 350 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ.

ಮತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋಕ್ಸ್‌ವ್ಯಾಗನ್ ಪಸಾಟ್ ಫೇಸ್‌ಲಿಫ್ಟ್

ಹಿಂದಿನ ಬಿಎಸ್-4 ಫೋಕ್ಸ್ ವ್ಯಾಗನ್ ಪಸಾಟ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.29.99 ಲಕ್ಷಗಳಾಗಿದೆ. ಹೊಸ ಬಿಎಸ್-6 ಮಾದರಿಯ ಬೆಲೆಯು ಹಿಂದಿನ ಬಿಎಸ್-4 ಪಸಾಟ್ ಮಾದರಿಗಿಂತ ಹೆಚ್ಚಾಗಿರುತ್ತದೆ. ಫೋಕ್ಸ್‌ವ್ಯಾಗನ್ ಕಂಪನಿಯು ಬಿಎಸ್-6 ಪಸಾಟ್ ಫೇಸ್‌ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

More from DriveSpark

Article Published On: Friday, June 12, 2020, 15:00 [IST]
English summary
Volkswagen Passat Facelift Spotted Testing Ahead Of Launch. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+