Just In
- 22 min ago ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- 26 min ago 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- 28 min ago Honda: ಭಾರತ ನಿರ್ಮಿಸಿದ ಹೋಂಡಾ ಕಾರಿಗೆ ಮುಗಿಬಿದ್ದ ಜಪಾನ್ ಜನ!
- 38 min ago ಮತ್ತೆ ಅಖಾಡಕ್ಕೆ ಅಮೇರಿಕನ್ ಆಫ್ರೋಡ್ ಕಿಂಗ್: 2024 ಜೀಪ್ ರಾಂಗ್ಲರ್ ಫೇಸ್ಲಿಫ್ಟ್ ರಿವ್ಯೂ!
Don't Miss!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಫೋಕ್ಸ್ವ್ಯಾಗನ್ ಟೈಗನ್ ಕಂಪ್ಯಾಕ್ಟ್ ಎಸ್ಯುವಿಯ ಟೀಸರ್ ಬಿಡುಗಡೆ
ಫೋಕ್ಸ್ವ್ಯಾಗನ್ ಕಂಪನಿಯು ಹೊಸ ಟೈಗನ್ ಕಂಪ್ಯಾಕ್ಟ್ ಎಸ್ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಫೋಕ್ಸ್ವ್ಯಾಗನ್ ಕಂಪನಿಯು ತನ್ನ ಹೊಸ ಟೈಗನ್ ಕಂಪ್ಯಾಕ್ಟ್ ಎಸ್ಯುವಿಯ ಟೀಸರ್ ವೀಡಿಯೋವನ್ನು ಬಿಡುಗಡೆಗೊಳಿಸಿದೆ.
ಟೀಸರ್ ವೀಡಿಯೋದಲ್ಲಿ ಟೈಗನ್ ಕಂಪ್ಯಾಕ್ಟ್ ಎಸ್ಯುವಿಯ ವಿವಿಧ ಸ್ಟೈಲಿಂಗ್ ಮತ್ತು ವಿನ್ಯಾಸ ಅಂಶಗಳನ್ನು ಪ್ರದರ್ಶಿಸಿದ್ದಾರೆ. ಫೋಕ್ಸ್ವ್ಯಾಗನ್ ಕಂಪನಿಯು ಈ ಹೊಸ ಟೈಗನ್ ಕಂಪ್ಯಾಕ್ಟ್ ಎಸ್ಯುವಿಯನ್ನು ದೆಹಲಿ ಆಟೋ ಎಕ್ಸ್ಪೋದಲ್ಲಿ ಪ್ರದರ್ಶಿಸಿದ್ದರು. ಹೊಸ ಫೋಕ್ಸ್ವ್ಯಾಗನ್ ಟೈಗನ್ ಎಸ್ಯುವಿಯು ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಫೋಕ್ಸ್ವ್ಯಾಗನ್ 2.0 ಯೋಜನೆಯಡಿಯಲ್ಲಿ ಬಿಡುಗಡೆಯಾಗಲಿರುವ ಮೊದಲ ಮಾದರಿ ಟೈಗನ್ ಆಗಿರಲಿದೆ.
ಟೈಗನ್ ಕಂಪ್ಯಾಕ್ಟ್ ಎಸ್ಯುವಿಯಲ್ಲಿ ಟಿಎಸ್ಐ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ ಎಂದು ಫೋಕ್ಸ್ವ್ಯಾಗನ್ ಬಹಿರಂಗಪಡಿಸಲಾಗಿದೆ. ಟಿ-ರಾಕ್ ಮಾದರಿಯಲ್ಲಿ ಕಂಡುಬರುವಂತಹ ಲೀಟರ್ 1.5 ಲೀಟರ್ ಅಥವಾ 1.0-ಲೀಟರ್ ಲೀಟರ್ ಎಂಬ ಮಾಹಿತಿಯನ್ನು ಕಂಪನಿಯು ಬಹಿರಂಗಪಡಿಸಿಲ್ಲ.
MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು
ಇದರಲ್ಲಿ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 108 ಬಿಹೆಚ್ಪಿ ಪವರ್ ಮತ್ತು 175 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 148 ಬಿಹೆಚ್ಪಿ ಪವರ್ ಮತ್ತು 240 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಫೋಕ್ಸ್ವ್ಯಾಗನ್ ಕಂಪನಿಯು ಹೊಸ ಟೈಗನ್ ಕಂಪ್ಯಾಕ್ಟ್ ಎಸ್ಯುವಿಯ ಹೆಸರನ್ನು ಅಧಿಕೃತ ವೆಬ್ಸೈಟ್ನಲ್ಲಿ ಪಟ್ಟಿ ಮಾಡಲಾಗಿದೆ. ಈ ಹೊಸ ಫೋಕ್ಸ್ವ್ಯಾಗನ್ ಟೈಗನ್ ಕಾಂಪ್ಯಾಕ್ಟ್ ಎಸ್ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್
ಹೊಸ್ ಟೈಗನ್ ಕಾಂಪ್ಯಾಕ್ಟ್ ಎಸ್ಯುವಿಯ ವಿನ್ಯಾಸವು ಟಿ-ಕ್ರಾಸ್ ಎಸ್ಯುವಿಗೆ ಹೋಲುತ್ತದೆ. ಮುಂಭಾಗದಲ್ಲಿ ಸಾಕಷ್ಟು ಪ್ರಮಾಣದ ಕ್ರೋಮ್ ಅನ್ನು ಬಳಸಲಾಗುತ್ತದೆ ಗ್ರಿಲ್ ಕ್ರೋಮ್ ಅಲಂಕರಿಸುವಿಕೆಯೊಂದಿಗೆ ಸ್ಲ್ಯಾಟ್ಗಳನ್ನು ಪಡೆಯುತ್ತದೆ.
ಹೆಡ್ಲ್ಯಾಂಪ್ಗಳು ನಯವಾದ ಯುನಿಟ್ ಗಳಾಗಿವೆ ಮತ್ತು ಗ್ರಿಲ್ನ ವಿಸ್ತೃತ ಭಾಗದಂತೆ ಕಾಣುತ್ತವೆ. ಫಾಗ್ ಲ್ಯಾಂಪ್ ಗಳ ಸುತ್ತ ಕ್ರೋಮ್ ಸ್ಟ್ರಿಪ್ ಇದೆ ಮತ್ತು ಸ್ಕಿಡ್ ಪ್ಲೇಟ್ ಇದಕ್ಕೆ ಬಹಳ ಮಸ್ಕಲರ್ ನಿಲುವನ್ನು ನೀಡುತ್ತದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ
ಇನ್ನು ಎಸ್ಯುವಿಯ ಹಿಂಭಾಗದ ಬಗ್ಗೆ ಹೇಳುವುದಾದರೆ, ಅನನ್ಯವಾಗಿ ವಿನ್ಯಾಸಗೊಳಿಸಲಾದ ಟೈಲ್ ಲ್ಯಾಂಪ್ ಅನ್ನು ಹೊಂದಿದೆ. ಇದು ಆಲ್-ಎಲ್ಇಡಿ ಆಗಿದ್ದು, ಅದು ಬೂಟ್ನಾದ್ಯಂತ ಚಲಿಸುತ್ತದೆ. ಮಧ್ಯದಲ್ಲಿ ಫೋಕ್ಸ್ವ್ಯಾಗನ್ ಲೋಗೋವನ್ನು ಇರಿಸಲಾಗಿದೆ.
ಮುಂಭಾಗದಲ್ಲಿರುವಂತೆಯೇ, ಹಿಂಭಾಗದಲ್ಲಿ ಸ್ಕಿಡ್ ಪ್ಲೇಟ್ ಮತ್ತು ಅದರ ಮೇಲೆ ಕ್ರೋಮ್ ಅಲಂಕರಿಸುವ ಬಂಪರ್ ಹೊಂದಿದೆ. ಇನ್ನು ಈ ಎಸ್ಯುವಿಯ ಇಂಟಿರಿಯರ್ ನಲ್ಲಿ ಈ ವಿಭಾಗದ ಕಾರುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಆಧುನಿಕ ಫಿಚರ್ ಗಳೊಂದಿಗೆ ಪ್ರೀಮಿಯಂ ಕಾಣುವ ಕ್ಯಾಬಿನ್ ಪಡೆಯುವ ನಿರೀಕ್ಷೆಯಿದೆ.
ಇದರಲ್ಲಿ ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸ್ಕ್ರೀನ್, ಎಲೆಕ್ಟ್ರಿಕ್ ಸನ್ರೂಫ್, ಮಲ್ಟಿ ಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಮುಂತಾದ ಫೀಚರ್ ಗಳನ್ನು ಹೊಂದಿರಲಿದೆ.
ಫೋಕ್ಸ್ವ್ಯಾಗನ್ ಟೈಗನ್ ಕಾಂಪ್ಯಾಕ್ಟ್ ಎಸ್ಯುವಿ ಎಂಕ್ಯೂಬಿ ಎ0 ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ ಮತ್ತು ಈ ಪ್ಲಾಟ್ಫಾರ್ಮ್ ಪಡೆದ ಭಾರತದ ಮೊದಲ ವಾಹನವಾಗಿದೆ. ಹೊಸ ಫೋಕ್ಸ್ವ್ಯಾಗನ್ ಟೈಗನ್ ಮಾದರಿಯು ಭಾರತದಲ್ಲಿ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಕಾಂಪ್ಯಾಕ್ಟ್ ಎಸ್ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.