Just In
- 4 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 7 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 7 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 9 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
Don't Miss!
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ಹೋಂಡಾ ಹೆಚ್ಆರ್-ವಿ ಎಸ್ಯುವಿ
ಹೋಂಡಾ ಕಂಪನಿಯು ತನ್ನ ಹೊಸ ತಲೆಮಾರಿನ ಹೆಚ್ಆರ್-ವಿ ಎಸ್ಯುವಿಯನ್ನು ಮೊದಲಿಗೆ ತವರು ಜಪಾನ್ನಲ್ಲಿ ಬಿಡುಗಡೆಗೊಳಿಸಲಿದೆ. ಹೋಂಡಾ ಈ ಹೊಸ ಹೆಚ್ಆರ್-ವಿ ಎಸ್ಯುವಿಯನ್ನು 2021ರ ಜನವರಿ ತಿಂಗಳಲ್ಲಿ ಜಪಾನ್ ಮಾರುಕಟ್ಟೆಯಲ್ಲಿ ಪರಿಚಯಿಸಲಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಪೈಪೋಟಿಯಿಂದ ಕೂಡಿರುವುದು ಕಾಂಪ್ಯಾಕ್ಟ್ ಎಸ್ಯುವಿ ವಿಭಾಗವಾಗಿದೆ. ಇದೇ ವಿಭಾಗಕ್ಕೆ ಹೊಸ ಹೆಚ್ಆರ್-ವಿ ಮಾದರಿಯನ್ನು ಬಿಡುಗಡೆಗೊಳಿಸಲಿದೆ ಎಂದು ವರದಿಗಳಾಗಿದೆ. ಭಾರತದಲ್ಲಿ ಕಾಂಪ್ಯಾಕ್ಟ್ ಎಸ್ಯುವಿ ವಿಭಾಗ ಎಲ್ಲಾ ಜನಪ್ರಿಯ ಕಾರು ತಯಾರಕ ಕಂಪನಿಗಳು ಹೆಚ್ಚಿನ ಪ್ರಾಮುಖ್ಯಯತೆಯನ್ನು ನೀಡುತ್ತಿದೆ. ಇನ್ನು ಹೋಂಡಾ ಕಂಪನಿಯು ಮೂರನೇ ತಲೆಮಾರಿನ ಹೆಚ್ಆರ್-ವಿ ಕಾಂಪ್ಯಾಕ್ಟ್ ಎಸ್ಯುವಿಯನ್ನು ಭಾರತದಲ್ಲಿ ಮುಂದಿನ ವರ್ಷದ ಕೊನೆಯಲ್ಲಿ ಬಿಡುಗಡೆಗೊಳಿಸಿದೆ.
ಇನ್ನು ಹೋಂಡಾ ಕಂಪನಿಯು ಮೂರನೇ ತಲೆಮಾರಿನ ಹೆಚ್ಆರ್-ವಿ ಕಾಂಪ್ಯಾಕ್ಟ್ ಎಸ್ಯುವಿಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಪರೀಕ್ಷಿಸುವಲ್ಲಿ ನಿರತವಾಗಿದೆ. ಹೊಸ ಹೋಂಡಾ ಹೆಚ್ಆರ್-ವಿ ಎಸ್ಯುವಿಯ ಉತ್ಪಾದನೆಯು ಫೆಬ್ರವರಿ-ಮಾರ್ಚ್ನಲ್ಲಿ ಜಪಾನ್ನಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ
ಭಾರತದಲ್ಲಿ ಹೊಸ ಹೋಂಡಾ ಹೆಚ್ಆರ್-ವಿ ಕಾಂಪ್ಯಾಕ್ಟ್ ಎಸ್ಯುವಿಯ ಬಿಡುಗಡೆಯ ಬಗ್ಗೆ ಕಂಪನಿಯು ಅಧಿಕೃತವಾಗಿ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಲಿಲ್ಲ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾದರಿಗಳನ್ನು ಪರಿಚಯಿಸಿ ತನ್ನ ಸರಣಿಯನ್ನು ವಿಸ್ತರಿಸಲಿದೆ.
ಅಲ್ಲದೇ ಈ ವರ್ಷದ ಆರಂಭದಲ್ಲಿ ಹೋಂಡಾ ಐದನೇ ತಲೆಮಾರಿನ ಹೋಂಡಾ ಸಿಟಿಯನ್ನು ಪ್ರಾರಂಭಿಸಿತು ಮತ್ತು ಪೋರ್ಟ್ಫೋಲಿಯೊವನ್ನು ವಿಸ್ತರಿಸುವ ಸಲುವಾಗಿ ನಾಲ್ಕನೇ ಪೀಳಿಗೆಯನ್ನು ನಿಲ್ಲಿಸಿರಲಿಲ್ಲ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು
ಈ ಹೊಸ ಹೆಚ್ಆರ್-ವಿ ಕಾಂಪ್ಯಾಕ್ಟ್ ಎಸ್ಯುವಿಯು 4,400 ಎಂಎಂ ಉದ್ದ, 1,790 ಎಂಎಂ ಅಗಲ ಮತ್ತು 1,590 ಎಂಎಂ ಎತ್ತರವನ್ನು ಹೊಂದಿರಲಿದೆ. ಇನ್ನು 2,660 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿರಲಿದೆ, ಈ ಹೊಸ ಹೆಚ್ಆರ್-ವಿ ಮಾದರಿಯು ಸುಮಾರು 4.4 ಮೀಟರ್ ಉದ್ದವನ್ನು ಹೊಂದಿರಲಿದೆ.
ಹೊಸ ಹೆಚ್ಆರ್-ವಿ ಕಾಂಪ್ಯಾಕ್ಟ್ ಎಸ್ಯುವಿಯಲ್ಲಿ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಇದರೊಂದಿಗೆ ಈ ಕಾಂಪ್ಯಾಕ್ಟ್ ಎಸ್ಯುವಿಯಲ್ಲಿ 1.5 ಲೀಟರ್ ಡೀಸೆಲ್ ಎಂಜಿನ್ ಅಯ್ಕೆಯನ್ನು ಹೊಂದಿರಬಹುದು.
ಹೊಸ ಹೋಂಡಾ ಹೆಚ್ಆರ್-ವಿ ಕಾಂಪ್ಯಾಕ್ಟ್ ಎಸ್ಯುವಿಯು ಎಲ್ಇಡಿ ಹೆಡ್ಲ್ಯಾಂಪ್ಗಳು ಮತ್ತು ಹೋಂಡಾದ ಸಿಗ್ನೇಚರ್ ವೈಡ್ ಫ್ರಂಟ್ ಗ್ರಿಲ್ ಅನ್ನು ಪಡೆದುಕೊಳ್ಳುತ್ತದೆ. ವರದಿ ಪ್ರಕಾರ ಇದು ಹ್ಯುಂಡೈ ಕ್ರೆಟಾದಂತೆ ಪ್ರೀಮಿಯಂ ಕಾಂಪ್ಯಾಕ್ಟ್ ಎಸ್ಯುವಿಯಾಗಿರಲಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್
ಇನ್ನು ಹೊಸ ಹೋಂಡಾ ಹೆಚ್ಆರ್-ವಿ ಕಾಂಪ್ಯಾಕ್ಟ್ ಎಸ್ಯುವಿಯಲ್ಲಿ ಡ್ಯುಯಲ್ ಟೋನ್ ಮೆಷಿನ್ ಕಟ್ ಅಲಾಯ್ ವ್ಹೀಲ್ಸ್ ಮತ್ತು ಎಲ್ಇಡಿ ಟೈಲ್ ಲೈಟ್ಗಳನ್ನು ಒಳಗೊಂಡಿದೆ. ಒಟ್ಟಾರೆಯಾಗಿ ಇದು ಕಾಂಪ್ಯಾಕ್ಟ್ ಎಸ್ಯುವಿಗಿಂತ ಕ್ರಾಸ್ಒವರ್ನಂತೆ ಕಾಣುತ್ತದೆ.
ವರದಿಗಳ ಪ್ರಕಾರ ಹೊಸ ಹೆಚ್ಆರ್-ವಿ ಕಾಂಪ್ಯಾಕ್ಟ್ ಎಸ್ಯುವಿಯು ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಹೊಸ ಹೋಂಡಾ ಹೆಚ್ಆರ್-ವಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದರೆ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ರೆನಾಲ್ಟ್ ಕ್ಯಾಪ್ಚರ್ ಮತ್ತು ಜೀಪ್ ಕಂಪಾಸ್ ಎಸ್ಯುವಿಗಳಿಗೆ ಪೈಪೋಟಿ ನೀಡುತ್ತದೆ.