ಭಾರತದಲ್ಲಿ ಸ್ಥಗಿತವಾಯ್ತು ರೆನಾಲ್ಟ್ ಕ್ಯಾಪ್ಚರ್ ಕಾರು

ರೆನಾಲ್ಟ್ ಕಂಪನಿಯು ತನ್ನ ಕ್ಯಾಪ್ಚರ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಳಾಗಿದೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ರೆನಾಲ್ಟ್ ಕ್ಯಾಪ್ಚರ್ ಕಾರನ್ನು ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಎಂದು ವರದಿಗಳು ಪ್ರಕಟವಾಗಿದೆ.

ಭಾರತದಲ್ಲಿ ಸ್ಥಗಿತವಾಯ್ತು ರೆನಾಲ್ಟ್ ಕ್ಯಾಪ್ಚರ್ ಕಾರು

ರೆನಾಲ್ಟ್ ಕ್ಯಾಪ್ಚರ್ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ರೆನಾಲ್ಟ್ ಕ್ಯಾಪ್ಚರ್ ಕಾರುಮಾರಾಟದಲ್ಲಿ ಗಣನೀಯ ಮಟ್ಟದಲ್ಲಿ ಕುಸಿತ ಕಂಡಿತು. ಈ ಎಲ್ಲಾ ಕಾರಣಗಳಿಂದ ರೆನಾಲ್ಟ್ ಕಂಪನಿಯು ಕ್ಯಾಪ್ಚರ್ ಕಾರನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಆದರೆ ಭವಿಷ್ಯದಲ್ಲಿ ರೆನಾಲ್ಟ್ ಕ್ಯಾಪ್ಚರ್ ಕಾರನ್ನು ಬಿಡುಗಡೆಗೊಳಿಸಬಹುದು.

ಭಾರತದಲ್ಲಿ ಸ್ಥಗಿತವಾಯ್ತು ರೆನಾಲ್ಟ್ ಕ್ಯಾಪ್ಚರ್ ಎಸ್‍ಯುವಿ

ರೆನಾಲ್ಟ್ ಕ್ಯಾಪ್ಚರ್ ಕಾರನ್ನು 2017ರಲ್ಲಿ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದರು. ಈ ಕ್ಯಾಪ್ಚರ್ ಎಸ್‍ಯುವಿಯನ್ನು ಎಂ 0 ಪ್ಲಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ದಿ ಪಡಿಸಿದ್ದರು. ಇದು ನಿಸ್ಸಾನ್ ಮತ್ತು ರೆನಾಲ್ಟ್ ಪಾಲುದಾರಿಕೆಯ ಭಾಗವಾಗಿದೆ.

MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಭಾರತದಲ್ಲಿ ಸ್ಥಗಿತವಾಯ್ತು ರೆನಾಲ್ಟ್ ಕ್ಯಾಪ್ಚರ್ ಎಸ್‍ಯುವಿ

ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಂಡಿರುವ ಬಿಎಸ್-4 ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳ ಆಯ್ಕೆಯನ್ನು ಹೊಂದಿತ್ತು.ಕ್ಯಾಪ್ಚರ್ ಕಾರನ್ನು ಸ್ಥಗಿತಗೊಳಿಸುವುದರೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಫ್ರೆಂಚ್ ಕಾರು ತಯಾರಕ ಕಂಪನಿ ರೆನಾಲ್ಟ್ ಸರಣಿಯಲ್ಲಿ ಕ್ವಿಡ್, ಟ್ರೈಬರ್ ಮತ್ತು ಡಸ್ಟರ್ ಮಾದರಿಗಳು ಮಾತ್ರ ಮಾರಾಟವಾಗುತ್ತಿವೆ.

ಭಾರತದಲ್ಲಿ ಸ್ಥಗಿತವಾಯ್ತು ರೆನಾಲ್ಟ್ ಕ್ಯಾಪ್ಚರ್ ಎಸ್‍ಯುವಿ

ಇನ್ನು ಫ್ರೆಂಚ್ ವಾಹನ ತಯಾರಕರಾದ ರೆನಾಲ್ಟ್ ತನ್ನ 2020ರ ಕ್ಯಾಪ್ಚರ್ ಫೇಸ್‌ಲಿಫ್ಟ್ ಕಾರನ್ನು ಇತ್ತೀಚೆಗೆ ರಷ್ಯಾದಲ್ಲಿ ಅನಾವರಣಗೊಳಿಸಿತ್ತು. ಹೂಸ ವಿನ್ಯಾಸ ಮತ್ತು ಹೊಸ ಟರ್ಬೋ ಎಂಜಿನ್‌ನೊಂದಿಗೆ 2020ರ ಕ್ಯಾಪ್ಚರ್ ಫೇಸ್‌ಲಿಫ್ಟ್ ಕಾರನ್ನು ಅನಾವರಣಗೊಳಿಸಲಾಗಿದೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಭಾರತದಲ್ಲಿ ಸ್ಥಗಿತವಾಯ್ತು ರೆನಾಲ್ಟ್ ಕ್ಯಾಪ್ಚರ್ ಎಸ್‍ಯುವಿ

ಈ ಹೊಸ ರೆನಾಲ್ಟ್ ಕ್ಯಾಪ್ಚರ್ ಫೇಸ್‌ಲಿಫ್ಟ್ ಕಾರಿನ ಸ್ಟೈಲಿಂಗ್‌ನಲ್ಲಿ ಸಾಕಷ್ಟು ಬದಲಾವಣೆಗಳೊಂದಿಗೆ ಅನಾವರಣಗೊಳಿಸಲಾಗಿದೆ, ರೆನಾಲ್ಟ್ ಕಂಪನಿಯು ಈ ಕಾರನ್ನು ಎರಡು ಪ್ಲಾಟ್‌ಫಾರ್ಮ್‌ಗಳಲ್ಲಿ ಕ್ರಾಸ್‌ಒವರ್ ಅನ್ನು ಮಾರಾಟ ಮಾಡುತ್ತಾರೆ. ಯುರೋಪಿಯನ್ ಮಾರುಕಟ್ಟೆಗಳು ಇದನ್ನು ರೆನಾಲ್ಟ್ ಕ್ಲಿಯೊಗೆ ಆಧಾರವಾಗಿರುವ ಸಿಎಮ್ಎಫ್-ಬಿ ಪ್ಲಾಟ್‌ಫಾರ್ಮ್‌ನಿಂದ ಮಾರಾಟ ಮಾಡಲಾಗುತ್ತದೆ.

ಭಾರತದಲ್ಲಿ ಸ್ಥಗಿತವಾಯ್ತು ರೆನಾಲ್ಟ್ ಕ್ಯಾಪ್ಚರ್ ಎಸ್‍ಯುವಿ

ರಷ್ಯಾದಲ್ಲಿ ರೆನಾಲ್ಟ್ ಕ್ಯಾಪ್ಚರ್ ಫೇಸ್‌ಲಿಫ್ಟ್ ಹಿಟಡ್ ಸ್ಟೀಟಿಯರಿಂಗ್ ವ್ಹೀಲ್, ಹಿಟಡ್ ಸೀಟುಗಳು, ಪ್ರೀಮಿಯಂ ಬೋಸ್ ಸರೌಂಡ್ ಸೌಂಡ್ ಸಿಸ್ಟಮ್, ಎಂಟು ಬಣ್ಣಗಳ ಎಂಬಿಯಟ್ ಲೈಟ್, ಬ್ಲೈಂಡ್-ಸ್ಪಾಟ್ ಮಾನಿಟರಿಂಗ್, ಸರೌಂಡ್-ವ್ಯೂ ಕ್ಯಾಮೆರಾ, ರಿಮೋಟ್ ಎಂಜಿನ್ ಸ್ಟಾರ್ಟ್ ಮತ್ತು ಇತರ ಫೀಚರ್ ಗಳನ್ನು ಹೊಂದಿದೆ.

ಭಾರತದಲ್ಲಿ ಸ್ಥಗಿತವಾಯ್ತು ರೆನಾಲ್ಟ್ ಕ್ಯಾಪ್ಚರ್ ಎಸ್‍ಯುವಿ

ಒಂದು ವೇಳೆ ಭಾರತದಲ್ಲಿ ಬಿಡುಗಡೆಯಾದರೆ, ಹೊಸ ರೆನಾಲ್ಟ್ ಕ್ಯಾಪ್ಚರ್ ಫೇಸ್‌ಲಿಫ್ಟ್ ಕಾರು ನಾಲ್ಕು ಸಿಲಿಂಡರ್ ಪೆಟ್ರೋಲ್ ಹೆಚ್4ಕೆ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 142 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಭಾರತದಲ್ಲಿ ಸ್ಥಗಿತವಾಯ್ತು ರೆನಾಲ್ಟ್ ಕ್ಯಾಪ್ಚರ್ ಎಸ್‍ಯುವಿ

ರೆನಾಲ್ಟ್ ಕಂಪನಿಯ ಡಸ್ಟರ್ ಎಸ್‍ಯುವಿಯು ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ. ಆದರೆ ಕ್ಯಾಪ್ಚರ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಮುಂದಿನ ದಿನಗಳಲ್ಲಿ ರೆನಾಲ್ಟ್ ಕಂಪನಿಯು ತನ್ನ ನಿರ್ಧಾರವನ್ನು ಬದಲಾಯಿಸಿ ಕ್ಯಾಪ್ಚರ್ ಕಾರನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ.

Most Read Articles

Kannada
English summary
Renault Captur Discontinues In India - NO Bs6 Update. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X