ಎರಡು ಲಕ್ಷ ಪರಿಹಾರ ಪಡೆದ ರೆನಾಲ್ಟ್ ಡಸ್ಟರ್ ಮಾಲೀಕ..!

ರೆನಾಲ್ಟ್ ಇಂಡಿಯಾ ಡೀಲರ್‍‍ಶಿಪ್, ತನ್ನ ಗ್ರಾಹಕನಿಗೆ ಎರಡು ಲಕ್ಷಗಳ ಪರಿಹಾರವನ್ನು ನೀಡಬೇಕೆಂದು ಕೇರಳದ ಕೊಲ್ಲಂನಲ್ಲಿರುವ ಗ್ರಾಹಕ ನ್ಯಾಯಾಲಯವು ಆದೇಶ ನೀಡಿದೆ. ಲಕ್ಕಿ ಡ್ರಾವನ್ನು ಸರಿಯಾಗಿ ಪಾಲಿಸದ ಹಿನ್ನೆಲೆಯಲ್ಲಿ ಈ ದಂಡವನ್ನು ವಿಧಿಸಲಾಗಿದೆ.

ಎರಡು ಲಕ್ಷ ಪರಿಹಾರ ಪಡೆದ ರೆನಾಲ್ಟ್ ಡಸ್ಟರ್ ಮಾಲೀಕ..!

ರೆನಾಲ್ಟ್ ಇಂಡಿಯಾ 2014ರ ಓಣಂ ವೇಳೆಯಲ್ಲಿ ಲಕ್ಕಿ ಡ್ರಾ ಬಹುಮಾನವನ್ನು ನೀಡುವುದಾಗಿ ತಿಳಿಸಿತ್ತು. ಈ ಲಕ್ಕಿ ಡ್ರಾ ಪ್ರಕಾರ 5 ಜನರಿಗೆ ಡಸ್ಟರ್ ಎಸ್‍‍ಯುವಿಯನ್ನು ನೀಡುವುದಾಗಿ ತಿಳಿಸಿತ್ತು. ನಂತರ ಲೋಪವೆಸಗಿದ ಕಾರಣಕ್ಕೆ ಗ್ರಾಹಕ ರಕ್ಷಣೆ ಕಾಯ್ದೆ ಸೆಕ್ಷನ್ 12ರಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಎರಡು ಲಕ್ಷ ಪರಿಹಾರ ಪಡೆದ ರೆನಾಲ್ಟ್ ಡಸ್ಟರ್ ಮಾಲೀಕ..!

ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದ ವಕೀಲರೂ ಆದ ದೂರುದಾರರು 2014ರ ಆಗಸ್ಟ್ 16ರಂದು ರೆನಾಲ್ಟ್ ಡಸ್ಟರ್ ಅನ್ನು ಬುಕ್ ಮಾಡಿದ್ದರು. ಅವರಿಗೆ ಲಕ್ಕಿ ಡ್ರಾ ಕೂಪನ್ ನೀಡಲಾಗಿತ್ತು. ಕಾರ್ ಅನ್ನು ಅವರಿಗೆ ಡೆಲಿವರಿ ಮಾಡಲಾದರೂ ಲಕ್ಕಿ ಡ್ರಾ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲಿಲ್ಲ.

ಎರಡು ಲಕ್ಷ ಪರಿಹಾರ ಪಡೆದ ರೆನಾಲ್ಟ್ ಡಸ್ಟರ್ ಮಾಲೀಕ..!

ದೂರುದಾರರು ಈ ಬಗ್ಗೆ ವಿಚಾರಿಸಿದಾಗ ಕಾರು ಮಾರಾಟ ಮಾಡಿದ ಡೀಲರ್‍‍ಶಿಪ್‍‍ನ ಮ್ಯಾನೇಜರ್‍‍ಗಳು ಸರಿಯಾದ ಮಾಹಿತಿ ನೀಡಲಿಲ್ಲ. ಇದರ ಜೊತೆಗೆ ಲಕ್ಕಿ ಡ್ರಾದ ಬಗ್ಗೆ ಎಸ್‍ಎಂ‍ಎಸ್ ಮೂಲಕ ಮಾಹಿತಿ ನೀಡುವುದಾಗಿ ತಿಳಿಸಿದ್ದರು. ನಂತರ ಯಾವುದೇ ಮಾಹಿತಿಯನ್ನು ನೀಡಲಿಲ್ಲ.

ಎರಡು ಲಕ್ಷ ಪರಿಹಾರ ಪಡೆದ ರೆನಾಲ್ಟ್ ಡಸ್ಟರ್ ಮಾಲೀಕ..!

ರೆನಾಲ್ಟ್ ಡೀಲರ್‍‍ಶಿಪ್‍‍ನವರು ಯಾವುದೇ ಪಾರದರ್ಶಕತೆಯನ್ನು ನಿರ್ವಹಿಸದ ಕಾರಣಕ್ಕೆ ದೂರುದಾರರು ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ರೆನಾಲ್ಟ್ ಡೀಲರ್‍‍ಶಿಪ್‍‍ನವರು ಪಾರದರ್ಶಕವಾಗಿ ಲಕ್ಕಿ ಡ್ರಾ ನಡೆಸದೇ ತಮಗೆ ಮೋಸ ಮಾಡಿರುವುದಾಗಿ ತಮ್ಮ ದೂರಿನಲ್ಲಿ ತಿಳಿಸಿದ್ದರು.

ಎರಡು ಲಕ್ಷ ಪರಿಹಾರ ಪಡೆದ ರೆನಾಲ್ಟ್ ಡಸ್ಟರ್ ಮಾಲೀಕ..!

ಲಕ್ಕಿ ಡ್ರಾವನ್ನು ನಡೆಸಿದ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಯಾರಿಗಾದರೂ ಬಹುಮಾನ ನೀಡಲಾಯಿತೇ ಇಲ್ಲವೇ ಎಂಬುದನ್ನು ತಿಳಿಸಿಲ್ಲ. ಇದರಿಂದ ರೆನಾಲ್ಟ್ ಡೀಲರ್‍‍ಗಳು ವ್ಯವಹಾರದಲ್ಲಿ ಮೋಸ ಮಾಡಿರುವುದು ಕಂಡು ಬಂದಿದೆ.

ಎರಡು ಲಕ್ಷ ಪರಿಹಾರ ಪಡೆದ ರೆನಾಲ್ಟ್ ಡಸ್ಟರ್ ಮಾಲೀಕ..!

ಸೇವೆಯನ್ನು ನೀಡುವಲ್ಲಿ ವಿಫಲವಾಗಿರುವುದರ ಜೊತೆಗೆ ಗ್ರಾಹಕರಿಗೆ ಮೋಸ ಮಾಡಲಾಗಿದೆ. ಈ ಡ್ರಾವನ್ನು ಗ್ರಾಹಕರನ್ನು ಸೆಳೆಯಲು ಮಾತ್ರ ನೀಡಲಾಗಿದ್ದು, ನಂತರ ಡ್ರಾ ನಡೆಸಿಲ್ಲ.

ಎರಡು ಲಕ್ಷ ಪರಿಹಾರ ಪಡೆದ ರೆನಾಲ್ಟ್ ಡಸ್ಟರ್ ಮಾಲೀಕ..!

ಅದೃಷ್ಟಶಾಲಿಗಳಿಗೆ ಡ್ರಾದಲ್ಲಿ 5 ರೆನಾಲ್ಟ್ ಡಸ್ಟರ್ ನೀಡಲಾಗುವುದೆಂದು ತಿಳಿಸಲಾಗಿತ್ತು ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದರು. ಗ್ರಾಹಕ ನ್ಯಾಯಾಲಯದ ಅಧ್ಯಕ್ಷರಾದ ಇ.ಎಂ ಮೊಹಮ್ಮದ್ ಇಬ್ರಾಹಿಂ ಹಾಗೂ ಸದಸ್ಯರಾದ ಎಸ್. ಸಂಧ್ಯಾ ರಾಣಿರವರು ಈ ದೂರನ್ನು ಇತ್ಯರ್ಥ್ಯಗೊಳಿಸಿದರು.

ಎರಡು ಲಕ್ಷ ಪರಿಹಾರ ಪಡೆದ ರೆನಾಲ್ಟ್ ಡಸ್ಟರ್ ಮಾಲೀಕ..!

ತಮ್ಮ ತೀರ್ಪಿನಲ್ಲಿ ಅವರು ಲಕ್ಕಿ ಡ್ರಾ ಯೋಜನೆಯನ್ನು ಟಿವಿ ಹಾಗೂ ನ್ಯೂಸ್ ಪೇಪರ್‍‍‍ಗಳಲ್ಲಿ ಪ್ರಕಟಿಸಿ ಗ್ರಾಹಕರನ್ನು ಸೆಳೆಯಲಾಗಿದೆ. ಇದು ದೋಷ ಪೂರಿತವಾಗಿರುವುದರ ಜೊತೆಗೆ ರೆನಾಲ್ಟ್ ಕಂಪನಿಯು ದೊಡ್ಡ ತಪ್ಪನ್ನೆಸಗಿದೆ ಎಂದು ಹೇಳಿದ್ದಾರೆ.

ಎರಡು ಲಕ್ಷ ಪರಿಹಾರ ಪಡೆದ ರೆನಾಲ್ಟ್ ಡಸ್ಟರ್ ಮಾಲೀಕ..!

ಇದರ ಜೊತೆಗೆ ಕೊಚ್ಚಿನ್‍‍ನಲ್ಲಿರುವ ರೆನಾಲ್ಟ್ ಇಂಡಿಯಾ ಡೀಲರ್‍‍ಶಿಪ್ ದೂರುದಾರರಿಗೆ ಅವರು ಅನುಭವಿಸಿರುವ ಮಾನಸಿಕ ಹಿಂಸೆಗೆ ಪರಿಹಾರವಾಗಿ ರೂ.2 ಲಕ್ಷ ಹಾಗೂ ಕೇಸಿನ ವೆಚ್ಚವಾಗಿ ರೂ.10,000 ಪಾವತಿಸಬೇಕೆಂದು ಆದೇಶಿಸಿದೆ.

Article Published On: Thursday, January 9, 2020, 17:54 [IST]
English summary
Renault Duster owner to get compensation of Rs 2 lakhs - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+