ಕಾರುಗಳ ವಾರಂಟಿ ಅವಧಿ ಹೆಚ್ಚಿಸಿದ ರೆನಾಲ್ಟ್

ಚೀನಾದಿಂದ ಹರಡಲಾರಂಭಿಸಿದ ಕರೋನಾ ವೈರಸ್‌ ಜಗತ್ತಿನಾದ್ಯಂತ ಆತಂಕ ಹುಟ್ಟಿಸಿದೆ. ಜಗತ್ತನ್ನೇ ತಲ್ಲಣಗೊಳಿಸಿರುವ ಕರೋನಾ ವೈರಸ್‌ನಿಂದಾಗಿ ಆಟೋಮೊಬೈಲ್ ಕ್ಷೇತ್ರಕ್ಕೆ ಸಾವಿರಾರು ಕೋಟಿಗಳ ನಷ್ಟವಾಗಿದೆ.

ಕಾರುಗಳ ವಾರಂಟಿ ಅವಧಿ ಹೆಚ್ಚಿಸಿದ ರೆನಾಲ್ಟ್

ಕೆಲವು ಡೀಲರ್‍ ಗಳು ನಷ್ಟದಿಂದ ಶಾಶ್ವತವಾಗಿ ಮುಚ್ಚುವ ಹಾದಿಯಲ್ಲಿದ್ದಾರೆ. ಆದರೆ ತಯಾರಕರು ಡೀಲರ್‍ ಗಳಿಗೆ ಸಹಾಯ ಮಾಡಲು ಶ್ರಮಿಸುತ್ತಿದ್ದಾರೆ. ಕರೋನಾ ವೈರಸ್ ಪಾರಿಣಾಮಗಳನ್ನು ಎದುರಿಸಲು ರೆನಾಲ್ಟ್ ಇಂಡಿಯಾ ಇತ್ತೀಚೆಗೆ ಹಲವಾರು ಕ್ರಮಗಳನ್ನು ಪ್ರಕಟಿಸಿತು. ಕಂಪನಿಗೆ ಗ್ರಾಹಕರು ಮುಖ್ಯವಾಗಿರುವುದರಿಂದ ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಹಲವಾರು ಕ್ರಮಗಳನ್ನು ಕೈಗೊಳುತ್ತಿದ್ದಾರೆ.

ಕಾರುಗಳ ವಾರಂಟಿ ಅವಧಿ ಹೆಚ್ಚಿಸಿದ ರೆನಾಲ್ಟ್

ರೆನಾಲ್ಟ್ ಕಂಪನಿಯು ತಮ್ಮ ಗ್ರಾಹಕರಿಗೆ ಕಾರುಗಳ ಸರ್ವಿಸ್ ಮತ್ತು ವಾರಂಟಿ ಅವಧಿಯನ್ನು ಹೆಚ್ಚಿಸಿದೆ. ವಾರಂಟಿ ಹೊಂದಿರುವ ರೆನಾಲ್ಟ್ ಕಾರುಗಳ ವಾರಂಟಿ ಅವಧಿಯನ್ನು ಕಂಪನಿಯು ಹೆಚ್ಚಿಸಲಾಗಿದೆ.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

ಕಾರುಗಳ ವಾರಂಟಿ ಅವಧಿ ಹೆಚ್ಚಿಸಿದ ರೆನಾಲ್ಟ್

ರೆನಾಲ್ಟ್ ಇಂಡಿಯಾ ಸಂಸ್ಥೆಯು ತನ್ನ ಗ್ರಾಹಕರಿಗಾಗಿ ದಿನದ 24 ಗಂಟೆಯು ಅಗತ್ಯವಿದ್ದಾಗ ಸಹಾಯಮಾಡುತ್ತದೆ. ತನ್ನ ಗ್ರಾಹಕರಿಗೆ ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ವಾಹನಗಳನ್ನು ಯಾವ ರೀತಿ ಉತ್ತಮ ಗುಣಮಟ್ಟದಲ್ಲಿ ಇಡಬೇಕೆಂಬ ಸಲಹೆಯನ್ನು ಹೇಳಿದೆ.

ಕಾರುಗಳ ವಾರಂಟಿ ಅವಧಿ ಹೆಚ್ಚಿಸಿದ ರೆನಾಲ್ಟ್

ಇದರೊಂದಿಗೆ ರೆನಾಲ್ಟ್ ಕಂಪನಿಯು ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಅನ್ನು ಸಹ ಪ್ರಾರಂಭಿಸಿದೆ. ‘ಬುಕ್ ಆನ್‌ಲೈನ್ ಪೇ ಲೇಟರ್' ಎಂಬ ಅಭಿಯಾನವು ಗ್ರಾಹಕರಿಗೆ ರೆನಾಲ್ಟ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಅಥವಾ ಮೈ ರೆನಾಲ್ಟ್ ಆ್ಯಪ್‌ನಲ್ಲಿ ಬುಕ್ಕಿಂಗ್ ಮೊತ್ತವನ್ನು ಪಾವತಿಸದೆ ಆನ್‌ಲೈನ್‌ನಲ್ಲಿ ಕಾಯ್ದಿರಿಸಬಹುದಾಗಿದೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಕಾರುಗಳ ವಾರಂಟಿ ಅವಧಿ ಹೆಚ್ಚಿಸಿದ ರೆನಾಲ್ಟ್

ಬುಕ್ಕಿಂಗ್ ಮಾಡಿದ ಬಳಿಕ ಅದಕ್ಕೆ ಸಂಬಂಧಪಟ್ಟ ಡೀಲರ್‍ ಇಮೇಲ್, ವಾಟ್ಸಾಪ್ ಇತ್ಯಾದಿಗಳ ಮೂಲಕ ಗ್ರಾಹಕರನ್ನು ಸಂಪರ್ಕಿಸುತ್ತಾರೆ. ನಂತರ ಅವರಿಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ತಿಳಿಸುತ್ತಾರೆ.

ಕಾರುಗಳ ವಾರಂಟಿ ಅವಧಿ ಹೆಚ್ಚಿಸಿದ ರೆನಾಲ್ಟ್

ಪ್ರಸ್ತುತ ಲಾಕ್‌ಡೌನ್ ಪರಿಸ್ಥಿತಿ ಇರುವುದರಿಂದ ಸಂಸ್ಥೆಯ ನೌಕರರಿಗೆ ರಜೆ ನೀಡಿದೆ. ಕಂಪನಿಯು ಡೀಲರ್ ಗಳ ಜೊತೆಯಲ್ಲಿ ಹಣಕಾಸಿನ ವಹಿವಾಟಿಗಾಗಿ ಒಂದು ತಂಡವನ್ನು ರಚಿಸಿದೆ. ಈ ತಂಡವು ಡೀಲರ್ ಗಳಿಗೆ ಹಾಣಕಾಸಿನ ವಿಷಯದಲ್ಲಿ ನೆರವನ್ನು ನೀಡುತ್ತಾರೆ. ಅಲ್ಲದೇ ಸೇಲ್ಸ್ ತಂಡದ ಸದಸ್ಯರಿಗೆ ಆನ್‌ಲೈನ್ ಮೂಲಕ ತರಬೇತಿಯನ್ನು ನೀಡುತ್ತಿದ್ದಾರೆ.

ಕಾರುಗಳ ವಾರಂಟಿ ಅವಧಿ ಹೆಚ್ಚಿಸಿದ ರೆನಾಲ್ಟ್

ರೆನಾಲ್ಟ್ ಕಂಪನಿ ಮಾತ್ರವಲ್ಲದೆ ಮಾರುತಿ ಸುಜುಕಿ, ಹೋಂಡಾ, ಹ್ಯುಂಡೈ ಮತ್ತು ಟಾಟಾ ಸೇರಿದಂತೆ ಹಲವಾರು ವಾಹನಾ ಉತ್ಪಾದನಾ ಕಂಪನಿಗಳು ತಮ್ಮ ಗ್ರಾಹಕರಿಗಾಗಿ ವಾಹನಗಳ ಸರ್ವಿಸ್ ಮತ್ತು ವಾರಂಟಿ ಅವಧಿಯನ್ನು ವಿಸ್ತರಿಸಿದ್ದಾರೆ.

ಕಾರುಗಳ ವಾರಂಟಿ ಅವಧಿ ಹೆಚ್ಚಿಸಿದ ರೆನಾಲ್ಟ್

ಕರೋನಾ ವೈರಸ್ ಭೀತಿಯಿಂದಾಗಿ ಎಲ್ಲಾ ವಾಹನಾ ಉತ್ಪಾದನೆಯು ಸ್ಥಗಿತಗೊಂಡಿದೆ. ವಾಹನ ಉತ್ಪಾದನೆಯ ಕಂಪನಿಗಳು ಗ್ರಾಹಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅಲ್ಲದೇ ಕರೋನಾ ವೈರಸ್ ವಿರುದ್ದ ಹೋರಾಟ ಮಾಡಲು ಹಲವು ಜನಪ್ರಿಯ ವಾಹನಾ ಉತ್ಪಾದನಾ ಕಂಪನಿಯು ನೆರವು ನೀಡುತ್ತಿದೆ.

Most Read Articles

Kannada
English summary
Renault India Extends Warranty And Periodic Services Due To The COVID-19 Pandemic. Read in Kannada.
Story first published: Tuesday, April 14, 2020, 18:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X