ಬಿಡುಗಡೆಯ ಸನಿಹದಲ್ಲಿ ರೆನಾಲ್ಟ್ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ

ರೆನಾಲ್ಟ್ ಹೊಚ್ಚ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಬಿಡುಗಡೆಯ ಸನಿಹದಲ್ಲಿದ್ದು, ಲಾಕ್‌ಡೌನ್ ಸಡಿಲಿಕೆಯ ನಂತರ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಾಗಿ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಮರುಚಾಲನೆ ನೀಡಲಾಗಿದೆ.

ಬಿಡುಗಡೆಯ ಸನಿಹದಲ್ಲಿ ರೆನಾಲ್ಟ್ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ

ಈ ಮೊದಲು ನಿಗದಿಪಡಿಸಲಾಗಿದ್ದ ಯೋಜನೆಯೆಂತೆ ಇದೇ ತಿಂಗಳು ಬಿಡುಗಡೆಯಾಗಬೇಕಿದ್ದ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಕರೋನಾ ವೈರಸ್ ಪರಿಣಾಮ ಮುಂದೂಡಿಕೆ ಮಾಡಲಾಗಿದ್ದು, ಏಪ್ರಿಲ್ ಮತ್ತು ಮೇ ಅವಧಿಯಲ್ಲಿ ನಡೆಯಬೇಕಿದ್ದ ಪ್ರಮುಖ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳಿಗೆ ಇದೀಗ ಮರುಚಾಲನೆ ನೀಡಿರುವುದು ಹೊಸ ಕಾರಿನ ಬಿಡುಗಡೆಯಲ್ಲಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.

ಬಿಡುಗಡೆಯ ಸನಿಹದಲ್ಲಿ ರೆನಾಲ್ಟ್ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ

ಸದ್ಯ ಹೊಸ ಕಾರನ್ನು ಹೆಚ್‌ಬಿಸಿ ಕೋಡ್‌ನೆಮ್ ಆಧಾರದ ಮೇಲೆ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದ್ದು, ಕಿಗರ್ ಹೆಸರನ್ನೇ ಅಧಿಕೃತವಾಗಿ ಕರೆಯುವುದು ಬಹುತೇಕ ಖಚಿತವಾಗಿದೆ.

ಬಿಡುಗಡೆಯ ಸನಿಹದಲ್ಲಿ ರೆನಾಲ್ಟ್ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡಸ್ಟರ್ ಕಾರಿಗಿಂತಲೂ ತುಸು ಸಣ್ಣ ಗಾತ್ರವನ್ನು ಹೊಂದಲಿರುವ ಕಿಗರ್ ಕಾರು ನಗರ ಪ್ರದೇಶದಲ್ಲಿನ ಸಂಚಾರಕ್ಕೆ ಸೂಕ್ತ ಆಯ್ಕೆಯಾಗಲಿದ್ದು, ಕೈಗೆಟುಕುವ ಬೆಲೆಯೊಂದಿಗೆ ಮಧ್ಯಮ ವರ್ಗದ ಗ್ರಾಹಕರ ಗಮನಸೆಳೆಯಲಿದೆ.

ಬಿಡುಗಡೆಯ ಸನಿಹದಲ್ಲಿ ರೆನಾಲ್ಟ್ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ

ಇತರೆ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಂತಲೂ ಕಿಗರ್ ಕಾರು ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗುವ ಸುಳಿವು ನೀಡಿದ್ದು, ಹ್ಯುಂಡೈ ವೆನ್ಯೂ, ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ300, ನಿಸ್ಸಾನ್ ಕಿಕ್ಸ್ ಕಾರುಗಳಿಗೆ ಪೈಪೋಟಿ ನೀಡಲಿರುವ ಹೊಸ ಕಾರ ಐದು ಆಸನ ಮಾದರಿಯಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ ಹೊಸ ಕಾರಿನ ಎಂಜಿನ್ ಆಯ್ಕೆ ಆಕರ್ಷಕವಾಗಿದ್ದು, ಪರ್ಫಾಮೆನ್ಸ್ ಜೊತೆಗೆ ಇಂಧನ ದಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಬಿಡುಗಡೆಯ ಸನಿಹದಲ್ಲಿ ರೆನಾಲ್ಟ್ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ

ಹೊಸ ಕಿಗರ್ ಕಾರಿನಲ್ಲಿ ರೆನಾಲ್ಟ್ ಸಂಸ್ಥೆಯು ಹೊಸದಾಗಿ ಅಭಿವೃದ್ದಿಗೊಳಿಸಲಾಗುತ್ತಿರುವ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಜೋಡಣೆ ಮಾಡುವ ಸಾಧ್ಯತೆಗಳಿದ್ದು, ಇದೇ ಎಂಜಿನ್ ಅನ್ನು ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿರುವ ಟ್ರೈಬರ್ ಟರ್ಬೋ ಆವೃತ್ತಿಯಲ್ಲೂ ಜೋಡಣೆ ಮಾಡಲು ನಿರ್ಧರಿಸಲಾಗಿದೆ.

ಬಿಡುಗಡೆಯ ಸನಿಹದಲ್ಲಿ ರೆನಾಲ್ಟ್ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ

ಹೀಗಾಗಿ ಕಿಗರ್ ಕಾರು ಪೆಟ್ರೋಲ್ ಮಾದರಿಯಲ್ಲಿ ಮಾತ್ರವೇ ಮಾರಾಟವಾಗಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹಲವು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಬಿಡುಗಡೆಯ ಸನಿಹದಲ್ಲಿ ರೆನಾಲ್ಟ್ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ

ಹೊಸ ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.80 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.8 ಲಕ್ಷ ಬೆಲೆಯೊಂದಿಗೆ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿದ್ದು, ಕಿಗರ್ ಮತ್ತು ನಿಸ್ಸಾನ್ ಹೊಸ ಮ್ಯಾಗ್ನೆಟ್ ಕಾರು ಕೂಡಾ ಒಂದೇ ಮಾದರಿಯ ಎಂಜಿನ್ ಪಡೆದುಕೊಳ್ಳಲಿವೆ.

More from DriveSpark

Article Published On: Monday, June 22, 2020, 21:14 [IST]
English summary
Renault Kiger Compact-SUV Spotted Testing Again Ahead Of Its Launch. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+