ಟ್ರೈಬರ್ ಕಾರು ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ ರೆನಾಲ್ಟ್

ರೆನಾಲ್ಟ್ ಕಂಪನಿಯು ಹೊಸದಾಗಿ ಟ್ರೈಬರ್ ಕಾರು ಮಾದರಿಯಲ್ಲಿ ಆಟೋಮ್ಯಾಟಿಕ್ ಮಾದರಿಯನ್ನು ಬಿಡುಗಡೆ ಮಾಡಿರುವುದಲ್ಲದೆ ಈ ಹಿಂದಿನ ಮ್ಯಾನುವಲ್ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ.

ಕರೋನಾ ಸಂಕಷ್ಟದ ನಡುವೆ ಕಾರು ಮಾರಾಟವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಆಟೋ ಕಂಪನಿಗಳು ವಿವಿಧ ಆಫರ್‌ಗಳನ್ನು ಘೋಷಿಸುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದು, ರೆನಾಲ್ಟ್ ಕೂಡಾ ತನ್ನ ಜನಪ್ರಿಯ ಮಿನಿ ಎಂಪಿವಿ ಆವೃತ್ತಿಯ ಖರೀದಿ ಮೇಲೆ ಹಲವು ಆಫರ್‌ಗಳನ್ನು ನೀಡುತ್ತಿದೆ. ಮ್ಯಾನುವಲ್ ಆವೃತ್ತಿಯ ಮೇಲೆ ಮಾತ್ರ ಆಫರ್ ಲಭ್ಯವಿದ್ದು, ಗರಿಷ್ಠ ರೂ.40 ಸಾವಿರ ಡಿಸ್ಕೌಂಟ್ ನೀಡಲಾಗುತ್ತಿದೆ.

ಟ್ರೈಬರ್ ಕಾರು ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ ರೆನಾಲ್ಟ್

ರೂ.40 ಸಾವಿರ ರೂಪಾಯಿ ಡಿಸ್ಕೌಂಟ್‌ನಲ್ಲಿ ರೂ.20 ಸಾವಿರ ಎಕ್ಸ್‌ಚೆಂಜ್ ಬೋನಸ್, ರೂ.10 ಸಾವಿರ ಲಾಯಲ್ಟಿ ಬೋನಸ್ ಮತ್ತು ರೂ.10 ಸಾವಿರ ಕಾರ್ಪೋರೆಟ್ ಬೋನಸ್ ಒಳಗೊಂಡಿದ್ದು, ಸೀಮಿತ ಅವಧಿಗೆ ಮಾತ್ರ ಈ ಆಫರ್ ಲಭ್ಯವಿರುತ್ತದೆ.

ಇನ್ನು ರೆನಾಲ್ಟ್ ಕಂಪನಿಯು ತನ್ನ ಬಹುನೀರಿಕ್ಷಿತ ಟ್ರೈಬರ್ ಆಟೋಮ್ಯಾಟಿಕ್ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಖರೀದಿಗಾಗಿ ಇಂದಿನಿಂದಲೇ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ ಪ್ಯಾಸೆಂಜರ್ ಕಾರು ಮಾದರಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಕಾರು ಕಂಪನಿಗಳು ಕೂಡಾ ಎಎಂಟಿ ಆಯ್ಕೆ ಹೆಚ್ಚಿಸುತ್ತ ಹೊಸ ಯೋಜನೆಗಳಿಗೆ ಚಾಲನೆ ನೀಡಿವೆ. ಇದರಲ್ಲಿ ರೆನಾಲ್ಟ್ ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಎಂಜಿನ್ ಆಯ್ಕೆಗಳ ಹೆಚ್ಚಿಸುವುದರ ಜೊತೆಗೆ ಎಎಂಟಿ ಆಯ್ಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಇದೀಗ ಟ್ರೈಬರ್ ಮಾದರಿಯಲ್ಲೂ ಹೊಸ ಮಾದರಿಯನ್ನು ಬಿಡುಗಡೆ ಮಾಡಿದೆ.

ಮಿನಿ ಎಂಪಿವಿ ಆವೃತ್ತಿಯಾಗಿರುವ ರೆನಾಲ್ಟ್ ಟ್ರೈಬರ್ ಕಾರು ಸದ್ಯ ಬಹುಬೇಡಿಕೆ ಮಾದರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, ಹೊಸ ಕಾರಿನಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಿರುವುದು ಮತ್ತಷ್ಟು ಬೇಡಿಕೆ ಹೆಚ್ಚಳವಾಗುವ ನೀರಿಕ್ಷೆಯಿದೆ.

ಮಿನಿ ಎಂಪಿವಿ ಆವೃತ್ತಿಯಾಗಿರುವ ರೆನಾಲ್ಟ್ ಟ್ರೈಬರ್ ಕಾರು ಸದ್ಯ ಬಹುಬೇಡಿಕೆ ಮಾದರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, ಹೊಸ ಕಾರಿನಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಿರುವುದು ಮತ್ತಷ್ಟು ಬೇಡಿಕೆ ಹೆಚ್ಚಳವಾಗುವ ನೀರಿಕ್ಷೆಯಿದೆ.

ಟ್ರೈಬರ್ ಕಾರು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಪಡೆದುಕೊಂಡ ನಂತರ ಬೆಲೆಯಲ್ಲಿ ತುಸು ದುಬಾರಿಯಾಗಿದ್ದು, ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.4.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು 7.22 ಲಕ್ಷ ಬೆಲೆ ಪಡೆದುಕೊಂಡಿರುತ್ತದೆ. ಇದರಲ್ಲಿ ಎಎಂಟಿ ಮಾದರಿಯು ಆರಂಭಿಕವಾಗಿ ರೂ.6.18 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ.7.22 ಲಕ್ಷ ಬೆಲೆ ಹೊಂದಿದೆ.

ಈ ಮೂಲಕ ಸಾಮಾನ್ಯ ಮ್ಯಾನುವಲ್ ಆವೃತ್ತಿಗಿಂತ ಆರಂಭಿಕವಾಗಿ ರೂ.4 ಸಾವಿರ ಮತ್ತು ಟಾಪ್ ಮಾದರಿಯಲ್ಲಿ ರೂ.40 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿರುವ ಆಟೋಮ್ಯಾಟಿಕ್ ಆವೃತ್ತಿಯು ತಾಂತ್ರಿಕವಾಗಿ ಯಾವುದೇ ಬದಲಾವಣೆ ಹೊಂದಿಲ್ಲ.

Most Read Articles

Kannada
English summary
Renault offering benefits of up to Rs 40,000 on the purchase of a brand-new Triber 7-seater. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X