ಕರೋನಾ ವೈರಸ್ ಎಫೆಕ್ಟ್: ಭಾರೀ ಸಂಖ್ಯೆಯ ಉದ್ಯೋಗ ಕಡಿತಕ್ಕೆ ಮುಂದಾದ ರೆನಾಲ್ಟ್
ಫ್ರೆಂಚ್ ಮೂಲದ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ವಿಶ್ವಾದ್ಯಂತವಿರುವ ತನ್ನ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ತಿಳಿಸಿದೆ. ಮುಂಬರುವ ದಿನಗಳಲ್ಲಿ ಸುಮಾರು 15,000 ಉದ್ಯೋಗಿಗಳನ್ನು ವಜಾಗೊಳಿಸಲಾಗುವುದೆಂದು ಕಂಪನಿ ಹೇಳಿದೆ.

ಕರೋನಾ ವೈರಸ್‌ನಿಂದಾಗಿ ಕಂಪನಿಯು ಗಮನಾರ್ಹ ನಷ್ಟವನ್ನು ಅನುಭವಿಸಿದ್ದು, ಆದಾಯ ನಷ್ಟವನ್ನು ಸರಿದೂಗಿಸಲು ಕಂಪನಿಯು ಈ ನಿರ್ಧಾರಕ್ಕೆ ಮುಂದಾಗಿದೆ. ರೆನಾಲ್ಟ್ ಕಂಪನಿಯು ವಿಶ್ವದಾದ್ಯಂತ 1.80 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಈ ಪೈಕಿ ಕಂಪನಿಯು 10%ನಷ್ಟು ಉದ್ಯೋಗ ಕಡಿತಗೊಳಿಸುತ್ತಿದೆ. ರೆನಾಲ್ಟ್ ಕಂಪನಿಯು ಫ್ರಾನ್ಸ್‌ನಲ್ಲಿ 48,500 ಉದ್ಯೋಗಿಗಳನ್ನು ಹೊಂದಿದ್ದು, 4,500 ಜನರನ್ನು ವಜಾಗೊಳಿಸಿದೆ.

ಫ್ರೆಂಚ್ ಸರ್ಕಾರವು ರೆನಾಲ್ಟ್ ಕಂಪನಿಯಲ್ಲಿ 15%ನಷ್ಟು ಪಾಲನ್ನು ಹೊಂದಿದೆ. ಈ ವರ್ಷದ ಆರಂಭದಲ್ಲಿ ಕಂಪನಿಯು ವ್ಯವಹಾರ ನಷ್ಟಗಳ ಬಗ್ಗೆ ಹಾಗೂ ಉದ್ಯೋಗ ಕಡಿತ ಮಾಡುವ ಮೂಲಕ ರೂ.200 ಕೋಟಿ ಉಳಿತಾಯ ಮಾಡುವ ಬಗ್ಗೆ ಮಾಹಿತಿ ನೀಡಿತ್ತು.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ರೆನಾಲ್ಟ್ ಕಂಪನಿಯು ವಿಶ್ವಾದ್ಯಂತವಿರುವ ತನ್ನ ಅನೇಕ ಉತ್ಪಾದನಾ ಘಟಕಗಳನ್ನು ಮುಚ್ಚಿದೆ. ಕಂಪನಿಯು ಜಪಾನ್‌ನ ನಿಸ್ಸಾನ್ ಜೊತೆ ವ್ಯಾಪಾರ ಪಾಲುದಾರಿಕೆಯನ್ನು ಮಾಡಿಕೊಂಡಿದ್ದು, ಇದರಡಿಯಲ್ಲಿ ಎರಡು ಕಂಪನಿಗಳು ಒಂದಾಗಿ ವ್ಯವಹಾರವನ್ನು ಅಭಿವೃದ್ಧಿ ಪಡಿಸುವತ್ತ ಗಮನ ಹರಿಸಲಿವೆ.

ರೆನಾಲ್ಟ್ ಇತ್ತೀಚೆಗಷ್ಟೇ ತನ್ನ ಹೊಸ ಕಾಂಪ್ಯಾಕ್ಟ್ ಎಸ್‌ಯುವಿಯಾದ ಕ್ಯಾಪ್ಚರ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಶೀಘ್ರದಲ್ಲೇ ಕಂಪನಿಯು ಈ ಎಸ್‌ಯುವಿಯನ್ನು ಭಾರತದಲ್ಲಿಯೂ ಬಿಡುಗಡೆಗೊಳಿಸಲಿದೆ ಎಂದು ಹೇಳಲಾಗಿದೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಇದರ ಜೊತೆಗೆ ಕಂಪನಿಯು ಭಾರತದಲ್ಲಿ ರೆನಾಲ್ಟ್ ಟ್ರೈಬರ್ ಎಂಪಿವಿಯ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ಭಾರತದಲ್ಲಿ ಈ ಎಂಪಿವಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.6.18 ಲಕ್ಷಗಳಾಗಿದೆ. ಈ ಮಾದರಿಯ ಬೆಲೆ ಮ್ಯಾನುಯಲ್ ಮಾದರಿಯ ಬೆಲೆಗಿಂತ ರೂ.40,000ಗಳಷ್ಟು ಹೆಚ್ಚಾಗಿದೆ. ಟ್ರೈಬರ್ ಎಂಪಿವಿಯಲ್ಲಿ 1.0 ಲೀಟರ್, 3 ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 99 ಬಿಎಚ್‌ಪಿ ಪವರ್ ಹಾಗೂ 160 ಎನ್‌ಎಂ ಟಾರ್ಕ್ ಉತ್ಪಾದಿಸುತ್ತಿದೆ.

ಟ್ರೈಬರ್ ಹೆಚ್ಚು ಮಾರಾಟವಾಗುತ್ತಿರುವ ರೆನಾಲ್ಟ್ ಕಂಪನಿಯ ಕಾರ್ ಆಗಿದೆ. ಈ ಎಂಪಿವಿ ಭಾರತದ ಜನಪ್ರಿಯ ಕಾಂಪ್ಯಾಕ್ಟ್ ಎಂಪಿವಿಯಾಗಿದೆ. ಈ ಕಾರಣಕ್ಕೆ ಈ ಎಂಪಿವಿಯನ್ನು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಬಿಡುಗಡೆಗೊಳಿಸಿದೆ. ಇದರಿಂದ ಮಾರಾಟವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.


Click it and Unblock the Notifications