ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಇಂಟಿರಿಯರ್ ಟೀಸರ್ ಬಹಿರಂಗ

ಯುರೋಪ್ ಮಾರುಕಟ್ಟೆಗಾಗಿ ಈಗಾಗಲೇ ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯ ಬಿಡುಗಡೆಯ ಕುರಿತಂತೆ ನೆಮ್ ಪ್ಲೇಟ್ ಟೀಸರ್ ಒಂದನ್ನು ಬಿಡುಗಡೆ ಮಾಡಿರುವ ಸ್ಕೋಡಾ ಕಂಪನಿಯು ಸೆಡಾನ್ ಮತ್ತು ಎಸ್‌ಯುವಿ ಮಾದರಿಯೊಂದನ್ನು ಎಲೆಕ್ಟ್ರಿಕ್ ಮಾದರಿಯಾಗಿ ಬಿಡುಗಡೆ ಮಾಡುತ್ತಿದೆ.

ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಇಂಟಿರಿಯರ್ ಟೀಸರ್ ಬಹಿರಂಗ

ಹೊಸ ಕಾರು ಎನ್ಯಾಕ್(ENYAQ) ಎನ್ನುವ ಹೆಸರಿನೊಂದಿಗೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದ್ದು, ಲಾಂಗ್ ವೀಲ್ಹ್ ಬೆಸ್‌ನೊಂದಿಗೆ ಕ್ರಾಸ್ ಓವರ್ ಎಸ್‌ಯುವಿ ಮಾದರಿಯಾಗಿ ಬಿಡುಗಡೆಗೊಳ್ಳಲಿದೆ. ಸದ್ಯ ಕಾನ್ಸೆಪ್ಟ್ ಮಾದರಿಯನ್ನು ಮಾತ್ರ ಸಿದ್ದಪಡಿಸಿರುವ ಸ್ಕೋಡಾ ಕಂಪನಿಯು ಮುಂಬರುವ ಸೆಪ್ಟೆಂಬರ್ 1ಕ್ಕೆ ಹೊಸ ಕಾರಿನ ಉತ್ಪಾದನಾ ಮಾದರಿಯನ್ನು ಪ್ರದರ್ಶನಗೊಳಿಸಲಿದ್ದು, ಮೊದಲ ಬಾರಿ ಎನ್ಯಾಕ್ ಕಾರಿನ ಇಂಟಿರಿಯರ್ ಡಿಸೈನ್ ಬಗೆಗಿನ ಮಾಹಿತಿಯನ್ನು ಬಹಿರಂಗಪಡಿಸಿದೆ.

ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಇಂಟಿರಿಯರ್ ಟೀಸರ್ ಬಹಿರಂಗ

ಹೊಸ ಕಾರಿನ ಉತ್ಪಾದನೆಗಾಗಿ ಫೋಕ್ಸ್‌ವ್ಯಾಗನ್ ಐಡಿ 3 ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಗಿಂದಲೂ ಕೆಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಂಡಿದ್ದು, ಹಲವಾರು ಐಷಾರಾಮಿ ಫೀಚರ್ಸ್‌ನೊಂದಿಗೆ ಅಭಿವೃದ್ದಿಗೊಳಿಸಿದೆ.

ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಇಂಟಿರಿಯರ್ ಟೀಸರ್ ಬಹಿರಂಗ

ಎಸ್‌ಯುವಿ ಕಾರುಗಳಲ್ಲೇ ಹೊಸ ಮಾದರಿಯ ವಿನ್ಯಾಸ ಹೊಂದಿರುವ ಎನ್ಯಾಕ್ ಕಾರು 4,648-ಎಂಎಂ ಉದ್ದ, 1,877-ಎಂಎಂ ಅಗಲ, 1,618-ಎಂಎಂ ಎತ್ತರದೊಂದಿಗೆ ಉತ್ತಮ ಒಳಾಂಗಣ ವಿನ್ಯಾಸ ಹೊಂದಿದೆ.

ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಇಂಟಿರಿಯರ್ ಟೀಸರ್ ಬಹಿರಂಗ

ಮಾಹಿತಿಗಳ ಪ್ರಕಾರ, ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗಲಿದ್ದು, ಪ್ರತಿ ಚಾರ್ಜ್‌ಗೆ ಆರಂಭಿಕ ಆವೃತ್ತಿಯು 340ಕಿ.ಮೀ, ಮಧ್ಯಮ ಕ್ರಮಾಂಕದ ಕಾರು 390 ಕಿ.ಮೀ ಮತ್ತು ಟಾಪ್ ಎಂಡ್ ಮಾದರಿಯು 500ಕಿ.ಮೀ ಮೈಲೇಜ್ ರೇಂಜ್ ಹೊಂದಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಇಂಟಿರಿಯರ್ ಟೀಸರ್ ಬಹಿರಂಗ

ವೆರಿಯೆಂಟ್‌ಗಳಿಗೆ ಅನುಗುಣವಾಗಿ 55kWh, 62kWh ಮತ್ತು 82kWh ಬ್ಯಾಟರಿ ಒದಗಿಸಲಾಗಿದ್ದು, ಫೋಕ್ಸ್‌ವ್ಯಾಗನ್ ನಿರ್ಮಾಣ ಐ.ಡಿ ಕ್ರಾಝ್ ಎಲೆಕ್ಟ್ರಿಕ್ ಮಾದರಿಯಿಂದಲೂ ಕೆಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆಯಲಾಗಿದೆ.

ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಇಂಟಿರಿಯರ್ ಟೀಸರ್ ಬಹಿರಂಗ

ಹೊಸ ಎಲೆಕ್ಟ್ರಿಕ್ ಯುರೋಪ್ ಮಾರುಕಟ್ಟೆಗಳಲ್ಲಿ 2021ರ ಮಧ್ಯಂತರದಲ್ಲಿ ಬಿಡುಗಡೆಯಾಗಲಿದ್ದು, ಭಾರತದಲ್ಲೂ ಬಿಡುಗಡೆಯಾಗಲಿರುವ ಈ ಹೊಸ ಕಾರು 2022ರ ಆರಂಭದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ ರೂ.25 ಲಕ್ಷದಿಂದ ರೂ.30 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.

ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಇಂಟಿರಿಯರ್ ಟೀಸರ್ ಬಹಿರಂಗ

ಇನ್ನು ಫೋಕ್ಸ್‌ವ್ಯಾಗನ್ ಜೊತೆಗೂಡಿ ಇಂಡಿಯಾ 2.0 ಪ್ರೋಜೆಕ್ಟ್ ಯೋಜನೆಗೆ ಚಾಲನೆ ನೀಡಿರುವ ಸ್ಕೋಡಾ ಕಂಪನಿಯು ವಿವಿಧ ಮಾದರಿಯ ಹೊಸ ಕಾರುಗಳ ನಿರ್ಮಾಣದ ಹೆಚ್ಚು ಹೂಡಿಕೆ ಮಾಡುತ್ತಿದ್ದು, ಸಾಮಾನ್ಯ ಕಾರುಗಳನ್ನು ಮಾತ್ರವಲ್ಲದೇ ಎಲೆಕ್ಟ್ರಿಕ್ ಕಾರು ಆವೃತ್ತಿಗಳ ಮೇಲೂ ಗಮನಹರಿಸಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಇಂಟಿರಿಯರ್ ಟೀಸರ್ ಬಹಿರಂಗ

ಈ ಸಂಬಂಧ ಗ್ರಾಹಕರ ಅಭಿರುಚಿಗಳನ್ನು ತಿಳಿಯಲು ಮಾರುಕಟ್ಟೆ ಅಧ್ಯಯನಕ್ಕೂ ಚಾಲನೆ ನೀಡಿರುವ ಸ್ಕೋಡಾ ಕಂಪನಿಯು ಬಜೆಟ್ ಇವಿ ಕಾರುಗಳನ್ನು ಮಾತ್ರವಲ್ಲದೇ ಲೈಫ್‌ಸ್ಪೈಲ್ ಮಾದರಿಗಳನ್ನು ಸಹ ಬಿಡುಗಡೆ ಮಾಡಲಿದೆ.

Article Published On: Wednesday, July 29, 2020, 21:15 [IST]
English summary
Skoda Enyaq iV Interior Design Teased. Read in Kannada.
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+