ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಸ್ಕೋಡಾ ಕರೋಕ್ ಎಸ್‍ಯುವಿ

ಸ್ಕೋಡಾ ಆಟೋ ಇಂಡಿಯಾ ಹೊಸ ಕರೋಕ್ ಎಸ್‍‍‍ಯುವಿಯನ್ನು ಭಾರತದಲ್ಲಿ 2020ರ ಏಪ್ರಿಲ್‍‍ನಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರ ನಡುವೆ ಸ್ಕೋಡಾ ತನ್ನ ಕರೋಕ್ ಎಸ್‍‍ಯುವಿಯನ್ನು ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಸ್ಕೋಡಾ ಕರೋಕ್ ಎಸ್‍ಯುವಿ

ಹೊಸ ಸ್ಕೋಡಾ ಕರೋಕ್ ಆರಂಭದಲ್ಲಿ (ಸಿಬಿ‍ಯು) ಕಂಪ್ಲೀಟ್ ಬಿಲ್ಟ್ ಯುನಿಟ್ ಆಗಿ ಲಭ್ಯವಿರುತ್ತದೆ. ಬಿಡುಗಡೆಯ ಸಮಯದಲ್ಲಿ ಪೆಟ್ರೋಲ್ ಎಂಜಿನ್‍‍ನೊಂದಿಗೆ ಮಾತ್ರ ಈ ಕಾರ್ ಲಭ್ಯವಿರುತ್ತದೆ ಎಂಬ ವರದಿಗಳು ಪ್ರಕಟವಾಗಿದೆ. ಮುಂಬರುವ ಸ್ಕೋಡಾ ಕರೋಕ್ ಎಸ್‍‍ಯುವಿಯು ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಸ್ಕೋಡಾ ಕರೋಕ್ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ರಶ್‍‍ಲೇನ್ ಬಹಿರಂಗಪಡಿಸಿದೆ. ಸ್ಕೋಡಾ ಸ್ಪಾಟ್ ಟೆಸ್ಟ್ ನಲ್ಲಿ ಹಲವು ವಿಷಯಗಳು ಬಹಿರಂಗವಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಸ್ಕೋಡಾ ಕರೋಕ್ ಎಸ್‍ಯುವಿ

ಈ ಎಸ್‍ಯುವಿಯ ಇಂಟಿರಿಯರ್‍‍ನಲ್ಲಿ ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಯಲ್ಲಿ ದೊಡ್ಡ ಟಚ್‍‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂಗಳಿವೆ. ಇದರೊಂದಿಗೆ ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್ ಲೆದರ್ ಅಪ್‍‍ಹೋಲೆಸ್ಟರಿ ಸೀಟುಗಳನ್ನು ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಸ್ಕೋಡಾ ಕರೋಕ್ ಎಸ್‍ಯುವಿ

ಸ್ಕೋಡಾ ಕರೋಕ್ ಎಸ್‍‍ಯುವಿ ಹಲವಾರು ಆಧುನಿಕ ಫೀಚರ್ಸ್‍‍ಗಳನ್ನು ಹೊಂದಿರಲಿದೆ. ಈ ಹೊಸ ಎಸ್‍‍ಯುವಿಯ ಕ್ಯಾಬಿನ್ ಬ್ಲಾಕ್ ಮತ್ತು ಬೀಜ್ ಬಣ್ಣಗಳಲ್ಲಿ ಲಭ್ಯವಿರಲಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಸ್ಕೋಡಾ ಕರೋಕ್ ಎಸ್‍ಯುವಿ

ಈ ಎಸ್‍ಯುವಿಯು 1.0 ಲೀಟರ್ ಟಿಎಸ್ಐ ಪೆಟ್ರೀಲ್ ಎಂಜಿನ್ 113 ಬಿ‍‍ಹೆಚ್‍‍ಪಿ ಪವರ್ ಮತ್ತು 175 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಧ್ಯತೆಗಳಿದೆ. ಇನ್ನೂ 1.5 ಲೀಟರ್ ಟಿ‍ಎಸ್ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಸ್ಕೋಡಾ ಕರೋಕ್ ಎಸ್‍ಯುವಿ

ಈ ಎಂಜಿನ್ 148 ಬಿ‍‍ಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಿದೆ. ಕಂಪನಿಯು ಹೊಸ ಕರೋಕ್ ಎಸ್‍‍ಯುವಿಯನ್ನು ಡೀಸೆಲ್ ಎಂಜಿನ್‍‍ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿಲ್ಲ. ಆದರೆ ಮುಂದಿನ ದಿನಗಳಲ್ಲಿ ಡೀಸೆಲ್ ಆವೃತ್ತಿಗಳಿಗೆ ಬೇಡಿಕೆ ಹೆಚ್ಚಾದರೆ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಗೊಳಿಸಬಹುದು.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಸ್ಕೋಡಾ ಕರೋಕ್ ಎಸ್‍ಯುವಿ

ಸ್ಕೋಡಾ ಕರೋಕ್ ಎಸ್‍‍ಯುವಿ ಕಂಪನಿಯ ಎಂಕ್ಯೂಬಿ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದೆ. ಸ್ಕೋಡಾ ಕರೋಕ್ ಎಸ್‍‍ಯುವಿಯು ಭಾರತದಲ್ಲಿ ಬಿಡುಗಡೆಯಾದ ಬಳಿಕ ಎಂಜಿ ಹೆಕ್ಟರ್, ಜೀಪ್ ಕಂಪಾಸ್ ಮತ್ತು ಹ್ಯುಂಡೈ ಟಕ್ಸನ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಸ್ಕೋಡಾ ಕರೋಕ್ ಎಸ್‍ಯುವಿ

ಸ್ಕೋಡಾ, ಹೊಸ ಆಕ್ಟೀವಿಯಾ ಆರ್‍ಎಸ್ 245 ಕಾರ್ ಅನ್ನು ದೆಹಲಿ ಆಟೋ ಎಕ್ಸ್ ಪೋದಲ್ಲಿ 2020ರಲ್ಲಿ ಅನಾವರಣಗೊಳಿಸಲು ಸಜ್ಜಾಗಿದೆ. ಭಾರತದಲ್ಲಿ ಆಕ್ಟೀವಿಯಾ ಆರ್‍ಎಸ್ ಕಾರಿನ 200 ಯುನಿ‍‍ಟ್‍ಗಳನ್ನು ಮಾತ್ರ ಬಿಡುಗಡೆಗೊಳಿಸಲಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಸ್ಕೋಡಾ ಕರೋಕ್ ಎಸ್‍ಯುವಿ

ಸ್ಕೋಡಾ ಕರೋಕ್ ಎಸ್‍‍ಯುವಿಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಪ್ರಮುಖ್ಯತೆಯನ್ನು ನೀಡಿದೆ. ಇದರಲ್ಲಿ ಮಲ್ಟಿಪಲ್ ಏರ್‍‍ಬ್ಯಾಗ್‍‍ಗಳು, ಎಬಿಎಸ್, ಇಬಿ‍ಡಿ ಜೊತೆಯಲ್ಲಿ ಇನ್ನಿತರ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಸ್ಕೋಡಾ ಕರೋಕ್ ಎಸ್‍ಯುವಿ

ದೇಶಿಯ ಮಾರುಕಟ್ಟೆಯಲ್ಲಿ ಒಂದು ಕಾಲದಲ್ಲಿ ಪ್ರಾಬಲ್ಯ ಮೆರೆಯುತ್ತಿದ್ದ ಸ್ಕೋಡಾ ನಿಧಾನವಾಗಿ ತನ್ನ ಬೇಡಿಕೆಯನ್ನು ಕಳೆದುಕೊಂಡಿದೆ. ಇದರಿಂದ ಮತ್ತೆ ಭಾರತದ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಸಜ್ಜಾಗುತ್ತಿದೆ. ಸ್ಕೋಡಾ ಮುಂದಿನ ಎರಡು ವರ್ಷಗಳಲ್ಲಿ ಆರು ಕಾರುಗಳನ್ನು ಬಿಡುಗಡೆಗೊಳಿಸುತ್ತಿದೆ.

Article Published On: Friday, January 17, 2020, 19:18 [IST]
English summary
Skoda Karoq SUV for India interiors and exterior spied. Read in Kannada
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+