ವೈರಸ್ ಭೀತಿ: ವರ್ಚುವಲ್ ಕಾರು ಮಾರಾಟ ವೇದಿಕೆಗೆ ಚಾಲನೆ ನೀಡಿದ ಸ್ಕೋಡಾ
ಕರೋನಾ ವೈರಸ್ ಹೆಚ್ಚುತ್ತಿರುವ ಪರಿಣಾಮ ಆಟೋ ಉದ್ಯಮದಲ್ಲಿ ಸುರಕ್ಷಿತ ವ್ಯಾಪಾರ-ವಹಿವಾಟು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ. ಇದರಿಂದ ಬಹುತೇಕ ಆಟೋ ಕಂಪನಿಗಳು ಆನ್‌ಲೈನ್ ವಹಿವಾಟಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಗ್ರಾಹಕರು ಕೂಡಾ ವೈರಸ್ ಭಯದಿಂದ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

ಲಾಕ್‌ಡೌನ್ ವಿನಾಯ್ತಿ ನಂತರ ಹೊಸ ವಾಹನಗಳ ಮಾರಾಟದಲ್ಲಿ ಹಲವು ಹೊಸ ಬದಲಾಣೆಗಳನ್ನು ಪರಿಚಯಿಸಿರುವ ಆಟೋ ಕಂಪನಿಗಳು ಸುರಕ್ಷಿತ ವ್ಯಾಪಾರ-ವಹಿವಾಟು ನಡೆಸುತ್ತಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲೂ ಹೊಸ ಕಾರುಗಳ ಮಾರಾಟ ಪ್ರಮಾಣದಲ್ಲಿ ತುಸು ಚೇತರಿಕೆ ಕಂಡುಬರುತ್ತಿದೆ. ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳು ಹೊಸ ಮಾರಾಟವನ್ನು ಸುಧಾರಿಸಲು ಪ್ರಮುಖ ಮಾರ್ಗವಾಗಿದ್ದು, ಸ್ಕೋಡಾ ಕೂಡಾ ಸುರಕ್ಷಿತ ವಾಹನ ಮಾರಾಟಕ್ಕಾಗಿ ವರ್ಚುವಲ್ ಶೋರೂಂ ಆರಂಭಿಸಿದೆ.

ಸ್ಕೋಡಾ ಕಂಪನಿಯು ಅಧಿಕೃತ ವೆಬ್‌ತಾಣದಲ್ಲಿ ಖಾತೆ ಮಾಡಿಕೊಳ್ಳುವ ಮೂಲಕ ಲಾಗಿನ್ ಮಾಡಿದ್ದಲ್ಲಿ ನಿಮ್ಮ ಬೇಕಾದ ವಾಹನಗಳ ಮಾಹಿತಿಯನ್ನು ಮನೆಯಲ್ಲೇ ಕುಳಿತು ಪ್ರತಿಯೊಂದು ತಾಂತ್ರಿಕ ಅಂಶಗಳನ್ನು ತಿಳಿದುಕೊಳ್ಳಬಹುದಾಗಿದೆ.

ವರ್ಚುವಲ್ ವಿಡಿಯೋ ಮೂಲಕ ಕಾರಿನ ಹೊರ ಮತ್ತು ಒಳಭಾಗದ ತಾಂತ್ರಿಕ ಅಂಶಗಳನ್ನು ನೇರವಾಗಿ ಶೋರೂಂಗೆ ಭೇಟಿ ಕೊಟ್ಟು ವಿಚಾರಿಸಿದ ರೀತಿಯಲ್ಲೇ ಮಾಹಿತಿಗಳನ್ನು ಪಡೆಯಬಹುದಾಗಿದ್ದು, ಇದು ಕಾರು ಆಯ್ಕೆಯನ್ನು ಮತ್ತಷ್ಟು ಸುಲಭವಾಗಿಸಿದೆ.

ವೈರಸ್ ಭೀತಿ ಹಿನ್ನಲೆಯಲ್ಲಿ ಗ್ರಾಹಕರು ಶೋರೂಂ ಭೇಟಿಯನ್ನು ತಪ್ಪಿಸುವುದಕ್ಕಾಗಿ ಹೊಸ ಪ್ಲ್ಯಾಟ್‌ಫಾರ್ಮ್‌ಗೆ ಚಾಲನೆ ನೀಡಲಾಗಿದ್ದು, ಇದು ಸಾಮಾನ್ಯವಾಗಿ ವೆಬ್‌ತಾಣಗಳಲ್ಲಿ ಮಾಹಿತಿ ಪಡೆದುಕೊಳ್ಳುವುದಕ್ಕಿಂತ ವಿಭಿನ್ನವಾದ ಅನುಭವ ನೀಡುತ್ತದೆ.
MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಸದ್ಯ ಪರಿಸ್ಥಿತಿಯಲ್ಲಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳೇ ಗ್ರಾಹಕರು ಮತ್ತು ಆಟೋ ಕಂಪನಿಯ ಸಿಬ್ಬಂದಿಯ ಆರೋಗ್ಯ ದೃಷ್ಠಿಯಿಂದ ಉತ್ತಮವಾದ ಮಾರ್ಗವಾಗಿದ್ದು, ಇದು ಶೋರೂಂ ನೇರವಾಗಿ ಭೇಟಿ ವಾಹನ ಖರೀದಿ ಮಾಡಿದ ಅನುಭವಕ್ಕಿಂತ ಭಿನ್ನವಾಗಿರುವುದಲ್ಲದೇ ಅತಿ ಸರಳ ವಿಧಾನಗಳನ್ನು ಅಳವಡಿಸಿಕೊಂಡಿರುವುದು ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದೆ.

ಇನ್ನು ಗ್ರಾಹಕರು ಕೂಡಾ ವೈರಸ್ ಭಯದಿಂದಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದು, ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಹೊಸ ಮಾರ್ಗಸೂಚಿಯಂತೆ ವಾಹನ ಮಾರಾಟದಲ್ಲಿ ಹಲವಾರು ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಂಡಿದೆ.
MOST READ: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಜೊತೆಗೆ ಕಾರು ಮಾರಾಟವನ್ನು ಹೆಚ್ಚಿಸಲು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಅತಿ ಸುಲಭವಾದ ಸಾಲ ಸೌಲಭ್ಯಗಳನ್ನು ಘೋಷಣೆ ಮಾಡುವುದರ ಜೊತೆಗೆ ಕಂಟ್ಯಾಕ್ಟ್ ಲೆಸ್ ಸರ್ವೀಸ್ ನೀಡಲಾಗಿದ್ದು, ಹೊಸ ಬದಲಾವಣೆಯು ಆಟೋ ಕಂಪನಿಗಳಿಗೆ ಬಲತುಂಬಿದೆ ಎನ್ನಬಹುದು.

Click it and Unblock the Notifications