ಡೀಲರ್ ಬಳಿ ತಲುಪಿದ ಜನಪ್ರಿಯ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಕಾರು

ಸ್ಕೋಡಾ ಇಂಡಿಯಾ ತನ್ನ ಹೊಸ ಆಕ್ಟೀವಿಯಾ ಆರ್‍ಎಸ್ 245 ಕಾರನ್ನು 2020ರ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸಿತ್ತು. ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.36 ಲಕ್ಷಗಳಾಗಿದೆ.

ಡೀಲರ್ ಬಳಿ ತಲುಪಿದ ಜನಪ್ರಿಯ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಕಾರು

ಈ ಹೊಸ ಕಾರಿಗಾಗಿ ಇತ್ತೀಚೆಗೆ ಸ್ಕೋಡಾ ಕಂಪನಿಯು ಅಧಿಕೃತ ಬುಕ್ಕಿಂಗ್ ಅನ್ನು ಪ್ರಾರಂಭಿಸಿದರು. ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಆಕ್ಟೀವಿಯಾ ಆರ್‍ಎಸ್ 245 ಕಾರನ್ನು ಕೇವಲ 200 ಯುನಿ‍‍ಟ್‍‍ಗಳಿಗೆ ಸೀಮಿತಗೊಳಿಸಿ ಬಿಡುಗಡೆಗೊಳಿಸಿದೆ. ಸ್ಕೋಡಾ ಆಕ್ಟೇವಿಯಾ ಆರ್ಎಸ್ 245 ಕಾರು ಡೀಲರ್ ಬಳಿ ತಲುಪಿದೆ. ಲಾಕ್‌ಡೌನ್ ಬಳಿಕ ಈ ಕಾರಿನ ವಿತರಣೆಯನ್ನು ಪ್ರಾರಂಭಿಸಬಹುದು. ಈ ಕಾರು ಡೀಲರ್ ಬಳಿ ತಲುಪಿರುವ ಮಾಹಿತಿಯನ್ನು ಟೀಮ್ ಬಿಹೆಚ್‍ಪಿ ಬಹಿರಂಗಪಡಿಸಿದೆ.

ಡೀಲರ್ ಬಳಿ ತಲುಪಿದ ಜನಪ್ರಿಯ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಕಾರು

ಇದೇ ಕಾರಣದಿಂದ ಈ ಕಾರನ್ನು ಖರೀದಿಸಲು ಬಯಸುವವರು ಮಾರ್ಚ್ 1ರಂದು ಬುಕ್ಕಿಂಗ್ ಖಚಿತಪಡಿಸಿಕೊಳ್ಳುವುದು ಉತ್ತಮವಾಗಿದೆ. ಈ ಕಾರನ್ನು ಸಿಬಿಯು ಮೂಲಕ ಭಾರತಕ್ಕೆ ತರಲಾಗುತ್ತದೆ. ಏಪ್ರಿಲ್ ತಿಂಗಳಿನಿಂದ ಆಕ್ಟೀವಿಯಾ ಆರ್‍ಎಸ್ 245 ಕಾರಿನ ವಿತರಣೆಯು ಆರಂಭವಾಗಲಿದೆ.

ಡೀಲರ್ ಬಳಿ ತಲುಪಿದ ಜನಪ್ರಿಯ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಕಾರು

ಆಕ್ಟೀವಿಯಾ ಆರ್‍ಎಸ್ 245 ಕಾರು ರ್ಯಾಲಿ ಗ್ರೀನ್, ರೇಸ್ ಬ್ಲೂ, ಕೊರಿಡಾ ರೆಡ್, ಮ್ಯಾಜಿಕ್ ಬ್ಲ್ಯಾಕ್ ಮತ್ತು ಕ್ಯಾಂಡಿ ವೈಟ್ ಎಂಬ 5 ಬಣ್ಣಗಳಲ್ಲಿ ಲಭ್ಯವಿರಲಿದೆ. ಆರ್‍ಎಸ್ ಮಾದರಿಯು ಪ್ರಸ್ತುತ ತಲೆಮಾರಿನ ಸ್ಕೋಡಾ ಆಕ್ಟೀವಿಯಾವನ್ನು ಆಧರಿಸಿದೆ.

ಡೀಲರ್ ಬಳಿ ತಲುಪಿದ ಜನಪ್ರಿಯ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಕಾರು

ಸ್ಕೋಡಾ ಅಕ್ಟೀವಿಯಾ ಆರ್‍ಎಸ್ ಕಾರ್ ಅನ್ನು ಮೊದಲ ಬಾರಿಗೆ 2017ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಆಕ್ಟೀವಿಯಾ ಆರ್‍ಎಸ್ ಮಾದರಿಯು ಬಿಡುಗಡೆಯಾದ ಮೊದಲ ವಾರದಲ್ಲಿ 250 ಯು‍‍ನಿ‍‍ಟ್‍ಗಳು ಮಾರಾಟವಾಗಿದ್ದವು. ಸ್ಕೋಡಾ ಕಂಪನಿಯ ಸರಣಿಯಲ್ಲಿರುವ ಜನಪ್ರಿಯ ಕಾರುಗಳಲ್ಲಿ ಆಕ್ಟೀವಿಯಾ ಆರ್‍ಎಸ್ ಒಂದಾಗಿದೆ.

ಡೀಲರ್ ಬಳಿ ತಲುಪಿದ ಜನಪ್ರಿಯ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಕಾರು

ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಸೆಡಾನ್ ಇಂಟಿಗ್ರೇಟೆಡ್ ಡೇಟೈಮ್ ರನ್ನಿಂಗ್ ಲೈಟ್, ಟ್ರೆಪೆಜ್ ಆಕರಾದ ಎಕ್ಸಾಸ್ಟ್ ಟಿಪ್ಸ್ ಮತ್ತು ಮುಂಭಾಗದಲ್ಲಿ ಬ್ಲ್ಯಾಕ್ ಗ್ರಿಲ್‍‍ನಲ್ಲಿ ಆರ್‍ಎಸ್ ಬ್ಯಾಡ್ಜ್ ಹೊಂದಿರುವ ಡ್ಯುಯಲ್ ಸ್ಪ್ಲಿಟ್ ಹೆಡ್‍‍ಲ್ಯಾಂಪ್‍‍ಗಳನ್ನು ಒಳಗೊಂಡಿದೆ. ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಬ್ಲ್ಯಾಕ್ ಗ್ರಿಲ್, ಮ್ಯಾಚಿಂಗ್ ಒಆ‍‍ರ್‍‍ವಿಎಂ‍ಗಳು ದೊಡ್ಡದಾದ 19 ಇಂಚಿನ ಅಲಾಯ್ ವ್ಹೀಲ್‍‍ಗಳು, ವೈಡರ್ ಏ‍‍ರ್ ಡ್ಯಾಮ್‍‍ಗಳು ಮತ್ತು ಫ್ರಂಟ್ ಬಂಪರ್‍‍ಗಳನ್ನು ಹೊಂದಿವೆ.

ಡೀಲರ್ ಬಳಿ ತಲುಪಿದ ಜನಪ್ರಿಯ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಕಾರು

ವಾಹನವು ಬೂಟ್ ಲಿಡ್ ಸ್ಪಾಯ್ಲರ್ ಮತ್ತು ಹಿಂಭಾಗದಲ್ಲಿ ಸಿ - ಆಕಾರಾದ ಟೇಲ್‍‍ಲ್ಯಾಂಪ್‍‍ಗಳನ್ನು ಒಳಗೊಂಡಿದೆ. ಇನ್ನೂ ಇಂಟಿರಿಯರ್‍‍ನಲ್ಲಿ ಎಲೆಕ್ಟ್ರಾನಿಕಾನಿಕಲ್ ಅಡ್ಜಂಟಬಲ್ ಫ್ರಂಟ್ ಸೀಟ್ ಮುಂಭಾಗದ ಸೀಟ್‍ ಅಲ್ಕಾಂಟರ್ ಲೆದರ್, ಸ್ಟ್ಯಾಂಡರ್ಡ್ ಲ್ಯಾಪ್ ಟೈಮರ್ ಮತ್ತು ಇಂಟರ್‍‍ನೆಟ್ ಕನೆಕ್ಟಿವಿಟಿ ಫೀಚರ್ಸ್‍‍ಗಳೊಂದಿಗೆ ಎಂಟು ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೇನ್‍ಮೆಂಟ್‍ ಸಿಸ್ಟಂ ಅನ್ನು ಅಳವಡಿಸಿದೆ.

ಡೀಲರ್ ಬಳಿ ತಲುಪಿದ ಜನಪ್ರಿಯ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಕಾರು

ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಸೆಡಾನ್ 2.0 ಲೀಟರ್ ಟಿ‍ಎಸ್‍‍ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 242 ಬಿ‍‍ಹೆಚ್‍‍ಪಿ ಪವರ್ ಮತ್ತು 370 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಡೀಲರ್ ಬಳಿ ತಲುಪಿದ ಜನಪ್ರಿಯ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಕಾರು

ಈ ಎಂಜಿನ್‍‍ನೊಂದಿಗೆ 7 ಸ್ಪೀಡ್ ಡಿ‍ಎಸ್‍‍ಜಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್245 ಸೆಡಾನ್ ಕೇವಲ 6.6 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

ಡೀಲರ್ ಬಳಿ ತಲುಪಿದ ಜನಪ್ರಿಯ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಕಾರು

ಸ್ಕೋಡಾ ಕಂಪನಿಯ ಸರಣಿಯಲ್ಲಿರುವ ಜನಪ್ರಿಯ ಕಾರುಗಳಲ್ಲಿ ಇದು ಕೂಡ ಒಂದಾಗಿದೆ. ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್, ಬಿ‍ಎಂಡಬ್ಲ್ಯೂ 3 ಸೀರಿಸ್ ಮತ್ತು ಜಾಗ್ವಾರ್ ಎಕ್ಸ್‌ಇ ಕಾರುಗಳಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Monday, April 6, 2020, 19:18 [IST]
English summary
Skoda Octavia RS 245 starts arriving at dealerships. Read in Kannada.
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+