ರ‍್ಯಾಪಿಡ್ ಆಟೋಮ್ಯಾಟಿಕ್ ವರ್ಷನ್ ಖರೀದಿಗಾಗಿ ಬುಕ್ಕಿಂಗ್ ಆರಂಭಿಸಿದ ಸ್ಕೋಡಾ
ಸ್ಕೋಡಾ ಕಂಪನಿಯು ಭಾರತದಲ್ಲಿ ತನ್ನ ಜನಪ್ರಿಯ ಸೆಡಾನ್ ಮಾದರಿಯಾದ ರ‍್ಯಾಪಿಡ್ ಬಿಎಸ್-6 ಮಾದರಿಯನ್ನು 1.0-ಲೀಟರ್ ಪೆಟ್ರೋಲ್ ಮ್ಯಾನುವಲ್ ಆವೃತ್ತಿಯಲ್ಲಿ ಮಾತ್ರ ಬಿಡುಗಡೆಗೊಳಿಸಿದ್ದು, ಇದೀಗ ಪೆಟ್ರೋಲ್ ಆಟೋಮ್ಯಾಟಿಕ್ ಮಾದರಿಯ ಬಿಡುಗಡೆಗೆ ಸಿದ್ದಗೊಂಡಿದೆ.

ಹೊಸ ಕಾರು ಬಿಡುಗಡೆಗೆ ಮುನ್ನ ಅಧಿಕೃತವಾಗಿ ಬುಕ್ಕಿಂಗ್ ಪ್ರಕ್ರಿಯೆ ಚಾಲನೆ ನೀಡಲಾಗಿದ್ದು, ರ‍್ಯಾಪಿಡ್ ಆಟೋಮ್ಯಾಟಿಕ್ ಆವೃತ್ತಿಯು ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆ. ಸದ್ಯ ಮಾರುಕಟ್ಟೆಯಲ್ಲಿ ಹೊಸ ರ‍್ಯಾಪಿಡ್ ಕಾರು ಮಾದರಿಯು ಬಿಎಸ್-6 ಎಂಜಿನ್‌ನೊಂದಿಗೆ ಭಾರೀ ಬದಲಾವಣೆ ಪಡೆದುಕೊಂಡಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 7.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.11.79 ಲಕ್ಷ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಇದೀಗ ಬಿಡುಗಡೆಯಾಗಲಿರುವ ಆಟೋಮ್ಯಾಟಿಕ್ ಆವೃತ್ತಿಯ ಮ್ಯಾನುವಲ್ ಮಾದರಿಗಿಂತ ರೂ. 30 ಸಾವಿರ ರೂ.50 ಸಾವಿರದಷ್ಟು ಹೆಚ್ಚಳವಾಗಿರಲಿದ್ದು, ಹೊಸ ಕಾರಿನಲ್ಲಿ ರೈಡರ್, ರೈಡರ್ ಪ್ಲಸ್, ಆ್ಯಂಬಿಯೆಷನ್, ಆನೆಕ್ಸ್, ಸ್ಟೈಲ್ ಮತ್ತು ಮಾಂಟೆ ಕಾರ್ಲೋ ಆವೃತ್ತಿಗಳೊಂದಿಗೆ ಮಾರಾಟವಾಗಲಿದೆ.

ಸೆಡಾನ್ ಮಾದರಿಯಲ್ಲೇ ಸದ್ಯ ಅತಿ ಕಡಿಮೆ ಬೆಲೆಯೊಂದಿಗೆ ಅತ್ಯುತ್ತಮ ಫೀಚರ್ಸ್ ಹೊಂದಿರುವ ರ‍್ಯಾಪಿಡ್ ಕಾರಿನ ರೈಡರ್ ಪ್ಲಸ್ ಆವೃತ್ತಿಯು ಪ್ರತಿಸ್ಪರ್ಧಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದ್ದು, ಹೊಸ ಕಾರಿನಲ್ಲಿ ಆಟೋಮ್ಯಾಟಿಕ್ ಮಾದರಿಯ ಬಿಡುಗಡೆಯ ನಂತರ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

ಸದ್ಯ ಮಾರುಕಟ್ಟೆಯ್ಲಿರುವ ರ‍್ಯಾಪಿಡ್ ಹೊಸ ಕಾರಿನಲ್ಲಿ ಜೋಡಣೆ ಮಾಡಿರುವ 999-ಸಿಸಿ ಟರ್ಬೋ ಚಾರ್ಜ್ಡ್ ತ್ರಿ ಸಿಲಿಂಡರ್ ಪೆಟ್ರೋಲ್ ಮಾದರಿಯು 108-ಬಿಎಚ್‌ಪಿ ಮತ್ತು 175-ಎನ್ಎಂ ಟಾರ್ಕ್ ಉತ್ಪಾದನೆ ಉತ್ಪಾದನಾ ಗುಣಹೊಂದಿದ್ದು, ಆಟೋ ಮ್ಯಾಟಿಕ್ ಆವೃತ್ತಿಯು ಇನ್ನು ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ಮಾದರಿಯಾಗಿರಲಿದೆ.

ಹೊಸ ಎಂಜಿನ್ ಮಾದರಿಯನ್ನು ಫೋಕ್ಸ್‌ವ್ಯಾಗನ್ ವೆಂಟೊ ಕಾರಿನಿಂದ ಎರವಲು ಪಡೆದುಕೊಳ್ಳಲಾಗಿದ್ದು, ಬಿಎಸ್-6 ನಿಯಮದಿಂದಾಗಿ ರ‍್ಯಾಪಿಡ್ ಕಾರಿನಲ್ಲಿ ಈ ಹಿಂದೆ ನೀಡಲಾಗುತ್ತಿದ್ದ 1.6-ಲೀಟರ್ ಎಂಪಿಐ ಪೆಟ್ರೋಲ್ ಮಾದರಿಯನ್ನು ಸ್ಥಗಿತಗೊಳಿಸಲಾಗಿದೆ.
MOST READ: 16 ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲು ಮುಂದಾದ ಟೊಯೊಟಾ

999-ಸಿಸಿ ಟರ್ಬೋ ಪೆಟ್ರೋಲ್ ಮಾದರಿಯು ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಆಕರ್ಷಕ ಇಂಧನ ದಕ್ಷತೆ ಹೊಂದಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ ಗರಿಷ್ಠ 18.97ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಹೊಸ ರ‍್ಯಾಪಿಡ್ ಕಾರಿನಲ್ಲಿ ಎಂಜಿನ್ ಬದಲಾವಣೆ ಹೊರತುಪಡಿಸಿ ತಾಂತ್ರಿಕ ಅಂಶಗಳನ್ನು ಈ ಹಿಂದಿನ ಮಾದರಿಯೆಂತೆ ಮುಂದುವರಿಸಲಾಗಿದ್ದು, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆ್ಯಪಲ್ ಕಾರ್‌ಪ್ಲೇ, ಆಂಡ್ರಾಯಿಡ್ ಆಟೋ, ಸ್ಕಫ್ ಪ್ಲೇಟ್, ಫ್ಲ್ಯಾಟ್ ಬಾಟಮ್ ಸ್ಟ್ರೀರಿಂಗ್ ವೀಲ್ಹ್, ಎಲ್‌ಇಡಿ ಲೈಟ್‌ಗಳು, ಲೆದರ್ ಸೀಟ್‌ಗಳು ಪ್ರಮುಖ ಆಕರ್ಷಣೆಯಾಗಿದೆ.
MOST READ: ಕಾರಿನ ಬೆಲೆಗಿಂತ ಈ ಕಾರಿನ ನಂಬರ್ ಪ್ಲೇಟ್ ಬೆಲೆಯೇ ಹೆಚ್ಚು

ಹಾಗೆಯೇ ಪ್ರಯಾಣಿಕ ಸುರಕ್ಷತೆಗಾಗಿ ಕ್ರೂಸ್ ಕಂಟ್ರೋಲ್, 4 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ರಿಯರ್ ವ್ಯೂ ಕ್ಯಾಮೆರಾ ಮತ್ತು ಸೆನ್ಸಾರ್, ಬ್ರೇಕ್ ಅಸಿಸ್ಟ್ ಮತ್ತು 16-ಇಂಚಿನ ಅಲಾಯ್ ವೀಲ್ಹ್‌ನೊಂದಿಗೆ ಪ್ರಮುಖ ಆರು ಬಣ್ಣಗಳ ಆಯ್ಕೆ ಹೊಂದಿದೆ.


Click it and Unblock the Notifications