ಪ್ರಮುಖ 5 ವೆರಿಯೆಂಟ್‌ಗಳೊಂದಿಗೆ ಹೊಸ ಎಂಜಿನ್ ಪಡೆದುಕೊಂಡ 2020ರ ರ‍್ಯಾಪಿಡ್

ರ‍್ಯಾಪಿಡ್ 2020ರ ಮಾದರಿಯು ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಗೊಂಡಿದ್ದು, ಹೊಸ ಕಾರು ಈ ಬಾರಿ 1.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರವೇ ಖರೀದಿಗೆ ಲಭ್ಯವಿರಲಿದೆ. ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.11.79 ಲಕ್ಷ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಹೊಸ ರ‍್ಯಾಪಿಡ್ ಕಾರು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಐದು ವೆರಿಯೆಂಟ್‌ಗಳಲ್ಲಿ ಅಭಿವೃದ್ದಿಗೊಂಡಿದ್ದು, ರೈಡರ್, ಆ್ಯಂಬಿಯೆಷನ್, ಆನೆಕ್ಸ್, ಸ್ಟೈಲ್ ಮತ್ತು ಮಾಂಟೆ ಕಾರ್ಲೋ ವೆರಿಯೆಂಟ್‌ಗಳನ್ನು ಪಡೆದುಕೊಂಡಿದೆ.

ಪ್ರಮುಖ 5 ವೆರಿಯೆಂಟ್‌ಗಳೊಂದಿಗೆ ಹೊಸ ಎಂಜಿನ್ ಪಡೆದುಕೊಂಡ 2020ರ ರ‍್ಯಾಪಿಡ್

ಇದರಲ್ಲಿ ರೈಡರ್ ಮಾದರಿಯು ಆರಂಭಿಕ ಆವೃತ್ತಿಯಾಗಿದ್ದರೆ ಮಾಂಟೆ ಕಾರ್ಲೋ ಆವೃತ್ತಿಯು ಹೈ ಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದ್ದು, ಹೊಸ ಕಾರಿನಲ್ಲಿ ಜೋಡಣೆ ಮಾಡಿರುವ 999-ಸಿಸಿ ಟರ್ಬೋ ಚಾರ್ಜ್ಡ್ ತ್ರಿ ಸಿಲಿಂಡರ್ ಪೆಟ್ರೋಲ್ ಮಾದರಿಯು 108-ಬಿಎಚ್‌ಪಿ ಮತ್ತು 175-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಹೊಸ ಕಾರಿನಲ್ಲಿ ಸದ್ಯಕ್ಕೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಆಟೋಮ್ಯಾಟಿಕ್ ಕಾರು ಮಾದರಿಯೂ ಮುಂದಿನ ಕೆಲವೇ ತಿಂಗಳಿನಲ್ಲಿ ಖರೀದಿಗೆ ಲಭ್ಯವಾಗಲಿದೆ.

ಬಿಎಸ್-6 ನಿಯಮದಿಂದಾಗಿ ರ‍್ಯಾಪಿಡ್ ಕಾರಿನಲ್ಲಿ ಈ ಹಿಂದೆ ನೀಡಲಾಗುತ್ತಿದ್ದ 1.6-ಲೀಟರ್ ಎಂಪಿಐ ಪೆಟ್ರೋಲ್ ಮಾದರಿಯನ್ನು ಸ್ಥಗಿತಗೊಳಿಸಲಾಗಿದ್ದು, ಹೊಸ ಎಂಜಿನ್ ಮಾದರಿಯನ್ನು ಫೋಕ್ಸ್‌ವ್ಯಾಗನ್ ವೆಂಟೊ ಕಾರಿನಿಂದ ಎರವಲು ಪಡೆದುಕೊಳ್ಳಲಾಗಿದೆ.

ಹೊಸ ಎಂಜಿನ್ ಮಾದರಿಯು ಬಿಎಸ್-6 ನಿಯಮ ಜಾರಿ ನಂತರ ಹೊಸ ಎಮಿಷನ್‌ಗೆ ಅನುಗುಣವಾಗಿ ಅಭಿವೃದ್ದಿಗೊಂಡಿದ್ದು, ಮಾಲಿನ್ಯ ಹೊರಸೂಸುವಿಕೆ ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆ ಕಂಡಿರುವುದಲ್ಲದೆ ಮೈಲೇಜ್ ಪ್ರಮಾಣದಲ್ಲಿ ಶೇ.23ರಷ್ಟು ಸುಧಾರಣೆಗೊಳ್ಳುವ ಮೂಲಕ ಪ್ರತಿ ಲೀಟರ್ ಪೆಟ್ರೋಲ್‌ಗೆ 18.97 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಇನ್ನು ಹೊಸ ರ‍್ಯಾಪಿಡ್ ಕಾರಿನಲ್ಲಿ ಎಂಜಿನ್ ಬದಲಾವಣೆ ಹೊರತುಪಡಿಸಿ ತಾಂತ್ರಿಕ ಅಂಶಗಳನ್ನು ಈ ಹಿಂದಿನ ಮಾದರಿಯೆಂತೆ ಮುಂದುವರಿಸಲಾಗಿದ್ದು, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆ್ಯಪಲ್ ಕಾರ್‌ಪ್ಲೇ, ಆಂಡ್ರಾಯಿಡ್ ಆಟೋ, ಸ್ಕಫ್ ಪ್ಲೇಟ್, ಫ್ಲ್ಯಾಟ್ ಬಾಟಮ್ ಸ್ಟ್ರೀರಿಂಗ್ ವೀಲ್ಹ್, ಎಲ್‌ಇಡಿ ಲೈಟ್‌ಗಳು, ಲೆದರ್ ಸೀಟ್‌ಗಳು ಪ್ರಮುಖ ಆಕರ್ಷಣೆಯಾಗಿದೆ.

Article Published On: Thursday, May 28, 2020, 8:45 [IST]
English summary
Skoda Rapid 1.0-litre TSI BS6 Variants Features Prices Explained In Detail, Read in Kannada.
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+