ಡೀಲರ್ ಬಳಿ ಕಾಣಿಸಿಕೊಂಡ ಹೊಸ ಸ್ಕೋಡಾ ಸೂಪರ್ಬ್ ಕಾರು

ಸ್ಕೋಡಾ ಇಂಡಿಯಾ ಕಂಪನಿಯು ತನ್ನ ಹೊಸ ಸೂಪರ್ಬ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಸ್ಕೋಡಾ ಸೂಪರ್ಬ್ ಕಾರಿನ ಟಾಪ್-ಸ್ಪೆಕ್ ಲೌರಿನ್ ಮತ್ತು ಕ್ಲೆಮೆಂಟ್ (ಎಲ್&ಕೆ) ಎಂಬ ರೂಪಾಂತರಗಳು ಬಿಡುಗಡೆಯ ಮುನ್ನ ಡೀಲರ್ ಗಳ ಬಳಿ ತಲುಪಿದೆ.

ಡೀಲರ್ ಬಳಿ ಕಾಣಿಸಿಕೊಂಡ ಹೊಸ ಸ್ಕೋಡಾ ಸೂಪರ್ಬ್ ಕಾರು

ಸ್ಕೋಡಾ ಸೂಪರ್ಬ್ ಕಾರಿನ ಎಲ್&ಕೆ ರೂಪಾಂತರಗಳು ಡೀಲರ್ ಬಳಿ ತಲುಪಿರುವುದನ್ನು ಪವರ್ ಸ್ಟ್ರೋಕ್ ಪಿಎಸ್ ಯೂಟ್ಯೂಬ್ ಚಾನೆಲ್‌ ಬಹಿರಂಗಪಡಿಸಿದೆ. ರಾಷ್ಟ್ರವ್ಯಾಪಿ ಇರುವ ಲಾಕ್‌ಡೌನ್ ಅವಧಿಯು ಮುಗಿದ ಬಳಿಕ ಕಂಪನಿಯು ಹೊಸ ಐಷಾರಾಮಿ-ಸೆಡಾನ್ ಅನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ. ಈ ಹೊಸ ಸ್ಕೋಡಾ ಸೂಪರ್ಬ್ ಕಾರಿಗಾಗಿ ಬುಕ್ಕಿಂಗ್ ಆರಂಭವಾಗಿದೆ. ಹೊಸ ಸ್ಕೋಡಾ ಸೂಪರ್ಬ್ ಕಾರಿಗಾಗಿ ರೂ.50,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಡೀಲರ್ ಬಳಿ ಕಾಣಿಸಿಕೊಂಡ ಹೊಸ ಸ್ಕೋಡಾ ಸೂಪರ್ಬ್ ಕಾರು

ಸ್ಕೋಡಾ ಕಂಪನಿಯು ಸೂಪರ್ಬ್ ಕಾರನ್ನು ನವೀಕರಿಸಿ ಅಂತರರಾಷ್ಟ್ರೀಯ ಮಾರುಕಟ್ಟೆಯಲಿ ಬಿಡುಗಡೆಗೊಳಿಸಿದೆ. ಸ್ಕೋಡಾ ನವೀಕರಿಸಿದ ಸೂಪರ್ಬ್ ಕಾರನ್ನು ಇತ್ತೀಚೆಗೆ ನಡೆದ 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿತ್ತು. ಹೊಸ ಸ್ಕೋಡಾ ಸೂಪರ್ಬ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ.

ಡೀಲರ್ ಬಳಿ ಕಾಣಿಸಿಕೊಂಡ ಹೊಸ ಸ್ಕೋಡಾ ಸೂಪರ್ಬ್ ಕಾರು

ಸ್ಕೋಡಾ ಸೂಪರ್ಬ್ ಕಾರಿನಲ್ಲಿ ಫ್ರಂಟ್ ಗ್ರಿಲ್ ಮತ್ತು ಫ್ರಂಟ್ ಬಂಪರ್‍ನೊಂದಿಗೆ ಕ್ರೋಮ್ ಎಕ್ಸಟ್ ಒಳಗೂಂಡಿದೆ. ಈ ಐಷಾರಾಮಿ ಸೆಡಾನ್‍ನಲ್ಲಿ ಮ್ಯಾಟ್ರಿಕ್ಸ್ ತಂತ್ರಜ್ಞಾನ, ಎಲ್ಇಡಿ ಫಾಗ್ ಲ್ಯಾಂಪ್ ಮತ್ತು ಹೊಸ ಅಲಾಯ್ ವೀಲ್ ವಿನ್ಯಾಸದೊಂದಿಗೆ ಫುಲ್-ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಸಹ ಒಳಗೊಂಡಿದೆ.

ಡೀಲರ್ ಬಳಿ ಕಾಣಿಸಿಕೊಂಡ ಹೊಸ ಸ್ಕೋಡಾ ಸೂಪರ್ಬ್ ಕಾರು

ಈ ಕಾರಿನ ಹಿಂಭಾಗದ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಸ್ಕೋಡಾ ಸೂಪರ್ಬ್ ಫೇಸ್‌ಲಿಫ್ಟ್ ಕಾರಿನ ಇಂಟಿರಿಯರ್ ನಲ್ಲಿ ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂ, ವರ್ಚುವಲ್ ಕಾಕ್‌ಪಿಟ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜರ್ ಮತ್ತು ಇನ್ನಿತರ ಫೀಚರ್‍ಗಳನ್ನು ಹೊಂದಿದೆ.

ಡೀಲರ್ ಬಳಿ ಕಾಣಿಸಿಕೊಂಡ ಹೊಸ ಸ್ಕೋಡಾ ಸೂಪರ್ಬ್ ಕಾರು

ಇದರೊಂದಿಗೆ ಲೆದರ್ ಸೀಟ್, ಸನ್‌ರೂಫ್, ಸ್ಟೀಯರಿಂಗ್ ಮೌಂಟಡ್ ಕಂಟ್ರೋಲ್ ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಕೂಡ ಅಳವಡಿಸಲಾಗಿದೆ. ಇಂಟಿರಿಯರ್ ನಲ್ಲಿ ಕೆಲವು ಹೊಸ ಫೀಚರ್ಸ್‍ಗಳನ್ನು ಹೊರತುಪಡಿಸಿ ಇನ್ನಿತರ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಡೀಲರ್ ಬಳಿ ಕಾಣಿಸಿಕೊಂಡ ಹೊಸ ಸ್ಕೋಡಾ ಸೂಪರ್ಬ್ ಕಾರು

ಸ್ಕೋಡಾ ಸೂಪರ್ಬ್ ಫೇಸ್‌ಲಿಫ್ಟ್ ಕಾರಿನಲ್ಲಿ 2.0-ಲೀಟರ್ ಟಿಎಸ್‌ಐ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 190 ಬಿ‍‍ಹೆಚ್‍‍ಪಿ ಪವರ್ ಮತ್ತು 320 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಡೀಲರ್ ಬಳಿ ಕಾಣಿಸಿಕೊಂಡ ಹೊಸ ಸ್ಕೋಡಾ ಸೂಪರ್ಬ್ ಕಾರು

ಹಿಂದಿನ ಸ್ಕೋಡಾ ಸೂಪರ್ಬ್ ಮಾದರಿಯಲ್ಲಿ 1.8-ಲೀಟರ್ ಟಿಎಸ್ಐ ಪೆಟ್ರೋಲ್ ಮತ್ತು 2.0-ಲೀಟರ್ ಟಿಡಿಐ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಆದರೆ ಈ ಎರಡು ಎಂಜಿನ್ ಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುವುದಿಲ್ಲ.

ಡೀಲರ್ ಬಳಿ ಕಾಣಿಸಿಕೊಂಡ ಹೊಸ ಸ್ಕೋಡಾ ಸೂಪರ್ಬ್ ಕಾರು

ಸ್ಕೋಡಾ ಸೂಪರ್ಬ್ ಫೇಸ್‌ಲಿಫ್ಟ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟೊಯೊಟಾ ಕ್ಯಾಮ್ರಿ ಕಾರಿಗೆ ಪೈಪೋಟಿಯನ್ನು ನೀಡುತ್ತದೆ. ಹೊಸ ಸ್ಕೋಡಾ ಸೂಪರ್ಬ್ ಫೇಸ್‌ಲಿಫ್ಟ್ ಕಾರು ಲಾವಾ ಬ್ಲೂ, ಮೂನ್ ವೈಟ್, ಬಿಸಿನೆಸ್ ಗ್ರೇ, ಮ್ಯಾಜಿಕ್ ಬ್ಲ್ಯಾಕ್, ಮ್ಯಾಗ್ನೆಟಿಕ್ ಬ್ರೌನ್, ಸ್ಟೀಲ್ ಗ್ರೇ ಮತ್ತು ರೇಸ್ ಬ್ಲೂ ಎಂಬ ಬಣ್ಣಗಳ ಆಯ್ಕೆಯನ್ನು ಹೊಂದಿರಲಿದೆ,

Most Read Articles

Kannada
English summary
2020 Skoda Superb Laurin & Klement Spotted At Dealership Ahead Of Its India Launch. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X