ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಉತ್ಪಾದನಾ ಆವೃತ್ತಿ ಅನಾವರಣ..!
ಜೆಕ್ ಆಟೋ ಉತ್ಪಾದನಾ ಕಂಪನಿಯಾದ ಸ್ಕೋಡಾ ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಮಾದರಿಯನ್ನು ಬಿಡುಗಡೆಗೊಳಿಸಲು ಅಂತಿಮ ಹಂತದ ಸಿದ್ದತೆ ನಡೆಸಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಉತ್ಪಾದನಾ ಆವೃತ್ತಿಯನ್ನು ಅನಾವರಣಗೊಳಿಸಿದೆ.

ಯುರೋಪ್ ಮಾರುಕಟ್ಟೆಗಾಗಿ ಈಗಾಗಲೇ ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯ ಬಿಡುಗಡೆಯ ಕುರಿತಂತೆ ನೆಮ್ ಪ್ಲೇಟ್ ಟೀಸರ್ ಒಂದನ್ನು ಬಿಡುಗಡೆ ಮಾಡಿದ್ದ ಸ್ಕೋಡಾ ಕಂಪನಿಯು ಇದೀಗ ಉತ್ಪಾದನಾ ಆವೃತ್ತಿಯನ್ನು ಅನಾವರಣಗೊಳಿಸಿದೆ. ಸ್ಕೋಡಾ ಹೊಸ ಇವಿ ಕಾರು ಎನ್ಯಾಕ್(ENYAQ) ಎನ್ನುವ ಹೆಸರಿನೊಂದಿಗೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದ್ದು, ಲಾಂಗ್ ವೀಲ್ಹ್ ಬೆಸ್‌ನೊಂದಿಗೆ ಕ್ರಾಸ್ ಓವರ್ ಎಸ್‌ಯುವಿ ಮಾದರಿಯಾಗಿ ಬಿಡುಗಡೆಗೊಳ್ಳಲಿದೆ.

ಮಾಹಿತಿಗಳ ಪ್ರಕಾರ, ಹೊಸ ಎನ್ಯಾಕ್ ಕಾರು ಮುಂಬರುವ ನವೆಂಬರ್ ವೇಳೆಗೆ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಗೊಳ್ಳಲಿದ್ದು, ಭಾರತದಲ್ಲಿ ಈ ಕಾರು 2022ರ ವೇಳೆಗೆ ಬಿಡುಗಡೆಗೊಳ್ಳುವ ನೀರಿಕ್ಷೆಯಿದೆ.

ಆಧುನಿಕ ತಂತ್ರಜ್ಞಾನ ಪ್ರೇರಿತ ಹಲವು ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಎನ್ಯಾಕ್ ಎಸ್‌ಯುವಿ ಕಾರು ಡೈನಾಮಿಕ್ ಡಿಸೈನ್‌ನೊಂದಿಗೆ ಅಭಿವೃದ್ದಿಗೊಂಡಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಬ್ಯಾಟರಿ ಪ್ಯಾಕ್‌ನೊಂದಿಗೆ ಅತ್ಯುತ್ತಮ ಮೈಲೇಜ್ ಪ್ರೇರಣೆ ಹೊಂದಿದೆ.

ಎಸ್‌ಯುವಿ ಕಾರುಗಳಲ್ಲೇ ಹೊಸ ಮಾದರಿಯ ವಿನ್ಯಾಸ ಹೊಂದಿರುವ ಎನ್ಯಾಕ್ ಕಾರು 4,648-ಎಂಎಂ ಉದ್ದ, 1,877-ಎಂಎಂ ಅಗಲ, 1,618-ಎಂಎಂ ಎತ್ತರದೊಂದಿಗೆ ಉತ್ತಮ ಒಳಾಂಗಣ ವಿನ್ಯಾಸ ಹೊಂದಿದ್ದು, ಹೊಸ ಕಾರು ಬ್ಯಾಟರಿ ಪ್ಯಾಕ್‌ಗೆ ಅನುಗುಣವಾಗಿ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗಲಿದೆ.

ಎನ್ಯಾಕ್ ಕಾರಿನಲ್ಲಿ 60 ಐವಿ, 80 ಐವಿ ಮತ್ತು 80ಎಕ್ಸ್ ಐವಿ ವೆರಿಯೆಂಟ್‌ಗಳಲ್ಲಿ ಬಿಡುಗಡೆಗೊಳ್ಳಲಿದ್ದು, 60ಐವಿ ಕಾರಿನಲ್ಲಿ 62kWh, 80 ಐವಿ ಕಾರಿನಲ್ಲಿ 82kWh ಮತ್ತು 80ಎಕ್ಸ್ ಐವಿ(ಆಲ್ ವೀಲ್ಹ್ ಡ್ರೈವ್) ಕಾರಿನಲ್ಲಿ 82kWh ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಹೊಸ ಎಲೆಕ್ಟ್ರಿಕ್ ಕಾರು ಪ್ರತಿ ಚಾರ್ಜ್‌ಗೆ ಆರಂಭಿಕ ಆವೃತ್ತಿಯು 389ಕಿ.ಮೀ, ಮಧ್ಯಮ ಕ್ರಮಾಂಕದ ಕಾರು ಮಾದರಿಯು 509 ಕಿ.ಮೀ ಮತ್ತು ಟಾಪ್ ಎಂಡ್ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 459ಕಿ.ಮೀ ಮೈಲೇಜ್ ರೇಂಜ್‌ನೊಂದಿಗೆ ಮೊದಲೆರಡು ಮಾದರಿಗಿಂತಲೂ ಉತ್ತಮ ಪರ್ಫಾಮೆನ್ಸ್ ಹೊಂದಿದೆ.

ಹೊಸ ಕಾರಿನಲ್ಲಿ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ 179ಕಿ.ಮೀ ಸಿಮಿತಗೊಳಿಸಲಾಗಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಮೂಲಕ ಕೇವಲ 38 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜಿಂಗ್ ಪಡೆದುಕೊಳ್ಳಬಹುದಾಗಿದೆ.
MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಹೊಸ ಎಲೆಕ್ಟ್ರಿಕ್ ಕಾರು ಯುರೋಪ್ ಮಾರುಕಟ್ಟೆಗಳಲ್ಲಿ ಇದೇ ವರ್ಷಾಂತ್ಯಕ್ಕೆ ಇಲ್ಲವೇ 2021ರ ಆರಂಭದಲ್ಲಿ ಬಿಡುಗಡೆಯಾಗಲಿದ್ದು, ಭಾರತದಲ್ಲಿ ಈ ಹೊಸ ಕಾರು 2022ರ ಆರಂಭದಲ್ಲಿ ಮಾರುಕಟ್ಟೆ ಪ್ರವೇಶಿಸಬಹುದಾಗಿದೆ. ಬ್ಯಾಟರಿ ಸಾಮರ್ಥ್ಯ ಮತ್ತು ಐಷಾರಾಮಿ ಫೀಚರ್ಸ್‌ಗಳಿಗೆ ಅನುಗುಣವಾಗಿ ಹೊಸ ಕಾರು ಆರಂಭಿಕವಾಗಿ ಭಾರತೀಯ ಮಾರುಕಟ್ಟೆಯಲ್ಲಿ ರೂ.28 ಲಕ್ಷದಿಂದ ರೂ. 35 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದೆಂದು ಅಂದಾಜಿಸಲಾಗಿದೆ.


Click it and Unblock the Notifications








