ವಿದ್ಯಾರ್ಥಿಗಳು ನಿರ್ಮಿಸಿದ ಸ್ಲಾವಿಯಾ ರೋಡ್‌ಸ್ಟರ್ ಕಾರನ್ನು ಅನಾವರಣಗೊಳಿಸಿದ ಸ್ಕೋಡಾ
ಜನಪ್ರಿಯ ವಾಹನ ತಯಾರಕ ಕಂಪನಿಯಾದ ಸ್ಕೋಡಾ ವಿದ್ಯಾರ್ಥಿಗಳು ಕಾರು ಪ್ರಾಜೆಕ್ಟ್ ವರ್ಕ್‌ನಲ್ಲಿ ತಯಾರಿಸಿದ ಏಳನೇ ಮಾದರಿಯನ್ನು ಅನಾವರಣಗೊಳಿಸಿದೆ. ವಿದ್ಯಾರ್ಥಿಗಳು ಸ್ಕೋಡಾ ಸ್ಕಲಾ ಮಾದರಿಯನು ಆಧರಿಸಿ ಸ್ಲಾವಿಯಾ ರೋಡ್‌ಸ್ಟರ್ ಕಾರನ್ನು ತಯಾರಿಸಿದ್ದಾರೆ.

ಸ್ಲಾವಿಯಾ ರೋಡ್‌ಸ್ಟರ್ ಮಾದರಿಯು ವಿದ್ಯಾರ್ಥಿಗಳ ಕಾರು ಪ್ರಾಜೆಕ್ಟ್ ವರ್ಕ್‌ನಲ್ಲಿ ಪ್ರಮುಖ ನಿರ್ಮಾಣವಾಗಿದೆ. ಆದರೆ ಇದನ್ನು ಕಂಪನಿಯು ಉತ್ಪಾದನೆಯನ್ನು ಮಾಡುವುದಿಲ್ಲ. ಈ ಕಾರನ್ನು ಕಂಪನಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ನಿರ್ಮಿಸಿದ್ದಾರೆ. ಸ್ಕೋಡಾ ಕಂಪನಿಯು ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಸಹಾಯ ಮಾಡಲು ಅನೇಕ ವಿಭಾಗಗಳಲ್ಲಿ ತರಬೇತಿ ನೀಡುತ್ತದೆ.

ಪ್ರಥಮ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಧ್ಯಾರ್ಥಿಗಳು ಸ್ಕೋಡಾ ಸ್ಕಲಾ ಮಾದರಿಯನ್ನು ಸ್ಪೋರ್ಟಿ ಸ್ಪೈಡರ್ ಆಗಿ ಮಾರ್ಪಡಿಸಲು ಆಯ್ಕೆ ಮಾಡಿಕೊಂಡರು. ಈ ಕಾರು ಪ್ರಾಜೆಕ್ಟ್ ವರ್ಕ್‌ನಲ್ಲಿ ಮೂವತ್ತೊಂದು ವಿದ್ಯಾರ್ಥಿಗಳು ಭಾಗವಹಿಸಿದ್ದರು.
MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಸ್ಕೋಡಾದ ಸಂಸ್ಥಾಪಕರಾದ ವೆಕ್ಲಾವ್ ಲೌರಿನ್ ಮತ್ತು ವೆಕ್ಲಾವ್ ಕ್ಲೆಮೆಂಟ್ ಅವರು 1957ರಲ್ಲಿ ಸ್ಲಾಮಿಯಾ ಎಂಬ ಮಾದರಿಯನ್ನು ನಿರ್ಮಿಸಿದ್ದರು. ಈ ಮಾದರಿಯ ವಿನ್ಯಾಸದಿಂದ ಸ್ಪೋರ್ತಿ ಪಡೆದು ವಿದ್ಯಾರ್ಥಿಗಳು ಸ್ಲಾವಿಯಾ ರೋಡ್‌ಸ್ಟರ್ ಅನ್ನು ತಯಾರಿಸಿದ್ದಾರೆ.

ವಿದ್ಯಾರ್ಥಿಗಳು ತಯಾರಿಸಿದ ಸ್ಲಾವಿಯಾ ರೋಡ್‌ಸ್ಟರ್ ಎರಡು ಸೀಟುಗಳ ಹೊಂದಿರುವ ಮಾದರಿಯಾಗಿದೆ. ಈ ಕಾರಿನಲ್ಲಿ ಕಸ್ಟಮ್ ನಿರ್ಮಿತ ಹಿಂಭಾಗದ ಸೀಟ್ ಕವರ್ ಅನ್ನು ಸ್ಪೀಡ್ ಸ್ಟರ್ ಶೈಲಿಯ ಹಂಪ್ಸ್ ಅನ್ನು ಒಳಗೊಂಡಿದೆ.
MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಈ ಸ್ಲಾವಿಯಾ ರೋಡ್‌ಸ್ಟರ್ ಕಾರಿನಲ್ಲಿ ಕೊಡಿಯಾಕ್ ವಿಆರ್‌ಎಸ್ ಮತ್ತು ಅಕ್ಟೀವಿಯಾ ವಿಆರ್‌ಎಸ್ ಮಾದರಿಗಳಲ್ಲಿರುವಂತಹ 20 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಸ್ಲಾಮಿಯಾ ಕಾರು ಮಾಡಿಫೈ ಎಕ್ಸಾಸ್ಟ್ ಸಿಸ್ಟಂ ಅನ್ನು ಹೊಂದಿದೆ.

ಸ್ಲಾವಿಯಾ ರೋಡ್‌ಸ್ಟರ್ ಕಾರು ನಿಯಾನ್ ಬ್ಲೂ ಬಣ್ಣದ ಮುಖ್ಯಾಂಶಗಳೊಂದಿಗೆ ವೈಟ್ ಕ್ರಿಸ್ಟಲ್ ಬ್ಲೂ ಪರ್ಲೆಸೆಂಟ್ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ. ಈ ಕಾರು ಪ್ರೊಗ್ರಾಮೆಬಲ್ ಎಲ್ಇಡಿ ಲ್ಯಾಂಪ್ ಅನ್ನು ಒಳಗೊಂಡಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಈ ಕಾರಿನ ಎಂಜಿನ್ ಬಗ್ಗೆ ಯಾವುದೇ ಮಾಹಿತಿಗಳಲ್ಲಿ. ಆದರೆ. ಸ್ಕಲಾ ಮಾದರಿಯು 1.0-ಲೀಟರ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ ಗಳನ್ನು ಹೊಂದಿತ್ತು, ಇದರಲ್ಲಿ 1.0-ಲೀಟರ್ ಎಂಜಿನ್ 95 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5-ಲೀಟರ್ 148 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ವಿದ್ಯಾರ್ಥಿಗಳ ಕಾರು ಪ್ರಾಜೆಕ್ಟ್ ವರ್ಕ್‌ನಲ್ಲಿ ಅಧ್ಭುತವಾಗಿ ಸ್ಲಾವಿಯಾ ರೋಡ್‌ಸ್ಟರ್ ಕಾರನ್ನು ನಿರ್ಮಿಸಿದ್ದಾರೆ. ಈ ಯುವ ಪ್ರತಿಭೆಗಳು ಭವಿಷ್ಯದಲ್ಲಿಯು ಕೂಡ ಇಂತಹ ಉತ್ತಮ ಮಾದರಿಗಳನ್ನು ನಿರ್ಮಿಸಲಿ ಎಂಬುದು ಎಲ್ಲರ ಬಯಕೆಯಾಗಿದೆ.


Click it and Unblock the Notifications