2021ರ ಆರಂಭದಲ್ಲಿ ಅನಾವರಣವಾಗಲಿದೆ ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‍ಯುವಿ

ಸ್ಕೋಡಾ ಆಟೋ ಇಂಡಿಯಾ ಕಂಪನಿಯು ತನ್ನ ಹೊಸ ವಿಷನ್ ಇನ್ ಕಾನ್ಸೆಪ್ಟ್ ಕಾಂಪ್ಯಾಕ್ಟ್ ಎಸ್‍‍‍ಯುವಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು. ಇದೀಗ ಸ್ಕೋಡಾ ಕಂಪನಿಯು ಹೊಸ ವಿಷನ್ ಇನ್ ಕಾನ್ಸೆಪ್ಟ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

2021ರ ಆರಂಭದಲ್ಲಿ ಅನಾವರಣವಾಗಲಿದೆ ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‍ಯುವಿ

ಈ ಹೊಸ ವಿಷನ್ ಇನ್ ಕಾನ್ಸೆಪ್ಟ್ ಕಾಂಪ್ಯಾಕ್ಟ್ ಎಸ್‍‍‍ಯುವಿಯನ್ನು ಭಾರತದಲ್ಲಿ ಮುಂದಿನ ವರ್ಷದ ಜನವರಿ ಮತ್ತು ಮಾರ್ಚ್ ತಿಂಗಳ ನಡುವೆ ಅನಾವರಣವಾಗಲಿದೆ ಎಂದು ವರದಿಗಳಾಗಿದೆ. ಈ ಹೊಸ ಎಸ್‍‍ಯುವಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಎಸ್‍‍ಯುವಿಗಳಿಗೆ ನೇರ ಪೈಪೋಟಿಯನ್ನು ನೀಡಲಿದೆ. ಸ್ಕೋಡಾ ಇಂಡಿಯಾ ವಿಡಬ್ಲ್ಯೂ ಎಂಕ್ಯೂಬಿ ಎಒ ಇನ್ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿ ಈ ಹೊಸ ಎಸ್‍‍‍ಯುವಿಯನ್ನು ಅಭಿವೃದ್ದಿಪಡಿಸಿದೆ.

2021ರ ಆರಂಭದಲ್ಲಿ ಅನಾವರಣವಾಗಲಿದೆ ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‍ಯುವಿ

ಈ ಕಾಂಪ್ಯಾಕ್ಟ್ ಎಸ್‍‍ಯುವಿಯು ತನ್ನ ಕಂಪನಿಯ ಸರಣಿಯಲ್ಲಿರುವ ಕಾಮಿಕ್ ಎಸ್‍‍ಯುವಿಯ ಮಾದರಿಯಲ್ಲಿದೆ. ಹೊಸ ಸ್ಕೊಡಾ ಕಾಂಪ್ಯಾಕ್ಟ್ ಎಸ್‍‍ಯುವಿಯ ಮುಂಭಾಗ ದೊಡ್ಡ ಗ್ರಿಲ್ ಮತ್ತು ಹೆಚ್ಚು ವಿನ್ಯಾಸಗೊಳಿಸಲಾದ ಬಂಪರ್ ಅನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ ಚಾಲಕನ ಸೀಟ್ ಸ್ವಲ್ಪ ಎತ್ತರವನ್ನು ಹೊಂದಿದೆ. ಈ ಎಸ್‍ಯುವಿಯ ಮುಂಭಾಗವು ಸಿಗ್ನೇಚರ್ ವಿನ್ಯಾಸವನ್ನು ಹೊಂದಿದೆ.

MOST READ: ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕೊಡಿಯಾಕ್ ಎಸ್‍‍‍ಯುವಿ

2021ರ ಆರಂಭದಲ್ಲಿ ಅನಾವರಣವಾಗಲಿದೆ ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‍ಯುವಿ

ಇನ್ನೂ ಮುಂಭಾಗ ಡ್ಯುಯಲ್ ಹೆಡ್‍‍ಲ್ಯಾಂಪ್‍, ಏರ್ ಇನ್‍‍ಟೆಕ್ ಮತ್ತು ಮುಂಭಾಗದ ಬಂಪರ್‍‍ನಲ್ಲಿ ಸ್ಕಫ್ ಪ್ಲೇಟ್‍ಗಳೊಂದಿಗೆ ದೊಡ್ಡ ಗ್ರಿಲ್ ಅನ್ನು ಹೊಂದಿದೆ. ಎಸ್‍‍ಯುವಿಯ ಎರಡು ಬದಿಗಳು ಮತ್ತು ಹಿಂಭಾಗ ಪೊಫೈಲ್ ಸ್ಪೋರ್ಟಿ ಥೀಮ್ ಅನ್ನು ಹೊಂದಿವೆ.

2021ರ ಆರಂಭದಲ್ಲಿ ಅನಾವರಣವಾಗಲಿದೆ ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‍ಯುವಿ

ಈ ಎಸ್‍‍ಯುವಿಯ ಸೈಡ್ ಪ್ರೊಫೈಲ್‍‍ನಲ್ಲಿ ಶಾರ್ಪ್ ಲೈನ್‍‍ಗಳಿವೆ. ಇದರ ಹಿಂಭಾಗದಲ್ಲಿರುವ ಎಲ್ಇಡಿ ಟೇಲ್‍‍ಲೈಟ್‍ಗಳು ಮತ್ತು ರೂಫ್ ಮೌಂಟಡ್ ಸ್ಪಾಯ್ಲರ್ ಎಸ್‍‍ಯುವಿಗೆ ಮತ್ತಷ್ಟು ಸ್ಪೋರ್ಟಿ ಲುಕ್ ಅನ್ನು ನೀಡುತ್ತವೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

2021ರ ಆರಂಭದಲ್ಲಿ ಅನಾವರಣವಾಗಲಿದೆ ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‍ಯುವಿ

ಹೊಸ ಎಸ್‍‍ಯುವಿಯ ಇಂಟಿರಿಯರ್ ಆಕರ್ಷಕವಾಗಿದೆ. ಇನ್ನೂ ಇಂಟಿರಿಯರ್‍‍‍ನಲ್ಲಿ ಮಲ್ಟಿ ಲೇಯರ್ಡ್ ಡ್ಯಾಶ್‍‍‍ಬೋರ್ಡ್ ಮತ್ತು ಅನೇಕ ಬಣ್ಣಗಳನ್ನು ಹೊಂದಿರುವ ಡ್ಯಾಶ್‍ಬೋರ್ಡ್‍‍ಗಳಿವೆ. ಸ್ಕೋಡಾ ಕಾನ್ಸೆಪ್ಟ್ ಇಂಟಿರಿಯರ್‍ ಸ್ಪೋರ್ಟಿ ಥೀಮ್ ಅನ್ನು ಹೊಂದಿದೆ.

2021ರ ಆರಂಭದಲ್ಲಿ ಅನಾವರಣವಾಗಲಿದೆ ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‍ಯುವಿ

ಇಂಟಿರಿಯರ್‍‍ಲ್ಲಿ ಸೆಂಟರ್ ಕನ್ಸೋಲ್, ಫ್ಲಾಟ್ ಬಾಟಮ್ ಸ್ಟೀಯರಿಂಗ್ ವ್ಹೀಲ್ ಮತ್ತು ದೊಡ್ಡ 12 ಇಂಚಿನ ಟಚ್‍‍ಸ್ಕ್ರೀನ್ ಡಿಸ್‍‍ಪ್ಲೇಯನ್ನು ಅಳವಡಿಸಲಾಗಿದೆ. ವರ್ಚುವಲ್ ಕಾಕ್‍‍ಪಿಟ್, ಕಾನ್ಫಿಗರ್ ಮಾಡಬಹುದಾದ ಟಿ‍ಎ‍ಫ್‍‍ಟಿ ಇನ್ಸ್ ಟ್ರೂಮೆಂಟ್ ಪ್ಯಾನೆಲ್ ಅನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

2021ರ ಆರಂಭದಲ್ಲಿ ಅನಾವರಣವಾಗಲಿದೆ ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‍ಯುವಿ

ಹೊಸ ಸ್ಕೋಡಾ ವಿಷನ್ ಇನ್ ಕಾನ್ಸೆಪ್ಟ್ ಕಾಂಪ್ಯಾಕ್ಟ್ ಎಸ್‍ಯುವಿಯು 1.5 ಲೀಟರ್ ಟಿ‍ಎಸ್ಐ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 150 ಬಿ‍‍ಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

2021ರ ಆರಂಭದಲ್ಲಿ ಅನಾವರಣವಾಗಲಿದೆ ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‍ಯುವಿ

ಈ ಎಂಜಿನ್‍‍ನೊಂದಿಗೆ 7 ಸ್ಪೀಡ್ ಡಿ‍ಎಸ್‍‍ಜಿ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಹೊಸ ಸ್ಕೋಡಾ ವಿಷನ್ ಕಾನ್ಸೆಪ್ಟ್ ಎಸ್‍‍ಯುವಿಯು ಕೇವಲ 8.7 ಸೆಕೆಂಡುಗಳಲ್ಲಿ 0-100 ವೇಗವನ್ನು ಕ್ರಮಿಸುತ್ತದೆ.

2021ರ ಆರಂಭದಲ್ಲಿ ಅನಾವರಣವಾಗಲಿದೆ ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‍ಯುವಿ

ಭಾರತದ ಮಾರುಕಟ್ಟೆಯಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ಸ್ಕೋಡಾ ಆಟೋ ಕಂಪನಿಯು ಪಾರುಪತ್ಯ ಮೆರಯಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಸ್ಕೋಡಾ ಮುಂದಿನ ಎರಡು ವರ್ಷದಲ್ಲಿ ಹಲವು ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಿದೆ.

Article Published On: Friday, September 18, 2020, 19:10 [IST]
English summary
Skoda Vision IN Based Compact SUV To Make World Debut In India In 2021. Read In Kannada.
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+