ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಸುಜುಕಿ ಕಾರು ಉತ್ಪಾದನಾ ಘಟಕ

ಮಾರುತಿ ಸುಜುಕಿ ಕಂಪನಿಯ ಮೂಲ ಕಂಪನಿಯಾದ ಜಪಾನ್ ಮೂಲದ ಸುಜುಕಿ ಮೋಟಾರ್ ಕಾರ್ಪೊರೇಷನ್ ಕಂಪನಿಯು ಗುಜರಾತ್‌ನ ಅಹಮದಾಬಾದ್ ಬಳಿ ಕಾರು ಉತ್ಪಾದನಾ ಘಟಕವನ್ನು ಹೊಂದಿದೆ.

ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ ಉತ್ಪಾದನಾ ಘಟಕ

ಈ ಕಾರು ಉತ್ಪಾದನಾ ಘಟಕವು ಸುಜುಕಿ ಕಂಪನಿಯ ಅಂಗಸಂಸ್ಥೆಯಾಗಿದೆ. ಅಂದರೆ, ಮಾರುತಿ ಸುಜುಕಿ ಕಾರುಗಳನ್ನು ಈ ಉತ್ಪಾದನಾ ಘಟಕದಲ್ಲಿ ಗುತ್ತಿಗೆ ಆಧಾರದ ಮೇಲೆ ಉತ್ಪಾದಿಸಲಾಗುತ್ತದೆ. ಈ ಘಟಕದಲ್ಲಿ 2017ರ ಫೆಬ್ರವರಿ ತಿಂಗಳಿನಲ್ಲಿ ಕಾರುಗಳ ಉತ್ಪಾದನೆಯನ್ನು ಆರಂಭಿಸಲಾಯಿತು.

ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ ಉತ್ಪಾದನಾ ಘಟಕ

ಗುಜರಾತ್‌ನ ಈ ಉತ್ಪಾದನಾ ಘಟಕವು ಕಾರು ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ತಲುಪಿದೆ. ಉತ್ಪಾದನೆ ಆರಂಭವಾದ ಮೂರೂವರೆ ವರ್ಷಗಳಲ್ಲಿ ಒಂದು ದಶಲಕ್ಷ ಕಾರುಗಳನ್ನು ಉತ್ಪಾದಿಸುವ ಮೂಲಕ ಈ ಉತ್ಪಾದನಾ ಘಟಕವು ಹೊಸ ದಾಖಲೆಯನ್ನು ಬರೆದಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ ಉತ್ಪಾದನಾ ಘಟಕ

2017ರಿಂದ ಕಾರ್ಯನಿರ್ವಹಿಸುತ್ತಿರುವ ಈ ಉತ್ಪಾದನಾ ಘಟಕದಲ್ಲಿ ಮೊದಲಿಗೆ ಮಾರುತಿ ಸುಜುಕಿ ಬಲೆನೊ ಕಾರನ್ನು ನಿರ್ಮಿಸಲಾಯಿತು. ನಂತರ 2018ರಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಉತ್ಪಾದನೆಯನ್ನು ಆರಂಭಿಸಲಾಯಿತು.

ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ ಉತ್ಪಾದನಾ ಘಟಕ

ಇದಕ್ಕೂ ಮುನ್ನ ಸ್ವಿಫ್ಟ್ ಕಾರುಗಳನ್ನು ಮಾರುತಿ ಸುಜುಕಿ ಕಂಪನಿಯ ಮಾನೇಸರ್ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುತ್ತಿತ್ತು. ಈಗ ಮಾರುತಿ ಸುಜುಕಿ ಬಲೆನೊ ಕಾರು ಈ ಘಟಕದಿಂದ ತಯಾರಾದ ಒಂದು ಮಿಲಿಯನ್ ಕಾರ್ ಆಗಿ ಹೊರಬಂದಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ ಉತ್ಪಾದನಾ ಘಟಕ

ಮಾರ್ಚ್ 2018ರಿಂದ ಈ ಘಟಕದಲ್ಲಿ ತಯಾರಾದ ಕಾರುಗಳನ್ನು ರಫ್ತು ಮಾಡಲಾಯಿತು. 2018-19ರ ಹಣಕಾಸು ವರ್ಷದಲ್ಲಿ ಈ ಉತ್ಪಾದನಾ ಘಟಕದಲ್ಲಿ 4,10,000 ಯುನಿಟ್ ಕಾರುಗಳನ್ನು ಉತ್ಪಾದಿಸಲಾಗಿದೆ. ಈ ಘಟಕದಲ್ಲಿ ಮಾರುತಿ ಸುಜುಕಿ ಬಲೆನೊ ಹಾಗೂ ಸ್ವಿಫ್ಟ್ ಕಾರುಗಳನ್ನು ತಯಾರಿಸಲಾಗುತ್ತದೆ.

ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ ಉತ್ಪಾದನಾ ಘಟಕ

ಮಾರುತಿ ಸುಜುಕಿ ಕಂಪನಿಯ ಉತ್ಪಾದನಾ ಘಟಕದಲ್ಲಿ ದೇಶಿಯ ಮಾರುಕಟ್ಟೆಗಾಗಿ ಹಾಗೂ ವಿದೇಶಿ ಮಾರುಕಟ್ಟೆಗಾಗಿ ಕಾರುಗಳನ್ನು ತಯಾರಿಸಲಾಗುತ್ತದೆ. ಈ ಘಟಕವು ಹರಿಯಾಣ ರಾಜ್ಯದ ಗುರಗಾಂವ್ ಹಾಗೂ ಮಾನೇಸರ್ ಘಟಕಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ ಉತ್ಪಾದನಾ ಘಟಕ

ಈ ಉತ್ಪಾದನಾ ಘಟಕದಲ್ಲಿ ಸುಮಾರು 1,800 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕರೋನಾದಿಂದ ಉಂಟಾದ ಸಮಸ್ಯೆಗಳ ಹೊರತಾಗಿಯೂ, ಸರಿಯಾದ ಸುರಕ್ಷತಾ ನಿಯಮಗಳನ್ನು ಅನುಸರಿಸಿ ಕಾರು ಉತ್ಪಾದನಾ ಪ್ರಕ್ರಿಯೆಯನ್ನು ಮುಂದುವರೆಸಲಾಗಿದೆ.

Most Read Articles

Kannada
English summary
Suzuki Gujarat car manufacturing plant achieves new milestone in production. Read in Kannada.
Story first published: Thursday, October 22, 2020, 16:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X