ಭಾರತದಲ್ಲಿ ಜಿಮ್ನಿ ಎಸ್‍ಯುವಿಯ ಜೋಡಣೆಯನ್ನು ಪ್ರಾರಂಭಿಸಿದ ಮಾರುತಿ ಸುಜುಕಿ
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡ ಸುಜುಕಿ ಜಿಮ್ನಿ ಮಿನಿ-ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಎಸ್‍ಯುವಿಗಳಲ್ಲಿ ಮಾರುತಿ ಸುಜುಕಿ ಜಿಮ್ನಿ ಒಂದಾಗಿದೆ.

ಸುಜುಕಿ ಸಂಸ್ಥೆಯು ಭಾರತೀಯ ಮಾರುಕಟ್ಟೆಯನ್ನು ಜಿಮ್ನಿ ಎಸ್‍ಯುವಿಯ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಯೋಜಿಸಿದೆ. ಸುಜುಕಿ ಕಂಪನಿಯು ಆರಂಭದಲ್ಲಿ ಭಾರತಕ್ಕೆ 3-ಡೋರಿನ ಜಿಮ್ನಿ ಯುನಿಟ್ ಗಳನ್ನು ಆಮದು ಮಾಡಿಕೊಳ್ಳಬಹುದು ಮತ್ತು ಮಾರುತಿ ಸುಜುಕಿಯ ಗುರುಗ್ರಾಮ್ ಆಧಾರಿತ ಸ್ಥಾವರದಲ್ಲಿ ಜೋಡಿಸಬಹುದು. ನಂತರ 2022-23ರ ವೇಳೆಗೆ ಸುಜುಕಿ ಮೋಟಾರ್ ಭಾರತದಲ್ಲಿ 3 ಮತ್ತು 5-ಡೋರಿನ ಜಿಮ್ನಿ ತಯಾರಿಸಲು ಯೋಜಿಸಿದೆ.

ಈ ಎರಡು ಮಾದರಿಗಳನ್ನು ಸ್ಥಳೀಯವಾಗಿ ಭಾರತದಲ್ಲಿ ತಯಾರಿಸಲಾಗುತ್ತದೆ. ಗುಜಗಾಂವ್‌ನಲ್ಲಿರುವ ಕಂಪನಿಯ ಘಟಕದಿಂದ ಎಸ್‍ಯುವಿಯನ್ನು ಒಟ್ಟುಗೂಡಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಟೀಂ ಬಿಹೆಚ್‍ಪಿ ವರದಿಯ ಪ್ರಕಾರ, ಸುಜುಕಿ ಜಿಮ್ನಿ ಎಸ್‍ಯುವಿಯ ಒಂದು ಯುನಿಟ್ ಅನ್ನು ಈಗಗಾಲೇ ಜೋಡಿಸಲಾಗಿದೆ. ಭಾರತದ ಗುರಗಾಂವ್‌ನಲ್ಲಿರುವ ಕಂಪನಿಯ ಸ್ಥಾವರದಲ್ಲಿ ಜಿಮ್ನಿಯ 4000 - 5000 ಯುನಿಟ್‌ಗಳನ್ನು ಉತ್ಪಾದಿಸುವ ಕೆಲಸದಲ್ಲಿ ಕಂಪನಿ ಕಾರ್ಯನಿರ್ವಹಿಸುತ್ತಿದೆ.

ಭಾರತದ ಗುರಗಾಂವ್‌ನಲ್ಲಿರುವ ಕಂಪನಿಯ ಸ್ಥಾವರದಿಂದ ಜಿಮ್ನಿ ಎಸ್‍ಯುವಿಯನ್ನು ಜಪಾನ್ ಸೇರಿದಂತೆ ವಿವಿಧ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುವುದು. ಸೀಮಿತ ಸಂಖ್ಯೆಯ 3-ಡೋರಿನ ಜಿಮ್ನಿ ಎಸ್‍ಯುವಿಯನ್ನು ಜಪಾನ್‌ನಲ್ಲಿ ಸಹ ತಯಾರಿಸಲಾಗುತ್ತದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಭಾರತವು 5-ಡೋರಿನ ಆವೃತ್ತಿಯ ಏಕೈಕ ಉತ್ಪಾದನಾ ಕೇಂದ್ರವಾಗಲಿದೆ. ಭಾರತದಲ್ಲಿ 5-ಡೋರಿನ ಜಿಮ್ನಿ ಎಸ್‍ಯುವಿಯನ್ನು ಮುಂದಿನ ವರ್ಷದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಈ ಮಿನಿ ಎಸ್‍ಯುವಿಯನ್ನು 2018ರಲ್ಲಿ ಜಾಗತಿಕವಾಗಿ ಅನಾವರಣಗೊಂಡಿತು. ಜಿಮ್ನಿ ಮಿನಿ ಎಸ್‍ಯುವಿಯು ಜಾಗತಿಕವಾಗಿ ಅನಾವರಣಗೊಂಡು 1.5 ವರ್ಷಗಳ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಮಿನಿ-ಎಸ್‌ಯುವಿ 2019 ರ 'ವರ್ಲ್ಡ್ ಅರ್ಬನ್ ಕಾರ್ ಅಫ್ ದಿ ಇಯರ್' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಈ ಜಿಮ್ನಿ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಕಂಪನಿ ನಿರ್ಧರಿಸಿರಲಿಲ್ಲ. ಆದರೆ ಆಟೋ ಎಕ್ಸ್ ಪೋದಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆನ್ನು ಲಭಿಸಿರುವುದರಿಂದ ಭಾರತದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದೆ. ಹೊಸ ಜಿಮ್ನಿ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ.

ಈ ಮಿನಿ ಎಸ್‍ಯುವಿಯಲ್ಲಿ 3 ಲಿಂಕ್ ಆಕ್ಸಲ್ ಸಸ್ಪೆಂಷನ್ ಅನ್ನು ಹೊಂದಿದೆ. ಇದು ಕಠಿಣ ಭೂಪ್ರದೇಶಗಳಲ್ಲಿ ಸುಗಮವಾಗಿ ಸಾಗಲು ನೆರವಾಗುತ್ತದೆ. ಈ ಮಿನಿ ಎಸ್‍ಯುವಿಯಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.
MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಅಥವಾ 4 ಸ್ಪೀಡ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಮಿನಿ ಎಸ್‍ಯುವಿಯನ್ನು ಡೀಸೆಲ್ ಅಥವಾ ಹೈಬ್ರಿಡ್ ಆಯ್ಕೆಗಳಲ್ಲಿ ಬಿಡುಗಡೆಗೊಳಿಸುವುದಿಲ್ಲ. ಭಾರತದಲ್ಲಿ ಬಿಡುಗಡೆಯಾದರೆ ಈ ಜಿಮ್ನಿ ಎಸ್‍ಯುವಿ 33 ವರ್ಷಗಳ ಕಾಲ ದೇಶದಲ್ಲಿ ಮಾರಾಟವಾಗಿದ್ದ ಜನಪ್ರಿಯ ಜಿಪ್ಸಿ ಎಸ್‍ಯುವಿಯ ಉತ್ತರಾಧಿಕಾರಿಯಾಗಲಿದೆ.

ಸುಜುಕಿ ಕಂಪನಿಯು 5-ಡೋರಿನ ಜಿಮ್ನಿ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಜನಪ್ರಿಯ ಸುಜುಕಿ ಜಿಮ್ನಿ ಭಾರತದಲ್ಲಿ ಬಿಡುಗಡೆಯಾದ ಬಳಿಕ ಹೊಸ ಮಹೀಂದ್ರಾ ಥಾರ್ ಎಸ್‍ಯುವಿಗೆ ನೇರವಾಗಿ ಪೈಪೋಟಿ ನೀಡುತ್ತದೆ.


Click it and Unblock the Notifications