50ರ ಸಂಭ್ರಮದಲ್ಲಿ ಜನಪ್ರಿಯ ಸುಜುಕಿ ಜಿಮ್ನಿ

ಜನಪ್ರಿಯ ಮಿನಿ-ಎಸ್‍ಯುವಿ ಸುಜುಕಿ ಜಿಮ್ನಿ 1970ರ ಏಪ್ರಿಲ್ ತಿಂಗಳಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ಈ ಐಕಾನಿಕ್ ಆಫ್-ರೋಡ್ ಸ್ಪೇಷಲಿಸ್ಟ್ 50 ವರ್ಷವನ್ನು ಪೂರೈಸಿದೆ. ಇಂದಿಗೂ ಈ ಮಿನಿ ಎಸ್‍ಯುವಿಯ ಜನಪ್ರಿಯತೆ ಕಡಿಮೆಯಾಗಿಲ್ಲ.

50ರ ಸಂಭ್ರಮದಲ್ಲಿ ಜನಪ್ರಿಯ ಸುಜುಕಿ ಜಿಮ್ನಿ

ಈ ಎಸ್‍ಯುವಿಯ ವಿಶೇಷವೆಂದರೆ 50 ವರ್ಷವನ್ನು ಪೂರೈಸಿದರು ಮೂಲ ಮಾದರಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಪ್ರಸ್ತುತ ನಾಲ್ಕನೇ ತಲೆಮಾರಿನ ಸುಜುಕಿ ಜಿಮ್ನಿ ಲ್ಯಾಡರ್ ಫ್ರೇಮ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಹೊಸ ಸುಜುಕಿ ಜಿಮ್ನಿ ಎಸ್‍ಯುವಿಯನ್ನು ಸಸ್ಪೆಂಷನ್ ಸಿಸ್ಟಂ ಅತ್ಯಾಧುನಿಕವಾಗಿದೆ. ಈ ಎಸ್‍ಯುವಿಯಲ್ಲಿ ಫೋರ್ ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಹೊಂದಿದೆ. ಮೊದಲ ತಲೆಮಾರಿನ ಜಿಮ್ನಿ ಎಸ್‍ಯುವಿಯು ಮೊದಲ ತಲೆಮಾರಿನ ಲ್ಯಾಂಡ್ ಕ್ರೂಸರ್ ಎಸ್‍ಯುವಿಯಂತೆ ಸ್ವಲ್ಪ ಕಾಣುತ್ತದೆ.

50ರ ಸಂಭ್ರಮದಲ್ಲಿ ಜನಪ್ರಿಯ ಸುಜುಕಿ ಜಿಮ್ನಿ

ಮೊದಲ ತಲೆಮಾರಿನ ಜಿಮ್ನಿ ಮಿನಿ ಎಸ್‍ಯುವಿಯು ಕೆ-ಸೀರಿಸ್ 1.5-ಲೀಟರ್ ನಾಲ್ಕು-ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಮೂರನೇ ತಲೆಮಾರಿನ ಮಾದರಿಯಲ್ಲಿ ಕಾಯಿಲ್-ಸ್ಪ್ರಿಂಗ್ ಯುನಿಟ್ ಅನ್ನು ಬದಲಾಯಿಸಲಾಯಿತು. ಈ ಎಸ್‍ಯುವಿಯಲ್ಲಿ ಲಾಕಿಂಗ್ ಹಬ್ ಎಲೆಕ್ಟ್ರಾನಿಕ್ ಫೋರ್ ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಕೂಡ ಬದಲಾಯಿಸಲಾಗಿದೆ.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

50ರ ಸಂಭ್ರಮದಲ್ಲಿ ಜನಪ್ರಿಯ ಸುಜುಕಿ ಜಿಮ್ನಿ

ಭಾರತದಲ್ಲಿ 1980ರಲ್ಲಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಮಾರುತಿ ಜಿಪ್ಸಿ ರೂಪಾಂತರದಲ್ಲಿ ಎರಡನೇ ಜನರೇಷನ್ ಮಾದರಿಯನ್ನು ಬಿಡುಗಡೆಗೊಳಿಸಿದರು. ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಮಾರುತಿ ಸುಜುಕಿ ಜಿಪ್ಸಿ ಯಶ್ವಸಿಯಾಗಿದೆ. ಬಿಎಸ್-6 ಮಾಲಿನ್ಯ ಜಾರಿಯಾಗುವುದರಿಂದ ಈ ಜನಪ್ರಿಯ ಎಸ್‍ಯುವಿಯನ್ನು ಸ್ಥಗಿತಗೊಳಿಸಲಾಗಿತ್ತು.

50ರ ಸಂಭ್ರಮದಲ್ಲಿ ಜನಪ್ರಿಯ ಸುಜುಕಿ ಜಿಮ್ನಿ

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಜಿಮ್ನಿ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.ಈ ಜಿಮ್ನಿ ಎಸ್‍‍ಯುವಿ 33 ವರ್ಷಗಳ ಕಾಲ ದೇಶದಲ್ಲಿ ಮಾರಾಟವಾಗಿದ್ದ ಜನಪ್ರಿಯ ಜಿಪ್ಸಿ ಎಸ್‍‍ಯುವಿಯ ಉತ್ತರಾಧಿಕಾರಿಯಾಗಲಿದೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

50ರ ಸಂಭ್ರಮದಲ್ಲಿ ಜನಪ್ರಿಯ ಸುಜುಕಿ ಜಿಮ್ನಿ

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಎಸ್‍‍ಯುವಿಗಳಲ್ಲಿ ಮಾರುತಿ ಸುಜುಕಿ ಜಿಮ್ನಿ ಒಂದಾಗಿದೆ. ಅಂತರರಾಷ್ಟೀಯ ಮಾರುಕಟ್ಟೆಯಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡ ಮಾರುತಿ ಸುಜುಕಿ ಸಂಸ್ಥೆಯ ಜಿಮ್ನಿ ಮಿನಿ-ಎಸ್‌ಯುವಿಯನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ.

50ರ ಸಂಭ್ರಮದಲ್ಲಿ ಜನಪ್ರಿಯ ಸುಜುಕಿ ಜಿಮ್ನಿ

ಈ ಹೊಸ ಜಿಮ್ನಿ ಮಿನಿ ಎಸ್‍ಯುವಿಯಲ್ಲಿ 3 ಲಿಂಕ್ ಆಕ್ಸಲ್ ಸಸ್ಪೆಂಷನ್ ಅನ್ನು ಹೊಂದಿದೆ. ಇದು ಕಠಿಣ ಭೂಪ್ರದೇಶಗಳಲ್ಲಿ ಸುಗಮವಾಗಿ ಸಾಗಲು ನೆರವಾಗುತ್ತದೆ. ಈ ಮಿನಿ ಎಸ್‍ಯುವಿಯಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

50ರ ಸಂಭ್ರಮದಲ್ಲಿ ಜನಪ್ರಿಯ ಸುಜುಕಿ ಜಿಮ್ನಿ

ಈ ಮಿನಿ ಎಸ್‍ಯುವಿಯನ್ನು 2018ರಲ್ಲಿ ಜಾಗತಿಕವಾಗಿ ಅನಾವರಣಗೊಂಡಿತು. ಜಿಮ್ನಿ ಮಿನಿ ಎಸ್‍ಯುವಿಯು ಜಾಗತಿಕವಾಗಿ ಅನಾವರಣಗೊಂಡು 1.5 ವರ್ಷಗಳ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಮಿನಿ-ಎಸ್‌ಯುವಿ 2019 ರ 'ವರ್ಲ್ಡ್ ಅರ್ಬನ್ ಕಾರ್ ಅಫ್ ದಿ ಇಯರ್' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

50ರ ಸಂಭ್ರಮದಲ್ಲಿ ಜನಪ್ರಿಯ ಸುಜುಕಿ ಜಿಮ್ನಿ

ಈ ಜಿಮ್ನಿ ಎಸ್‍ಯುವಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿ ಬೆಲೆ ನಿಗದಿಪಡಿಸಬಹುದು ಮತ್ತು ಇದು ಎಸ್‍ಯುವಿ ವಿಭಾಗದಲ್ಲಿ ಅತ್ಯಂತ ಆಕರ್ಷಕ ಕೊಡುಗೆಯಾಗಿ ಹೊರಹೊಮ್ಮಲಿದೆ.

Article Published On: Tuesday, April 21, 2020, 15:37 [IST]
English summary
India-Bound Suzuki Jimny SUV Turns 50 Years Old. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+