ಶೀಘ್ರದಲ್ಲೇ ಪ್ರಾರಂಭವಾಗಲಿದೆ ಮಾರುತಿ ಜಿಮ್ನಿ ಎಸ್‍ಯುವಿಯ ಉತ್ಪಾದನೆ

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಎಸ್‍‍ಯುವಿಗಳಲ್ಲಿ ಮಾರುತಿ ಸುಜುಕಿ ಜಿಮ್ನಿ ಒಂದಾಗಿದೆ. ಅಂತರರಾಷ್ಟೀಯ ಮಾರುಕಟ್ಟೆಯಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡ ಮಾರುತಿ ಸುಜುಕಿ ಸಂಸ್ಥೆಯ ಜಿಮ್ನಿ ಮಿನಿ-ಎಸ್‌ಯುವಿಯನ್ನು ಇತ್ತೀಚೆಗೆ ನಡೆದ 2020ರ ಆಟೋ ಎಕ್ಸ್​ಪೋದಲ್ಲಿ ಅನಾವಣಗೊಳಿಸಿದ್ದರು.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಮಾರುತಿ ಜಿಮ್ನಿ ಎಸ್‍ಯುವಿಯ ಉತ್ಪಾದನೆ

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಂಪನಿಯ ಜಿಮ್ನಿ ಮಿನಿ ಎಸ್‍‍‍ಯುವಿಯು ಬಿಡುಗಡೆಗೊಳಿಸುವ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮಾರುತಿ ಸುಜುಕಿ ಕಂಪನಿಯು ಗುರಗಾಂವ್ ಮೂಲದ ಘಟಕದಲ್ಲಿ ಜಿಮ್ನಿ ಎಸ್‍‍ಯುವಿಯ ಉತ್ಪಾದನೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ. ಹರ್ಟೆಕ್ಟ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ಬ್ರೆಝಾ, ಎಸ್-ಕ್ರಾಸ್, ಇಕೋ ಮತ್ತು ಕ್ಯಾರಿಯಂತಹ ಇತರ ಎಸ್‍‍ಯುವಿಗಳ ಜೊತೆಗೆ ಜಿಮ್ನಿ ಎಸ್‍‍ಯುವಿಯನ್ನು ಕೂಡ ತಯಾರಿಸಲಾಗುವುದು.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಮಾರುತಿ ಜಿಮ್ನಿ ಎಸ್‍ಯುವಿಯ ಉತ್ಪಾದನೆ

ಮಾರುತಿಯ ಗುರಗಾಂವ್ ಮೂಲದ ಘಟಕದಿಂದ ಜಿಮ್ನಿ ಎಸ್‍ಯುವಿಯ ರಫ್ತನ್ನು ಮೇ ಅಥವಾ ಜೂನ್ ಆರಂಭದಲ್ಲಿ ಪ್ರಾರಂಭಿಸಬಹುದು. ಭಾರತೀಯ ರಸ್ತೆಗಳಿಗೆ ಅನುಗುಣವಾಗಿ ಮತ್ತು ಭಾರತೀಯ ಗ್ರಾಹಕರನ್ನು ಸೆಳೆಯುವ ರೀತಿಯಲ್ಲಿ ಈ ಜಿಮ್ನಿ ಎಸ್‍ಯುವಿಯನ್ನು ಅಭಿವೃದ್ದಿಪಡಿಸಲಾಗುತ್ತದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಮಾರುತಿ ಜಿಮ್ನಿ ಎಸ್‍ಯುವಿಯ ಉತ್ಪಾದನೆ

ಈ ಮಿನಿ ಎಸ್‍ಯುವಿಯನ್ನು 2018ರಲ್ಲಿ ಜಾಗತಿಕವಾಗಿ ಅನಾವರಣಗೊಂಡಿತು. ಜಿಮ್ನಿ ಮಿನಿ ಎಸ್‍ಯುವಿಯು ಜಾಗತಿಕವಾಗಿ ಅನಾವರಣಗೊಂಡು 1.5 ವರ್ಷಗಳ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಮಿನಿ-ಎಸ್‌ಯುವಿ 2019 ರ 'ವರ್ಲ್ಡ್ ಅರ್ಬನ್ ಕಾರ್ ಅಫ್ ದಿ ಇಯರ್' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಮಾರುತಿ ಜಿಮ್ನಿ ಎಸ್‍ಯುವಿಯ ಉತ್ಪಾದನೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕರ ಮೆಚ್ಚುಗೆ ಪಡೆಯುವಲ್ಲಿ ಮಾರುತಿ ಸುಜುಕಿ ಜಿಮ್ನಿ ಯಶಸ್ವಿಯಾಗಿದೆ. ಅಲ್ಲದೇ 2020ರ ಆಟೋ ಎಕ್ಸ್ ಪೋದಲ್ಲಿ ಹೆಚ್ಚಿನ ಜನರ ಗಮನಸೆಳೆಯುವಲ್ಲಿ ಮಾರುತಿ ಸುಜುಕಿ ಜಿಮ್ನಿ ಯಶ್ವಸಿಯಾಗಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಮಾರುತಿ ಜಿಮ್ನಿ ಎಸ್‍ಯುವಿಯ ಉತ್ಪಾದನೆ

ಈ ಜಿಮ್ನಿ ಎಸ್‍‍ಯುವಿಯನ್ನು ನವೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ ಕಂಪನಿಯು ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ ಎಂದು ವರದಿಗಳಾಗಿದೆ. ಹೊಸ ಜಿಮ್ನಿ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ. ಜಿಮ್ಮಿ ಅರೆಕಾಲಿಕ 4ಡಬ್ಲೂಡಿ ಸೆಟಪ್ ಅನ್ನು ಹೊಂದಿದೆ. ಇದನ್ನು 2ಹೆಚ್/4ಡಬ್ಲ್ಯೂ ಹೈ/4ಡಬ್ಲ ಲೋ ಹೀಗೆ ಬದಲಾಯಿಸಬಹುದುದಾಗಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಮಾರುತಿ ಜಿಮ್ನಿ ಎಸ್‍ಯುವಿಯ ಉತ್ಪಾದನೆ

ಈ ಮಿನಿ ಎಸ್‍ಯುವಿಯಲ್ಲಿ 3 ಲಿಂಕ್ ಆಕ್ಸಲ್ ಸಸ್ಪೆಂಷನ್ ಅನ್ನು ಹೊಂದಿದೆ. ಇದು ಕಠಿಣ ಭೂಪ್ರದೇಶಗಳಲ್ಲಿ ಸುಗಮವಾಗಿ ಸಾಗಲು ನೆರವಾಗುತ್ತದೆ. ಈ ಮಿನಿ ಎಸ್‍ಯುವಿಯಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಮಾರುತಿ ಜಿಮ್ನಿ ಎಸ್‍ಯುವಿಯ ಉತ್ಪಾದನೆ

ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಅಥವಾ 4 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಮಿನಿ ಎಸ್‍‍ಯುವಿಯನ್ನು ಡೀಸೆಲ್ ಅಥವಾ ಹೈಬ್ರಿಡ್ ಆಯ್ಕೆಗಳಲ್ಲಿ ಬಿಡುಗಡೆಗೊಳಿಸುವುದಿಲ್ಲ. ಈ ಜಿಮ್ನಿ ಎಸ್‍‍ಯುವಿ 33 ವರ್ಷಗಳ ಕಾಲ ದೇಶದಲ್ಲಿ ಮಾರಾಟವಾಗಿದ್ದ ಜನಪ್ರಿಯ ಜಿಪ್ಸಿ ಎಸ್‍‍ಯುವಿಯ ಉತ್ತರಾಧಿಕಾರಿಯಾಗಲಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಮಾರುತಿ ಜಿಮ್ನಿ ಎಸ್‍ಯುವಿಯ ಉತ್ಪಾದನೆ

ಭಾರತದಲ್ಲಿ ತಯಾರಾಗುತ್ತಿರುವ ಮಾರುತಿ ಸುಜುಕಿ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿ ಬೆಲೆ ನಿಗದಿಪಡಿಸಬಹುದು ಮತ್ತು ಇದು ಎಸ್‍ಯುವಿ ವಿಭಾಗದಲ್ಲಿ ಅತ್ಯಂತ ಆಕರ್ಷಕ ಕೊಡುಗೆಯಾಗಿ ಹೊರಹೊಮ್ಮಲಿದೆ.

Article Published On: Thursday, February 27, 2020, 16:28 [IST]
English summary
Suzuki Jimny Production To Begins In Maruti’s Gurgaon Plant Very Soon. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+