ಆತ್ಮ ನಿರ್ಭರ ಭಾರತ: ಐಕಾನಿಕ್ ಸುಜುಕಿ ಜಿಮ್ನಿ ಎಸ್‍ಯುವಿ ಉತ್ಪಾದನಾ ಕೇಂದ್ರವಾಗಲಿದೆ ಭಾರತ

ಅಟೋಮೊಬೈಲ್ ಕ್ಷೇತ್ರದಲ್ಲಿಯು ಕೂಡ ಆತ್ಮ ನಿರ್ಭರ ಭಾರತ ಆಂದೋಲನಕ್ಕೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಸುಜುಕಿ ಸಂಸ್ಥೆಯು ಭಾರತೀಯ ಮಾರುಕಟ್ಟೆಯನ್ನು ಜಿಮ್ನಿ ಎಸ್‍ಯುವಿಯ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಯೋಜಿಸಿದೆ.

ಆತ್ಮ ನಿರ್ಭರ ಭಾರತ: ಐಕಾನಿಕ್ ಸುಜುಕಿ ಜಿಮ್ನಿ ಎಸ್‍ಯುವಿ ಉತ್ಪಾದನಾ ಕೇಂದ್ರವಾಗಲಿದೆ ಭಾರತ

ಜಪಾನಿನ ಕಾರು ತಯಾರಕ ಕಂಪನಿಯಾದ ಸುಜುಕಿ ತನ್ನ ತಾಯಿನಾಡಿನಲ್ಲಿ ವಾರ್ಷಿಕವಾಗಿ ಸುಮಾರು 50,000 ಯುನಿಟ್ ಆಫ್-ರೋಡರ್ ಅನ್ನು ಉತ್ಪಾದಿಸುತ್ತದೆ. ಇಟಿ ನೌ ವರದಿಯ ಪ್ರಕಾರ, ಐದು-ಡೋರಿನ ಸುಜುಕಿ ಜಿಮ್ನಿ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಗೆ ಪ್ರತ್ಯೇಕವಾಗಿ ಬಿಡುಗಡೆಗೊಳಿಸಲು ಸುಜುಕಿ ಕಂಪನಿಯು ಚಿಂತಿಸಿದೆ.

ಆತ್ಮ ನಿರ್ಭರ ಭಾರತ: ಐಕಾನಿಕ್ ಸುಜುಕಿ ಜಿಮ್ನಿ ಎಸ್‍ಯುವಿ ಉತ್ಪಾದನಾ ಕೇಂದ್ರವಾಗಲಿದೆ ಭಾರತ

ಸುಜುಕಿ ಕಂಪನಿಯು ಆರಂಭದಲ್ಲಿ ಭಾರತಕ್ಕೆ 3-ಡೋರಿನ ಜಿಮ್ನಿ ಯುನಿಟ್ ಗಳನ್ನು ಆಮದು ಮಾಡಿಕೊಳ್ಳಬಹುದು ಮತ್ತು ಮಾರುತಿ ಸುಜುಕಿಯ ಗುರುಗ್ರಾಮ್ ಆಧಾರಿತ ಸ್ಥಾವರದಲ್ಲಿ ಜೋಡಿಸಬಹುದು. ನಂತರ 2022-23ರ ವೇಳೆಗೆ ಸುಜುಕಿ ಮೋಟಾರ್ ಭಾರತದಲ್ಲಿ 3 ಮತ್ತು 5-ಡೋರಿನ ಜಿಮ್ನಿ ತಯಾರಿಸಲು ಯೋಜಿಸಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಆತ್ಮ ನಿರ್ಭರ ಭಾರತ: ಐಕಾನಿಕ್ ಸುಜುಕಿ ಜಿಮ್ನಿ ಎಸ್‍ಯುವಿ ಉತ್ಪಾದನಾ ಕೇಂದ್ರವಾಗಲಿದೆ ಭಾರತ

ಈ ಎರಡು ಮಾದರಿಗಳನ್ನು ಸ್ಥಳೀಯವಾಗಿ ಭಾರತದಲ್ಲಿ ತಯಾರಿಸಲಾಗುತ್ತದೆ. ಸುಜುಕಿ ಕಂಪನಿಯು 6 ತಿಂಗಳಿನಿಂದ ಸ್ಥಳೀಯ ಮಾರಾಟಗಾರರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಆತ್ಮ ನಿರ್ಭರ ಭಾರತ: ಐಕಾನಿಕ್ ಸುಜುಕಿ ಜಿಮ್ನಿ ಎಸ್‍ಯುವಿ ಉತ್ಪಾದನಾ ಕೇಂದ್ರವಾಗಲಿದೆ ಭಾರತ

ಮಾರುತಿ ಸುಜುಕಿ ಉತ್ಪಾದನೆಯಲ್ಲಿ ತನ್ನ ರಫ್ತು ಪಾಲನ್ನು 7% ರಿಂದ 20% ವರೆಗೆ ಹೆಚ್ಚಿಸಲು ಸಾಧ್ಯವಾಗುತ್ತದೆ. ಪ್ರಸ್ತುತ ಸುಜುಕಿ ಜಿಮ್ನಿ ಅನ್ನು ಜಪಾನ್‌ನ ಕೊಸೈ ಆಧಾರಿತ ಘಟಕದಲ್ಲಿ ಉತ್ಪಾದಿಸಲಾಗುತ್ತಿದೆ. ಆದರೆ ಮುಂದಿನ ವರ್ಷಗಳಲ್ಲಿ ಭಾರತದಲ್ಲಿ ಸ್ಥಳೀಯವಾಗಿ ಸುಜುಕಿ ಜಿಮ್ನಿ ಎಸ್‍ಯುವಿಯನ್ನು ಉತ್ಪಾದಿಸಲಾಗುತ್ತದೆ. ಇದನ್ನು ಇತರ ದೇಶಗಳಿಗೆ ರಫ್ತ್ರು ಮಾಡಲಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಆತ್ಮ ನಿರ್ಭರ ಭಾರತ: ಐಕಾನಿಕ್ ಸುಜುಕಿ ಜಿಮ್ನಿ ಎಸ್‍ಯುವಿ ಉತ್ಪಾದನಾ ಕೇಂದ್ರವಾಗಲಿದೆ ಭಾರತ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡ ಸುಜುಕಿ ಜಿಮ್ನಿ ಮಿನಿ-ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಎಸ್‍‍ಯುವಿಗಳಲ್ಲಿ ಮಾರುತಿ ಸುಜುಕಿ ಜಿಮ್ನಿ ಒಂದಾಗಿದೆ.

ಆತ್ಮ ನಿರ್ಭರ ಭಾರತ: ಐಕಾನಿಕ್ ಸುಜುಕಿ ಜಿಮ್ನಿ ಎಸ್‍ಯುವಿ ಉತ್ಪಾದನಾ ಕೇಂದ್ರವಾಗಲಿದೆ ಭಾರತ

ಈ ಮಿನಿ ಎಸ್‍ಯುವಿಯನ್ನು 2018ರಲ್ಲಿ ಜಾಗತಿಕವಾಗಿ ಅನಾವರಣಗೊಂಡಿತು. ಜಿಮ್ನಿ ಮಿನಿ ಎಸ್‍ಯುವಿಯು ಜಾಗತಿಕವಾಗಿ ಅನಾವರಣಗೊಂಡು 1.5 ವರ್ಷಗಳ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಮಿನಿ-ಎಸ್‌ಯುವಿ 2019 ರ 'ವರ್ಲ್ಡ್ ಅರ್ಬನ್ ಕಾರ್ ಅಫ್ ದಿ ಇಯರ್' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಆತ್ಮ ನಿರ್ಭರ ಭಾರತ: ಐಕಾನಿಕ್ ಸುಜುಕಿ ಜಿಮ್ನಿ ಎಸ್‍ಯುವಿ ಉತ್ಪಾದನಾ ಕೇಂದ್ರವಾಗಲಿದೆ ಭಾರತ

ಈ ಜಿಮ್ನಿ ಎಸ್‍‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಕಂಪನಿ ನಿರ್ಧರಿಸಿರಲಿಲ್ಲ. ಆದರೆ ಆಟೋ ಎಕ್ಸ್ ಪೋದಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆನ್ನು ಲಭಿಸಿರುವುದರಿಂದ ಭಾರತದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದೆ. ಹೊಸ ಜಿಮ್ನಿ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ.

ಆತ್ಮ ನಿರ್ಭರ ಭಾರತ: ಐಕಾನಿಕ್ ಸುಜುಕಿ ಜಿಮ್ನಿ ಎಸ್‍ಯುವಿ ಉತ್ಪಾದನಾ ಕೇಂದ್ರವಾಗಲಿದೆ ಭಾರತ

ಈ ಮಿನಿ ಎಸ್‍ಯುವಿಯಲ್ಲಿ 3 ಲಿಂಕ್ ಆಕ್ಸಲ್ ಸಸ್ಪೆಂಷನ್ ಅನ್ನು ಹೊಂದಿದೆ. ಇದು ಕಠಿಣ ಭೂಪ್ರದೇಶಗಳಲ್ಲಿ ಸುಗಮವಾಗಿ ಸಾಗಲು ನೆರವಾಗುತ್ತದೆ. ಈ ಮಿನಿ ಎಸ್‍ಯುವಿಯಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಆತ್ಮ ನಿರ್ಭರ ಭಾರತ: ಐಕಾನಿಕ್ ಸುಜುಕಿ ಜಿಮ್ನಿ ಎಸ್‍ಯುವಿ ಉತ್ಪಾದನಾ ಕೇಂದ್ರವಾಗಲಿದೆ ಭಾರತ

ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಅಥವಾ 4 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಮಿನಿ ಎಸ್‍‍ಯುವಿಯನ್ನು ಡೀಸೆಲ್ ಅಥವಾ ಹೈಬ್ರಿಡ್ ಆಯ್ಕೆಗಳಲ್ಲಿ ಬಿಡುಗಡೆಗೊಳಿಸುವುದಿಲ್ಲ. ಭಾರತದಲ್ಲಿ ಬಿಡುಗಡೆಯಾದರೆ ಈ ಜಿಮ್ನಿ ಎಸ್‍‍ಯುವಿ 33 ವರ್ಷಗಳ ಕಾಲ ದೇಶದಲ್ಲಿ ಮಾರಾಟವಾಗಿದ್ದ ಜನಪ್ರಿಯ ಜಿಪ್ಸಿ ಎಸ್‍‍ಯುವಿಯ ಉತ್ತರಾಧಿಕಾರಿಯಾಗಲಿದೆ.

ಆತ್ಮ ನಿರ್ಭರ ಭಾರತ: ಐಕಾನಿಕ್ ಸುಜುಕಿ ಜಿಮ್ನಿ ಎಸ್‍ಯುವಿ ಉತ್ಪಾದನಾ ಕೇಂದ್ರವಾಗಲಿದೆ ಭಾರತ

ಸುಜುಕಿ ಕಂಪನಿಯು 5-ಡೋರಿನ ಜಿಮ್ನಿ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಜನಪ್ರಿಯ ಸುಜುಕಿ ಜಿಮ್ನಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೊಸ ಮಹೀಂದ್ರಾ ಥಾರ್ ಎಸ್‍ಯುವಿಗೆ ನೇರವಾಗಿ ಪೈಪೋಟಿ ನೀಡುತ್ತದೆ.

Most Read Articles

Kannada
English summary
Suzuki Jimny To Solely Be Produced In The Indian Market. Read In Kannada.
Story first published: Saturday, September 26, 2020, 13:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X