ಅನಾವರಣವಾಯ್ತು 2021ರ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು

ಸುಜುಕಿ ಕಂಪನಿಯು ಇತ್ತೀಚೆಗೆ ತನ್ನ ತಾಯ್ನಾಡು ಜಪಾನ್‌ನಲ್ಲಿ ನಾಲ್ಕನೇ ತಲೆಮಾರಿನ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರನ್ನು ಬಿಡುಗಡೆಗೊಳಿಸಿತ್ತು. ಇದೀಗ ಯುರೋಪ್ ಮಾರುಗಕಟ್ಟೆಗಳಿಗಾಗಿ ಹೊಸ ಯುರೋ-ಸ್ಪೆಕ್ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಅನ್ನು ಅನಾವರಣಗೊಳಿಸಿದೆ.

ಅನಾವರಣವಾಯ್ತು 2021ರ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು

ಮೂರನೇ ತಲೆಮಾರಿನ ಸ್ವಿಫ್ಟ್ ಅನ್ನು 2016ರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಳಿಸಲಾಯಿತು ಮತ್ತು ಇದನ್ನು 2017 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಮಾರುತಿ ಸ್ವಿಫ್ಟ್ ದೀರ್ಘಕಾಲದವರೆಗೆ ಭಾರತದಲ್ಲಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಒಂದಾಗಿದೆ. ಭಾರತದಲ್ಲಿ ಈ ಹೊಸ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವ ನಿರೀಕ್ಷೆಗಳಿದೆ. ಜನಪ್ರಿಯ ಹ್ಯಾಚ್‌ಬ್ಯಾಕ್ ಸ್ವಿಫ್ ಕಾರನ್ನು ಮಿಡ್-ಲೈಫ್ ನವೀಕರಣವನ್ನು ಮಾಡಿದೆ.

ಅನಾವರಣವಾಯ್ತು 2021ರ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸ್ವಿಫ್ಟ್ ಕಾರಿಗಿಂತ ಯಾವುದೇ ಪ್ರಮುಖ ಬದಲಾವಣೆಗಳು ಕಂಡು ಬಂದಿಲ್ಲ. ಯುರೋ-ಸ್ಪೆಕ್ ಸುಜುಕಿ ಸ್ವಿಫ್ಟ್ ಪ್ರಮುಖ ಕ್ರೋಮ್ ಸ್ಟ್ರಿಪ್ ಜೊತೆಗೆ ರೇಡಿಯೇಟರ್ ಗ್ರಿಲ್‌ಗಾಗಿ ಹೊಸ ಹನಿಕ್ಯೂಬ್ ಅನ್ನು ಹೊಂದಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಅನಾವರಣವಾಯ್ತು 2021ರ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು

ಈ ಹೊಸ ಕಾರಿನ ಮುಂಭಾಗದ ಬಂಪರ್ ನಲ್ಲಿ ಕೂಡ ಕೆಲವು ಬದಲಾವಣೆಗಳನ್ನು ಮಾಡಿದೆ. ಇನ್ನು ಉಳಿದಂತೆ ಕಾರಿನ ಮುಂಭಾಗ ಯಾವುದೇ ಪ್ರಮುಖ ಬದಲಾವಣೆಗಳು ಕಂಡು ಬಂದಿಲ್ಲ. ಹೊಸ ಸುಜುಕಿ ಸ್ವಿಫ್ಟ್ ಕಾರು 16 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ,

ಅನಾವರಣವಾಯ್ತು 2021ರ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು

ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರಿನ ಇಂಟಿರಿಯರ್ ನಲ್ಲಿಯು ಕೂಡ ಹೆಚ್ಚಿನ ಬದಲಾವಣೆಗಳನ್ನು ಹೊಂದಿರುವುದಿಲ್ಲ. ಈ ಹ್ಯಾಚ್‌ಬ್ಯಾಕ್ ನಲ್ಲಿ ಹೊಸ ಫ್ರಾಭ್ಯಿಕ್ ಸೀಟ್ ಮತ್ತು ಎಕ್ಸಟ್ ಗಳನ್ನು ಹೊದಿರಲಿದೆ. ಹೊಸ ಸ್ವಿಫ್ ಫೇಸ್‌ಲಿಫ್ಟ್ ಕಾರಿನಲ್ಲಿ ಸ್ಮಾರ್ಟ್‌ಪ್ಲೇ 7.0-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಂ ಅನ್ನು ಹೊಂದಿರಲಿದೆ. ಈ ಜನಪ್ರಿಯ ಹ್ಯಾಚ್‌ಬ್ಯಾಕ್‌ನಲ್ಲಿ ಕೆಲವು ಫೀಚರ್ ಗಳನ್ನು ಬದಲಾಯಿಸದೆ ಹಾಗೆ ಮುಂದುವರೆಸಬಹುದು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅನಾವರಣವಾಯ್ತು 2021ರ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು

ಜಪಾನ್‌ನಲ್ಲಿ ಸ್ವಿಫ್ಟ್ ಫೇಸ್‌ಲಿಫ್ಟ್ ಫ್ಯೂರ್ ವೈಟ್ ಪರ್ಲ್, ಸೂಪರ್ ಬ್ಲ್ಯಾಕ್ ಪರ್ಲ್, ಸ್ಟಾರ್ ಸಿಲ್ವರ್ ಮೆಟಾಲಿಕ್, ಪ್ರೀಮಿಯಂ ಸಿಲ್ವರ್ ಮೆಟಾಲಿಕ್, ಬರ್ನಿಂಗ್ ರೆಡ್ ಪರ್ಲ್ ಮೆಟಾಲಿಕ್ ಮತ್ತು ಸ್ಪೀಡಿ ಬ್ಲೂ ಮೆಟಾಲಿಕ್ ಸೇರಿದಂತೆ ಆರು ಸಿಂಗಲ್ ಟೋನ್ ಬಣ್ಣಗಳಲ್ಲಿ ಲಭ್ಯವಿದೆ.

ಅನಾವರಣವಾಯ್ತು 2021ರ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು

ಇನ್ನು ಫ್ಲೇಮ್ ಆರೆಂಜ್ ಪರ್ಲ್ ಮೆಟಾಲಿಕ್ & ಬ್ಲ್ಯಾಕ್, ರಶ್ ಯೆಲ್ಲೊ ಮೆಟಾಲಿಕ್ ಸಿಲ್ವರ್ ರೂಫ್ ಎಂಬ ಡ್ಯುಯಲ್-ಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಯುರೋಪ್ ನಲ್ಲಿಯು ಇದೇ ರೀತಿಯ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಅನಾವರಣವಾಯ್ತು 2021ರ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು

ಹೊಸ ಸ್ವಿಫ್ಟ್ ಕಾರಿನಲ್ಲಿ ಪ್ರಮುಖ ಬದಲಾವಣೆ ಅಂದರೆ ಎಂಜಿನ್ ಅನ್ನು ಬದಲಾಯಿಸಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೈಬ್ರಿಡ್ ಎಂಜಿನ್ ಹೊಂದಿದೆ. ಯುರೋ-ಸ್ಪೆಕ್ ನಲ್ಲಿ ಕೆ12 ಡಿ 1.2-ಲೀಟರ್ ಡ್ಯುಯಲ್ ಜೆಟ್ ಹೈಬ್ರಿಡ್, ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿಗೆ. ಈ ಎಂಜಿನ್ 81 ಬಿಹೆಚ್‌ಪಿ ಪವರ್ ಮತ್ತು 107 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು 2021ರ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು

ಇನ್ನು ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಸ್ವಿಫ್ಟ್ ಕಾರಿನಲ್ಲಿ ಆರಂಭದಲ್ಲಿ ನವೀಕರಿಸಿದ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್‌ನಲ್ಲಿ ಪರಿಚಯಿಸಲಾದ 1.2-ಲೀಟರ್ ಕೆ 12 ಎನ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು.

ಅನಾವರಣವಾಯ್ತು 2021ರ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು

ಹೊಸ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು ಭಾರತದಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್, ಟಾಟಾ ಟಿಯಾಗೊ ಮತ್ತು ಫೋರ್ಡ್ ಫಿಗೊ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ. ಈ ಹೊಸ ಸ್ವಿಫ್ಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ.

Article Published On: Wednesday, October 21, 2020, 18:03 [IST]
English summary
Europe-spec 2021 Suzuki Swift revealed. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+