ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರು
ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರು ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದೆ. ಹೊಸ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರಿನ ಸ್ಪೈ ಚಿತ್ರಗಳು ಬಹಿರಂಗವಾಗಿದೆ. ಆದರೆ ಈ ಕಾರು ಭಾರತದಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಸುಜುಕಿ ಕಂಪನಿಯು ಖಚಿತಪಡಿಸಿಲ್ಲ.

ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಹಾಟ್ ಹ್ಯಾಚ್‍ಬ್ಯಾಕ್ ಅನ್ನು ಅನ್‍ಲೋಡ್ ಮಾಡುವ ಸ್ಪೈ ಚಿತ್ರಗಳು ಬಹಿರಂಗವಾಗಿದೆ. ಹೊಸ ಸ್ವಿಫ್ಟ್ ಸ್ಪೋರ್ಟ್ ಕಾರಿನ ಸ್ಪೈ ಚಿತ್ರವನ್ನು ಬಿಡಬ್ಲೂ ಆಟೋವರ್ಲ್ಡ್ ಬಹಿರಂಗಪಡಿಸಿದೆ. ಈ ಹೊಸ ಕಾರನ್ನು ಭಾರತದಲ್ಲಿ ತಂದಿದ್ದರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದು ಖಚಿತವಾಗಿಲ್ಲ. ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರನ್ನು ಟೆಸ್ಟ್ ನಡೆಸಲು ಭಾರತಕ್ಕೆ ತಂದಿರಬಹುದು.

ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಅತ್ಯಂತ ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಸ್ವಿಫ್ಟ್ ಸ್ಪೋರ್ಟ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಟ್ಯಾಂಡರ್ಡ್ ಸ್ವಿಫ್ಟ್ ನಂತೆಯೇ ಅದೇ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್ ಅನ್ನು ಹೊಂದಿದೆ.

ಸ್ವಿಫ್ಟ್ ಸ್ಪೋರ್ಟ್ ಸುಜುಕಿಯ 1.4-ಲೀಟರ್ ಬೂಸ್ಟರ್ ಜೆಟ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 5,500 ಆರ್‌ಪಿಎಂನಲ್ಲಿ 138 ಬಿಹೆಚ್‌ಪಿ ಪವರ್ ಮತ್ತು 2,500 - 3,500 ಆರ್‌ಪಿಎಂ ನಡುವೆ 230 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ನೊಂದಿಗೆ ಆರು-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರು ಕೇವಲ 8 ಸೆಕೆಂಡುಗಳಲ್ಲಿ 0-100 ಕಿಮೀ ಕ್ರಮಿಸುತ್ತದೆ. ಈ ಕಾರು ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿದೆ. ಸುಜುಕಿ ಸ್ವಿಫ್ಟ್ 210 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಒಂದು ವೇಳೆ ಭಾರತದಲ್ಲಿ ಬಿಡುಗಡೆಗೊಳಿದರೆ ಸೀಮಿತ ಸಂಖ್ಯೆಯಲ್ಲಿ ಸ್ವಿಫ್ಟ್ ಸ್ಪೋರ್ಟ್ ಕಾರನ್ನು ಬಿಡುಗಡೆಗೊಳಿಸಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಸ್ವಿಫ್ಟ್ ಸ್ಪೋರ್ಟ್ ಕಾರು ಹೆಚ್ಚಾಗಿ ಸಿಬಿಯು ಮಾರ್ಗದ ಮೂಲಕ ಆಮದು ಮಾಡಕೊಳ್ಳಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರು ಬಿಡುಗಡೆಯಾದರೆ ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ ಕಾರಿಗೆ ಪೈಪೋಟಿಯನ್ನು ನೀಡುತ್ತದೆ.

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಎಸ್‍ಯುವಿಗಳಲ್ಲಿ ಮಾರುತಿ ಸುಜುಕಿ ಜಿಮ್ನಿ ಒಂದಾಗಿದೆ. ಅಂತರರಾಷ್ಟೀಯ ಮಾರುಕಟ್ಟೆಯಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡ ಜಿಮ್ನಿ ಮಿನಿ-ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಮಾರುತಿಯ ಗುರಗಾಂವ್ ಮೂಲದ ಘಟಕದಿಂದ ಜಿಮ್ನಿ ಎಸ್‍ಯುವಿಯ ರಫ್ತನ್ನು ಮೇ ಅಥವಾ ಜೂನ್ ಆರಂಭದಲ್ಲಿ ಪ್ರಾರಂಭಿಸಬಹುದು. ಭಾರತೀಯ ರಸ್ತೆಗಳಿಗೆ ಅನುಗುಣವಾಗಿ ಮತ್ತು ಭಾರತೀಯ ಗ್ರಾಹಕರನ್ನು ಸೆಳೆಯುವ ರೀತಿಯಲ್ಲಿ ಈ ಜಿಮ್ನಿ ಎಸ್‍ಯುವಿಯನ್ನು ಅಭಿವೃದ್ದಿಪಡಿಸಲಾಗುತ್ತದೆ.

ಮಾರುತಿ ಸುಜುಕಿ ಕಂಪನಿಯು ಬಿಡುಗಡೆಗೊಳಿಸಿದ ಕಾರ್ಯಕ್ಷಮತೆಯ ಕಾರುಗಳು ಭಾರತದಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸುವಲ್ಲಿ ವಿಫಲವಾಗಿದೆ. ಮಾರುತಿ ಸುಜುಕಿಯ ಕಿಝಾಶಿ ಮತ್ತು ಬಾಲೆನೊ ಆರ್‍ಎಸ್ ನಂತಹ ಕಾರ್ಯಕ್ಷಮತೆಯ ಕಾರುಗಳು ಭಾರತದಲ್ಲಿ ವಿಫಲವಾಗಿ ಸಂಫೂರ್ಣವಾಗಿ ಸ್ಥಗಿತಗೊಂಡಿವೆ. ಇದರಿಂದ ಸ್ವಿಫ್ಟ್ ಸ್ಪೋರ್ಟ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದು ಅನುಮಾನವಾಗಿದೆ.


Click it and Unblock the Notifications