ಆಟೋ ಎಕ್ಸ್‌ಪೋ 2020: ವಿಂಗರ್ ಮಿನಿ ವ್ಯಾನ್ ಅನಾವರಣಗೊಳಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ 2020ರ ಆಟೋ ಎಕ್ಸ್ ಪೋದಲ್ಲಿ ಹಲವಾರು ವಾಹನಗಳನ್ನು ಅನಾವರಣಗೊಳಿಸಿದೆ. ಇವುಗಳಲ್ಲಿ ಕೆಲವು ಹೊಸ ವಾಹನಗಳಾದರೆ, ಇನ್ನು ಕೆಲವು ಹಳೆಯ ಅಪ್‍‍ಡೇಟೆಡ್ ವಾಹನಗಳಾಗಿವೆ. ಇವುಗಳಲ್ಲಿ ಮರುವಿನ್ಯಾಸಗೊಳಿಸಲಾದ ವಿಂಗರ್ ವಾಹನವು ಸಹ ಸೇರಿದೆ. ಟಾಟಾ ವಿಂಗರ್ ಜನಪ್ರಿಯ ಸಾರಿಗೆ ವಾಹನವಾಗಿದೆ.

ಆಟೋ ಎಕ್ಸ್‌ಪೋ 2020: ವಿಂಗರ್ ಎಂಪಿವಿ ಅನಾವರಣಗೊಳಿಸಿದ ಟಾಟಾ ಮೋಟಾರ್ಸ್

ಈ ವಾಹನವನ್ನು ಮೊದಲ ಬಾರಿಗೆ 2007ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈಗ ಅಪ್‍‍ಡೇಟ್ ಮಾಡಲಾದ ವಾಹನವನ್ನು ಅನಾವರಣಗೊಳಿಸಲಾಗಿದೆ. ವಿಂಗರ್ 15 + 1 ಸೀಟ್ ಹೊಂದಿರುವ ಮಿನಿ ವ್ಯಾನ್ ಆಗಿದೆ. ಟಾಟಾ ಮೋಟಾರ್ಸ್ ಈ ವ್ಯಾನ್‍‍ನಲ್ಲಿ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿದ್ದು, ಬಿ‍ಎಸ್ 6 ಎಂಜಿನ್‍‍ನೊಂದಿಗೆ ಅಪ್‍‍ಗ್ರೇಡ್‍‍ಗೊಳಿಸಿದೆ. ಈ ಮಿನಿ ವ್ಯಾನ್‍‍ನ ಇಂಟಿರಿಯರ್ ಟಾಟಾದ ಜನಪ್ರಿಯ ವಾಹನವಾದ ಹ್ಯಾರಿಯರ್ ಎಸ್‍‍ಯುವಿಯಂತಿದೆ.

ಆಟೋ ಎಕ್ಸ್‌ಪೋ 2020: ವಿಂಗರ್ ಎಂಪಿವಿ ಅನಾವರಣಗೊಳಿಸಿದ ಟಾಟಾ ಮೋಟಾರ್ಸ್

ವಿಂಗರ್ ವಾಹನವನ್ನು ಟಾಟಾ ಮೋಟಾರ್ಸ್‍‍ನ ಇಂಪ್ಯಾಕ್ಟ್ 2.0 ವಿನ್ಯಾಸದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಟಾಟಾ ಹ್ಯಾರಿಯರ್ ಎಸ್‍‍ಯುವಿ ಈ ವಿನ್ಯಾಸದಲ್ಲಿ ಅಭಿವೃದ್ಧಿಪಡಿಸಲಾದ ಮೊದಲ ವಾಹನವಾಗಿದೆ. ವಿಂಗರ್ ಸಹ ಹ್ಯಾರಿಯರ್ ಎಸ್‍‍ಯುವಿಯಲ್ಲಿರುವಂತಹ ಎಲ್‍ಇ‍‍ಡಿ ಲೈಟಿಂಗ್‍‍ಗಳನ್ನು ಹೊಂದಿದೆ. ಟಾಟಾ ಕಂಪನಿಯ ಲೊಗೊ, ಹಾರಿಜಾಂಟಲ್ ಕ್ರೋಮ್ ಸ್ಟ್ರಿಪ್, ರಿವ್ಯಾಂಪ್ ಗ್ರಿಲ್ ಹಾಗೂ ಬಂಪರ್‍‍ಗಳು ವಿಂಗರ್ ವಾಹನವನ್ನು ಮತ್ತಷ್ಟು ಆಕರ್ಷಕವಾಗಿಸುತ್ತವೆ.

ಆಟೋ ಎಕ್ಸ್‌ಪೋ 2020: ವಿಂಗರ್ ಎಂಪಿವಿ ಅನಾವರಣಗೊಳಿಸಿದ ಟಾಟಾ ಮೋಟಾರ್ಸ್

ಈ ಕಮರ್ಷಿಯಲ್ ವ್ಯಾನ್ ಅನ್ನು ಪ್ಯಾಸೆಂಜರ್ ಎಸ್‍‍ಯುವಿಯಾಗಿಸಿದೆ. ಈ ಬದಲಾವಣೆಗಳು ವ್ಯಾನ್‍‍ನ ಸುರಕ್ಷತೆಯನ್ನು ಹೆಚ್ಚಿಸಿವೆ. ಮುಂಭಾಗದ ಪ್ರಯಾಣಿಕರಿಗೆ ಹಾಗೂ ಚಾಲಕನಿಗೆ ಹೆಚ್ಚು ಸುರಕ್ಷತೆಯನ್ನು ನೀಡುತ್ತವೆ. ಈ ಬದಲಾವಣೆಗಳಿಂದಾಗಿ ಫ್ಯಾಮಿಲಿಗಳೂ ಸಹ ಈ ವ್ಯಾನ್ ಅನ್ನು ತಮ್ಮ ಸ್ವಂತ ಬಳಕೆಗಾಗಿ ಖರೀದಿಸಲಿ ಎಂಬುದು ಟಾಟಾ ಮೋಟಾರ್ಸ್ ಅಭಿಪ್ರಾಯ. ಟಾಟಾ ಮೋಟಾರ್ಸ್ ಫ್ಯಾಮಿಲಿಗಳಿಗಾಗಿಯೇ ವಿವಿಧ ಫೀಚರ್‍‍‍ಗಳನ್ನು ನೀಡಲಿದೆ.

ಆಟೋ ಎಕ್ಸ್‌ಪೋ 2020: ವಿಂಗರ್ ಎಂಪಿವಿ ಅನಾವರಣಗೊಳಿಸಿದ ಟಾಟಾ ಮೋಟಾರ್ಸ್

5 ಸ್ಪೋಕ್‍‍ಗಳ ಅಲಾಯ್ ವ್ಹೀಲ್, ಅಪ್‍‍ಡೇಟ್ ಮಾಡಲಾಗಿರುವ ಹಿಂಭಾಗದ ಡೋರ್‍‍ಗಳು ವ್ಯಾನ್ ಅನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತವೆ. ಟಾಟಾ ಈ ವ್ಯಾನ್‍‍ನ ಇಂಟಿರಿಯರ್‍‍ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ. ವ್ಯಾನ್‍‍ನ ಕಾಕ್‍‍ಪಿಟ್‍‍ನಿಂದ ರೂಫ್‍‍ವರೆಗೆ ಹಲವಾರು ಅಪ್‍‍ಡೇಟ್‍‍ಗಳನ್ನು ಮಾಡಲಾಗಿದೆ. ಈ ವ್ಯಾನ್‍‍ನೊಳಗೆ ಟಚ್ ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ, ಫ್ರಾಬ್ರಿಕ್ ಸೀಟ್, ಸಿಲ್ವರ್/ಪಿಯಾನೊ ಬ್ಲಾಕ್ ಎಸಿ ಕಂಟ್ರೋಲ್ ಕ್ನಾಪ್, ಪ್ರತಿ ಸೀಟುಗಳಲ್ಲಿ ವಿಭಿನ್ನವಾದ ಯು‍ಎಸ್‍‍ಬಿ ಚಾರ್ಜಿಂಗ್ ಪೋರ್ಟ್, ಪುಶ್ ಬ್ಯಾಕ್ ಸೀಟ್, ಆಂಪಲ್ ರೂಫ್‍‍ಗಳಿವೆ.

ಆಟೋ ಎಕ್ಸ್‌ಪೋ 2020: ವಿಂಗರ್ ಎಂಪಿವಿ ಅನಾವರಣಗೊಳಿಸಿದ ಟಾಟಾ ಮೋಟಾರ್ಸ್

ವ್ಯಾನ್‍‍ನಲ್ಲಿರುವ ವೈಬ್ರೆಷನ್‍‍ಗಳನ್ನು ಕಡಿಮೆ ಮಾಡಲಾಗಿದ್ದು, ಆರಾಮದಾಯಕವಾದ ಸಂಚಾರವನ್ನು ನೀಡುವಂತೆ ಅಭಿವೃದ್ಧಿಪಡಿಸಲಾಗಿದೆ. ಈ ವ್ಯಾನ್ ಅನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಅಪ್‍‍ಗ್ರೇಡ್‍‍ಗೊಳಿಸಲಾಗಿದೆ. ಈ ವ್ಯಾನ್‍‍ನಲ್ಲಿರುವ 2.0 ಲೀಟರಿನ ಡೀಸೆಲ್ ಎಂಜಿನ್ 89 ಬಿ‍‍ಹೆಚ್‍‍ಪಿ ಪವರ್ ಹಾಗೂ 190 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಈ ವ್ಯಾನ್‍‍ನ ಬೆಲೆಯು ರೂ.12 ಲಕ್ಷದಿಂದ ರೂ.15 ಲಕ್ಷಗಳಾಗಿದೆ.

More from DriveSpark

Article Published On: Sunday, February 9, 2020, 11:00 [IST]
English summary
Tata Motors unveils BS 6 Winger at 2020 Auto Expo. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+