ಮಾರುತಿ ಸುಜುಕಿ ಸ್ವಿಫ್ಟ್ ಕಾರು ಜನಪ್ರಿಯವಾಗಲು ಇವೇ ಹಲವು ಕಾರಣಗಳು..!

ಮಾರುತಿ ಸುಜುಕಿ ಕಂಪನಿಯು ಹಲವಾರು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಸ್ವಿಫ್ಟ್ ಕಾರ್ ಅನ್ನು ಮಾರಾಟ ಮಾಡುತ್ತಿದೆ. ಸ್ವಿಫ್ಟ್ ಕಾರು ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಯಾವ ಕಾರಣಕ್ಕೆ ಸ್ವಿಫ್ಟ್ ಕಾರು ಹೆಚ್ಚು ಮಾರಾಟವಾಗುತ್ತಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಮಾರುತಿ ಸುಜುಕಿ ಸ್ವಿಫ್ಟ್ ಕಾರು ಜನಪ್ರಿಯವಾಗಲು ಇವೇ ಕಾರಣಗಳು..!

ಆಟೋಮ್ಯಾಟಿಕ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆ

ಈ ಸೆಗ್‍‍ಮೆಂಟ್‍‍ನಲ್ಲಿ ಮಾರುತಿ ಸುಜುಕಿಯ ಸ್ವಿಫ್ಟ್ ಕಾರಿನಲ್ಲಿ ಮಾತ್ರವೇ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ನೀಡಲಾಗುತ್ತಿದೆ. 1.2 ಲೀಟರಿನ ಪೆಟ್ರೋಲ್ ಹಾಗೂ 1.3 ಲೀಟರಿನ ಡೀಸೆಲ್ ಎಂಜಿನ್‍‍ಗಳಲ್ಲಿ 5 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ನೀಡಲಾಗುತ್ತದೆ.

ಮಾರುತಿ ಸುಜುಕಿ ಸ್ವಿಫ್ಟ್ ಕಾರು ಜನಪ್ರಿಯವಾಗಲು ಇವೇ ಕಾರಣಗಳು..!

ಮಾರುತಿ ಸುಜುಕಿ ಕಂಪನಿಯು ಬಿ‍ಎಸ್ 6 ಮಾಲಿನ್ಯ ನಿಯಮಗಳು ಜಾರಿಗೆ ಬರುವ ಮುನ್ನ ತನ್ನ ಸರಣಿಯಲ್ಲಿರುವ ಎಲ್ಲಾ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಲಿದೆ. ಇದರಲ್ಲಿ ಸ್ವಿಫ್ಟ್ ಡೀಸೆಲ್ ಎಂಜಿನ್ ಕಾರು ಸಹ ಸೇರಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಕಾರು ಜನಪ್ರಿಯವಾಗಲು ಇವೇ ಕಾರಣಗಳು..!

ಬಿ‍ಎಸ್ 6 ಮಾಲಿನ್ಯ ನಿಯಮಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಗಮನಿಸಬೇಕಾದ ಸಂಗತಿಯೆಂದರೆ ಮಾರುತಿ ಸುಜುಕಿ ಕಂಪನಿಯು ತನ್ನ ಸರಣಿಯಲ್ಲಿರುವ ಡೀಸೆಲ್ ಎಂಜಿನ್ ಕಾರುಗಳ ಉತ್ಪಾದನೆಯನ್ನು ಈಗಾಗಲೇ ಸ್ಥಗಿತಗೊಳಿಸಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಕಾರು ಜನಪ್ರಿಯವಾಗಲು ಇವೇ ಕಾರಣಗಳು..!

ಬೆಲೆಗೆ ತಕ್ಕ ಕಾರು

ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಪೆಟ್ರೋಲ್ ಕಾರಿನ ಬೆಲೆಯು ರೂ.5.19 ಲಕ್ಷದಿಂದ ಆರಂಭವಾಗುತ್ತದೆ. ಟಾಪ್ ಎಂಡ್ ಡೀಸೆಲ್ ಆವೃತ್ತಿಯ ಕಾರಿನ ಬೆಲೆಯು ರೂ.8.84 ಲಕ್ಷಗಳಿಂದ ಆರಂಭವಾಗುತ್ತದೆ. ಈ ಬೆಲೆಗಳು ಭಾರತದ ಎಕ್ಸ್ ಶೋರೂಂ ದರಗಳಾಗಿವೆ. ಬೇರೆ ಕಂಪನಿಯ ಕಾರುಗಳಿಗೆ ಹೋಲಿಸಿದರೆ ಸ್ವಿಫ್ಟ್ ಕಾರಿನಲ್ಲಿ ಹಲವಾರು ಮಾದರಿಗಳಿವೆ.

ಮಾರುತಿ ಸುಜುಕಿ ಸ್ವಿಫ್ಟ್ ಕಾರು ಜನಪ್ರಿಯವಾಗಲು ಇವೇ ಕಾರಣಗಳು..!

ಕಡಿಮೆ ಬೆಲೆಯ ಮಾದರಿಗಳಲ್ಲೂ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಗಳನ್ನು ನೀಡಲಾಗಿದೆ. ಈ ಕಾರಣಕ್ಕೆ ಈ ಕಾರು ಬಹು ಸಂಖ್ಯೆಯ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತದೆ. ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಸ್ವಿಫ್ಟ್ ಕಾರಿನ ರಿ-ಸೇಲ್ ಬೆಲೆ ಹೆಚ್ಚು. ಈ ಕಾರಣಕ್ಕೆ ಗ್ರಾಹಕರು ಸ್ವಿಫ್ಟ್ ಕಾರ್ ಅನ್ನು ಖರೀದಿಸಲು ಬಯಸುತ್ತಾರೆ.

ಮಾರುತಿ ಸುಜುಕಿ ಸ್ವಿಫ್ಟ್ ಕಾರು ಜನಪ್ರಿಯವಾಗಲು ಇವೇ ಕಾರಣಗಳು..!

ಮೈಲೇಜ್

ಮಾರುತಿ ಸುಜುಕಿ ಕಂಪನಿಯ ಕಾರುಗಳು ಬೇರೆ ಕಂಪನಿಯ ಕಾರುಗಳಿಗೆ ಹೋಲಿಸಿದರೆ ಹೆಚ್ಚು ಮೈಲೇಜ್ ನೀಡುತ್ತವೆ. ಸ್ವಿಫ್ಟ್ ಕಾರಿನ ಪೆಟ್ರೋಲ್ ಆವೃತ್ತಿಯಲ್ಲಿ 1.2 ಲೀಟರಿನ ವಿವಿಟಿ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಪ್ರತಿ ಲೀಟರ್ ಪೆಟ್ರೋಲ್‍‍ಗೆ 22 ಕಿ.ಮೀ ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿ ಸ್ವಿಫ್ಟ್ ಕಾರು ಜನಪ್ರಿಯವಾಗಲು ಇವೇ ಕಾರಣಗಳು..!

ಈ ಮೈಲೇಜ್ ಅನ್ನು ಎ‍ಆರ್‍ಎ‍ಐ ಪ್ರಮಾಣಿಕರಿಸಿದೆ. ಡೀಸೆಲ್ ಆವೃತ್ತಿಯಲ್ಲಿರುವ 1.3 ಲೀಟರಿನ ಎಂಜಿನ್ ಪ್ರತಿ ಲೀಟರ್ ಡೀಸೆಲ್‍‍ಗೆ 28.4 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಲಾಗಿದೆ. ಹೊಸ ತಲೆಮಾರಿನ ಸ್ವಿಫ್ಟ್ ಕಾರ್ ಅನ್ನು ಹಾರ್ಡ್‍‍ಟೆಕ್ ಪ್ಲಾಟ್‍‍ಫಾರಂನಲ್ಲಿ ತಯಾರಿಸಲಾಗಿದೆ. ಈ ಕಾರಣಕ್ಕೆ ಹಳೆಯ ಕಾರಿಗಿಂತ 100 ಕೆ.ಜಿ ಕಡಿಮೆ ತೂಕವನ್ನು ಹೊಂದಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಕಾರು ಜನಪ್ರಿಯವಾಗಲು ಇವೇ ಕಾರಣಗಳು..!

ಅತ್ಯುತ್ತಮವಾದ ಸರ್ವಿಸ್

ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿ ಅತಿ ದೊಡ್ಡ ಸರ್ವಿಸ್ ನೆಟ್‍‍ವರ್ಕ್ ಅನ್ನು ಹೊಂದಿದೆ. ಭಾರತದ ಯಾವುದೇ ಮೂಲೆಗೆ ಹೋದರೂ ಮಾರುತಿ ಸುಜುಕಿ ಕಂಪನಿಯ ಸರ್ವಿಸ್ ಸೆಂಟರ್‍‍ಗಳನ್ನು ಕಾಣಬಹುದು. ಈ ಸರ್ವಿಸ್ ಸೆಂಟರ್‍‍ಗಳಲ್ಲಿ ಅತ್ಯುತ್ತಮವಾದ ಸರ್ವಿಸ್ ನೀಡಲಾಗುತ್ತದೆ.

ಮಾರುತಿ ಸುಜುಕಿ ಸ್ವಿಫ್ಟ್ ಕಾರು ಜನಪ್ರಿಯವಾಗಲು ಇವೇ ಕಾರಣಗಳು..!

ಈ ಕಾರಣಗಳಿಗಾಗಿ ಮಾರುತಿ ಸುಜುಕಿಯ ಸ್ವಿಫ್ಟ್ ಕಾರ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಲಾಗುತ್ತಿದೆ. ಈ ಎಲ್ಲಾ ಕಾರಣಗಳಿಗಾಗಿ ಮಾರುತಿ ಸುಜುಕಿ ಕಂಪನಿಯು ಭಾರತದ ನಂ 1 ಕಾರು ತಯಾರಕ ಕಂಪನಿಯಾಗಿದೆ.

More from DriveSpark

Article Published On: Monday, March 9, 2020, 12:23 [IST]
English summary
Reasons for the massive success of Maruti Suzuki Swift in India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+