ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಮಾರುತಿ ಸುಜುಕಿ ಟಾಪ್ 5 ಕಾರುಗಳಿವು

ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಹಲವು ಬಗೆಯ ಕಾರುಗಳಿವೆ. ಆದರೆ ಮಧ್ಯಮ ಮತ್ತು ಕೆಳ ವರ್ಗದ ಜನರಿಗೆ ಕಾರು ಖರೀದಿಸುವುದು ದೊಡ್ಡ ಸವಾಲಾಗಿದೆ. ತಾವು ಕೂಡಿಟ್ಟ ಹಣದಲ್ಲಿ ಸ್ವಂತವಾಗಿ ಒಂದು ಕಾರು ಖರೀದಿಸಬೇಕೆಂಬ ಕನಸನ್ನು ಹೊಂದಿರುತ್ತಾರೆ.

ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಮಾರುತಿ ಸುಜುಕಿ ಟಾಪ್ 5 ಕಾರುಗಳಿವು

ಎಲ್ಲರಿಗೂ ಸ್ವಂತವಾಗಿ ಒಂದು ಕಾರು ಇರಬೇಕೆಂಬ ಆಸೆ ಇರುತ್ತದೆ. ಇತ್ತೀಚೆಗೆ ಒಂದು ಮಾಧ್ಯಮ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಸರಾಸರಿ 70% ರಷ್ಟು ಜನರು ಕೆಲಸಕ್ಕಾಗಿ ಪ್ರಯಾಣಿಸಲು ಸ್ವಂತ ವಾಹನಗಳನ್ನು ಆದ್ಯತೆ ನೀಡುವುದಾಗಿ ತಿಳಿದುಬಂದಿದೆ. ಅದೇ ರೀತಿ ಕಿಯಾ ಮೋಟಾರ್ಸ್ ಇಂಡಿಯಾ ಮಾರ್ಕೆಟಿಂಗ್ ಮತ್ತು ಸೇಲ್ಸ್ ಉಪಾಧ್ಯಕ್ಷ ಮತ್ತು ಮುಖ್ಯಸ್ಥರಾದ ಮನೋಹರ್ ಭಟ್ ಅವರು ಸಾರ್ವಜನಿಕ ಸಾರಿಗೆಯ ಬಳಕೆಯು ಮುಂಬರುವ ದಿನಗಳಲ್ಲಿ ಕಡಿಮೆಯಾಗುತ್ತದೆ ಮತ್ತು ಜನರು ಸಣ್ಣ ಕಾರುಗಳಿಗೆ ಆದ್ಯತೆ ನೀಡುತ್ತಾರೆ ಎಂದು ಹೇಳಿದ್ದಾರೆ.

ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಮಾರುತಿ ಸುಜುಕಿ ಟಾಪ್ 5 ಕಾರುಗಳಿವು

ಎಲ್ಲರೂ ದೈನಂದಿನ ಬಳಕೆಗೆ ಸಣ್ಣ ಕಾರನ್ನು ಬಳಕೆ ಮಾಡಲು ಇಷ್ಟಪಡುತ್ತಾರೆ. ಇದು ಹಲವು ಸಮೀಕ್ಷೆಗಳಲ್ಲಿ ಸಾಬೀತಾಗಿದ್ದು, ಎಲ್ಲರೂ ಸ್ವಂತ ವಾಹನ ಹೊಂದಲು ಇಷ್ಟಪಡುತ್ತಾರೆ. ಅದೇ ರೀತಿ ಭಾರತದಲ್ಲಿ ಕಾರು ಖರೀದಿಸುವ ಗ್ರಾಹಕರು ಮೊದಲು ನೋಡುವುದು ಆ ಕಾರು ಎಷ್ಟು ಮೈಲೇಜ್ ನೀಡುತ್ತದೆ ಮತ್ತು ಆ ಕಾರಿನ ಬೆಲೆಯನ್ನು ನೋಡಿ ಖರೀದಿಸುತ್ತಾರೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಮಾರುತಿ ಸುಜುಕಿ ಟಾಪ್ 5 ಕಾರುಗಳಿವು

ಭಾರತೀಯ ಮಾರುಕಟ್ಟೆಯಲ್ಲಿ ಅಧಿಕ ಮೈಲೇಜ್ ನೀಡುವ ಕಾರುಗಳು ಉತ್ತಮವಾಗಿ ಮಾರಾಟವಾಗುತ್ತವೆ. ಭಾರತದಲ್ಲಿ ಹೆಚ್ಚಿನ ಗ್ರಾಹಕರು ಮೈಲೇಜ್ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬೇರೆ ಗಗನದೆತ್ತರಕ್ಕೆ ಸಾಗುತ್ತಿದೆ.

ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಮಾರುತಿ ಸುಜುಕಿ ಟಾಪ್ 5 ಕಾರುಗಳಿವು

ಇಂತಹ ಸಂದರ್ಭದಲ್ಲಿ ಕಾರು ಖರೀದಿಸುವ ಗ್ರಾಹಕರು ಹೆಚ್ಚು ಮೈಲೇಜ್ ನೀಡುವ ಕಾರಿನ ಕಡೆ ಹೆಚ್ಚು ಒಲವನ್ನು ಹೊಂದಿರುತ್ತಾರೆ. ಭಾರತೀಯ ಮಾರುಕಟ್ಟೆಯಲ್ಲಿ ಮೈಲೇಜ್ ವಿಷಯ ಬಂದಾಗ ಮೊದಲು ಯೋಚನೆ ಬರುವುದೇ ಮಾರುತಿ ಸುಜುಕಿ ಕಾರುಗಳು.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಮಾರುತಿ ಸುಜುಕಿ ಟಾಪ್ 5 ಕಾರುಗಳಿವು

ಇನ್ನು ಮೈಲೇಜ್ ಮತ್ತು ಕಡಿಮೆ ನಿರ್ವಹಣಾ ವೆಚ್ಚಕ್ಕೆ ಮಾರುತಿ ಸುಜುಕಿ ಕಾರುಗಳು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಮಾರುತಿ ಸುಜುಕಿ ಕಾರುಗಳು ಕೈಗೆಟುಕುವ ದರದಲ್ಲಿ ಲಭ್ಯವಾಗುವುದರಿಂದ ಇದು ಮಾದ್ಯಮ ವರ್ಗದ ನೆಚ್ಚಿನ ಬ್ರ್ಯಾಂಡ್ ಆಗಿದೆ. ಕಾರು ಖರೀದಿಸಲು ಬಯಸುವವರಿಗಾಗಿ, ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಮಾರುತಿ ಸುಜುಕಿ ಕಾರುಗಳ ಮಾಹಿತಿ ಇಲ್ಲಿದೆ. ಗಮನಿಸಿ ಇದು ಎಕ್ಸ್ ಶೋರೂಂ ಪ್ರಕಾರದ ಬೆಲೆಗಳಾಗಿರುತ್ತವೆ.

ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಮಾರುತಿ ಸುಜುಕಿ ಟಾಪ್ 5 ಕಾರುಗಳಿವು

ಮಾರುತಿ ಸುಜುಕಿ ಆಲ್ಟೋ

ಬೆಲೆ - ರೂ. 2.95 ಲಕ್ಷ

ಮಾರುತಿ ಸುಜುಕಿ ಆಲ್ಟೋ ಮಾರುತಿ ಆಲ್ಟೋ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಮಧ್ಯಮವರ್ಗದ ಜನರ ಮೆಚ್ಚಿನ ಆಯ್ಕೆಯಾಗಿದೆ ಈ ಕಾರು. ಇದರ ಜನಪ್ರಿಯತೆಗೆ ಸಾಟಿಯಿಲ್ಲವೆಂದು ಹೇಳಬಹುದು. ಈ ಕಾರಿನಲ್ಲಿ 0.8-ಲೀಟರ್ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಿದ್ದಾರೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಮಾರುತಿ ಸುಜುಕಿ ಟಾಪ್ 5 ಕಾರುಗಳಿವು

ಈ ಎಂಜಿನ್ 48 ಬಿಹೆಚ್‍ಪಿ ಪವರ್ ಮತ್ತು 69 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಮಾರುತಿ ಆಲ್ಟೋ ಕಾರಿನ ಎಂಜಿನ್ ಪ್ರತಿ ಲೀಟರ್ ಗೆ 22.05 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಮಾರುತಿ ಸುಜುಕಿ ಆಲ್ಟೋ ಸ್ಟ್ಯಾಂಡರ್ಡ್ ವೆರಿಯೆಂಟ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.95 ಲಕ್ಷಗಳಾಗಿದೆ. ಸಿಟಿ ಮತ್ತು ಗ್ರಾಮಿಣ ಭಾಗದ ಜನರಿಗೂ ಈ ಕಾರು ಒಂದು ಉತ್ತಮ ಆಯ್ಕೆಯಾಗಿದೆ.

ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಮಾರುತಿ ಸುಜುಕಿ ಟಾಪ್ 5 ಕಾರುಗಳಿವು

ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಬೆಲೆ - ರೂ.3.71 ಲಕ್ಷ

ಮಾರುತಿ ಸುಜುಕಿ ಎಸ್-ಪ್ರೆಸ್ಸೊ 2019ರಲ್ಲಿ ಬಿಡುಗಡೆಯಾದ ಮಾರುತಿ ಎಸ್-ಪ್ರೆಸ್ಸೊ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಭಾರತದ ಈ ಮಿನಿ ಎಸ್‍ಯುವಿಯು ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಮಾರುತಿ ಸುಜುಕಿ ಟಾಪ್ 5 ಕಾರುಗಳಿವು

ಎಸ್-ಪ್ರೆಸ್ಸೊ ಮಿನಿ ಎಸ್‍‍ಯು‍ವಿ 998 ಸಿಸಿ ಪೆಟ್ರೋಲ್ ಎಂಜಿನ್‌ ‌67 ಬಿಎಚ್‌ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮಾರುತಿ ಎಸ್-ಪ್ರೆಸ್ಸೊ ಕಾರಿನ ಎಂಜಿನ್ ಪ್ರತಿ ಲೀಟರ್‌ಗೆ 21.79 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.ರೂ.3.71 ಲಕ್ಷಗಳಾಗಿದೆ.

ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಮಾರುತಿ ಸುಜುಕಿ ಟಾಪ್ 5 ಕಾರುಗಳಿವು

ಮಾರುತಿ ಸುಜುಕಿ ಸೆಲೆರಿಯೊ

ಬೆಲೆ - ರೂ.4.41 ಲಕ್ಷ

ಈ ಮಾರುತಿ ಸುಜುಕಿ ಸೆಲೆರಿಯೊ ಹ್ಯಾಚ್‌ಬ್ಯಾಕ್ ಜನಪ್ರಿಯ ಮಾದರಿ ಆದರೂ ಕೂಡಾ ಇತರ ಮಾದರಿಗಳಂತೆ ದೊಡ್ಡ ಮಟ್ಟದಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಲಿಲ್ಲ. ಈ ಸೆಲೆರಿಯೊ ಕಾರಿನಲ್ಲಿ 1.0-ಲೀಟರ್ ಎಂಜಿನ್‌ ಅನ್ನು ಅಳವಡಿಸಲಾಗಿದೆ.

ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಮಾರುತಿ ಸುಜುಕಿ ಟಾಪ್ 5 ಕಾರುಗಳಿವು

ಮಾರುತಿ ಸುಜುಕಿ ಸೆಲೆರಿಯೊ ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಯಲ್ಲಿ ಲಭ್ಯವಿದೆ. ಸೆಲೆರಿಯೊ ಕಾರಿನಲ್ಲಿ ಎಎಂಟಿ ಗೇರ್‌ಬಾಕ್ಸ್ ಆಯ್ಕೆಯೂ ಕೂಡ ಲಭ್ಯವಿದೆ. ಈ ಮಾರುತಿ ಸುಜುಕಿ ಸೆಲೆರಿಯೊ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4.41 ಲಕ್ಷಗಳಾಗಿದೆ.

ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಮಾರುತಿ ಸುಜುಕಿ ಟಾಪ್ 5 ಕಾರುಗಳಿವು

ಮಾರುತಿ ಸುಜುಕಿ ವ್ಯಾಗನ್ಆರ್

ಬೆಲೆ - ರೂ.4.46 ಲಕ್ಷ

ಮಾರುತಿ ಆಲ್ಟೋ ಕಾರಿನಂತೆ ವ್ಯಾಗನ್ಆರ್ ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿದೆ. ಈ ವ್ಯಾಗನ್ಆರ್ ಟಾಲ್ ಬಾಯ್ ಎಂದೇ ಪ್ರಸಿದ್ದಿಯಾಗಿದೆ. ವ್ಯಾಗನ್ಆರ್ ಕಾರಿನಲ್ಲಿ 1.0-ಲೀಟರ್ ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 68 ಬಿಹೆಚ್‍ಪಿ ಪವರ್ ಮತ್ತು 90 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಕಾರಿನ ಎಂಜಿನ್ ಪ್ರತಿ ಲೀಟರ್ ಗೆ 21.79 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಮಾರುತಿ ಸುಜುಕಿ ಟಾಪ್ 5 ಕಾರುಗಳಿವು

ವ್ಯಾಗನ್ಆರ್ ಇತರ ರೂಪಾಂತರದಲ್ಲಿ 1.2-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 83 ಬಿಹೆಚ್‍ಪಿ ಪವರ್ ಮತ್ತು 113 ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಪ್ರತಿ ಲೀಟರ್‌ಗೆ 20.52 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ವ್ಯಾಗನ್ಆರ್ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4.46 ಲಕ್ಷಗಳಾಗಿದೆ.

ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಮಾರುತಿ ಸುಜುಕಿ ಟಾಪ್ 5 ಕಾರುಗಳಿವು

ಮಾರುತಿ ಸುಜುಕಿ ಇಗ್ನಿಸ್

ಬೆಲೆ - ರೂ.4.89 ಲಕ್ಷ

ಈ ಪಟ್ಟಿಯಲ್ಲಿ ಕೊನೆಯದಾಗಿ ಮಾರುತಿ ಸುಜುಕಿ ಇಗ್ನಿಸ್ ಪ್ರೀಮಿಯಂ ಹ್ಯಾಚ್‌ಬ್ಯಾಕ್, ಇದು ಮಾರುತಿಯ ನೆಕ್ಸಾ ಡೀಲರ್ಸ್ ಮೂಲಕ ಮಾರಾಟ ಮಾಡಲಾಗುತ್ತದೆ. ಮಾರುತಿಯ ಸಾಮಾನ್ಯ ಕಾರುಗಳನ್ನು ಅರೆನಾ ಶೋರೂಂಗಳಲ್ಲಿ ಮತ್ತು ಪ್ರೀಮಿಯಂ ಕಾರುಗಳನ್ನು ನೆಕ್ಸಾ ಡೀಲರ್ಸ್ ಮೂಲಕ ಮಾರಾಟ ಮಾಡುತ್ತದೆ.

ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಮಾರುತಿ ಸುಜುಕಿ ಟಾಪ್ 5 ಕಾರುಗಳಿವು

ಮಾರುತಿ ಸುಜುಕಿ ಇಗ್ನಿಸ್ ಕೂಡಾ ಪ್ರೀಮಿಯಂ ಕಾರು ಮಾದರಿಯಾಗಿದ್ದು, ಇದರ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4.89 ಲಕ್ಷಗಳಾಗಿದೆ. ಇಗ್ನಿಸ್ ಮಾದರಿಯು ಇತರ ಮಾರುತಿ ಪ್ರೀಮಿಯಂ ಕಾರುಗಳ ರೀತಿ ದೊಡ್ಡ ಯಶಸ್ವಿಯನ್ನು ಗಳಿಸಲು ಸಾಧ್ಯವಾಗದ್ದಿದ್ದರೂ ಅತ್ಯುತ್ತಮ ಫೀಚರ್ಸ್ ಹೊಂದಿದೆ.

Most Read Articles

Kannada
English summary
Top 5 Budget Maruti-Suzuki Cars You Can Buy in India Under INR 5 Lakh. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X