ಕೇವಲ 30 ಪೈಸೆ ವೆಚ್ಚದಲ್ಲಿ ಒಂದು ಕಿ.ಮೀ ಸಾಗುತ್ತದೆ ಈ ಎಲೆಕ್ಟ್ರಿಕ್ ರಿಕ್ಷಾ

ಪೆಟ್ರೋಲ್, ಡೀಸೆಲ್ ವಾಹನಗಳಿಂದಾಗಿ ಗಾಳಿಯ ಗುಣಮಟ್ಟವು ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಈ ಕಾರಣಕ್ಕೆ ಭಾರತವೂ ಸೇರಿದಂತೆ ವಿಶ್ವದೆಲ್ಲೆಡೆ ಎಲೆಕ್ಟ್ರಿಕ್ ವಾಹನಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ.

ಕೇವಲ 30 ಪೈಸೆ ವೆಚ್ಚದಲ್ಲಿ ಒಂದು ಕಿ.ಮೀ ಸಾಗುತ್ತದೆ ಈ ಎಲೆಕ್ಟ್ರಿಕ್ ರಿಕ್ಷಾ

ಸರ್ಕಾರಗಳೂ ಸಹ ಪೆಟ್ರೋಲ್, ಡೀಸೆಲ್ ವಾಹನಗಳ ಬದಲು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ಪರಿಸರವನ್ನು ರಕ್ಷಿಸಲು ಮುಂದಾಗಿವೆ. ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚುತ್ತಿರುವುದರಿಂದ ವಾಹನ ತಯಾರಕ ಕಂಪನಿಗಳು ಹೊಸ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ.

ಕೇವಲ 30 ಪೈಸೆ ವೆಚ್ಚದಲ್ಲಿ ಒಂದು ಕಿ.ಮೀ ಸಾಗುತ್ತದೆ ಈ ಎಲೆಕ್ಟ್ರಿಕ್ ರಿಕ್ಷಾ

ಈಗ ಪ್ರಮುಖ ಎಲೆಕ್ಟ್ರಿಕ್ ರಿಕ್ಷಾ ತಯಾರಕ ಕಂಪನಿಯಾದ ಯುಪಿ ಟೆಲಿಲಿಂಕ್ಸ್ ಲಿಮಿಟೆಡ್ ಸಿಂಗಮ್ ಲಿ-ಐಯಾನ್ ಹೆಸರಿನ ಹೊಸ ವಾಹನವನ್ನು ಬಿಡುಗಡೆಗೊಳಿಸಿದೆ. ಈ ಕಂಪನಿಯು ಉತ್ತರ ಪ್ರದೇಶದ ಗಾಜಿಯಾಬಾದ್ ಹಾಗೂ ಉತ್ತರಾಖಂಡದ ರುದ್ರಪುರದಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕೇವಲ 30 ಪೈಸೆ ವೆಚ್ಚದಲ್ಲಿ ಒಂದು ಕಿ.ಮೀ ಸಾಗುತ್ತದೆ ಈ ಎಲೆಕ್ಟ್ರಿಕ್ ರಿಕ್ಷಾ

ಕಂಪನಿಯು ಸಿಂಗಮ್ ಎಂಬ ಹೆಸರಿನಲ್ಲಿ ಎಲೆಕ್ಟ್ರಿಕ್ ರಿಕ್ಷಾಗಳನ್ನು ಉತ್ಪಾದಿಸುತ್ತದೆ. ಈ ಸರಣಿಯಲ್ಲಿ ಲಯನ್ ಲಿ-ಐಯಾನ್ ಹೆಸರಿನ ಎಲೆಕ್ಟ್ರಿಕ್ ರಿಕ್ಷಾವನ್ನು ಬಿಡುಗಡೆಗೊಳಿಸಲಾಗಿದೆ.

ಕೇವಲ 30 ಪೈಸೆ ವೆಚ್ಚದಲ್ಲಿ ಒಂದು ಕಿ.ಮೀ ಸಾಗುತ್ತದೆ ಈ ಎಲೆಕ್ಟ್ರಿಕ್ ರಿಕ್ಷಾ

ಈ ಎಲೆಕ್ಟ್ರಿಕ್ ಆಟೋರಿಕ್ಷಾದ ಬೆಲೆ ರೂ.1.85 ಲಕ್ಷಗಳಾಗಿದೆ. ಈ ಎಲೆಕ್ಟ್ರಿಕ್ ರಿಕ್ಷಾ ಖರೀದಿಸುವವರಿಗೆ ಕೇಂದ್ರ ಸರ್ಕಾರದ ಫೇಮ್ ಇಂಡಿಯಾ 2 ಯೋಜನೆಯಡಿಯಲ್ಲಿ ರೂ.37,000ಗಳ ಸಬ್ಸಿಡಿ ದೊರೆಯಲಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕೇವಲ 30 ಪೈಸೆ ವೆಚ್ಚದಲ್ಲಿ ಒಂದು ಕಿ.ಮೀ ಸಾಗುತ್ತದೆ ಈ ಎಲೆಕ್ಟ್ರಿಕ್ ರಿಕ್ಷಾ

ಇದರಿಂದ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸಬಹುದು. ಈ ಎಲೆಕ್ಟ್ರಿಕ್ ರಿಕ್ಷಾವನ್ನು ಆಕರ್ಷಕ ವಿನ್ಯಾಸ ಹಾಗೂ ಐಷಾರಾಮಿ ಫೀಚರ್'ಗಳೊಂದಿಗೆ ಮೂರು ವರ್ಷಗಳ ವಾರಂಟಿಯೊಂದಿಗೆ ಮಾರಾಟ ಮಾಡಲಾಗುತ್ತದೆ.

ಕೇವಲ 30 ಪೈಸೆ ವೆಚ್ಚದಲ್ಲಿ ಒಂದು ಕಿ.ಮೀ ಸಾಗುತ್ತದೆ ಈ ಎಲೆಕ್ಟ್ರಿಕ್ ರಿಕ್ಷಾ

ಈ ಎಲೆಕ್ಟ್ರಿಕ್ ರಿಕ್ಷಾದಲ್ಲಿ ಎಲ್ಇಡಿ ಲೈಟ್'ಗಳನ್ನು ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ರಿಕ್ಷಾ ಹೆಚ್ಚು ಶಕ್ತಿಶಾಲಿಯಾದ 1,500 ವ್ಯಾಟ್ ಮೋಟರ್ ಹೊಂದಿದೆ. ಈ ಎಲೆಕ್ಟ್ರಿಕ್ ರಿಕ್ಷಾದಲ್ಲಿರುವ ಲಿಥಿಯಂ ಐಯಾನ್ ಬ್ಯಾಟರಿ ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಚಲಿಸುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕೇವಲ 30 ಪೈಸೆ ವೆಚ್ಚದಲ್ಲಿ ಒಂದು ಕಿ.ಮೀ ಸಾಗುತ್ತದೆ ಈ ಎಲೆಕ್ಟ್ರಿಕ್ ರಿಕ್ಷಾ

ಈ ಹೊಸ ಎಲೆಕ್ಟ್ರಿಕ್ ರಿಕ್ಷಾವನ್ನು ಲಯನ್ ಮಾರಾಟಗಾರರ ಮೂಲಕ ಮಾರಾಟ ಮಾಡಲಾಗುವುದು. ಗ್ರಾಹಕರಿಗೆ ಸಾಲ ಸೌಲಭ್ಯಗಳನ್ನು ಸುಲಭವಾಗಿ ದೊರಕುವಂತೆ ಮಾಡಲು ಯುಪಿ ಟೆಲಿಲಿಂಕ್ಸ್ ಲಿಮಿಟೆಡ್ ವಿವಿಧ ಹಣಕಾಸು ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿದೆ.

ಕೇವಲ 30 ಪೈಸೆ ವೆಚ್ಚದಲ್ಲಿ ಒಂದು ಕಿ.ಮೀ ಸಾಗುತ್ತದೆ ಈ ಎಲೆಕ್ಟ್ರಿಕ್ ರಿಕ್ಷಾ

ಈ ಹೊಸ ಎಲೆಕ್ಟ್ರಿಕ್ ರಿಕ್ಷಾಗಾಗಿ 300ಕ್ಕೂ ಹೆಚ್ಚು ಬುಕ್ಕಿಂಗ್'ಗಳನ್ನು ಸ್ವೀಕರಿಸಲಾಗಿದೆ ಎಂದು ವರದಿಯಾಗಿದೆ. ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ಈ ವಿದ್ಯುತ್ ರಿಕ್ಷಾಗಳನ್ನು ಡಿಸೆಂಬರ್ 15ರಿಂದ ವಿತರಿಸಲಾಗುವುದು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕೇವಲ 30 ಪೈಸೆ ವೆಚ್ಚದಲ್ಲಿ ಒಂದು ಕಿ.ಮೀ ಸಾಗುತ್ತದೆ ಈ ಎಲೆಕ್ಟ್ರಿಕ್ ರಿಕ್ಷಾ

ಈ ಎಲೆಕ್ಟ್ರಿಕ್ ರಿಕ್ಷಾದಲ್ಲಿರುವ ಬ್ಯಾಟರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಎಲೆಕ್ಟ್ರಿಕ್ ರಿಕ್ಷಾ 100 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಮೂಲಕ ಪ್ರತಿ ಕಿ.ಮೀ ಪ್ರಯಾಣಕ್ಕೆ ಕೇವಲ 30 ಪೈಸೆ ಮಾತ್ರ ಖರ್ಚಾಗುತ್ತದೆ ಎಂದು ಹೇಳಲಾಗಿದೆ.

ಕೇವಲ 30 ಪೈಸೆ ವೆಚ್ಚದಲ್ಲಿ ಒಂದು ಕಿ.ಮೀ ಸಾಗುತ್ತದೆ ಈ ಎಲೆಕ್ಟ್ರಿಕ್ ರಿಕ್ಷಾ

ಮೆಂಟೆನೆನ್ಸ್ ವೆಚ್ಚವು ಕಡಿಮೆಯಾಗಿದೆ ಎಂಬ ಅಂಶವೂ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸಲು ನೆರವಾಗಲಿದೆ. ಈ ಹೊಸ ಎಲೆಕ್ಟ್ರಿಕ್ ರಿಕ್ಷಾವನ್ನು ಗ್ರಾಹಕರಿಗೆ ಆರಾಮದಾಯಕ ಸವಾರಿಯನ್ನು ನೀಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಎಲೆಕ್ಟ್ರಿಕ್ ರಿಕ್ಷಾ ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ನಿರೀಕ್ಷೆಗಳಿವೆ.

Most Read Articles

Kannada
English summary
UP Telelinks launches new Singham Li Ion e rickshaw in India. Read in Kannada.
Story first published: Monday, December 14, 2020, 11:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X