ಹೊಸ ಎಸ್60 ಕಾರಿನ ಅಕ್ಸೆಸರೀಸ್ ಪರಿಚಯಿಸಿದ ವೊಲ್ವೊ

ಸ್ವೀಡಿಷ್ ಕಾರು ಉತ್ಪಾದನಾ ಕಂಪನಿಯಾದ ವೊಲ್ವೊ ತನ್ನ ಎಸ್60 ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಇದೀಗ ವೊಲ್ವೊ ಕಂಪನಿಯು ಭಾರತಲ್ಲಿ ಮತ್ತೊಮ್ಮೆ ಎಸ್60 ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಹೊಸ ಎಸ್60 ಕಾರಿನ ಅಕ್ಸೆಸರೀಸ್ ಪರಿಚಯಿಸಿದ ವೊಲ್ವೊ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗ್ರಾಹಕರ ಮೆಚ್ಚುಗೆಯನ್ನು ಪಡೆದುಕೊಂಡ ಈ ಹೊಸ ವೊಲ್ವೊ ಎಸ್60 ಕಾರು ಮುಂದಿನ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಇದೀಗ ವೊಲ್ವೊ ಇಂಡಿಯಾ ಕಂಪನಿಯು ಬಿಡುಗಡೆಯಾಗಲಿರುವ ಎಸ್60 ಸೆಡಾನ್ ಕಾರಿನ ವಿವಿಧ ಅಕ್ಸೆಸರೀಸ್ ಅನ್ನು ಪರಿಚಯಿಸಿದೆ. ಆಸಕ್ತ ಗ್ರಾಹಕರು ಈ ಕಾರಿನ ಅಕ್ಸೆಸರೀಸ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ಹೊಸ ಎಸ್60 ಕಾರಿನ ಅಕ್ಸೆಸರೀಸ್ ಪರಿಚಯಿಸಿದ ವೊಲ್ವೊ

ಇನ್ನು ಹೊಸ ವೊಲ್ವೊ ಎಸ್60 ಕಾರಿನಲ್ಲಿ ನಿಮ್ಮ ಮಕ್ಕಳು ಮತ್ತು ಸಾಕುಪ್ರಾಣಿಗಳನ್ನು ಸುರಕ್ಷಿತವಾಗಿರಿಸಲು ಕೆಲವು ಅಕ್ಸೆಸರೀಸ್ ಗಳ ಆಯ್ಕೆಯನ್ನು ಕೂಡ ನೀಡಲಿದೆ. ಇದರಲ್ಲಿ ಪುಟ್ಟದಾದ ಮಕ್ಕಳ ಸೀಟ್ ಮತ್ತು ಶ್ವಾನಗಳು ಕೂಡ ಸುರಕ್ಷಿತವಾಗಿ ಕುಳಿತುಕೊಂಡು ಪ್ರಯಾಣ ಮಾಡಬಹುದಾದ ಅಕ್ಸೆಸರೀಸ್ ಅನ್ನು ಒಳಗೊಂಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಎಸ್60 ಕಾರಿನ ಅಕ್ಸೆಸರೀಸ್ ಪರಿಚಯಿಸಿದ ವೊಲ್ವೊ

ಇನ್ನು ಕಾರಿನ ರೂಫ್ ಮೇಲ್ಭಾಗದಲ್ಲಿ ಸೈಕಲ್ ಸಾಗಿಸಬಹುದಾದ ಅಕ್ಸೆಸರೀಸ್ ಆಯ್ಕೆಯನ್ನು ಹೊಂದಿರಲಿದೆ. ಇನ್ನು ಮತ್ತಷ್ಟು ಮಡಚಬಹುದಾದ ಸೆಮಿ ಎಲೆಕ್ಟ್ರಿಕ್ ಮತ್ತು ಪ್ಲಾಸ್ಟಿಕ್ ಅಥವಾ ಇತರ ಸಾಮಗ್ರಿಗಳಲ್ಲಿ ಹೊಂದಬಹುದಾದ ವಿಭಾಗದ ಮ್ಯಾಟ್‌ಗಳನ್ನು ಖರೀದಿಸಬಹುದು.

ಹೊಸ ಎಸ್60 ಕಾರಿನ ಅಕ್ಸೆಸರೀಸ್ ಪರಿಚಯಿಸಿದ ವೊಲ್ವೊ

ಹೊಸ ತಲೆಮಾರಿನ ವೊಲ್ವೊ ಎಸ್60 ಕಾರಿಗಾಗಿ ಮುಂದಿನ ವರ್ಷದ ಜನವರಿ ತಿಂಗಳಲ್ಲಿ ಭಾರತದಲ್ಲಿ ಬುಕ್ಕಿಂಗ್ ಪ್ರಾರಂಭವಾಗಲಿದೆ. ಜನವರಿಯಲ್ಲಿ ಬುಕ್ಕಿಂಗ್ ಪ್ರಾರಂಭಿಸಿ ಎರಡು ತಿಂಗಳುಗಳ ಬಳಿಕ ಈ ಹೊಸ ವೊಲ್ವೊ ಎಸ್60 ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಹೊಸ ಎಸ್60 ಕಾರಿನ ಅಕ್ಸೆಸರೀಸ್ ಪರಿಚಯಿಸಿದ ವೊಲ್ವೊ

ಹೊಸ ತಲೆಮಾರಿನ ವೊಲ್ವೊ ಎಸ್60 ಕ್ರಿಸ್ಟಲ್ ವೈಟ್ ಪರ್ಲ್, ಓನಿಕ್ಸ್ ಬ್ಲ್ಯಾಕ್, ಮ್ಯಾಪಲ್ ಬ್ರೌನ್, ಡೆನಿಮ್ ಬ್ಲೂ ಮತ್ತು ಫ್ಯೂಷನ್ ರೆಡ್ ಎಂಬ ಐದು ರೀತಿಯ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಿರಲಿದೆ. ಈ ಹೊಸ ವೊಲ್ವೊ ಎಸ್60 4,761 ಎಂಎಂ ಉದ್ದ, 2,040 ಎಂಎಂ ಅಗಲ ಮತ್ತು 1,431 ಎಂಎಂ ಎತ್ತರವನ್ನು ಹೊಂದಿದೆ.

ಹೊಸ ಎಸ್60 ಕಾರಿನ ಅಕ್ಸೆಸರೀಸ್ ಪರಿಚಯಿಸಿದ ವೊಲ್ವೊ

ಈ ಹೊಸ ತಲೆಮಾರಿನ ವೊಲ್ವೊ ಎಸ್60 ಉದ್ದದ 2,872 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಇನ್ನು ಈ ಹೊಸ ವೊಲ್ವೊ ಎಸ್60 ಸೆಡಾನ್ ಒಳಭಾಗದಲ್ಲಿ ಉತ್ತಮ ಸ್ಪೇಸ್ ಅನ್ನು ಹೊಂದಿದೆ. ಈ ವೊಲ್ವೊ ಎಸ್60 ಕಾರಿನಲ್ಲಿ 19 ಇಂಚಿನ ಅಲಾಯ್ ವ್ಹೀಲ್ ಅನ್ನು ಹೊಂದಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ಎಸ್60 ಕಾರಿನ ಅಕ್ಸೆಸರೀಸ್ ಪರಿಚಯಿಸಿದ ವೊಲ್ವೊ

ಇನ್ನು ಈ ಹೊಸ ವೊಲ್ವೊ ಎಸ್60 ಕಾರಿನಲ್ಲಿ 2.0-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 190 ಬಿಹೆಚ್‍ಪಿ ಪವರ್ ಮತ್ತು 300 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಹೊಸ ಎಸ್60 ಕಾರಿನ ಅಕ್ಸೆಸರೀಸ್ ಪರಿಚಯಿಸಿದ ವೊಲ್ವೊ

ಈ ಹೊಸ ಕಾರಿನ ಇಂಟಿರಿಯರ್ ನಲ್ಲಿ ಡಿಜಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್, ಕೀ ಲೇಸ್ ಎಂಟ್ರಿ, ವೈರ್‌ಲೆಸ್ ಚಾರ್ಜಿಂಗ್ ಮತ್ತು ಹರ್ಮನ್ ಕಾರ್ಡನ್ ಮ್ಯೂಸಿಕ್ ಸಿಸ್ಟಂ ಅನ್ನು ಹೊಂದಿದೆ. ಹಿಂದಿನ ಮಾದರಿಗೆ ಹೋಲಿಸಿದರೆ ಡ್ಯಾಶ್‌ಬೋರ್ಡ್ ಮತ್ತು ಸೆಂಟರ್ ಕನ್ಸೋಲ್ ಅತ್ಯಾಧುನಿಕ ಸ್ಟೈಲಿಂಗ್ ಅನ್ನು ಹೊಂದಿದೆ.

ಹೊಸ ಎಸ್60 ಕಾರಿನ ಅಕ್ಸೆಸರೀಸ್ ಪರಿಚಯಿಸಿದ ವೊಲ್ವೊ

ಹೊಸ ವೊಲ್ವೊ ಎಸ್60 ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ನ ಎಂಟ್ರಿ ಲೆವೆಲ್ ಸೆಡಾನ್ ಆಗಿರಲಿದೆ. ಈ ಹೊಸ ವೊಲ್ವೊ ಎಸ್60 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್, ಬಿಎಂಡಬ್ಲ್ಯು 3 ಸೀರಿಸ್ ಮತ್ತು ಆಡಿ ಎ4 ಕಾರುಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Monday, December 14, 2020, 19:54 [IST]
English summary
2021 Volvo S60 Accessories Revealed. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+