ದೋಷ ಪೂರಿತ 22 ಲಕ್ಷ ಕಾರುಗಳನ್ನು ರಿಕಾಲ್ ಮಾಡಲು ಮುಂದಾದ ವೊಲ್ವೊ

ಸ್ವೀಡಿಷ್ ಕಾರು ಉತ್ಪಾದನಾ ಕಂಪನಿಯಾದ ವೊಲ್ವೊ ತನ್ನ ಸರಣಿಯಲ್ಲಿರುವ ಕಾರುಗಳ ಸೀಟ್ ಬೆಲ್ಟ್‌ಗಳಲ್ಲಿ ದೋಷ ಕಂಡು ಬಂದ ಹಿನ್ನಲೆಯಲ್ಲಿ ಅವುಗಳನ್ನು ರಿಕಾಲ್ ಮಾಡಲು ಮುಂದಾಗಿದೆ. ಕೆಲವು ವರದಿಗಳ ಪ್ರಕಾರ ವಿಶ್ವದಾದ್ಯಂತ ಸರಿಸುಮಾರು 22 ಲಕ್ಷ ಕಾರುಗಳನ್ನು ರಿಕಾಲ್ ಮಾಡಲಾಗುತ್ತದೆ.

ದೋಷ ಪೂರಿತ 22 ಲಕ್ಷ ಕಾರುಗಳನ್ನು ರಿಕಾಲ್ ಮಾಡಲು ಮುಂದಾದ ವೊಲ್ವೊ

ವೊಲ್ವೊ ಕಂಪನಿಯು 2006 ಮತ್ತು 2019ರ ನಡುವೆ ನಿರ್ಮಿಸಲಾದ ಕಾರುಗಳಲ್ಲಿ ಈ ದೋಷಗಳು ಕಂಡು ಬಂದಿದೆ. ವೊಲ್ವೊ ಕಾರುಗಳಲ್ಲಿನ ಮುಂಭಾಗದ ಪ್ರಯಾಣಿಕರ ಸೀಟ್ ಬೆಲ್ಟ್‌ಗಳಿಗೆ ಜೋಡಿಸಲಾದ ಸ್ಟೀಲ್ ಕೇಬಲ್‌ಗಳಲ್ಲಿ ದೋಷವನ್ನು ಕಂಡು ಬಂದಿದೆ, ಈ ಸಮಸ್ಯೆಯನ್ನು ಪರಿಹರಿಸಲು ಕಂಪನಿಯು ಮುಂದಾಗಿದೆ. ಕೆಲವು ವರದಿಗಳ ಪ್ರಕಾರ ವೊಲ್ವೊ ಕಂಪನಿಯು ಇಷ್ಟು ದೊಡ್ಡ ಪ್ರಮಾಣದಲ್ಲಿ ಇದೇ ಮೊದಲ ಬಾರಿಗೆ ರಿಕಾಲ್ ಮಾಡುವುದಾಗಿದೆ.

ದೋಷ ಪೂರಿತ 22 ಲಕ್ಷ ಕಾರುಗಳನ್ನು ರಿಕಾಲ್ ಮಾಡಲು ಮುಂದಾದ ವೊಲ್ವೊ

ವೊಲ್ವೊ ಕಂಪನಿಯ ಸರಣಿಯಲ್ಲಿರುವ ವಿ60, ವಿ70 ಮತ್ತು ಎಕ್ಸ್‌ಸಿ 60 ಕಾರುಗಳಲ್ಲಿ ದೋಷ ಕಂಡು ಬಂದಿದೆ. ಇನ್ನು ವೊಲ್ವೊ ಎಸ್60, ಎಸ್60 ಎಲ್, ಎಸ್60 ಸಿಸಿ, ವಿ60 ಸಿಸಿ, ಎಕ್ಸ್‌ಸಿ70, ಎಸ್80, ಮತ್ತು ಎಸ್80 ಎಲ್ ಮಾದರಿಗಳಲ್ಲಿಯು ಕೂಡ ಇದೇ ರೀತಿ ಸಮಸ್ಯೆಗಳಿರುವ ಸಾಧ್ಯತೆಗಳಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ದೋಷ ಪೂರಿತ 22 ಲಕ್ಷ ಕಾರುಗಳನ್ನು ರಿಕಾಲ್ ಮಾಡಲು ಮುಂದಾದ ವೊಲ್ವೊ

ಅದೃಷ್ಟವಶಾತ್ ಈ ಸಮಸ್ಯೆಗಳಿಂದಾಗಿ ವೊಲ್ವೊ ಪ್ರಯಾಣಿಕರಿಗೆ ಯಾವುದೇ ಹಾನಿಗಳು ಸಂಭವಿಸಿಲ್ಲ. ವೊಲ್ವೊ ಕಾರುಗಳು ವಿಶ್ವದಲ್ಲೇ ಸುರಕ್ಷತೆಗೆ ಹೆಚ್ಚು ಹೆಸರುವಾಸಿಯಾಗಿದೆ.

ದೋಷ ಪೂರಿತ 22 ಲಕ್ಷ ಕಾರುಗಳನ್ನು ರಿಕಾಲ್ ಮಾಡಲು ಮುಂದಾದ ವೊಲ್ವೊ

ಗ್ರಾಹಕರು ವೊಲ್ವೊ ಡೀಲರುಗಳನ್ನು ಸಂಪರ್ಕಿಸಿ ಈ ಸಮಸ್ಯೆಯನ್ನು ಉಚಿತವಾಗಿ ಸರಿಪಡಿಸಲು ಆಗ್ರಹಿಸಿದ್ದಾರೆ. ಮುಂಭಾಗದ ಪ್ರಯಾಣಿಕರ ಸೀಟ್ ಬೆಲ್ಟ್‌ಗಳಿಗೆ ಜೋಡಿಸಲಾದ ಸ್ಟೀಲ್ ಕೇಬಲ್‌ಗಳಲ್ಲಿ ದೋಷದಿಂದ ಸೀಟ್ ಬೆಲ್ಟ್ ಮೇಲೆ ಪರಿಣಾಮವನ್ನು ಬೀರುತ್ತದೆ.

MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ದೋಷ ಪೂರಿತ 22 ಲಕ್ಷ ಕಾರುಗಳನ್ನು ರಿಕಾಲ್ ಮಾಡಲು ಮುಂದಾದ ವೊಲ್ವೊ

ಇದೇ ರೀತಿ ಈ ಹಿಂದೆ ಆಟೋಮ್ಯಾಟಿಕ್ ಬ್ರೇಕ್ ಸಿಸ್ಟಂನಲ್ಲಿ ಉಂಟಾಗಿರುವ ಸಮಸ್ಯೆಯನ್ನು ಸರಿಪಡಿಸಲು ವೊಲ್ವೊ ಐಷಾರಾಮಿ ಕಾರುಗಳನ್ನು ವಿಶ್ವಾದ್ಯಂತ ರಿಕಾಲ್ ಮಾಡಲಾಗಿತ್ತು. ಇದರಲ್ಲಿ ಭಾರತದಲ್ಲಿರುವ ವೊಲ್ವೊ ಕಾರುಗಳೂ ಸಹ ಸೇರಿವೆ.

ದೋಷ ಪೂರಿತ 22 ಲಕ್ಷ ಕಾರುಗಳನ್ನು ರಿಕಾಲ್ ಮಾಡಲು ಮುಂದಾದ ವೊಲ್ವೊ

ವೊಲ್ವೊ ಕಂಪನಿಯ ಎಕ್ಸ್‌ಸಿ 40, ಎಕ್ಸ್‌ಸಿ 60, ಎಕ್ಸ್‌ಸಿ 90, ಎಸ್ 60, ಎಸ್ 90 ಹಾಗೂ ವಿ ಸರಣಿಯ ಕಾರುಗಳು ಈ ಸಮಸ್ಯೆಯನ್ನು ಕಂಡು ಬಂದಿತ್ತು.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ದೋಷ ಪೂರಿತ 22 ಲಕ್ಷ ಕಾರುಗಳನ್ನು ರಿಕಾಲ್ ಮಾಡಲು ಮುಂದಾದ ವೊಲ್ವೊ

ಈ ದೋಷಗಳಿಂದ ಕಾರುಗಳು ಅಪಘಾತಕ್ಕೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಈ ಕಾರುಗಳಲ್ಲಿರುವ ಆಟೋಮ್ಯಾಟಿಕ್ ಬ್ರೇಕ್ ಸಿಸ್ಟಂ ಅನ್ನು ಕಂಟ್ರೋಲ್ ಮಾಡುವ ಸಾಫ್ಟ್‌ವೇರ್ ಅನ್ನು ಪರೀಕ್ಷಿಸಿ ವೊಲ್ವೊ ಕಂಪನಿ ಸರಿಪಡಿಸಿತ್ತು.

ದೋಷ ಪೂರಿತ 22 ಲಕ್ಷ ಕಾರುಗಳನ್ನು ರಿಕಾಲ್ ಮಾಡಲು ಮುಂದಾದ ವೊಲ್ವೊ

ಇದೀಗ ತನ್ನ ಕಾರುಗಳ ಸೀಟ್ ಬೆಲ್ಟ್‌ಗಳಲ್ಲಿ ದೋಷ ಕಂಡು ಬಂದ ಹಿನ್ನಲೆಯಲ್ಲಿ ಅವುಗಳನ್ನು ರಿಕಾಲ್ ಮಾಡಲು ವೊಲ್ವೊ ಮುಂದಾಗಿದೆ. ಸೀಟ್ ಬೆಲ್ಟ್ ಸುರಕ್ಷತಾ ದೃಷ್ಠಿಯಿಂದ ಪ್ರಮುಖ ಪಾತ್ರವಹಿಸುತ್ತದೆ. ಸಾವಿನಂತಹ ದೊಡ್ಡ ಅಪಾಯಗಳಿಂದ ಸೀಟ್ ಬೆಲ್ಟ್ ನಿಂದಾಗಿ ಪಾರಾಗಿರುವ ಉದಾಹರಣೆಗಳಿವೆ. ಈ ಎಲ್ಲಾ ಕಾರಣಗಳಿಂದಾಗಿ ಸೀಟ್ ಬೆಲ್ಟ್ ಬಹಳ ಮುಖ್ಯವಾಗಿದೆ.

Article Published On: Saturday, July 4, 2020, 14:30 [IST]
English summary
Volvo To Recall 2.2 Million Cars Across The Globe For Seat Belt Issues. Read In Kannada.
Read more on ವೊಲ್ವೊ volvo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+