ಬಿಡುಗಡೆಯಾಗಲಿರುವ 2021ರ ಹ್ಯುಂಡೈ ಔರಾ ಕಾರಿನ ಮಾಹಿತಿ ಬಹಿರಂಗ

ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ 2021ರ ಔರಾ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಜ್ಜಾಗಿದೆ. ಇದೀಗ ಹ್ಯುಂಡೈ ಕಂಪನಿಯು ತನ್ನ ಭಾರತೀಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ.

ಬಿಡುಗಡೆಯಾಗಲಿರುವ 2021ರ ಹ್ಯುಂಡೈ ಔರಾ ಕಾರಿನ ಮಾಹಿತಿ ಬಹಿರಂಗ

2021ರ ಹ್ಯುಂಡೈ ಔರಾ ಕಾರು ಕೆಲವು ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗುತ್ತಿದೆ. ನವೀಕರಿಸಿದ ಹ್ಯುಂಡೈ ಔರಾ ಕಾಂಪ್ಯಾಕ್ಟ್ ಸೆಡಾನ್‌ನ ಬ್ರೋಚರ್ ಬಹಿರಂಗವಾಗಿದೆ. ಈ ಬ್ರೋಚರ್ ನಲ್ಲಿ ಈ ಕಾಂಪ್ಯಾಕ್ಟ್ ಸೆಡಾನ್‌ಗೆ ಮಾಡಿದ ಎಲ್ಲಾ ಬದಲಾವಣೆಗಳನ್ನು ಪಟ್ಟಿ ಮಾಡುತ್ತದೆ. ಹೊಸ ಹ್ಯುಂಡೈ ಔರಾ ಕಾರು ಇ, ಎಸ್, ಎಸ್ಎಕ್ಸ್, ಎಸ್ಎಕ್ಸ್ (+) ಮತ್ತು ಎಸ್ಎಕ್ಸ್ (ಒ) ಎಂಬ ಐದು ರೂಪಾಂತರಗಳಲ್ಲಿ ಲಭ್ಯವಿದೆ. ಬೇಸ್ ರೂಪಾಂತರವನ್ನು ಹೊರತುಪಡಿಸಿ, ಉಳಿದ ಎಲ್ಲಾ ರೂಪಾಂತರಗಳು ಹಿಂಭಾಗದ ಸ್ಪಾಯ್ಲರ್ನೊಂದಿಗೆ ಬರುತ್ತವೆ.

ಬಿಡುಗಡೆಯಾಗಲಿರುವ 2021ರ ಹ್ಯುಂಡೈ ಔರಾ ಕಾರಿನ ಮಾಹಿತಿ ಬಹಿರಂಗ

ಈ ಹೊಸ ವಿಂಗ್ ಸ್ಪಾಯ್ಲರ್ ಸೆಡಾನ್‌ನ ಸೌಂದರ್ಯದ ಆಕರ್ಷಣೆಯನ್ನು ಹೆಚ್ಚಿಸುವುದಲ್ಲದೆ ಅದರ ಏರೋಡೈನಾಮಿಕ್ ಹೆಚ್ಚಿಸುತ್ತದೆ ಮತ್ತು ಸ್ಪೋರ್ಟಿಯರ್ ಲುಕ್ ಅನ್ನು ನೀಡುತ್ತದೆ. ಪ್ರೀಮಿಯಂ ಆಡಿಯೊ ಸಿಸ್ಟಂ ಅನ್ನು ಎಸ್‌ಎಕ್ಸ್ ಮತ್ತು ಎಸ್‌ಎಕ್ಸ್ (ಒ) ರೂಪಾಂತರಗಳಿಂದ ತೆಗೆದುಹಾಕಲಾಗಿದ್ದರೆ, ಇ ರೂಪಾಂತರವು 14 ಇಂಚಿನ ಅನ್ ಬದಲಿಗೆ 13 ಇಂಚಿನ ಸ್ಪೇರ್ ವ್ಹೀಲ್ ಅನ್ನು ಹೊಂದಿರುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಬಿಡುಗಡೆಯಾಗಲಿರುವ 2021ರ ಹ್ಯುಂಡೈ ಔರಾ ಕಾರಿನ ಮಾಹಿತಿ ಬಹಿರಂಗ

ಎಸ್ ರೂಪಾಂತರವನ್ನು ಸ್ಟೀಲ್ ಸ್ಟೈಲ್ ವ್ಹೀಲ್ಸ್ ನೊಂದಿಗೆ ನೀಡಲಾಗಿದ್ದರೆ, ಎಎಂಟಿ ಮಾದರಿಗಳು ಗನ್ ಮೆಟಲ್ ಬಣ್ಣದಲ್ಲಿ 3 ಎಂ ಗ್ರಾಫಿಕ್ಸ್ ಪಡೆಯಲಿವೆ. ಟಾಪ್-ಎಂಡ್ ಎಸ್‌ಎಕ್ಸ್ (ಒ) ಟ್ರಿಮ್ ಕ್ರೂಸ್ ಕಂಟ್ರೋಲ್ (1.2 ಎಲ್ ಪೆಟ್ರೋಲ್ ಮಾತ್ರ) ಮತ್ತು ಲೆದರ್ ಸುತ್ತುವರೆದ ಸ್ಟೀಯರಿಂಗ್ ವ್ಹೀಲ್ ಮತ್ತು ಗೇರ್ ನಾಬ್ ವಿಶೇಷ ಫೀಚರ್ ಗಳನ್ನು ಒಳಗೊಂಡಿದೆ.

ಬಿಡುಗಡೆಯಾಗಲಿರುವ 2021ರ ಹ್ಯುಂಡೈ ಔರಾ ಕಾರಿನ ಮಾಹಿತಿ ಬಹಿರಂಗ

ಹೊಸ ಹ್ಯುಂಡೈ ಔರಾ ಕಾರಿನಲ್ಲಿ ಎರಡು ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಸಿಎನ್‌ಜಿ ಕಿಟ್‌ನೊಂದಿಗೆ ಮುಂದುವರಿಯಲಿದೆ. ಗ್ರ್ಯಾಂಡ್ ಐ10 ನಿಯೋಸ್‌ನಿಂದ ಎರವಲು ಪಡೆದ 1.2 ಎಲ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಬಿಡುಗಡೆಯಾಗಲಿರುವ 2021ರ ಹ್ಯುಂಡೈ ಔರಾ ಕಾರಿನ ಮಾಹಿತಿ ಬಹಿರಂಗ

ಈ ಕಾಂಪ್ಯಾಕ್ಟ್ ಸೆಡಾನ್ ಅನ್ನು 1.0ಎಲ್, 3-ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 100 ಬಿಹೆಚ್‍ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಬಿಡುಗಡೆಯಾಗಲಿರುವ 2021ರ ಹ್ಯುಂಡೈ ಔರಾ ಕಾರಿನ ಮಾಹಿತಿ ಬಹಿರಂಗ

ಇನ್ನು ಈ ಹೊಸ ಕಾರಿನಲ್ಲಿ 1.2ಎಲ್, 3-ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 74 ಬಿಹೆಚ್‍ಪಿ ಪವರ್ ಮತ್ತು 190 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಬಿಡುಗಡೆಯಾಗಲಿರುವ 2021ರ ಹ್ಯುಂಡೈ ಔರಾ ಕಾರಿನ ಮಾಹಿತಿ ಬಹಿರಂಗ

ಔರಾ ಕಾರಿನಲ್ಲಿ ಬೂಮ್‌ಬರ್ಗ್ ಎಲ್ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ಸ್, 15-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, ಎಲ್ಇಡಿ ಟೈಲ್ ಲೈಟ್ಸ್, ಕೀ ಲೆಸ್ ಎಂಟ್ರಿ, 8-0-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ವಾಯ್ಸ್ ರೆಕಗ್ನಿಷನ್, ವೈರ್‌ಲೆಸ್ ಫೋನ್ ಚಾರ್ಜರ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು ಲೆದರ್ ವ್ಯಾರ್ಪ್ ಸ್ಟಿರಿಂಗ್ ವ್ಹೀಲ್ ಹೊಂದಿದೆ.

ಬಿಡುಗಡೆಯಾಗಲಿರುವ 2021ರ ಹ್ಯುಂಡೈ ಔರಾ ಕಾರಿನ ಮಾಹಿತಿ ಬಹಿರಂಗ

ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್‌ನೊಂದಿಗೆ ಇಬಿಡಿ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಸೀಟ್ ಬೆಲ್ಟ್ ರಿಮೆಂಡರ್, ಸ್ಪೀಡ್ ಅಲರ್ಟ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಚೈಲ್ಡ್ ಸೀಟ್ ಮೌಂಟ್ ಮತ್ತು ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಅನ್ನು ಕೂಡ ಹೊಂದಿದೆ.

ಬಿಡುಗಡೆಯಾಗಲಿರುವ 2021ರ ಹ್ಯುಂಡೈ ಔರಾ ಕಾರಿನ ಮಾಹಿತಿ ಬಹಿರಂಗ

ಹ್ಯುಂಡೈ ಔರಾ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಡಿಜೈರ್, ಹೋಂಡಾ ಅಮೇಜ್ ಮತ್ತು ಟಾಟಾ ಟಿಗೋರ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಒಟ್ಟಾಗಿ 2021ರ ಹ್ಯುಂಡೈ ಔರಾ ಕಾರು ಹೊಸ ನವೀಕರಣಗಳನ್ನು ಪಡೆದುಕೊಂಡಿದೆ.

Article Published On: Monday, June 7, 2021, 15:04 [IST]
English summary
2021 Hyundai Aura Brochure Details Are Out. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+