ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಮಾರುತಿ ಸುಜುಕಿ ಸೆಲೆರಿಯೊ ಕಾರು
ಮಾರುತಿ ಸುಜುಕಿ ಕಂಪನಿಯು ತನ್ನ ಬಹುನಿರೀಕ್ಷಿತ ನ್ಯೂ ಜನರೇಷನ್ ಸೆಲೆರಿಯೊ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಜ್ಜಾಗಿತಿದೆ. ಈ ಹೊಸ ಮಾರುತಿ ಸುಜುಕಿ ಸೆಲೆರಿಯೊ ಕಾರು ಪ್ರಮುಖ ಬದಲಾವಣೆಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿ ಸೆಲೆರಿಯೊ ಹ್ಯಾಚ್‌ಬ್ಯಾಕ್ ಅನ್ನು ಮೊದಲ ಬಾರಿಗೆ 2014ರಲ್ಲಿ ಬಿಡುಗಡೆಗೊಳಿಸಿದರು. ಆದರೆ ಇತರ ಮಾದರಿಗಳ ಮಾದರಿಯಂತೆ ದೊಡ್ಡ ಯಶ್ವಸಿಯನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಇದೀಗ ಹೊಸ ವಿನ್ಯಾಸದಲ್ಲಿ ನ್ಯೂ ಜನರೇಷನ್ ಸೆಲೆರಿಯೊ ಕಾರನ್ನು ಮಾರುತಿ ಸುಜುಕಿ ಕಂಪನಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ನ್ಯೂ ಜನರೇಷನ್ ಮಾರುತಿ ಸೆಲೆರಿಯೊ ಹಲವು ಭಾರತದಲ್ಲಿ ಬಾರಿ ರೋಡ್ ಟೆಸ್ಟ್ ನಡೆಸಿದೆ.

ಹೊಸ ಮಾರುತಿ ಸುಜುಕಿ ಸೆಲೆರಿಯೊ ಹ್ಯಾಚ್‌ಬ್ಯಾಕ್ ಅನ್ನು 2020 ಬಿಡುಗಡೆಗೊಳಿಸಲು ಯೋಜಿಸಲಾಗಿತ್ತು. ಆದರೆ ನಂತರ ಹಲವು ಕಾರಣಗಳಿಂದ ಬಿಡುಗಡೆಯನ್ನು ಮುಂದೂಡಿದ್ದರು. ಬಳಿಕ ಕಂಪನಿಯು 2021ರ ಏಪ್ರಿಲ್-ಮೇ ತಿಂಗಳುಗಳ ಅವಧಿಯ ನಡುವೆ ಬಿಡುಗಡೆಗೊಳಿಸಲು ಯೋಜಿಸಲಾಗಿತ್ತು. ಆದರೆ ಕರೋನಾ ಸೋಂಕಿನ ಆರ್ಭಟ ಹೆಚ್ಚಳದಿಂದಾಗಿ ಮತ್ತೊಮ್ಮೆ ಮುಂದೂಡಿಕೆ ಮಾಡಿದ್ದರು.

ಇನ್ನು ಮಾರುತಿ ಸುಜುಕಿ ಕಂಪನಿಯು ಈ ಹೊಸ ಸೆಲೆರಿಯೊ ಕಾರಿನ ಬಿಡುಗಡೆಯ ದಿನಾಂಕದ ಬಗ್ಗೆ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಬಹುದು ಎಂದು ವರದಿಗಳಾಗಿದೆ.. ಇದೀಗ ಈ ಹೊಸ ಸೆಲೆರಿಯೊ ಕಾರಿನ ಪೇಟೆಂಟ್ ಚಿತ್ರಗಳು ಬಹಿರಂಗವಾಗಿದೆ.

2021ರ ಸೆಲೆರಿಯೊ ಒಂದು ಪ್ರಮುಖ ಬದಲಾವಣೆಯೆಂದರೆ ಹೊಸ ಹಿಯರ್‌ಟೆಕ್ಟ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಇದನ್ನು ತಯಾರಿಸಲಾಗಿದೆ. ಈ ಮಾರುತಿ ಸೆಲೆರಿಯೊ ಹೊಸದಾಗಿ ವಿನ್ಯಾಸಗೊಳಿಸಿದೆ. ಮುಂಭಾಗದಲ್ಲಿ ಸಣ್ಣ ಗ್ರಿಲ್ ಮತ್ತು ಏರ್ ಡ್ಯಾಮ್, ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳು, ಫಾಗ್ ಲ್ಯಾಂಪ್, ಎಲ್ಇಡಿ ಟೈಲ್‌ಲೈಟ್ಸ್ ಒಆರ್‌ವಿಎಂಗಳು ಮತ್ತು ಟ್ವೀಕ್ಡ್ ಟೈಲ್‌ಲ್ಯಾಂಪ್‌ಗಳನ್ನು ಒಳಗೊಂಡಿರುತ್ತದೆ.

ಹೊಸ ಸೆಲೆರಿಯೊ ಹ್ಯಾಚ್‌ಬ್ಯಾಕ್ ಒಳಭಾಗದಲ್ಲಿ 7.0-ಇಂಚಿನ ಸ್ಮಾರ್ಟ್‌ಪ್ಲೇ ಸ್ಟುಡಿಯೋ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪಡೆಯುತ್ತದೆ. ಈ ಸಿಸ್ಟಂ ಆಪಲ್ ಕಾರ್ ಪ್ಲೇ ಮತ್ತು ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಫೀಚರ್ ಅನ್ನು ಕೂಡ ಒಳಗೊಂಡಿರುತ್ತದೆ.

ಇನ್ನು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಬದಲಾಯಿಸಲಾಗುವುದಿಲ್ಲ. ಆದರೆ ಡ್ಯಾಶ್‌ಬೋರ್ಡ್, ಸ್ಟೀಯರಿಂಗ್ ವೀಲ್ ಮತ್ತು ಸೆಂಟರ್ ಕನ್ಸೋಲ್ ಅನ್ನು ಪರಿಷ್ಕರಿಸಲಾಗುತ್ತದೆ. 2021ರ ಮಾರುತಿ ಸೆಲೆರಿಯೊ ಕಾರಿನಲ್ಲಿ ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್, ಸ್ಟೀಯರಿಂಗ್ ಮೌಂಟಡ್ ಕಂಟ್ರೋಲ್ ಮತ್ತು ಇತರ ಪ್ರೀಮಿಯಂ ಫೀಚರ್ ಗಳನ್ನು ಕೂಡ ಒಳಗೊಂಡಿರುತ್ತದೆ.

ಈ ನ್ಯೂ ಜನರೇಷನ್ ಮಾರುತಿ ಸೆಲೆರಿಯೊ ಕಾರಿನಲ್ಲಿ ಸುರಕ್ಷತೆಗಾಗಿ, ಸ್ಟ್ಯಾಂಡರ್ಡ್ ಸೀಟ್‌ಬೆಲ್ಟ್ ಅಲರ್ಟ್, ಎಲೆಕ್ಟ್ರಾನಿಕ್ ಬ್ರೇಕ್-ಫೋರ್ಸ್ ಡೆಲವೆರಿಯೊಂದಿಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ, ರೇರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ರಿವರ್ಸ್ ಕ್ಯಾಮೆರಾ ಜೊತೆಗೆ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ ಅನ್ನು ಕೂಡ ನೀಡಬಹುದು ಎಂದು ನಿರೀಕ್ಷಿಸುತ್ತೇವೆ.

ಈ ಹೊಸ ಕಾರಿನಲ್ಲಿ ಎಂಜಿನ್ ಅನ್ನು ಬದಲಾಯಿಸಲಾಗಿದೆ. ಇದರಲ್ಲಿ ಹೊಸ 1.2ಎಲ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು, ಈ ಎಂಜಿನ್ 83 ಬಿಹೆಚ್ಪಿ ಪವರ್ ಮತ್ತು 113 ಎನ್ಎಂ ಟಾರ್ಜ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಇದರೊಂದಿಗೆ 1.0ಎಲ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ನೀಡಬಹುದು. ಈ ಎಂಜಿನ್ 68 ಬಿಹೆಚ್ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಲ್ಲಾ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ನೀಡಲಾಗುತ್ತದೆ.


Click it and Unblock the Notifications