ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ 2021ರ ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿ

ಬಜೆಟ್ ಬೆಲೆಯ ಎಂಪಿವಿ ಕಾರು ಮಾದರಿಯಲ್ಲೇ ವಿಶೇಷ ಸೌಲಭ್ಯಗಳೊಂದಿಗೆ ಗ್ರಾಹಕರ ಆಕರ್ಷಣೆಗೆ ಕಾರಣವಾಗಿರುವ ರೆನಾಲ್ಟ್ ಟ್ರೈಬರ್ ಕಾರು ಮಾದರಿಯು ಶೀಘ್ರದಲ್ಲೇ 2021ರ ಆವೃತ್ತಿಯನ್ನು ಪಡೆದುಕೊಳ್ಳಲಿದ್ದು, ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ ಮತ್ತಷ್ಟು ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದೆ.

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ 2021ರ ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿ

ಎಂಟ್ರಿ ಲೆವೆಲ್ ಕಾರುಗಳ ಮಾರಾಟದಲ್ಲಿ ವಿವಿಧ ಕಾರು ಮಾದರಿಯೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ರೆನಾಲ್ಟ್ ಇಂಡಿಯಾ ಕಂಪನಿಯು ಟ್ರೈಬರ್ ಕಾರು ಮಾದರಿಯಲ್ಲಿ ಟರ್ಬೊ ಪೆಟ್ರೋಲ್ ಮಾದರಿಯನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಟರ್ಬೊ ಮಾದರಿಯ ಬಿಡುಗಡೆಗೂ ಮುನ್ನ ಕೆಲವು ಪ್ರಮುಖ ಬದಲಾವಣೆಗಳೊಂದಿಗೆ 2021ರ ಆವೃತ್ತಿಯನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ 2021ರ ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿ

2021ರ ಟ್ರೈಬರ್ ಮಾದರಿಯಲ್ಲಿ ರೆನಾಲ್ಟ್ ಕಂಪನಿಯು ನಾಲ್ಕು ಬಣ್ಣಗಳ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯೊಂದಿಗೆ ಡ್ಯುಯಲ್ ಹಾರ್ನ್, ರಿಯರ್ ವ್ಯೂ ಮಿರರ್ ಒಳಗೊಂಡ ಎಲ್ಇಡಿ ಟರ್ನ್ ಇಂಡಿಕೇಟರ್ ಮತ್ತು ಬ್ಲ್ಯಾಕ್ ಔಟ್ ಥೀಮ್ ನೀಡಿರುವುದು ಹೊಸ ಕಾರಿಗೆ ಮತ್ತಷ್ಟು ಸ್ಪೋರ್ಟಿ ಲುಕ್ ನೀಡಿದೆ.

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ 2021ರ ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿ

ಹೊಸ ಕಾರಿನ ಒಳಭಾಗದಲ್ಲಿ ಈ ಬಾರಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್, ಮಲ್ಟಿ ಫಂಕ್ಷನಲ್ ಸ್ಟೀರಿಂಗ್ ವೀಲ್ಹ್ ಜೊತೆಗೆ ಮೌಂಟೆಡ್ ಕಂಟ್ರೋಲ್ ಸೌಲಭ್ಯಗಳನ್ನು ನೀಡಲಾಗಿದ್ದು, ಹೆಚ್ಚುವರಿ ಪ್ರೀಮಿಯಂ ಫೀಚರ್ಸ್ ಹೊರತುಪಡಿಸಿ ಎಂಜಿನ್ ಆಯ್ಕೆಯನ್ನು ಪ್ರಸ್ತುತ ಮಾದರಿಯಲ್ಲಿರುವಂತೆಯೇ ಮುಂದುವರಿಸಲಾಗಿದೆ.

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ 2021ರ ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿ

ಟ್ರೈಬರ್ ಮಿನಿ ಎಂಪಿವಿ ಕಾರಿನಲ್ಲಿ ಸದ್ಯ ನ್ಯಾಚುರಲಿ ಆಸ್ಪೆರೆಟೆಡ್ ಹೊಂದಿರುವ 1.0-ಲೀಟರ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಈ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 72-ಬಿಎಚ್‌ಪಿ ಮತ್ತು 96-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಫಸ್ಟ್ ಡ್ರೈವ್ ರಿವ್ಯೂ ತಪ್ಪದೇ ನೋಡಿ.

ಹೊಸದಾಗಿ ಟ್ರೈಬರ್ ಮಾದರಿಯಲ್ಲಿ ಜೋಡಣೆಗೆ ನಿರ್ಧರಿಸಲಾಗಿರುವ ಟರ್ಬೊ ಪೆಟ್ರೋಲ್ ಮಾದರಿಯು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಗರಿಷ್ಠ 100 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ 2021ರ ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿ

ಟ್ರೈಬರ್ ಮಾದರಿಯಲ್ಲಿ ಟರ್ಬೊ ಮಾದರಿಗೂ ಗ್ರಾಹಕರು ಬೇಡಿಕೆ ಸಲ್ಲಿಸುತ್ತಿದ್ದರೂ ಕಿಗರ್ ಮತ್ತು ಮ್ಯಾಗ್ನೈಟ್ ಕಾರುಗಳಿಗಾಗಿ ಹೊಸ ಆವೃತ್ತಿಯ ಬಿಡುಗಡೆಯನ್ನು ಸದ್ಯಕ್ಕೆ ಮುಂದೂಡಿಕೆ ಮಾಡಲಾಗುತ್ತಿದ್ದು, 2022ರ ಆವೃತ್ತಿಯಲ್ಲಿ ಹೊಸ ಮಾದರಿಯ ಬಿಡುಗಡೆ ಖಚಿತವಾಗಿದೆ.

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ 2021ರ ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿ

ಇನ್ನು ಟ್ರೈಬರ್ ಕಾರು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಪಡೆದುಕೊಂಡ ನಂತರ ಬೆಲೆಯಲ್ಲಿ ತುಸು ದುಬಾರಿಯಾಗಿದ್ದು, ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 5.20 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು 7.50 ಲಕ್ಷ ಬೆಲೆ ಪಡೆದುಕೊಂಡಿರುತ್ತದೆ. ಇದರಲ್ಲಿ ಎಎಂಟಿ ಮಾದರಿಯು ಆರಂಭಿಕವಾಗಿ ರೂ. 6.43 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ.7.50 ಲಕ್ಷ ಬೆಲೆ ಹೊಂದಿದೆ.

MOST READ: ಗ್ರಾಹಕರ ದೂರು ಹಿನ್ನೆಲೆ...ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಸಬ್ಸಿಡಿ ರದ್ದು

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ 2021ರ ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿ

ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ನೊಂದಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಹೈ ಎಂಡ್ ವೆರಿಯೆಂಟ್‌ನಲ್ಲಿ ನಾಲ್ಕು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ವಾರ್ನಿಂಗ್ ಸೌಲಭ್ಯಗಳನ್ನು ನೀಡಲಾಗಿದೆ.

More from DriveSpark

Article Published On: Wednesday, March 3, 2021, 21:00 [IST]
English summary
2021 Renault Triber Changes Leaked Ahead Of India Launch. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+