ಪವರ್‌ಫುಲ್ ಎಂಜಿನ್‌ನೊಂದಿಗೆ ಬಿಡುಗಡೆಗೊಂಡ 2021ರ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರು
ಸುಜುಕಿ ಮೋಟಾರ್ ಕಾರ್ಪೊರೇಷನ್ ಕಂಪನಿಯು ಮಲೇಷ್ಯಾದಲ್ಲಿ ತನ್ನ ಅಂಗಸಂಸ್ಥೆ ಕಂಪನಿ ನಾಜಾ ಈಸ್ಟರ್ನ್ ಮೋಟಾರ್ಸ್ ಅಡಿಯಲ್ಲಿ ಮೂರನೇ ತಲೆಮಾರಿನ ಸ್ವಿಫ್ಟ್ ಸ್ಪೋರ್ಟ್ ಕಾರನ್ನು ಬಿಡುಗಡೆಗೊಳಿಸಿದೆ. ಈ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಮಾದರಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ.

ಸುಜುಕಿ ಮಲೇಷ್ಯಾದಲ್ಲಿ 2021ರ ಸ್ವಿಫ್ಟ್ ಸ್ಪೋರ್ಟ್ ಅನ್ನು ಒಂದೇ ರೂಪಾಂತರದಲ್ಲಿ ಬಿಡುಗಡೆಗೊಳಿಸಿದೆ. 2021ರ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರಿನಲ್ಲಿ ಪವರ್‌ಫುಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು 1.4-ಲೀಟರ್ ನಾಲ್ಕು ಸಿಲಿಂಡರ್ ಬೂಸ್ಟರ್‌ಜೆಟ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 140 ಬಿಹೆಚ್‍ಪಿ ಪವರ್ ಮತ್ತು 2,500 ರಿಂದ 3,500 ಆರ್‌ಪಿಎಂ ನಡುವೆ 230 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ಮೂಲಕ ಮುಂಭಾಗದ ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ. ಇದರಲ್ಲಿ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗಿಲ್ಲ. ಆದರೆ ಇದು ಪ್ಯಾಡಲ್ ಶಿಫ್ಟರ್ ಗಳನ್ನು ಪಡೆಯುತ್ತದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಭವಿಷ್ಯದಲ್ಲಿ ಸ್ವಿಫ್ಟ್ ಸ್ಪೋರ್ಟ್‌ಗಾಗಿ ಸ್ಟಿಕ್ ಶಿಫ್ಟರ್ ಅನ್ನು ಪರಿಚಯಿಸುವ ಸಾಧ್ಯತೆಗಳು ಕಡಿಮೆಯಾಗಿದೆ. ಇನ್ನು ಹೊಸ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರು 205 ಕಿ.ಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ.

ಇನ್ನು ಈ ಕಾರು 8 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಸ್ವಿಫ್ಟ್ ಸ್ಪೋರ್ಟ್ 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಇದನ್ನು 195/50 ಸೀರಿಸ್ ಯೊಕೊಹಾಮಾ ಅಡ್ವಾನ್ ಎ 13 ಸಿ ರಬ್ಬರ್‌ನಲ್ಲಿ ಸುತ್ತಿಡಲಾಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಸುಜುಕಿ ವಿಶೇಷವಾಗಿ ವಿನ್ಯಾಸಗೊಳಿಸಿದ ಟ್ರೈಯಿಂಗ್ ಆರ್ಮ್ ಸಹ ಒಳಗೊಂಡಿದೆ, ಮುಂಭಾಗದ ಸಸ್ಪೆಂಕ್ಷನ್ ಸೆಟಪ್ ಮ್ಯಾಕ್ಫೆರ್ಸನ್ ಸ್ಟ್ರಟ್ ಅನ್ನು ಕಾಯಿಲ್ ಸ್ಪ್ರಿಂಗ್‌ಗಳೊಂದಿಗೆ ಒಳಗೊಂಡಿರುತ್ತದೆ, ಹಿಂಭಾಗದಲ್ಲಿ ಟ್ರಿಸನ್ ಬೀಮ್ ಸಿಸ್ಟಂ ಅನ್ನು ಹೊಂದಿದೆ.

2021ರ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರಿನಲ್ಲಿ ಆಟೋಮ್ಯಾಟಿಕ್ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಹ್ಯಾಲೊಜೆನ್ ಫಾಗ್ ಲ್ಯಾಂಪ್‌ಗಳು, ಜೊತೆಗೆ ಮುಂಭಾಗದ ಗ್ರಿಲ್‌ನಲ್ಲಿ ಫಾಕ್ಸ್ ಕಾರ್ಬನ್-ಫೈಬರ್ ಟ್ರಿಮ್‌ಗಳು, ಅಂಡರ್ ಲಿಪ್ ಮತ್ತು ಸೈಡ್ ಸ್ಕರ್ಟ್‌ಗಳನ್ನು ಹೊಂದಿವೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಇದರೊಂದಿಗೆ ಹಿಂಭಾಗದ ಬಂಪರ್, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ ಗಳೊಂದಿಗೆ, ಅಡೆಜೆಸ್ಟ್ ಮಾಡಬಹುದಾದ ವ್ಹೀಂಗ್ ಮೀರರ್, ಪುಶ್-ಸ್ಟಾರ್ಟ್ ಬಟನ್‌ನೊಂದಿಗೆ ಕೀ ಲೆಸ್ ಎಂಟ್ರಿ, ಬ್ಲ್ಯಾಕ್ ಔಟ್, ಮತ್ತು ಸಿ-ಪಿಲ್ಲರ್‌ಗಳು, ಎಲ್ಇಡಿ ಕಾಂಬಿನೇಶನ್ ಟೈಲ್‌ಲೈಟ್‌ಗಳು ಮತ್ತು ಡ್ಯುಯಲ್ ಎಕ್ಸಾಸ್ಟ್ ಟಿಪ್ಸ್ ಒಳಗೊಂಡಿದೆ.

2021ರ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರಿನ ಕ್ಯಾಬಿನ್ ಒಳಗೆ, ರೆಡ್ ಫ್ಲಾಟ್-ಬಾಟಮ್ ಮಲ್ಟಿ-ಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನಲ್ಲಿ ಡಿಜಿಟಲ್ ಎಂಐಡಿ, ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋನೊಂದಿಗೆ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ರಿವರ್ಸ್ ಕ್ಯಾಮೆರಾ ಮತ್ತು ಆಟೋ ಕ್ಲೈಮೇಟ್ ಅನ್ನು ಹೊಂದಿದೆ.

ಇನ್ನು ಟ್ವಿನ್ ಕಪ್ ಹೋಲ್ಡರ್ಸ್, ರೆಡ್ ಸ್ಟಿಚ್ ಮತ್ತು ಸ್ಪೋರ್ಟ್ ಅಕ್ಷರಗಳನ್ನು ಹೊಂದಿರುವ ಫ್ಯಾಬ್ರಿಕ್ ಸೆಮಿ-ಬಕೆಟ್ ಸೀಟುಗಳನ್ನು ಹೊಂದಿವೆ. ಸ್ವಿಫ್ಟ್ ಸ್ಪೋರ್ಟ್ ಮೆಟಲ್ ಫೂಟ್ ಪೆಡಲ್‌ಗಳನ್ನು ಹೊಂದಿವೆ.


Click it and Unblock the Notifications